ತರಕಾರಿಗಳಲ್ಲಿ (Vegetables) ಎಲ್ಲರಿಗೂ ಹೆಚ್ಚು ಪ್ರಿಯವಾಗಿರುವ ತರಕಾರಿ ಎಂದರೆ ಆಲೂಗಡ್ಡೆಯಾಗಿದೆ. ಮಕ್ಕಳಿಗೂ ಈ ತರಕಾರಿ ಎಂದರೆ ಹೆಚ್ಚು ಇಷ್ಟ. ಕಡಿಮೆ ಬೆಲೆಯಲ್ಲಿ ದೊರೆಯುವ ಈ ತರಕಾರಿ ಪ್ರತಿಯೊಂದು ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಆಲೂಗಡ್ಡೆ (Onion) ಬಳಸಿ ಮಾಡುವ ಪ್ರತಿಯೊಂದು ಖಾದ್ಯವು ಇನ್ನಷ್ಟು ರುಚಿಯನ್ನು ಪಡೆದುಕೊಳ್ಳುತ್ತದೆ. ನಗರಗಳಲ್ಲಿ ಅಸಲಿ ಆಲೂಗಡ್ಡೆಗಳ ಬದಲಿಗೆ ಅದನ್ನೇ ಹೋಲುವ ನಕಲಿ ಆಲೂವನ್ನು ಮಾರಲಾಗುತ್ತಿದೆ ಎಂಬುದು ಗ್ರಾಹಕರ ದೂರಾಗಿದೆ. ಮಾರುಕಟ್ಟೆಯಲ್ಲಿ (Market) ನಕಲಿ ಆಲೂಗಡ್ಡೆಗಳ ಕಾಟ ಹೆಚ್ಚುತ್ತಿದ್ದು, ಅಸಲಿ ಆಲೂಗಡ್ಡೆಯ ಬದಲಿಗೆ ಆಲೂಗಡ್ಡೆಯಲ್ಲಿ ನಕಲಿ ಆಲೂಗಡ್ಡೆಯನ್ನು ಮಾರಾಟ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಗ್ರಾಹಕರನ್ನು ಮೋಸಗೊಳಿಸಲಾಗುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ. ಆಲೂಗಡ್ಡೆಯಲ್ಲಿ ವಿಧವಿಧವಾದ ಬಗೆಗಳಿದ್ದು ಅದರಲ್ಲಿ ಚಂದ್ರಮುಖಿ, ಹೇಮಾಲಿನಿ, ಜ್ಯೋತಿ ಹೀಗೆ ಕೆಲವು ಪ್ರಮುಖವಾದವುಗಳು.
ಚಂದ್ರಮುಖಿಯನ್ನೇ ಹೋಲುವ ಇತರ ತಳಿಗಳು
ಕೋಲ್ಕತ್ತಾದ ಮಾರುಕಟ್ಟೆಗಳಲ್ಲಿ ಚಂದ್ರಮುಖಿ ಆಲೂಗಡ್ಡೆ ಪ್ರಮುಖವಾದುದು. ಆದರೆ ವರ್ತಕರು ಈ ಆಲೂಗಡ್ಡೆಯ ಬದಲಿಗೆ ಅದನ್ನೇ ಹೋಲುವ ಇತರ ಆಲೂಗಡ್ಡೆಗಳ ಮಾರಾಟ ಮಾಡುತ್ತಿದ್ದು ಇದರಿಂದ ಗ್ರಾಹಕರು ಚಂದ್ರಮುಖಿಯನ್ನು ಖರೀದಿಸುತ್ತಿಲ್ಲ ಹಾಗೂ ಸಾಮಾನ್ಯ ಆಲೂ ತಳಿಯನ್ನೇ ಖರೀದಿಸುತ್ತಿರುವುದಾಗಿ ತಿಳಿಸಿದ್ದಾರೆ.
ರುಚಿಯಲ್ಲಿ ವ್ಯತ್ಯಾಸ
ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲಿ ಚಂದ್ರಮುಖಿ ಆಲೂಗಡ್ಡೆ ಪ್ರಮುಖವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿರುವ ಚಂದ್ರಮುಖಿ ಆಲೂಗಡ್ಡೆ ಅಷ್ಟೊಂದು ರುಚಿಕರ ಎಂದೆನಿಸುತ್ತಿಲ್ಲ, ಹೀಗಾಗಿ ನಾವು ಜ್ಯೋತಿ ಆಲೂಗಡ್ಡೆಯನ್ನು ತರುತ್ತಿದ್ದೇವೆ ಎಂದು ಸತಿನಾಥ್ ಪಾತ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದಿನ ಪ್ರಧಾನಿ ಯಾರು? 6 ತಿಂಗಳಲ್ಲಿ ಕುಗ್ಗಿದ ಮೋದಿ ಜನಪ್ರಿಯತೆ, ರಾಹುಲ್ ಗಾಂಧಿಗೆ ಲಾಭ!
ವರ್ತಕರ ಮೋಸ
ಚಂದ್ರಮುಖಿ ಹೆಸರಿನಲ್ಲಿ ಬೇರೆ ಬೇರೆ ವಿಧದ ಆಲೂಗಡ್ಡೆಗಳು ಬರುತ್ತಿದ್ದು ಅವು ನೋಡಲು ಚಂದ್ರಮುಖಿಯಂತಿದ್ದರೂ ಬೇಯುವ ಸಮಯ ಹಾಗೂ ರುಚಿಯಲ್ಲಿ ವ್ಯತ್ಯಾಸವಿದೆ ಎಂದು ಸತಿನಾಥ್ ತಿಳಿಸಿದ್ದಾರೆ.
ಜ್ಯೋತಿ ಆಲೂಗಡ್ಡೆ ಸಾಮಾನ್ಯವಾಗಿ ದೊರೆಯುವ ಆಲೂಗಡ್ಡೆಯಾಗಿದೆ ಹಾಗೂ ರುಚಿಯಲ್ಲೂ ಈಗ ಉತ್ತಮವಾಗಿದೆ ಎಂಬುದು ಅವರ ಹೇಳಿಕೆಯಾಗಿದೆ.
ನಮ್ಮನ್ನು ನಕಲಿ ಆಲೂಗಡ್ಡೆಯ ಹೆಸರಿನಲ್ಲಿ ಮೋಸಮಾಡಲಾಗಿದೆ ಎಂದು ಹೇಳಿರುವ ಪಾತ್ರ, ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಈ ನಕಲಿ ಆಲೂಗಡ್ಡೆಯನ್ನಿಟ್ಟುಕೊಂಡೇ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ನಕಲಿ ಆಲೂ ಹಾವಳಿ
ಚಂದ್ರಮುಖಿ ಆಲೂಗಡ್ಡೆಗೆ ಕಿಲೋಗೆ ರೂ 25 ರಿಂದ 27 ರ ಬೆಲೆ ಇದೆ. ಇದೇ ಆಲೂಗಡ್ಡೆಯ ಕೊಲುಂಬಾ ಅಥವಾ ಹೇಮಾಲಿನಿ ಬೆಲೆ ರೂ 10-12 ಇದೆ ಹಾಗೂ ನೋಡಲು ಕೂಡ ಚಂದ್ರಮುಖಿಯಂತೆಯೇ ಕಾಣಿಸುತ್ತದೆ ಎಂದು ತಿಳಿಸಿದ್ದಾರೆ.
ನಗರದ ರಿಟೇಲ್ ಮಾರುಕಟ್ಟೆಗಳಾದ ಉತ್ತರದ ಮಣಿಟ್ಕಲ, ಕೇಂದ್ರದ ಕೋಲೆ ಮಾರುಕಟ್ಟೆ ಹಾಗೂ ದಕ್ಷಿಣದ ಗರಿಯಾಹಟ್ ಇಂತಹುದೇ ನಕಲಿ ಅಲೂಗಡ್ಡೆಗಳ ವೈವಿಧ್ಯತೆಗಳಿಂದ ತುಂಬಿ ಹೋಗಿದೆ.
ಇಂತಹ ಆಲೂಗಡ್ಡೆಗಳಿಗೆ ಜಲ್ದಿ ಆಲೂ ಎಂಬ ಹೆಸರೂ ಇದೆ. ಇಂತಹ ಆಲೂಗಡ್ಡೆ ತಳಿಗಳು ಚಂದ್ರಮುಖಿಗಿಂತ ಪ್ರತ್ಯೇಕ ಹಾಗೂ ಆಕರ್ಷಕವಾಗಿವೆ. ಹಾಗೂ ಇದನ್ನು ಬೇಗನೇ ಬೆಳೆದು ಬೇಗನೇ ಕಟಾವು ಕೂಡ ಮಾಡಬಹುದು ಎಂದು ತಾರಕೇಶ್ವರದ ರೈತ ಸಮರೇಶ್ ದಾಸ್ ತಿಳಿಸಿದ್ದಾರೆ.
ಜಲ್ದಿ ಆಲೂವನ್ನೇ ವ್ಯಾಪಾರಿಗಳು ಹೆಚ್ಚು ಆಯ್ಕೆಮಾಡುತ್ತಾರೆ
ಕೋಲ್ಕತ್ತಾದ ರಿಟೇಲ್ ಮಾರುಕಟ್ಟೆಯಲ್ಲಿ ಚಂದ್ರಮುಖಿಗೆ ರೂ 25-27 ರ ಬೆಲೆ ಇದೆ. ಆದರೆ ಬೇಗನೇ ಬೆಳೆದು ಫಸಲು ನೀಡುವ ಜಲ್ದಿ ಆಲೂ ತಳಿ ಹೆಚ್ಚಿನ ಇಳುವರಿಯನ್ನು ನೀಡುತ್ತದೆ ಹಾಗೂ ಮಾರುಕಟ್ಟೆಯಲ್ಲಿ ರೂ 10-12 ಕ್ಕಿಂತ ಜಾಸ್ತಿ ಬೆಲೆ ಇಲ್ಲ ಎಂದು ಆಲೂಗಡ್ಡೆ ವ್ಯಾಪಾರಿ ಪ್ರದ್ಯುತ್ ದಾಸ್ ತಿಳಿಸಿದ್ದಾರೆ.
ಮಾರಾಟಗಾರರು ಚಂದ್ರಮುಖಿ ತಳಿಯ ಹೆಸರಿನಲ್ಲಿ ಗ್ರಾಹಕರನ್ನು ಮೋಸಗೊಳಿಸುವಂತಿಲ್ಲ ಎಂದು ತಾರಕೇಶ್ವರದ ಎಮ್‌ಎಲ್‌ಎ ರಾಮೇಂದು ಸಿಂಗ್ ತಿಳಿಸಿದ್ದಾರೆ.
ಗ್ರಾಹಕರ ಆಪಾದನೆಗಳನ್ನು ಆಲಿಸುತ್ತಲೇ ಇದ್ದೇವೆ ಎಂದು ತಿಳಿಸಿರುವ ರಾಮೇಂದು ಗ್ರಾಹಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಸಲಿ ಹೆಸರಿನಲ್ಲಿ ನಕಲಿ ಮಾರಾಟ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.ಮಾರಾಟಗಾರರಿಗೂ ಈ ಬಗ್ಗೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ. ರಿಟೇಲರ್ ಭಾಗದಲ್ಲಿ ಇಂತಹ ಅಸಲಿ ನಕಲಿ ಕಳ್ಳಾಟ ನಡೆಯುತ್ತಿದೆ ಎಂದು ರಾಮೇಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ