ದೆಹಲಿಯಿಂದ ವಾಪಸ್ಸಾದ ಕುಟುಂಬವನ್ನು ತಡೆದ ಸ್ಥಳೀಯರು; ಸ್ಮಶಾನದಲ್ಲೇ ಇಡೀ ರಾತ್ರಿ ಕಳೆದ ತಾಯಿ-ಮಗ

ಅವರು ತಮ್ಮ ಪ್ರದೇಶಕ್ಕೆ ತಲುಪಿದ ಕೂಡಲೇ ಅಲ್ಲಿನ ಸ್ಥಳೀಯರು ತಾಯಿ-ಮಗನನ್ನು ತಡೆದಿದ್ದಾರೆ. ಬಳಿಕ, ದೆಹಲಿಯಿಂದ ಬಂದಿರುವ ನೀವು ಕೊರೋನಾ ಸೋಂಕು ಅಂಟಿಸಿಕೊಂಡು ಬಂದಿದ್ದೀರಿ, ಇಲ್ಲಿಗೆ ಬರಬೇಡಿ ಎಂದು ಹೇಳಿದ್ದಾರೆ.

news18-kannada
Updated:July 12, 2020, 8:40 AM IST
ದೆಹಲಿಯಿಂದ ವಾಪಸ್ಸಾದ ಕುಟುಂಬವನ್ನು ತಡೆದ ಸ್ಥಳೀಯರು; ಸ್ಮಶಾನದಲ್ಲೇ ಇಡೀ ರಾತ್ರಿ ಕಳೆದ ತಾಯಿ-ಮಗ
ಸಾಂದರ್ಭಿಕ ಚಿತ್ರ
  • Share this:
ಪಶ್ಚಿಮ ಬಂಗಾಳ(ಜು.12): ರಾಷ್ಟ್ರ ರಾಜಧಾನಿ ದೆಹಲಿಯಿಂದ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ಕುಟುಂಬವನ್ನು ಕೊರೋನಾ ಹರಡುವ ಭೀತಿಯಿಂದ ಸ್ಥಳೀಯರು ತಡೆದ ಹಿನ್ನೆಲೆ, ಆ ತಾಯಿ-ಮಗ ಇಡೀ ರಾತ್ರಿ ಸ್ಮಶಾನದಲ್ಲೇ ಕಾಲ ಕಳೆದಿದ್ದಾರೆ.

ಮೊಹುವಾ ಮುಖರ್ಜಿ ಮತ್ತು ಆಕೆಯ ಮಗ ರೋಹಿತ್ ಶುಕ್ರವಾರ ರಾಜಧಾನಿ ಎಕ್ಸ್​​ಪ್ರೆಸ್​​ನಲ್ಲಿ ದೆಹಲಿಯಿಂದ ಹಿಂದಿರುಗಿದ್ದರು ಎಂದು ತಿಳಿದು ಬಂದಿದೆ.

ತಾಯಿ ಮೊಹುವಾ ಕಳೆದ 2 ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಮಗ ರೋಹಿತ್​ ಜೊತೆ ಚಿನ್ನಾಭರಣ ವ್ಯವಹಾರ ಮಾಡುತ್ತಿದ್ದಳು. ಕೊರೋನಾ ಲಾಕ್​ಡೌನ್​ನಿಂದಾಗಿ ಅವರ ಬ್ಯುಸಿನೆಸ್​​ನಲ್ಲಿ ಕುಂಠಿತ ಕಂಡು ಬಂದಿತು. ಹೀಗಾಗಿ ತಾಯಿ-ಮಗ ಇಬ್ಬರೂ ಸಹ ತಮ್ಮ ತಂದೆಯ ಊರಾದ ಪಶ್ಚಿಮ ಬಂಗಾಳದ ರಘುದೆಬ್ಪುರ್-ದಕ್ಬಂಗಲೋಗೆ ಬರಲು ನಿರ್ಧರಿಸಿದ್ದರು. ರಾಜ್ಪುರ ಪೊಲೀಸ್ ಠಾಣೆಯ ಪಕ್ಕವೇ ಈ ಪ್ರದೇಶವಿದೆ.

Sunday Lockdown: ಇಂದು ಸಂಪೂರ್ಣ ಲಾಕ್​ಡೌನ್​; ಇಡೀ ದಿನ ಕರ್ಫ್ಯೂ; ಏನಿರುತ್ತೆ? ಏನಿರಲ್ಲ?

ಅವರು ತಮ್ಮ ಪ್ರದೇಶಕ್ಕೆ ತಲುಪಿದ ಕೂಡಲೇ ಅಲ್ಲಿನ ಸ್ಥಳೀಯರು ತಾಯಿ-ಮಗನನ್ನು ತಡೆದಿದ್ದಾರೆ. ಬಳಿಕ, ದೆಹಲಿಯಿಂದ ಬಂದಿರುವ ನೀವು ಕೊರೋನಾ ಸೋಂಕು ಅಂಟಿಸಿಕೊಂಡು ಬಂದಿದ್ದೀರಿ, ಇಲ್ಲಿಗೆ ಬರಬೇಡಿ ಎಂದು ಹೇಳಿದ್ದಾರೆ.

ಆಗ ಮೊಹುವಾ ಅಲ್ಲಿನ ಪಂಚಾಯತ್​ ಸದಸ್ಯನ ಜೊತೆ ತಾನು ದೆಹಲಿಯಿಂದ ಬಂದಿರುವ ವಿಷಯವನ್ನು ತಿಳಿಸಿದ್ದಾಳೆ. ಆದರೂ ಅಲ್ಲಿನ ಸ್ಥಳೀಯರ ಮನವೊಲಿಸುವಲ್ಲಿ ವಿಫಲವಾದ ಹಿನ್ನೆಲೆ, ಶಹಪುರಕ್ಕೆ ಹೋದರು. ಅಲ್ಲಿನ ಸ್ಮಶಾನದಲ್ಲಿಯೇ ಇಡೀ ರಾತ್ರಿ ತಾಯಿ-ಮಗ ಇಬ್ಬರೂ ಕಾಲ ಕಳೆದಿದ್ದಾರೆ.
ಈ ಘಟನೆ ಬಗ್ಗೆ ಶನಿವಾರ ಬೆಳಗ್ಗೆ ಪೊಲೀಸರಿಗೆ ವಿಷಯ ತಿಳಿದಿದೆ. ಬಳಿಕ ತಮ್ಮ ಊರಾದ ರಘುದೆಬ್ಪುರ್-ದಕ್ಬಂಗಲೋ ಮನೆಗೆ ತೆರಳುವಂತೆ ಹೇಳಿದ್ದಾರೆ. ಬಳಿಕ ಅಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿದ್ದಾರೆ.
Published by: Latha CG
First published: July 12, 2020, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading