Kohinoor Diamond: ಕೊಹಿನೂರ್ ವಜ್ರ ಭಾರತದ ಈ ದೇವರಿಗೆ ಸೇರಿದ್ದು, ತಕ್ಷಣ ಮರಳಿಸಲು ಆಗ್ರಹ

ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತಂದು ಪುರಿ ಜಗನ್ನಾಥನಿಗೆ ಅರ್ಪಿಸುವಂತೆ ರಾಷ್ಟ್ರಪತಿಗಳಿಗೆ ಪತ್ರವನ್ನೂ ಬರೆಯಲಾಗಿದೆ.

ಪುರಿ ಜಗನ್ನಾಥ

ಪುರಿ ಜಗನ್ನಾಥ

  • Share this:
    ಕೊಹಿನೂರ್ ವಜ್ರ (Kohinoor Diamond) ಒಡಿಶಾದ ಪ್ರಸಿದ್ಧ ದೇಗುಲ ಪುರಿ ಜಗನ್ನಾಥ ದೇವರಿಗೆ (Sri  Puri Jagannath) ಸೇರಿದ್ದು ಎಂದು ಕೂಗೊಂದು ಕೇಳಿಬಂದಿದೆ. ಒಡಿಶಾದ ಜಗನ್ನಾಥ ಸೇನಾ ಎಂಬ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯೊಂದು ಬ್ರಿಟನ್​ನಲ್ಲಿರುವ (Britain)  ಕೊಹಿನೂರ್ ವಜ್ರ ಪುರಿ ಜಗನ್ನಾಥನಿಗೆ ವಾಪಸ್ ಬರಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಮಧ್ಯಸ್ಥಿತಿ ವಹಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೇ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತಂದು ಪುರಿ ಜಗನ್ನಾಥನಿಗೆ ಅರ್ಪಿಸುವಂತೆ ರಾಷ್ಟ್ರಪತಿಗಳಿಗೆ ಪತ್ರವನ್ನೂ ಬರೆಯಲಾಗಿದೆ.

    ಕೆಮಿಲ್ಲಾ ಮುಡಿಗೇರಲಿದೆ ಕೊಹಿನೂರ್ ಕಿರೀಟ
    ರಾಜಕುಮಾರ ಚಾರ್ಲ್ಸ್ ಪತ್ನಿ, ಡಚೆಸ್ ಆಫ್ ಕಾರ್ನ್‌ವಾಲ್ ಕೆಮಿಲ್ಲಾ, ಕ್ವೀನ್ ಕನ್ಸಾರ್ಟ್ ಎಂಬ ಬಿರುದು ಪಡೆದಿದ್ದಾರೆ. ಅದರ ಅರ್ಥ ರಾಜಕುಮಾರ ಚಾರ್ಲ್ಸ್ ಅವರ ಪತ್ನಿ ಬ್ರಿಟನ್ನಿನ ರಾಣಿ ಆಗಲಿದ್ದು ಪ್ರತಿಷ್ಠಿತ ಕೊಹಿನೂರ್ ಕಿರೀಟ ಕೂಡ ಕೆಮಿಲ್ಲಾ ಮುಡಿಗೇರಲಿದೆ. ಆದರೆ ಇದೀಗ ಕೊಹಿನೂರ್ ವಜ್ರವನ್ನು ಒಡಿಶಾದ ಪುರಿ ಜಗನ್ನಾಥನಿಗೆ ಪುನಃ ಅರ್ಪಿಸಬೇಕು ಎಂಬ ಕೂಗು ಕೇಳಿಬಂದಿದೆ.

    ಇತಿಹಾಸ ಹೀಗಿದೆ
    ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಜಗನ್ನಾಥ ದೇವರಿಗೆ ಕೊಹಿನೂರ್ ವಜ್ರವನ್ನು ದಾನ ಮಾಡಿದ್ದರು ಈ ಸಂಘಟನೆಯ ಮುಖ್ಯಸ್ಥರಾದ ಪಟ್ನಾಯಕ್ ಅವರು ಪ್ರತಿಪಾದಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ಭಗವಾನ್ ಅವರದ್ದು. ಇದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಜಗನ್ನಾಥ ದೇವರಿಗೆ ದಾನ ಮಾಡಿದಂತೆ ಕೊಹಿನೂರ್ ವಜ್ರವನ್ನು ಜಗನ್ನಾಥ ದೇವರಿಗಾಗಿ ಭಾರತಕ್ಕೆ ತರಲು ಕ್ರಮಕೈಗೊಳ್ಳುವಂತೆ ನಮ್ಮ ಪ್ರಧಾನಿಯವರ ಬಳಿ ವಿನಂತಿಸಿಕೊಳ್ಳುವೆ ಎಂದು ಸೇನಾ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

    ಕೊಹಿನೂರ್ ಕಿರೀಟದ ಇತಿಹಾಸ
    ವಜ್ರವನ್ನು 14 ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಯಲ್ಲಿ ಕೊಹಿನೂರ್ ವಜ್ರ ಪತ್ತೆಯಾಗಿತ್ತು. ಭಾರತ ಬಿಟ್ಟು ಹೋದ ಸಂಪತ್ತನ್ನು ಹಿಂದಿರುಗಿಸುವಂತೆ 1947ರಲ್ಲಿ ಮತ್ತು ವಿವಿಧ ಸಂದರ್ಭಗಳಲ್ಲಿ ಒತ್ತಾಯಿಸಲಾಯಿತು. ಆದರೂ ಬ್ರಿಟಿಷ್ ಸರ್ಕಾರವು ಈ ಮನವಿಯನ್ನು ನಿರಾಕರಿಸುತ್ತಲೇ ಬಂದಿದೆ.

    ರಾಣಿಯ ಕಿರೀಟದಲ್ಲಿ ಕೊಹಿನೂರ್
    ಆಂಗ್ಲೋ-ಸಿಖ್ ಯುದ್ಧದ ನಂತರ ಲಾಹೋರ್‌ನ ಮಹಾರಾಜರೊಂದಿಗೆ ಸಹಿ ಮಾಡಿದ ಒಪ್ಪಂದದ ಭಾಗವಾಗಿ 1849 ರಲ್ಲಿ ಕೊಹಿನೂರ್ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು ಎಂದು ಇತಿಹಾಸವು ಹೇಳುತ್ತದೆ. ರಾಣಿಯ ಈ ಕಿರೀಟವು ಕೊಹಿನೂರ್ ವಜ್ರಗಳಿಂದ ಕೂಡಿದೆ.

    ಇದನ್ನೂ ಓದಿ: Gyanvapi Masjid Case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆಯ ಹಕ್ಕು ಎತ್ತಿ ಹಿಡಿದ ವಾರಾಣಸಿ ಕೋರ್ಟ್​

    ಈ ಕಿರೀಟ 105.6-ಕ್ಯಾರೆಟ್ ವಜ್ರವನ್ನು ಒಳಗೊಂಡಿದೆ. ರಾಣಿಯ ಈ ಕಿರೀಟದ ಬೆಲೆ ಸುಮಾರು 3600 ಕೋಟಿ ಎಂದು ಹೇಳಲಾಗಿದೆ. ಸಂಪೂರ್ಣ ಸೆಟ್‌ನ ಬೆಲೆ 4500 ಕೋಟಿ ಎಂದು ಹೇಳಲಾಗುತ್ತದೆ. ಚಿನ್ನದ ಆರೋಹಣಗಳಲ್ಲಿ ಕೆತ್ತಲಾದ ವರ್ಣರಂಜಿತ ರತ್ನಗಳಲ್ಲಿ ನೀಲಮಣಿಗಳು, ಪಚ್ಚೆಗಳು ಮತ್ತು ಮುತ್ತುಗಳು ಸೇರಿವೆ. ಸುಮಾರು 1.28 ಕೆಜಿ ತೂಕದ ಕಿರೀಟವು ಅನೇಕ ಹಳೆಯ ಮತ್ತು ಅಮೂಲ್ಯವಾದ ರತ್ನಗಳಿಂದ ಕೂಡಿದೆ.

    ಒಟ್ಟಾರೆ ಭಾರತೀಯರು ಕೊಹಿನೂರ್‌ ಕಿರೀಟದ ಬಗ್ಗೆ ಆಗಾಗ್ಗೆ ಆಕ್ರೋಶ ಹೊರಹಾಕುತ್ತಿದ್ದರೂ ಬ್ರಿಟನ್‌ ಸರ್ಕಾರ ಮಾತ್ರ ಇದನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ.
    Published by:ಗುರುಗಣೇಶ ಡಬ್ಗುಳಿ
    First published: