News18 India World Cup 2019

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಆ. 29ರಿಂದ ಸಂಚಾರ ಆರಂಭ: ಪ್ರವಾಹದಿಂದಾದ ನಷ್ಟ 220 ಕೋಟಿಗೂ ಅಧಿಕ

news18
Updated:August 22, 2018, 9:24 PM IST
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಆ. 29ರಿಂದ ಸಂಚಾರ ಆರಂಭ: ಪ್ರವಾಹದಿಂದಾದ ನಷ್ಟ 220 ಕೋಟಿಗೂ ಅಧಿಕ
news18
Updated: August 22, 2018, 9:24 PM IST
ನ್ಯೂಸ್​18 ಕನ್ನಡ

ಕೊಚ್ಚಿ (ಆ. 22): ಕೇರಳದ ಭಾರೀ ಮಳೆಯಿಂದಾಗಿ ಅರ್ಧ ಮುಳುಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಸ್ಟ್​ 29ರಿಂದ ಮತ್ತೆ ತೆರೆಯಲಿದೆ.

ಕೇರಳದಲ್ಲಿ ಉಂಟಾದ ಪ್ರವಾಹದಿಂದ ಕೊಚ್ಚಿ ವಿಮಾನ ನಿಲ್ದಾಣದ ಅರ್ಧ ಭಾಗವೇ ಮುಳುಗಡೆಯಾಗಿತ್ತು. ಹೀಗಾಗಿ ಆಗಸ್ಟ್​ 15ರಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿ, ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಇದೀಗ ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಪ್ರವಾಹದ ಮಟ್ಟವೂ ಇಳಿದಿರುವುದರಿಂದ ಆ. 29ರಿಂದ ಮತ್ತೆ ವಿಮಾನಗಳ ಹಾರಾಟ ಆರಂಭವಾಗಲಿದೆ.

ಆ. 26ರಂದೇ ವಿಮಾನ ನಿಲ್ದಾಣದಲ್ಲಿ ಸಂಚಾರ ಆರಂಭವಾಗಬೇಕಾಗಿತ್ತು. ಆದರೆ, ಪ್ರವಾಹದಿಂದಾಗಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಶೇ. 90ರಷ್ಟು ಜನರ ಮೇಲೆ ಪರಿಣಾಮ ಉಂಟಾಗಿದೆ. ಹೀಗಾಗಿ, ಸಿಬ್ಬಂದಿಯ ಕೊರತೆ ಉಂಟಾದ್ದರಿಂದ ಮೂರು ದಿನಗಳ ಕಾಲ ಮುಂದೂಡಲಾಗಿದೆ.

ಅಂದಾಜಿನ ಪ್ರಕಾರ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಈ ಬಾರಿಯ ಪ್ರವಾಹದಿಂದ 220 ಕೋಟಿಗೂ ಹೆಚ್ಚು ಮೌಲ್ಯದ ನಷ್ಟವಾಗಿದೆ. ಇಡುಕ್ಕಿ ಡ್ಯಾಂ ಗೇಟ್​ ತೆರೆದ ಕಾರಣದಿಂದ ವಿಮಾನ ನಿಲ್ದಾಣವೂ ಮುಳುಗುವ ಹಂತ ತಲುಪಿತ್ತು. ಕೇರಳದ ಪ್ರಮುಖ ವಿಮಾನ ನಿಲ್ದಾಣವಾದ ಕೊಚ್ಚಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಭಾರೀ ನಷ್ಟವುಂಟಾಗಿದೆ.

ಈ ಬಾರಿಯ ಮಳೆಗಾಲದಲ್ಲಿ ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ 350ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಶತಮಾನದ ಪ್ರವಾಹದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಬೇರೆ ಸ್ಥಳಕ್ಕೆ ವರ್ಗಾಯಿಸಲ್ಪಟ್ಟಿದ್ದರು. ಲಕ್ಷಾಂತರ ಜನರು ಮನೆ, ಜಾಗವನ್ನು ಕಳೆದುಕೊಂಡಿದ್ದರು. ಈ ದುರಂತದಲ್ಲಿ ಅಂದಾಜು 10 ಸಾವಿರ ಕೋಟಿಗೂ ಹೆಚ್ಚು ಪ್ರಮಾಣದ ನಷ್ಟವುಂಟಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
Loading...

First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...