• Home
  • »
  • News
  • »
  • national-international
  • »
  • Indian Railways: ನೀವು ರೈಲು ಹತ್ತುವ ಮುನ್ನ ಈ ಹೊಸ ನಿಯಮಗಳನ್ನು ಒಮ್ಮೆ ತಿಳ್ಕೊಳ್ಳಿ

Indian Railways: ನೀವು ರೈಲು ಹತ್ತುವ ಮುನ್ನ ಈ ಹೊಸ ನಿಯಮಗಳನ್ನು ಒಮ್ಮೆ ತಿಳ್ಕೊಳ್ಳಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗ ನೀವು ರೈಲ್ವೆ ಟಿಕೆಟ್ ಬುಕಿಂಗ್ ಸಮಯದಲ್ಲಿ ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಮತ್ತು ರೈಲು ಹತ್ತಿದ ಮೇಲೆ ನೀವು ಊಟವನ್ನು ಆರ್ಡರ್ ಮಾಡಿದರೆ ತಗಲುವ ಶುಲ್ಕಗಳಿಗೆ ಅನ್ವಯಿಸುವ ಕ್ಯಾಟರಿಂಗ್ ಸೇವೆಗಳ ಬಗ್ಗೆ ಭಾರತೀಯ ರೈಲ್ವೆ ಹೊಸದೊಂದು ಆದೇಶ ಹೊರಡಿಸಿದೆ ನೋಡಿ.

  • Share this:

ನೀವು ತುಂಬಾನೇ ರೈಲ್ವೆಗಳಲ್ಲಿ (Railway) ಪ್ರಯಾಣಿಸುತ್ತಿದ್ದರೆ, ನಿಮಗೆ ಬಹುತೇಕವಾಗಿ ಎಲ್ಲಾ ರೀತಿಯ ನಿಯಮಗಳು ತಿಳಿದಿರುತ್ತವೆ. ಎಂದರೆ ಟಿಕೆಟ್ ಹೇಗೆ ಬುಕ್ ಮಾಡುವುದು, ಮಾಡುವ ಮುಂಚೆ ಈ ಕ್ಯಾಟರಿಂಗ್ ಸೇವೆಗಳನ್ನು (Catering Service) ಹೇಗೆ ಆಯ್ಕೆ ಮಾಡಿಕೊಳ್ಳುವುದು, ಹೀಗೆ ಅನೇಕ ವಿಷಯಗಳ ಬಗ್ಗೆ ನಿಮಗೆ ತಿಳಿದಿರುತ್ತದೆ ಎಂದು ಹೇಳಬಹುದು. ಈಗ ನೀವು ರೈಲ್ವೆ ಟಿಕೆಟ್ ಬುಕಿಂಗ್ (Ticket Booking) ಸಮಯದಲ್ಲಿ ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಮತ್ತು ರೈಲು ಹತ್ತಿದ ಮೇಲೆ ನೀವು ಊಟವನ್ನು ಆರ್ಡರ್ (Food Order) ಮಾಡಿದರೆ ತಗಲುವ ಶುಲ್ಕಗಳಿಗೆ ಅನ್ವಯಿಸುವ ಕ್ಯಾಟರಿಂಗ್ ಸೇವೆಗಳ ಬಗ್ಗೆ ಭಾರತೀಯ ರೈಲ್ವೆ (Indian Railways) ಹೊಸದೊಂದು ಆದೇಶ ಹೊರಡಿಸಿದೆ ನೋಡಿ.


ಶತಾಬ್ದಿ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ವಂದೇ ಭಾರತ್ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್, ಮತ್ತು ದುರಂತೋ ಎಕ್ಸ್‌ಪ್ರೆಸ್ ಸೇರಿದಂತೆ ಭಾರತೀಯ ರೈಲ್ವೆಯ ಎಲ್ಲಾ ಪ್ರೀಮಿಯಂ ರೈಲುಗಳಿಗೆ ಈ ಕ್ಯಾಟರಿಂಗ್ ಶುಲ್ಕಗಳು ಅನ್ವಯವಾಗುತ್ತವೆ.


ಭಾರತೀಯ ರೈಲ್ವೆ ಮಂಡಳಿಯಿಂದ ಹೊಸ ಆದೇಶ
ಭಾರತೀಯ ರೈಲ್ವೆ ಮಂಡಳಿಯು ಜುಲೈ 15 ರಂದು ಹೊರಡಿಸಿದ ಆದೇಶದ ಪ್ರಕಾರ ಹೊಸ ದರ ಪಟ್ಟಿಯು ಭಾರತೀಯ ರೈಲ್ವೆಯ ಪ್ರಯಾಣಿಕರಿಗೆ ನೀಡಲಾಗುವ ವಿವಿಧ ಊಟದ ವಿವರವಾದ ದರ ಚಾರ್ಟ್ ಅನ್ನು ಒಳಗೊಂಡಿದೆ. ಚಹಾ ಮತ್ತು ಕಾಫಿಯ ಬೆಲೆಗಳು ಎಲ್ಲಾ ಪ್ರಯಾಣಿಕರಿಗೆ ಒಂದೇ ಆಗಿರುತ್ತವೆ. ಪ್ರಯಾಣಿಕರು ಅದನ್ನು ಮುಂಚಿತವಾಗಿ ಕಾಯ್ದಿರಿಸಿದ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಆರ್ಡರ್ ಮಾಡಿದರೂ ಸಹ ಆ ದರಗಳಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ.


ಇದನ್ನೂ ಓದಿ: Viral Video Of Dudhsagar: ಸ್ವರ್ಗ ಭೂಮಿಯನ್ನು ಭೇಟಿಯಾದಂತಿದೆ, ದೂಧ್ ಸಾಗರ್ ಜಲಪಾತದ ಮೋಹಕ ದೃಶ್ಯ!


ಅಧಿಸೂಚನೆಯಲ್ಲಿ, ರೈಲಿನಲ್ಲಿ ಊಟವನ್ನು ಆಯ್ಕೆ ಮಾಡುವ ಮತ್ತು ರೈಲು ಟಿಕೆಟ್ ಕಾಯ್ದಿರಿಸುವಾಗ ಅದನ್ನು ಮುಂಚಿತವಾಗಿ ಕಾಯ್ದಿರಿಸದ ಪ್ರಯಾಣಿಕರಿಂದ 50 ರೂಪಾಯಿ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.


ಹೊಸ ರೂಲ್ಸ್ ನಲ್ಲಿ ಏನೇನಿದೆ
ಟಿಕೆಟ್ ಬುಕಿಂಗ್ ಸಮಯದಲ್ಲಿ ಊಟವನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ರಾಜಧಾನಿ, ದುರಂತೋ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್ ನಲ್ಲಿ 1ಎ ಅಥವಾ ಎಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಊಟದ ಚಾರ್ಟ್ ನಲ್ಲಿ ಬೆಳಗಿನ ಉಪಾಹಾರ ಮತ್ತು ಸಂಜೆ ಉಪಾಹಾರಕ್ಕೆ 140 ರೂಪಾಯಿಯ ಬದಲು 190 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ ರೀತಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 240 ರೂಪಾಯಿಯ ಬದಲು 290 ರೂಪಾಯಿ ಪಾವತಿಸಬೇಕಾಗುತ್ತದೆ.


ರಾಜಧಾನಿ, ದುರಂತೋ, ಶತಾಬ್ದಿ ಎಕ್ಸ್‌ಪ್ರೆಸ್ ನ 2ಎಸಿ/3ಎ/ಸಿಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಿಸುವಾಗ ಆರ್ಡರ್ ಮಾಡಿದರೆ ಬೆಳಗಿನ ಉಪಾಹಾರಕ್ಕೆ 105 ರೂಪಾಯಿಯ ಬದಲು 155 ರೂಪಾಯಿ ಮತ್ತು ಸಂಜೆಯ ಉಪಾಹಾರಕ್ಕೆ 90 ರೂಪಾಯಿಯ ಬದಲು 140 ರೂಪಾಯಿ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 185 ರೂಪಾಯಿಯ ಬದಲು 235 ರೂಪಾಯಿ ಪಾವತಿಸಬೇಕು. ದುರಂತೋ ಎಕ್ಸ್‌ಪ್ರೆಸ್ ನ ಸ್ಲೀಪರ್ ಕ್ಲಾಸ್ ವಿಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಶುಲ್ಕಕ್ಕಾಗಿ ರೈಲ್ವೆ ಪ್ರತ್ಯೇಕ ಚಾರ್ಟ್ ಅನ್ನು ಸಹ ಬಿಡುಗಡೆ ಮಾಡಿದೆ.


ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆಳಗಿನ ಉಪಾಹಾರಕ್ಕೆ 155 ರೂಪಾಯಿಯ ಬದಲು 205 ರೂಪಾಯಿ ಮತ್ತು ಸಂಜೆಯ ಉಪಾಹಾರಕ್ಕೆ 105 ರೂಪಾಯಿಯ ಬದಲು 155 ರೂಪಾಯಿ ಪಾವತಿಸಬೇಕು ಮತ್ತು ಪ್ರಯಾಣದ ಸಮಯದಲ್ಲಿ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟಕ್ಕೆ 244 ರೂಪಾಯಿಯ ಬದಲು 294 ರೂಪಾಯಿ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ:  First Tricolour: ನೆಹರೂ ಹಾರಿಸಿದ ಮೊದಲು ತ್ರಿವರ್ಣ ಧ್ವಜದ ಫೋಟೋ ಶೇರ್ ಮಾಡಿದ ಮೋದಿ, ಜನರಲ್ಲಿ ವಿಶೇಷ ಮನವಿ


ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆಳಗಿನ ಉಪಾಹಾರಕ್ಕೆ 155 ರೂಪಾಯಿಯ ಬದಲು 205 ರೂಪಾಯಿ ಮತ್ತು ಸಂಜೆಯ ತಿಂಡಿಗೆ 105 ರ ಬದಲು 155 ರೂಪಾಯಿ ಪಾವತಿಸಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟಕ್ಕೆ, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಊಟವನ್ನು ಆಯ್ಕೆ ಮಾಡಿಕೊಳ್ಳದೆ ಇದ್ದರೆ ಪ್ರಯಾಣಿಕರು 244 ರ ಬದಲು 294 ರೂಪಾಯಿ ಪಾವತಿಸಬೇಕಾಗುತ್ತದೆ.


ಹಿಂದಿನ ನಿಯಮದಲ್ಲಿ ಏನಿತ್ತು
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನ ಹಿಂದಿನ ನಿಯಮದ ಪ್ರಕಾರ, ವ್ಯಕ್ತಿಯು ತಮ್ಮ ರೈಲು ಟಿಕೆಟ್ ನೊಂದಿಗೆ ತಮ್ಮ ಊಟವನ್ನು ಕಾಯ್ದಿರಿಸದಿದ್ದರೆ, ಪ್ರಯಾಣದ ಸಮಯದಲ್ಲಿ 20 ರೂಪಾಯಿಯ ಚಹಾ ಆರ್ಡರ್ ಮಾಡಿದರೂ ಸಹ ಅದಕ್ಕೆ 50 ರೂಪಾಯಿಯ ಸೇವಾ ಶುಲ್ಕವನ್ನು ನೀಡಬೇಕಾಗುತ್ತಿತ್ತು.

Published by:Ashwini Prabhu
First published: