ಕೋಲ್ಕತ್ತಾ(ಜೂ.17): ಆ ಶ್ವಾನ ಕೆಲವು ದಿನ ಕಳೆದರೆ ಪೊಲೀಸ್ (Police) ಪಡೆಯೊಂದಿಗೆ ಸೇರಿಕೊಂಡು ಅವರಿಗೆ ನೆರವಾಗುವುದರಲ್ಲಿತ್ತು. ಪೊಲೀಸರ ಮಧ್ಯೆ ಅಚ್ಚುಮೆಚ್ಚಿನ ನಾಯಿಯಾಗಿದ್ದ (Dog) ಬೆಲ್ಲಾ (Bella) ತನ್ನ ಸಾಮರ್ಥ್ಯವನ್ನು ತೋರಿಸಲು ತಯಾರಾಗಿತ್ತು. ಎಲ್ಲ ಪೊಲೀಸ್ ಡಾಗ್ಗಳಂತೆ ತಾನೂ ತನ್ನನ್ನು ತಾನು ಪ್ರೂವ್ ಮಾಡುವುದರಲ್ಲಿತ್ತು ಈ ಶ್ವಾನ. ಆದರೆ ದುರದೃಷ್ಟವಶಾತ್ ಶ್ವಾನದ ಕಣ್ಣಿಗೆ ಸಮಸ್ಯೆಯಾಗಿದೆ. ಕಷ್ಟಪಟ್ಟು ತರಬೇತಿ (Training) ಪಡೆದ ನಾಯಿ ಈಗ ಸೇವೆ ಸಲ್ಲಿಸಲು ಸಾಧ್ಯವಾಗದಂತಾಗಿದೆ. ಶ್ವಾನ ತನ್ನ ವೈಭವದ ಹಾದಿಯನ್ನು ಎಕ್ಸ್ಪ್ಲೋರ್ ಮಾಡಲು ತುದಿಗಾಲಲ್ಲಿ ನಿಂತಿತ್ತು. ಆದರೆ ಬೆಲ್ಲಾ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವನ್ನು ಪಡೆಯುವ ಮೊದಲೇ ಅನಾರೋಗ್ಯಕ್ಕೆ ತುತ್ತಾಗಿದೆ. ಕೆನೆ-ಬಣ್ಣದ ಲ್ಯಾಬ್ರಡಾರ್ - ಕೇವಲ 18 ತಿಂಗಳ ವಯಸ್ಸಿನ ಶ್ವಾನವು ಅಪರೂಪದ ಕಣ್ಣಿನ ಕಾಯಿಲೆಯಿಂದ ಬಳಲುತ್ತಿದೆ.
ಈ ಕಣ್ಣಿನ ಸಮಸ್ಯೆಯಿಂದ ಶ್ವಾನಕ್ಕೆ ತನ್ನ ವೃತ್ತಿಜೀವನ ಸದ್ಯ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ. ಶ್ವಾನ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದು, ಅದು ಚೇತರಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಜ್ಞರ ಅಭಿಪ್ರಾಯ ಕೇಳಿದ್ದಾರೆ.
6 ತಿಂಗಳ ಟ್ರೈನಿಂಗ್ ಮುಗಿಸಿ ಬಂದ ಶ್ವಾನ
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಅಡಿಯಲ್ಲಿ ಹರಿಯಾಣದಲ್ಲಿ ಇತ್ತೀಚೆಗೆ ಆರು ತಿಂಗಳ ತರಬೇತಿಯ ನಂತರ ಬೆಲ್ಲಾವನ್ನು ಏಸ್ ಸ್ನಿಫರ್ ಡಾಗ್ ಎಂದು ಗುರುತಿಸಲಾಗಿದೆ. ಆದರೆ ಅದು ಏಪ್ರಿಲ್ನಲ್ಲಿ ಕೋಲ್ಕತ್ತಾ ಪೊಲೀಸ್ ಶ್ವಾನದಳಕ್ಕೆ ಸೇರಲಿರುವಂತೆಯೇ, ಆನುವಂಶಿಕ ಕಾಯಿಲೆಯಾದ ಕಾರ್ನಿಯಲ್ ಎಂಡೋಥೆಲಿಯಲ್ ಡಿಸ್ಟ್ರೋಫಿಯಿಂದ ಬಳಲುತ್ತಿರುವ ಶಂಕೆ ವ್ಯಕ್ತವಾಗಿದೆ.
ಕುರುಡಾಗುತ್ತಿರುವ ಶ್ವಾನ ಕಂಡು ಮರುಗಿದ ಸಿಬ್ಬಂದಿ
ಹರ್ಯಾಣ ಮತ್ತು ಕೋಲ್ಕತ್ತಾದಲ್ಲಿ ಕಳೆದ ಐದು ತಿಂಗಳುಗಳಲ್ಲಿ ಹಲವಾರು ಚಿಕಿತ್ಸೆಗಳ ಹೊರತಾಗಿಯೂ, ಬೆಲ್ಲಾ ತನ್ನ ದೃಷ್ಟಿ ಕಳೆದುಕೊಳ್ಳುತ್ತಿದೆ. ಶೀಘ್ರದಲ್ಲೇ ಸಂಪೂರ್ಣವಾಗಿ ಕುರುಡಾಗಬಹುದು ಎಂದು ಶ್ವಾನದಳವು ಭಯಪಟ್ಟಿದೆ. ಆದರೂ ಶ್ವಾನದ ತರಬೇತುದಾರರು ಅದನ್ನು ಬಿಡಲು ಸಿದ್ಧರಿಲ್ಲ.
ತಜ್ಞರ ಅಭಿಪ್ರಾಯ
ಈಗ ಸಾಮಾಜಿಕ ಮಾಧ್ಯಮದಲ್ಲಿ ಜಗತ್ತಿನಾದ್ಯಂತ ತಜ್ಞರ ಅಭಿಪ್ರಾಯವನ್ನು ಆಹ್ವಾನಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಫೇಸ್ಬುಕ್ಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ಪಶುವೈದ್ಯರು ಮತ್ತು ನೇತ್ರಶಾಸ್ತ್ರಜ್ಞರು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಯನ್ನು ನಮಗೆ ಒದಗಿಸಬೇಕೆಂದು ನಾವು ಬಯಸುತ್ತೇವೆ. ಅಗತ್ಯವಿದ್ದರೆ ನಾವು ಅವರ ಭೇಟಿಗಾಗಿ ಕೆನಲ್ನಲ್ಲಿ ವ್ಯವಸ್ಥೆ ಮಾಡಬಹುದು. ಕೆಲವರು ಇದು ಆನುವಂಶಿಕ ಎಂದು ಹೇಳಿದರೆ, ಇತರರು ವಿಟಮಿನ್ ಕೊರತೆಯನ್ನು ಸೂಚಿಸಿದ್ದಾರೆ. ನಾವು ಆದರ್ಶವಾಗಿ ನೋಡುತ್ತಿರುವುದು ಬೆಲ್ಲಾ ಅಂತಿಮವಾಗಿ ಚಿಕಿತ್ಸೆಗೆ ಪ್ರತಿಕ್ರಿಯಿಸುವ ಆಶ್ರಯವನ್ನು ಮಾತ್ರ" ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Mumbai Youth: 28 ಚೇಂಜ್ಗಾಗಿ ಆಟೋ ಹಿಂದೆ ಓಡಿ ಮೃತಪಟ್ಟ ವ್ಯಕ್ತಿ! ಸಂಬಂಧಿಗೆ 43 ಲಕ್ಷ ಪರಿಹಾರ
ಮುಂದಿನ ವಾರ ಮದ್ರಾಸ್ ಪಶುವೈದ್ಯಕೀಯ ಕಾಲೇಜು ತರಬೇತಿ ಆಸ್ಪತ್ರೆಯಲ್ಲಿ ಶ್ವಾನವನ್ನು ಚೆನ್ನೈಗೆ ಕರೆದೊಯ್ಯುವಂತೆ ಮನವಿ ಮಾಡಿದೆ. "ದೇಶದಲ್ಲಿ ಅತ್ಯುತ್ತಮವಾದ ಸೆಟಪ್ ಹೊಂದಿರುವ ನಾಯಿಯನ್ನು ನಾವು ಅಲ್ಲಿಗೆ ಕರೆದೊಯ್ಯುತ್ತೇವೆ. ಕಳೆದ ಐದು ತಿಂಗಳಲ್ಲಿ ಆಕೆಗೆ ವಿವಿಧ ಚಿಕಿತ್ಸೆಗಳ ಜೊತೆಗೆ ನಾವು ವಿವರವಾದ ಕೇಸ್ ಹಿಸ್ಟರಿ ಸಿದ್ಧಪಡಿಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.
ಬೇರೆ ಯಾವುದೇ ಸಮಸ್ಯೆ ಇಲ್ಲ
ಐಟಿಬಿಪಿ ಮತ್ತು ಕೋಲ್ಕತ್ತಾ ಪೊಲೀಸರು ಆಕೆಯನ್ನು ಹಲವು ಬಾರಿ ಪರೀಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಕೆಯ ಇತರ ಆರೋಗ್ಯ ಸ್ಥಿತಿಗಳು ಸ್ಥಿರವಾಗಿವೆ. ಬೆಲ್ಲಾಗೆ ಕಾರ್ನಿಯಲ್ ಎಡಿಮಾ (ಕಾರ್ನಿಯಾದ ಊತ) ರೋಗನಿರ್ಣಯ ಮಾಡಲಾಯಿತು. ಕಾರ್ನಿಯಲ್ ಎಂಡೋಥೀಲಿಯಲ್ ಡಿಸ್ಟ್ರೋಫಿಯನ್ನು ಹೊಂದಿದೆ.
ಇದನ್ನೂ ಓದಿ: Airlines: ಇನ್ಮುಂದೆ ಟಿಕೆಟ್ ಇದ್ದವ್ರನ್ನ ಬಿಟ್ಟು ಹೋದ್ರೆ ವಿಮಾನಯಾನ ಸಂಸ್ಥೆಯೇ 10 ಸಾವಿರ ದಂಡ ಕಟ್ಟಬೇಕಂತೆ!
ಈಗ, ನಾವು ಶ್ವಾನವನ್ನು ಚೆನ್ನೈಗೆ ಕರೆದೊಯ್ಯಬೇಕಾದರೆ ಅದರ ಪ್ರಯಾಣ ಸವಾಲಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದರು. ಬೆಲ್ಲಾ ಚೇತರಿಸಿಕೊಂಡರೆ ಕನಿಷ್ಠ ಎಂಟು ವರ್ಷಗಳ ಸಕ್ರಿಯ ಸೇವೆಯನ್ನು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ