ಮಹಾರಾಷ್ಟ್ರ/ಮುಂಬೈ: ಸಾಮಾನ್ಯವಾಗಿ ಹೆತ್ತವರು (Parents) ಮಕ್ಕಳಿಗೆ ಮದುವೆ (Marriage) ಮಾಡುವುದನ್ನು ನೋಡಿರುತ್ತೇವೆ. ಆದರೆ, ಕೊಲ್ಹಾಪುರದ ಯುವಕನೊಬ್ಬ ತಂದೆಯ (Father) ಮರಣದ ನಂತರ ತನ್ನ ತಾಯಿಗೆ (Mother) ಮದುವೆ ಮಾಡುವ ಮೂಲಕ ಹೊಸ ಹೆಜ್ಜೆ ಮುಂದಿಟ್ಟಿದ್ದಾನೆ. ಕೊಲ್ಲಾಪುರದ (Kolhapur) ಯುವರಾಜ್ ಶೇಲೆ ಎಂಬ ಯುವಕ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ, ರತ್ನಾ ಶೆಲ್ಲೆ ಅವರ ಸಹೋದರಿಯರು ಮತ್ತು ಸಹೋದರರು ಸೇರಿದಂತೆ ಒಟ್ಟು ಆರು ಜನರು ಕೊರೊನಾ ಸಾಂಕ್ರಾಮಿಕ (Corona Virus) ರೋಗದಿಂದ ಸಾವನ್ನಪ್ಪಿದ್ದಾರೆ. ಗಂಡ (Husband) ಕೂಡ ಆಕಸ್ಮಿಕವಾಗಿ ತೀರಿಕೊಂಡಿದ್ದಾರೆ. ಇದರಿಂದ ಹತಾಶಳಾದ ರತ್ನಳನ್ನು ಉಳಿಸಿಕೊಳ್ಳಲು ಮಗ ತನ್ನ ತಾಯಿಗೆ ಮತ್ತೆ ಮದುವೆ ಮಾಡುವ ನಿರ್ಧಾರ ಮಾಡಿದ್ದನಂತೆ. ಅದರಂತೆ ಜನವರಿ 12 ರಂದು ಕೈಗೆತ್ತಿಕೊಂಡ ನಿರ್ಧಾರವನ್ನು ಸಂಪೂರ್ಣಗೊಳಿಸಿದ್ದಾನೆ.
ಅಪಘಾತದಿಂದ ಸಾವಿಗೀಡಾದ ತಂದೆ
ಈ ಕ್ರಾಂತಿಕಾರಿ ಹೆಜ್ಜೆ ರಾಜರ್ಷಿ ಶಾಹು ಮಹಾರಾಜರ ಪ್ರಗತಿಪರ ನಗರದಲ್ಲಿ ನಡೆದಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇದು ನಿಜವಾದ ಮಾನವೀಯತೆ, ಮಹಿಳಾ ಘನತೆ ಮತ್ತು ಭಾವನೆಗಳಿಗೆ ಗೌರವವನ್ನು ತೋರಿಸುತ್ತದೆ. ಕಾರವೀರ ತಾಲೂಕಿನ ಶಿಂಗ್ಣಾಪುರದಲ್ಲಿ ಯುವರಾಜ್ ತನ್ನ ತಾಯಿ ಮತ್ತು ತಂದೆಯೊಂದಿಗೆ ವಾಸವಾಗಿದ್ದ. ತಂದೆ ನಾರಾಯಣ ಶೆಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಆದರೆ 2022ರ ಜುಲೈ 26ರಂದು ವಾಹನ ಅಪಘಾತಕ್ಕೀಡಾಗಿ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ತಾಯಿಯ ಅಂಗವೈಕಲ್ಯತೆಯಿಂದ ಖಿನ್ನತೆಗೊಳಗಾಗಿದ್ದ ಯುವಕ
ಇದರಿಂದ ಯುವರಾಜ್ ಹಾಗೂ ಆತನ ತಾಯಿಯ ತಲೆಯ ಮೇಲೆ ಆಕಾಶವೇ ಕೆಳಗೆ ಬಿದ್ದಂತೆ ಆಗಿತ್ತು. ಈ ಅಪಘಾತದಿಂದ ಅವರ ತಾಯಿ ಕಂಗಾಲಾಗಿದ್ದರು. ಖಾಸಗಿ ಬ್ಲಡ್ ಬ್ಯಾಂಕ್ನಲ್ಲಿ ಕೆಲಸ ಮಾಡುವ ಮೂಲಕ ಮತ್ತು ಸಂಜೆ ನೃತ್ಯ ಕಲಾವಿದರಾಗಿ ಜೀವನ ಸಾಗಿಸುತ್ತಿರುವ ಯುವರಾಜ್, ಚೇತರಿಸಿಕೊಳ್ಳುತ್ತಿರುವ ತಾಯಿಗೆ ಧೈರ್ಯ ತುಂಬುತ್ತಾರೆ. ಆದರೆ, ಯುವರಾಜ್ ತಾಯಿ ಈ ದುಃಖದಿಂದ ಹೊರಬರುತ್ತಿರಲಿಲ್ಲ. ತಾಯಿಯ ಅಂಗವೈಕಲ್ಯ, ಹೀಗೆ ಅನೇಕ ವಿಚಾರವಾಗಿ ಯುವರಾಜ್ ಖಿನ್ನತೆಗೆ ಒಳಗಾಗಿದ್ದರು.
ತಾಯಿಯ ಹಣೆ ಮೇಲೆ ಕುಂಕುಮ, ಕೈಯಲ್ಲಿ ಬಳೆಗಳಿಲ್ಲದೇ ಆಘಾತಕ್ಕೊಳಗಾಗಿದ್ದ ಪುತ್ರ
ಮೊನ್ನೆ ಮೊನ್ನೆಯವರೆಗೂ ನಗುನಗುತ್ತಾ ದುಡಿಯುತ್ತಿದ್ದ ಅವನ ತಾಯಿಗೆ ತುಂಬಾ ಖಾಯಿಲೆ ಬರಲು ಆರಂಭವಾಯಿತು. ತಾಯಿಯ ಹಣೆ ಮೇಲೆ ಕುಂಕುಮ, ಕೈಯಲ್ಲಿ ಬಳೆಗಳಿಲ್ಲದೇ ಇರುವುದನ್ನು ನೋಡುತ್ತಿದ್ದ ಯುವರಾಜ್ಗೆ ಬಹಳ ನೋವಾಗುತ್ತಿಂತೆ. ಕೊನೆಗೆ ಯುವರಾಜ್ ತನ್ನ ತಾಯಿಗೆ ಮದುವೆ ಮಾಡಲು ತೀರ್ಮಾನಿಸಿದ್ದಾನೆ. ಈ ನಿರ್ಧಾರವನ್ನು ಕೇಳಿದ ನಂತರ ಅವರ ತಾಯಿ ಸಮಾಜವು ಏನು ಹೇಳುತ್ತದೆ ಎಂದು ಮರುಮದುವೆ ಆಗಲು ನಿರಾಕರಿಸಿದ್ದಾರೆ. ಆದರೆ, ಯುವರಾಜ್ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದರು.
ಕರ್ನಾಟಕದ ವ್ಯಕ್ತಿ ಜೊತೆಗೆ ತಾಯಿ ಮದುವೆ ಮಾಡಿದ ಮಗ
ಯುವರಾಜ್ ಅವರ ದೂರದ ಸಂಬಂಧಿಗಳಲ್ಲಿ ಕರ್ನಾಟಕದ ಕರಜಗಾ ಗ್ರಾಮದ ಮಾರುತಿ ವಾಟ್ಕರ್ ಕೂಡ 2 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರಿಂದ ಒಬ್ಬಂಟಿಯಾಗಿದ್ದರು. ತನ್ನ ತಾಯಿಯನ್ನು ಮಾರುತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದ ಯುವರಾಜ್ ನಂತರ ಅವರನ್ನು ಸಂಪರ್ಕಿಸಿದ್ದಾನೆ. ಪರಿಸ್ಥಿತಿಯನ್ನು ಗ್ರಹಿಸಿದ ಯುವರಾಜ್, ಮಾರುತಿಯನ್ನು ಮದುವೆಗೆ ಒಪ್ಪಿಸಿದನು ಮತ್ತು ಇಬ್ಬರ ಒಪ್ಪಿಗೆಯನ್ನು ಪಡೆದ ನಂತರ, ಜನವರಿ 12 ರ ಗುರುವಾರ ಶಿಂಗ್ಣಾಪುರದಲ್ಲಿ ತನ್ನ ತಾಯಿಗೆ ಮರುಮದುವೆ ಮಾಡಲು ಏರ್ಪಟು ಮಾಡಿದನು.
ಇದನ್ನೂ ಓದಿ: Mother’s Marriage: 50ರ ತಾಯಿಗೆ ಮರುಮದುವೆ ಮಾಡಿಸಿದ ಮಗಳು: ವರನಿಗೆ ಇದು ಮೊದಲನೇ ಕಲ್ಯಾಣ!
ಯುವಕನ ನಿರ್ಧಾರಕ್ಕೆ ಭಾರೀ ಮೆಚ್ಚುಗೆ
ಅವರ ಬೀದಿಯ ನಾಗರಿಕರು ಕೂಡ ಈ ಮದುವೆಗೆ ಸಾಕಷ್ಟು ಸಹಾಯ ಮಾಡಿದರು. 38ರ ಹರೆಯದ ಯುವರಾಜ್ ತಾಯಿಯ ಭಾವನೆಗಳು, ಆಸೆಗಳು ಮತ್ತು ವೃದ್ಧಾಪ್ಯದಲ್ಲಿ ಸಂಗಾತಿಯ ಅಗತ್ಯವನ್ನು ಮನಗೊಂಡು ಕೊನೆಗೆ ತಾಯಿ ರತ್ನರಿಗೆ ಮರುಮದುವೆಗೆ ಮಾಡಿಸಿದನು. ಕೊಲ್ಲಾಪುರದ ಯುವಕ ಕೈಗೊಂಡ ಈ ದಿಟ್ಟ ನಿರ್ಧಾರ ವಿಧವಾ ಪುನರ್ವಿವಾಹ ಕಾಯ್ದೆ ಜಾರಿಗೆ ತಂದ ಸಮಾಜ ಸುಧಾರಕರ ಕಾರ್ಯಕ್ಕೆ ಇಂಬು ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ