ಕೋಲ್ಕತ ಮೇಲ್ಸೇತುವೆ ಕುಸಿತ; ಓರ್ವ ಸಾವು, ಚಲಿಸುತ್ತಿದ್ದ ವಾಹನಗಳು ಜಖಂ
news18
Updated:September 4, 2018, 9:11 PM IST
news18
Updated: September 4, 2018, 9:11 PM IST
ನ್ಯೂಸ್18 ಕನ್ನಡ
ಕೋಲ್ಕತ್ತ (ಸೆ. 4): ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತದಲ್ಲಿರುವ ಮಜೆರ್ಹಾತ್ ಮೇಲ್ಸೇತುವೆ ಕುಸಿದು ಬಿದ್ದಿದ್ದು, ಓರ್ವ ಸಾವನ್ನಪ್ಪಿದ್ದು, 19 ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕುಸಿದಿರುವ ಸೇತುವೆ ಕೆಳಗೆ ಇನ್ನಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಂದು ಸಂಜೆ 4 ಗಂಟೆಯ ವೇಳೆ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿದಿದ್ದು, ಕೆಳಗೆ ರೈಲ್ವೆ ಹಳಿಗಳು ಇದ್ದ ಕಾರಣ ಎಷ್ಟು ಜನ ಸೇತುವೆಯ ಅವಶೇಷಗಳಡಿ ಸಿಲುಕಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಡಾರ್ಜೆಲಿಂಗ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಕೋಲ್ಕತ ಮೇಯರ್ ಸೋವನ್ ಚಟರ್ಜಿ ಮತ್ತು ಸಚಿವ ಫರ್ಹಾದ್ ಹಕೀಮ್ ಅವರಿಗೆ ಕರೆಮಾಡಿ ಸ್ಥಳಕ್ಕೆ ಧಾವಿಸುವಂತೆ ಸೂಚಿಸಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.
ಜನಸಂಚಾರ ಹೆಚ್ಚಾಗಿದ್ದ ಸಮಯದಲ್ಲೇ ಇದ್ದಕ್ಕಿದ್ದಂತೆ ಘಟಿಸಿದ ಈ ಅನಾಹುತದಿಂದ ಕೋಲ್ಕತದ ಜನ ತಲ್ಲಣಿಸಿದ್ದಾರೆ. ಮೇಲ್ಸೇತುವೆ ಮೇಲೆ ಚಲಿಸುತ್ತಿದ್ದ ಬೈಕ್, ಕಾರು ಮುಂತಾದ ವಾಹನಗಳೂ ಜಖಂಗೊಂಡಿವೆ. ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಡಾರ್ಜೆಲಿಂಗ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮೆಲ್ಲ ಕೆಲಸಗಳನ್ನೂ ಬಿಟ್ಟು ಕೋಲ್ಕತ್ತಾಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಂಜೆಯ ನಂತರ ವಿಮಾನಗಳು ಇಲ್ಲದ ಕಾರಣ ಕೋಲ್ಕತಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ ಫೋನ್ ಮೂಲಕವೇ ಎಲ್ಲ ವಿವರಗಳನ್ನೂ ಪಡೆದು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತಿದ್ದಾರೆ.
ಕೋಲ್ಕತ್ತ (ಸೆ. 4): ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತದಲ್ಲಿರುವ ಮಜೆರ್ಹಾತ್ ಮೇಲ್ಸೇತುವೆ ಕುಸಿದು ಬಿದ್ದಿದ್ದು, ಓರ್ವ ಸಾವನ್ನಪ್ಪಿದ್ದು, 19 ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕುಸಿದಿರುವ ಸೇತುವೆ ಕೆಳಗೆ ಇನ್ನಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಂದು ಸಂಜೆ 4 ಗಂಟೆಯ ವೇಳೆ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿದಿದ್ದು, ಕೆಳಗೆ ರೈಲ್ವೆ ಹಳಿಗಳು ಇದ್ದ ಕಾರಣ ಎಷ್ಟು ಜನ ಸೇತುವೆಯ ಅವಶೇಷಗಳಡಿ ಸಿಲುಕಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಡಾರ್ಜೆಲಿಂಗ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಕೋಲ್ಕತ ಮೇಯರ್ ಸೋವನ್ ಚಟರ್ಜಿ ಮತ್ತು ಸಚಿವ ಫರ್ಹಾದ್ ಹಕೀಮ್ ಅವರಿಗೆ ಕರೆಮಾಡಿ ಸ್ಥಳಕ್ಕೆ ಧಾವಿಸುವಂತೆ ಸೂಚಿಸಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.

Loading...#WATCH: Rescue teams and ambulances arrive at the spot where part of Majerhat bridge in South Kolkata has collapsed. #WestBengal pic.twitter.com/5pgpxSgwke
— ANI (@ANI) September 4, 2018
ಡಾರ್ಜೆಲಿಂಗ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮೆಲ್ಲ ಕೆಲಸಗಳನ್ನೂ ಬಿಟ್ಟು ಕೋಲ್ಕತ್ತಾಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಂಜೆಯ ನಂತರ ವಿಮಾನಗಳು ಇಲ್ಲದ ಕಾರಣ ಕೋಲ್ಕತಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ ಫೋನ್ ಮೂಲಕವೇ ಎಲ್ಲ ವಿವರಗಳನ್ನೂ ಪಡೆದು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತಿದ್ದಾರೆ.
We are very worried. We are receiving information from the rescue team on ground(majerhat bridge collapse in Kolkata). We want to go back as soon as possible. There are no flights in the evening, we are unable to do so: West Bengal CM Mamata Banerjee in Darjeeling (file pic) pic.twitter.com/DJfU1QDEm2
— ANI (@ANI) September 4, 2018
Loading...