Kolkata Fire Accident: ಕೊಲ್ಕತ್ತಾದಲ್ಲಿ ಭಾರೀ ಬೆಂಕಿ ದುರಂತ; ಪೊಲೀಸ್ ಅಧಿಕಾರಿ, ರೈಲ್ವೆ ಅಧಿಕಾರಿ ಸೇರಿ 9 ಜನ ಸಾವು
Kolkata Fire Accident: ಕೊಲ್ಕತ್ತಾದ ರೈಲ್ವೆ ಕಟ್ಟಡದಲ್ಲಿ ನಿನ್ನೆ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದಿಂದ ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಹೆಚ್ಚುವರಿಯಾಗಿ 10 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.
ಕೊಲ್ಕತ್ತಾ (ಮಾ.9): ಪಶ್ಚಿಮ ಬಂಗಾಳದ ಕೊಲ್ಕತ್ತಾದ ರೈಲ್ವೆ ಕಟ್ಟಡದಲ್ಲಿ ನಿನ್ನೆ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ದುರಂತದಲ್ಲಿ ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿ, ಇಬ್ಬರು ಆರ್ಪಿಎಫ್ ಸಿಬ್ಬಂದಿ ಮತ್ತು ಕೊಲ್ಕತ್ತಾದ ಓರ್ವ ಪೊಲೀಸ್ ಅಧಿಕಾರಿ ಸೇರಿ ಒಟ್ಟು 9 ಜನ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳದ ಅಗ್ನಿ ಮತ್ತು ತುರ್ತುಸೇವಾ ಸಚಿವ ಸುಜಿತ್ ಬೋಸ್ ಖಚಿತಪಡಿಸಿದ್ದಾರೆ.
ಈಗಾಗಲೇ 7 ಮಂದಿಯ ಶವ ಪತ್ತೆಯಾಗಿದ್ದು, ಇನ್ನು ಇಬ್ಬರು ನಾಪತ್ತೆಯಾಗಿದ್ದಾರೆ. ಬೆಂಕಿಯ ಭೀಕರತೆಯಲ್ಲಿ ಅವರು ಕೂಡ ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಆ ಇಬ್ಬರ ಶವಗಳಿಗಾಗಿ ಬೆಂಕಿ ದುರಂತ ನಡೆದ ಸ್ಥಳದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆಗೆ ಸೇರಿದ ಬಹುಮಹಡಿ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದು ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
The property belongs to railways, it's their responsibility but they were unable to provide map of building. I don't want to do politics over the tragedy but no one from railways has come here: West Bengal Chief Minister Mamata Banerjee at #kolkatafire incident site last night pic.twitter.com/KCaRyZgpWy
ಇದೇ ವೇಳೆ, ಕೇಂದ್ರ ರೈಲ್ವೆ ಇಲಾಖೆ ಮೇಲೆ ಕಿಡಿ ಕಾರಿರುವ ಮಮತಾ ಬ್ಯಾನರ್ಜಿ, ಈ ಜಾಗ ರೈಲ್ವೆ ಇಲಾಖೆಗೆ ಸಂಬಂಧಿಸಿದ್ದು. ಆದರೂ ಈ ದುರಂತ ನಡೆದ ಜಾಗಕ್ಕೆ ರೈಲ್ವೆ ಇಲಾಖೆಯಿಂದ ಯಾವ ಅಧಿಕಾರಿಯೂ ಭೇಟಿ ನೀಡಿಲ್ಲ ಎಂದಿದ್ದಾರೆ. ಹಾಗೇ, ಪಶ್ಚಿಮ ಬಂಗಾಳ ಸರ್ಕಾರದಿಂದ ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಹೆಚ್ಚುವರಿಯಾಗಿ 10 ಲಕ್ಷ ರೂ. ಪರಿಹಾರ ಹಾಗೂ ಆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
Tragic news from Kolkata tonight
7 persons have died in a major blaze at an @EasternRailway building on Strand Road
Four fire fighters, a Kolkata police perssonel, and RPF jawan among deceased. Terrible tragedy pic.twitter.com/MYB5ckjcj3
— Indrajit Kundu | ইন্দ্রজিৎ - কলকাতা (@iindrojit) March 8, 2021
ರೈಲ್ವೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಬೆಂಕಿಯನ್ನು ಆರಿಸಲು ಬಂದವರು ಹಾಗೂ ರಕ್ಷಣೆಗೆ ಧಾವಿಸಿದವರು ಜೀವ ಕಳೆದುಕೊಂಡಿದ್ದಾರೆ. ನಿನ್ನೆ ಸಂಜೆ ರೈಲ್ವೆ ಇಲಾಖೆಯ ಕಟ್ಟಡದ 13ನೇ ಅಂತಸ್ತಿನಲ್ಲಿ ಬೆಂಕಿ ಆವರಿಸಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ ಎಲಿವೇಟರ್ನಲ್ಲಿ ಹೋಗುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಓರ್ವ ರೈಲ್ವೆ ಅಧಿಕಾರಿ ಬೆಂಕಿ ತಗುಲಿ ಸುಟ್ಟು ಹೋಗಿದ್ದಾರೆ. ಅವರ ಮೃತದೇಹಗಳನ್ನು ಹೊರಗೆಳೆಯಲಾಗಿದೆ. ಓರ್ವ ಎಎಸ್ಐ ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಹಳೆಯದಾಗಿದ್ದ ಈ ಕಟ್ಟಡದಲ್ಲಿ ರೈಲು ಟಿಕೆಟ್ ಬುಕಿಂಗ್ ಮಾಡಲಾಗುತ್ತಿತ್ತು. ಬೆಂಕಿ ಅವಘಡದ ನಂತರ ರಿಸರ್ವೇಷನ್ ಟಿಕೆಟ್ ಕೌಂಟರ್ ಅನ್ನು ಮುಚ್ಚಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ. ನಾಪತ್ತೆಯಾದ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ