ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಸಂಚಾರ ಆರಂಭ

news18
Updated:August 29, 2018, 6:21 PM IST
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಸಂಚಾರ ಆರಂಭ
news18
Updated: August 29, 2018, 6:21 PM IST
ನ್ಯೂಸ್​18 ಕನ್ನಡ

ಕೊಚ್ಚಿ (ಆ. 29): ಭಾರೀ ಪ್ರವಾಹದಿಂದ ಮುಚ್ಚಲ್ಪಟ್ಟಿದ್ದ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ವಿಮಾನ ಹಾರಾಟ ಆರಂಭವಾಗಿದೆ.

ಕೇರಳದಲ್ಲಿ ಉಂಟಾದ ಪ್ರವಾಹದಿಂದ ಕೊಚ್ಚಿ ವಿಮಾನ ನಿಲ್ದಾಣದ ಅರ್ಧ ಭಾಗವೇ ಮುಳುಗಡೆಯಾಗಿತ್ತು. ಹೀಗಾಗಿ ಆಗಸ್ಟ್​ 15ರಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿ, ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಇದೀಗ  ಪ್ರವಾಹದ ಮಟ್ಟಇಳಿದಿರುವುದರಿಂದ ಇಂದಿನಿಂದ ಮತ್ತೆ ವಿಮಾನಗಳ ಹಾರಾಟ ಆರಂಭವಾಗಲಿದೆ.

15 ದಿನಗಳ ಬಿಡುವಿನ ನಂತರ ಇಂದು ಕೊಚ್ಚಿ ವಿಮಾನ ನಿಲ್ದಾಣದದಿಂದ ವಿಮಾನಗಳು ಹಾರಾಟ ನಡೆಸಿವೆ. ಅಂದಾಜಿನ ಪ್ರಕಾರ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಈ ಬಾರಿಯ ಪ್ರವಾಹದಿಂದ 220 ಕೋಟಿಗೂ ಹೆಚ್ಚು ಮೌಲ್ಯದ ನಷ್ಟವಾಗಿದೆ. ಇಡುಕ್ಕಿ ಡ್ಯಾಂ ಗೇಟ್​ ತೆರೆದ ಕಾರಣದಿಂದ ವಿಮಾನ ನಿಲ್ದಾಣವೂ ಮುಳುಗುವ ಹಂತ ತಲುಪಿತ್ತು. ಕೇರಳದ ಪ್ರಮುಖ ವಿಮಾನ ನಿಲ್ದಾಣವಾದ ಕೊಚ್ಚಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ಭಾರೀ ನಷ್ಟವುಂಟಾಗಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...