SSB ಸೈನಿಕ ಪಡೆಯ ಬಗ್ಗೆ ನಿಮಗೆಷ್ಟು ಗೊತ್ತು?, ಇವರ ಸಾಮರ್ಥ್ಯ ಕೇಳಿದ್ರೆ ಶತ್ರುಗಳ ಎದೆ ನಡುಗುತ್ತಂತೆ..!

ಸೀಮಾ ಬಲ ಅಥವಾ ಎಸ್‍ಎಸ್‍ಬಿ ಈಗ ಸುಮಾರು ಒಂದು ಲಕ್ಷದಷ್ಟು ಸೈನಿಕರನ್ನು ಹೊಂದಿರುವ ಈ ಪಡೆಯು ಪ್ರಮುಖವಾಗಿ ನೇಪಾಳ (Nepal Border) ಮತ್ತು ಭೂತಾನ್ ಗಡಿಗಳನ್ನು (Bhutan Border) ಕಾಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕುತಂತ್ರಿ ಚೈನಾ (China) 1962 ರಲ್ಲಿ ಆಕ್ರಮಣದ ನಂತರ ಭಾರತಕ್ಕೆ (India) ಗಡಿ ಪ್ರದೇಶಗಳಲ್ಲಿ ಸಾಮಾನ್ಯ ನಾಗರಿಕರೊಂದಿಗೆ ಬೆರೆಯುವುದಲ್ಲದೆ ಶತ್ರುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಸಾಮರ್ಥವಿರುವ ಪಡೆಯೊಂದು ಬೇಕೆಂದು ಅನಿಸಿತ್ತು. ಅದರ ಫಲಶೃತಿಯೇ ಸಹಸ್ರ ಸೀಮಾ ಬಲ ಅಥವಾ ಎಸ್‍ಎಸ್‍ಬಿ ಈಗ ಸುಮಾರು ಒಂದು ಲಕ್ಷದಷ್ಟು ಸೈನಿಕರನ್ನು ಹೊಂದಿರುವ ಈ ಪಡೆಯು ಪ್ರಮುಖವಾಗಿ ನೇಪಾಳ (Nepal Border) ಮತ್ತು ಭೂತಾನ್ ಗಡಿಗಳನ್ನು (Bhutan Border) ಕಾಯುತ್ತದೆ. ಆದಾಗ್ಯೂ, ಇವರ ಪಾತ್ರದಲ್ಲಿ ಬದಲಾವಣೆಯಾಗಿದ್ದು ಇದಕ್ಕೆ ಪ್ರಮುಖ ಕಾರಣ ಕಾರ್ಗಿಲ್ ಯುದ್ಧ ಹಾಗೂ ತದನಂತರ ತೆಗೆದುಕೊಳ್ಳಲಾದ "ಒನ್ ಬಾರ್ಡರ್, ಒನ್ ಫೋರ್ಸ್" ಪರಿಕಲ್ಪನೆ. 2003, ಡಿಸೆಂಬರ್ 15 ರಂದು ಪ್ರವರ್ಧಮಾನಕ್ಕೆ ಬಂದ ಸಹಸ್ರ ಸೀಮಾ ಬಲ ಪಡೆಗೆ ಭಾರತ-ನೇಪಾಳ ಗಡಿ ಕಾಯುವ ಮಹತ್ತರ ಜವಾಬ್ದಾರಿ ವಹಿಸಲಾಗಿತ್ತು.

ಅದಾದ ಒಂದು ವರ್ಷದ ಬಳಿಕೆ ಈ ಪಡೆಗೆ ಹೆಚ್ಚುವರಿಯಾಗಿ ಭಾರತ-ಭೂತಾನ್ ಗಡಿ ರಕ್ಷಣೆಯ ಜವಾಬ್ದಾರಿಯನ್ನೂ ಸಹ ವಹಿಸಲಾಯಿತು. ಪ್ರಸ್ತುತ ಈ ಪಡೆಯ ಸೇನಾ ತುಕಡಿಗಳು ಭಾರತದ ಉತ್ತರಾಖಂಡ, ಉತ್ತರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಸಿಕ್ಕಿಂ, ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇತಿಹಾಸ:

1962 ರಲ್ಲಿ ಕುತಂತ್ರಿ ಚೈನಾ ದಾಳಿಯ ನಂತರ ಭಾರತ ಸರ್ಕಾರಕ್ಕೆ ಗಡಿಯಲ್ಲೇ ಶಸ್ತ್ರರಹಿತ ಜವಾನರನ್ನು ಬಳಸಿಕೊಂಡು ಶತ್ರುಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತ ಅಲ್ಲಿನ ಸ್ಥಳೀಯರೊಂದಿಗೆ ಸಾಮಾನ್ಯರಂತೆ ಬೆರೆತಿರುವ ಪಡೆ ಇರಬೇಕೆಂಬ ಆಲೋಚನೆ ಬಂದಿತು. ಇದಾದ ನಾಲ್ಕು ತಿಂಗಳ ತರುವಾಯ ಎಲ್ಲ ರೀತಿಯಿಂದಲೂ ಸಿದ್ಧರಾಗಿರುವುದಕ್ಕೆ ಸಂಬಂಧಿಸಿದಂತೆ ಪಡೆಯೊಂದನ್ನು ರಚಿಸಲಾಯಿತು. ಮೊದಲಿಗೆ ಈ ಪಡೆಯನ್ನು ಕೆಲವೆ ರಾಜ್ಯಗಳಲ್ಲಿ ಅಂದರೆ ಅಸ್ಸಾಂ, ಉತ್ತರ ಬಂಗಾಳ, ಉತ್ತರ ಪ್ರದೇಶದ ಪರ್ವತ ಪ್ರದೇಶಗಳು, ಹಿಮಾಚಲ ಪ್ರದೇಶ, ಪಂಜಾಬ್ ಬ ಕೆಲ ಭಾಗಗಳು ಹಾಗೂ ಜಮ್ಮು ಕಾಶ್ಂಇರದಲ್ಲಿ ನಿಯೋಜಿಸಲಾಗಿತ್ತು. ಈ ಪಡೆಯ ಅಪಾರ ಯಶಸ್ಸಿನಿಂದಾಗಿ ಅದನ್ನು ಮಣಿಪುರ, ತ್ರಿಪುರಾ, ಸಿಕ್ಕಿಂ, ರಾಜಸ್ಥಾನ, ದಕ್ಷಿಣ ಬಂಗಾಳ, ನಾಗಾಲ್ಯಾಂಡ್ ಮತ್ತು ಮಿಜೋರಾಮ್ ಗಳಲ್ಲೂ ನಿಯೋಜಿಸಲಾಯಿತು.

ಇದನ್ನೂ ಓದಿ: Bihar: ಗ್ಯಾಸ್ ಸಿಲಿಂಡರ್ ಒಳಗೆ ಫುಲ್ ಮದ್ಯ..! ಎಲ್ಲಿಂದ ಸಿಗುತ್ತಪ್ಪಾ ಇಂಥಾ ಐಡಿಯಾ!

ಎಸ್​ಎಸ್​ಬಿ ಪಡೆಗಳ ಬಲ:

ಪ್ರಸ್ತುತ ಈ ಸಹಸ್ರ ಸೀಮಾ ಬಲದ ವ್ಯಾಪ್ತಿಯಲ್ಲಿ 9,917 ಕೀ.ಮೀ ಉದ್ದದ ಸ್ಥಳ, 80000 ಗ್ರಾಮಗಳು ಹಾಗೂ 6 ಕೋಟಿ ಜನಸಂಖ್ಯೆ ಆವೃತವಾಗಿದೆ. ಎಸ್‍ಎಸ್‍ಬಿ ಹತ್ತು ವಿಭಾಗಗಳನ್ನು ಹೊಂದಿದ್ದು ಪ್ರತಿ ವಿಭಾಗದ ಇನ್ಚಾರ್ಜ್ ಆಗಿ ಕಮಿಷನರ್ ಇರುತ್ತಾರೆ. 49 ಪ್ರದೇಶಗಳನ್ನು ಪ್ರದೇಶ ಸಂಚಾಲಕರು ನೋಡಿಕೊಳ್ಳುತ್ತಾರೆ, 117 ಉಪಪ್ರದೇಶಗಳ ಉಪಪ್ರದೇಶ ಸಂಚಾಲಕರು ನೋಡಿಕೊಳ್ಳುತ್ತಾರೆ ಹಾಗೂ 287 ಸರ್ಕಲ್ ಗಳನ್ನು ಸರ್ಕಲ್ ಸಂಚಾಲಕರು ನೋಡಿಕೊಳ್ಳುತ್ತಾರೆ. ಯುದ್ಧದ ಸಂದರ್ಭಕ್ಕೆ ಎಸ್‍ಎಸ್‍ಬಿ ಎರಡು ಡಜನ್ ಬಟಾಲಿಯನ್ ಪಡೆಗಳನ್ನು ಹೊಂದಿದೆ ಹಾಗೂ ಈ ಪಡೆಗಳು ಸ್ವಯಂಸೇವಕರಿಗೆ ತರಬೇತಿಯನ್ನೂ ಸಹ ಒದಗಿಸುತ್ತವೆ. 1990ರ ವರೆಗೆ ಈ ಸೀಮಾ ಬಲ ಪಡೆಯು ಏಳು ತರಬೇತಿ ಸಂಸ್ಥೆಗಳನ್ನು ಹೊಂದಿತ್ತು ಹಾಗೂ ಮಹಿಳೆಯರಿಗೂ ತರಬೇತಿ ನೀಡಲಾಗುತ್ತಿತ್ತು.

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ:

ಆದರೆ, ಕಾರ್ಗಿಲ್ ಯುದ್ಧದ ಬಳಿಕ ಭಾರತ ಸರ್ಕಾರವು ಗಡಿ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ನೀತಿ ಬದಲಾವಣೆ ಮಾಡಿ ಒನ್ ಬಾರ್ಡರ್ ಒನ್ ಫೋರ್ಸ್ ಉಪಕ್ರಮ ತೆಗೆದುಕೊಂಡಿತು. ಇದಕ್ಕನುಸಾರವಾಗಿ 2001 ರಲ್ಲಿ ಈ ಪಡೆಯನ್ನು ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ ನಿಂದ ವರ್ಗಾಯಿಸಿ ಗೃಹ ಮಂತ್ರಾಲಯದ ಅಡಿಗೆ ನೇರವಾಗಿ ನೀಡಲಾಯಿತು. ಪಡೆಯ ಪ್ರಮುಖ ಜವಾಬ್ದಾರಿ ಅಂದಿನಿಂದ ಭಾರತ-ನೇಪಾಳ ಹಾಗೂ ಭಾರತ-ಭೂತಾನ್ ಗಡಿ ಕಾಯುವುದಕ್ಕೆ ನೀಡಲಾಯಿತು. ಇದನ್ನು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಎಂತಲೂ ಘೋಷಿಸಲಾಯಿತು.

ಪಡೆಯನ್ನು ಭಾರತದ ಬಲು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವುದರಿಂದ ಈ ಪಡೆಯ ಅನೇಕ ಸೈನಿಕರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಕೀರ್ತಿ ಚಕ್ರ, ಶೌರ್ಯ ಚಕ್ರ ಸೇರಿದಂತೆ ಅಪಾರ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. 2009 ರಲ್ಲಿ ಅಸ್ಸಾಂನಲ್ಲಿ ಬಂಡಾಯ ಎದ್ದಾಗ ಎಸ್‍ಎಸ್‍ಬಿ ಮಹತ್ತರ ಪಾತ್ರ ನಿರ್ವಹಿಸಿದ್ದನ್ನು ಗಮನಿಸಬಹುದು. ಈ ಸಂದರ್ಭದಲ್ಲಿ ಪಡೆಯ ಸಬ್ ಇನ್ಸ್ಪೆಕ್ಟರ್ ಭೂಪಾಲ್ ಸಿಂಗ್ ಅವರು ಬಂಡಾಯಕೋರರ ವಿರುದ್ಧ ತಮ್ಮ ತಂಡದೊಂದಿಗೆ ಅದ್ಭುತವಾಗಿ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ್ದು ಈ ಪಡೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Anil Srivatsa: ಅಂಗಾಂಗ ದಾನದ ಮಹತ್ವ ಸಾರಲು 56 ಸಾವಿರ ಕಿ.ಮೀ ಪ್ರಯಾಣ, WTG ಅಲ್ಲಿ ಪಾಲ್ಗೊಳ್ಳಲಿರುವ ಅನಿಲ್ ಶ್ರೀವತ್ಸ

ಇದಕ್ಕೂ ಮುಂಚೆ ಈ ಪಡೆಯು ತಮ್ಮ ವ್ಯಾಪ್ತಿಯಲ್ಲಿ ಸ್ವಯಂಸೇವಕರನ್ನು ತಯಾರುಗೊಳಿಸಿ ಅವರಿಂದ ಶತ್ರುಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುವುದರಲ್ಲಿ ಸಕ್ಷಮವಾಗಿತ್ತು. ಇದಕ್ಕೆ ಉದಾಹರಣೆಯೆಂಬಂತೆ 1970 ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಿಜೊ ಉಗ್ರರು ಈ ಪಡೆಯ ಮುಂದೆ ಶರಣಾಗತರಾಗಿದ್ದರು. ಕಾರ್ಗಿಲ್ ಯುದ್ಧದಲ್ಲೂ ಸಹ ಎಸ್‍ಎಸ್‍ಬಿ ಮರೆಯಲಾಗದ ಪಾತ್ರವಹಿಸಿದೆ. ಈ ಸಂದರ್ಭದಲ್ಲಿ ಈ ಪಡೆಯ ಅಧಿಕಾರಿಗಳಿಗೆ ಶತ್ರುಗಳು ಸ್ಥಳೀಯವಾಗಿ ಯಾರೊಂದಿಗೆ ಬೆರೆತಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಿ ನೀಡುವುದಾಗಿತ್ತು ಹಾಗೂ ಅದರಂತೆ ಈ ಪಡೆಯ ಅಧಿಕಾರಿಗಳು ಆ ಜವಾಬ್ದರಿಯನ್ನು ಸಮರ್ಥವಗಿ ನಿರ್ವಹಿಸಿದ್ದರು ಕೂಡ.

ಅನುದಾನ:

2022-23 ರ ಬಜೆಟ್ ನಲ್ಲಿ ಎಸ್‍ಎಸ್‍ಬಿಗೆ 7653.73 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಸರ್ಕಾರವು ಈ ಪಡೆಯ ಅನುದಾನವನ್ನು ಹೆಚ್ಚಿಸಿದೆ.

ಸಾಮರ್ಥ್ಯ ಮತ್ತು ವಿನ್ಯಾಸ:

ಐಪಿಎಸ್ ವಲಯದಲ್ಲಿ ಡೈರೆಕ್ಟರ್ ಜನರಲ್ ಆದವರು ಈ ಪಡೆಯ ನೇತೃತ್ವವಹಿಸುತ್ತಾರೆ. ಇವರ ಅಧೀನದಲ್ಲಿ ಐಜಿಗಳು ಹಾಗೂ ಹೆಚ್ಚುವರಿ ಡೈರೆಕ್ಟರ್ ಜನರಲ್ ಇರುತ್ತಾರೆ. ಈ ಪಡೆಯಲ್ಲಿ ಕಾರ್ಯಾಚರಣೆ, ಗುಪ್ತಚರ, ಆಡಳಿತ, ತರಬೇತಿ ಸೇರಿದಂತೆ ಹಲವು ಇಲಾಖೆಗಳಿವೆ. ಅಲ್ಲದೆ ಈ ಪಡೆಯು ರಾಣಿಖೇತ್, ಲಕನೌ, ಪಾಟ್ನಾ, ಸಿಲಿಗುರಿ, ಗುವಾಹಾಟಿ ಮತ್ತು ತೇಜಪುರ್ ಎಂಬ ಭಾಗಗಳಲ್ಲಿ ವಿಭಜಿಸಲ್ಪಟ್ಟಿದೆ. ಎಸ್‍ಎಸ್‍ಬಿ ಯಲ್ಲಿ 16 ಐಜಿಗಳು ಹಾಗೂ ಒಬ್ಬ ಹೆಚ್ಚುವರಿ ಡಿಜಿ ಕೆಲಸ ನಿರ್ವಹಿಸುತ್ತಾರೆ. 2016 ರಲ್ಲಿ ಈ ಪಡೆ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿತ್ತು. ಪ್ರಥಮ ಬಾರಿಗೆ ಸುಮಾರು ಒಂದು ವರ್ಷದ ಕಾಲ ಮಹಿಳಾ ಡಿಜಿ ಒಬ್ಬರು ಪಡೆಯನ್ನು ಮುನ್ನಡೆಸಿದ್ದರು ಅವರ ಹೆಸರು ಅರ್ಚನಾ ರಾಮಸುಂದ್ರಮ್.

ತರಬೇತಿ:

ಈ ಪಡೆಗೆ ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಗೋರಿಲ್ಲಾ ವಾರ್ಫೇರ್, ಕೌಂಟರ್ ಇನ್ಸರ್ಜೆನ್ಸಿ, ಇಂಟೆಲಿಜೆನ್ಸ್, ಹಿಮದಲ್ಲಿ ಜೀವಿಸುವುದು, ಕಾಡಿನಲ್ಲಿ ಜೀವಿಸುವುದು ಮುಂತಾದ ವಲಯಗಳಲ್ಲಿ ತರಬೇತಿ ನೀಡಲಾಗುತ್ತದೆ. ದೆಹಲಿಯಲ್ಲಿ ಎಸ್‍ಎಸ್‍ಬಿ ಸೈನಿಕರು ಹಾಗೂ ಅಧಿಕಾರಿಗಳಿಗೆ ಇಂಟೆಲಿಜೆನ್ಸ್ ಕಲಿಯುವಿಕೆ ಕೇಂದ್ರವೂ ಸಹ ಉಪಸ್ಥಿತವಿದೆ.
Published by:shrikrishna bhat
First published: