Farmers Protest: ದೆಹಲಿಯ ರೈತರ ಹೋರಾಟಕ್ಕೆ ಕರ್ನಾಟಕದ ರೈತರ ಬೆಂಬಲ

ಗಾಜಿಯಾಬಾದ್ ಗಡಿಗೆ ತೆರಳಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಂಡ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿತು

ದೆಹಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ್​​

ದೆಹಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ್​​

  • Share this:
ನವದೆಹಲಿ (ಫೆ. 4):  ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಗುರುವಾರ ಕರ್ನಾಟಕದ ನಾಗರಿಕರು ಮತ್ತು ರೈತ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ.  ಗಾಜಿಯಾಬಾದ್ ಗಡಿಗೆ ತೆರಳಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಂಡ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿತು. ಇದೇ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕದ ರೈತರ ಬೆಂಬಲ ಕೂಡ ಇದೆ. ಈಗಾಗಲೇ ಕೆಲವು ತಂಡಗಳು ಬಂದು ಬೆಂಬಲ ಸೂಚಿಸಿವೆ‌. ಫೆಬ್ರವರಿ 6ನೇ ತಾರೀಖಿನವರೆಗೆ ನಾಲ್ಕು ಸಾವಿರ ಜನ ರೈತರು ದೆಹಲಿಗೆ ಬರಲಿದ್ದಾರೆ ಎಂದು ಹೇಳಿದರು. ಇದೇ ವೇಳೇ ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಕಾರಣಕ್ಕೆ ಬೆಂಗಳೂರಿನಿಂದ ದೆಹಲಿಗೆ ಬಂದಿದ್ದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಧ್ಯಾ ಎಂಬುವವರು ಕೇಂದ್ರ ಸರ್ಕಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ.‌ ಕರ್ನಾಟಕದ ಜನ ಈ ಹೋರಾಟದ ಜೊತೆಗೆ ಇದ್ದಾರೆ. ಕರ್ನಾಟಕದ ಪ್ರಜೆಯಾಗಿ ಇಲ್ಲಿಗೆ ಬಂದು ಮಾತನಾಡಲು ಹೆಮ್ಮೆ ಎನಿಸುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಂಸತ್ತಿನಲ್ಲಿ ಕುಳಿತು ಹೇಗೆ ಅವರು ಇಂಥ ಮಸೂದೆ ಪಾಸ್ ಮಾಡಿದರು ಎಂದು ಪ್ರಶ್ನಿಸಿದ ಸಂಧ್ಯಾ ಅವರು, ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರೊಂದಿಗೆ ನಿಲ್ಲಬೇಕಿದೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಬೇಕಿದೆ ಎಂದು ಕರೆ ಕೊಟ್ಟರು.

ಇದನ್ನು ಓದಿ: ಲಿಂಗಾಯತ ಮೀಸಲಾತಿ: ಗೆಜೆಟ್ ನೋಟಿಫಿಕೇಷನ್ ಹೊರಡಿಸುವವರೆಗೂ ಹೋರಾಟ: ಜಯಮೃತ್ಯುಂಜಯ ಶ್ರೀ

ಟ್ವಿಟರ್ ನಲ್ಲಿ ಟ್ರೆಂಡ್ ಆದ ರೈತರ ಪ್ರತಿಭಟನೆ

​ಪಾಪ್​ ಸಿಂಗರ್ ರಿಹಾನ್ನಾ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್​ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಒಂದರ ಹಿಂದೆ ಒಂದರಂತೆ ಹಾಲಿವುಡ್​ ಸೆಲೆಬ್ರಿಟಿಗಳ ಟ್ವೀಟ್​ ಬರಲಾರಂಭಿಸಿತು. ರೈತರ ಪ್ರತಿಭಟನೆ ವಿಷಯದಲ್ಲಿ ಸರ್ಕಾರದ ವಿರುದ್ಧ ಟ್ವೀಟ್​ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಯಿತು. ಹಾಲಿವುಡ್​ ಸೆಲೆಬ್ರಿಟಿಗಳು ಟ್ವೀಟ್​ ಮಾಡುತ್ತಿದ್ದಂತೆಯೇ ಭಾರತದಲ್ಲೂ ಸಾಕಷ್ಟು ಮಂದಿ ಬಾಲಿವುಡ್​ ಸ್ಟಾರ್​ಗಳು ರೈತರ ಪ್ರತಿಭಟನೆ ಪರವಾಗಿ ಟ್ವೀಟ್ ಮಾಡಲು ಶುರು ಮಾಡಿದರು.

ಜೊತೆಗೆ ಭಾರದ ವಿರುದ್ಧ ಅಪಪ್ರಚಾರ ಮಾಡುವವರಿಂದ ಹುಷಾರಾಗಿರಬೇಕೆಂದೂ  ಹೇಳುತ್ತಿದ್ದಾರೆ.  ಬಾಲಿವುಡ್​ ಸೆಲೆಬ್ರಿಟಿಗಳು ಪಾಪ್​ ಗಾಯಕಿ ರಿಹಾನ್ನಾ ಅವರ ಟ್ವೀಟ್​ಗೆ ಖಾರವಾಗಿ ಪ್ರತ್ರಿಕ್ರಿಯಿಸುತ್ತಿದ್ದಾರೆ. ಜೊತೆಗೆ ನಮ್ಮ ದೇಶದ ಆಂತರಿಕ ವಿಷಯಗಳಲ್ಲಿ ನಿಮ್ಮ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದೂ ಹೇಳುತ್ತಿದ್ದಾರೆ. ರಿಹಾನಾ  ಮಾಡಿರುವ ಟ್ವೀಟ್​ಗೆ ಅಕ್ಷಯ್​ ಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್​, ಕಂಗನಾ ರನೌತ್​ ಸೇರಿದಂತೆ ಹಲವಾರು ಮಂದಿ ನಟ-ನಟಿಯರು ಪ್ರತಿಕ್ರಿಯಿಸಿದ್ದಾರೆ.
Published by:Seema R
First published: