ಜೂನ್ 30ರೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ನಿಮ್ಮ PAN ನಂಬರ್ ನಿರುಪಯುಕ್ತಗೊಂಡರೆ ಬಹಳ ಕಡೆ ಅದರ ಪರಿಣಾಮ ಆಗುತ್ತದೆ. ಬ್ಯಾಂಕು ಇತ್ಯಾದಿ ಕಡೆ ಖಾತೆಗಳಿಗೆ ಪಾನ್ ನಂಬರ್ ಅತ್ಯಗತ್ಯ ಇರುವುದರಿಂದ ಅದಿಲ್ಲದೇ ನಿಮ್ಮ ಬಹುತೇಕ ಹಣಕಾಸು ವಹಿವಾಟು ಸ್ಥಗಿತಗೊಂಡಂತೆಯೇ ಆಗುತ್ತದೆ.

news18
Updated:June 22, 2020, 4:05 PM IST
ಜೂನ್ 30ರೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ಆಧಾರ್-ಪ್ಯಾನ್
  • News18
  • Last Updated: June 22, 2020, 4:05 PM IST
  • Share this:
ನೀವು ಇನ್ನೂ ಆಧಾರ್ ಕಾರ್ಡ್ ಮತ್ತು PAN ಕಾರ್ಡ್ ಲಿಂಕ್ ಮಾಡಿಲ್ಲವೇ? ಸರ್ಕಾರ ಹಲವು ಬಾರಿ ಡೆಡ್​ಲೈನ್ ವಿಸ್ತರಿಸಿದೆ. ಈಗ ಜೂನ್ 30ಕ್ಕೆ ಗಡುವು ನಿಗದಿಯಾಗಿದೆ. ಅಷ್ಟರೊಳಗೆ ನೀವು ಆಧಾರ್ ಮತ್ತು ಪಾನ್ ನಂಬರ್​ಗಳನ್ನ ಜೋಡಿಸದಿದ್ದರೆ ಹಲವು ಸಮಸ್ಯೆಗಳಿಗೆ ಸಿಲುಕಬಹುದು. ಈಗಾಗಲೇ ಹಲವು ಬಾರಿ ಡೆಡ್​ಲೈನ್ ವಿಸ್ತರಿಸಿರುವುದರಿಂದ ಸರ್ಕಾರ ಈ ಬಾರಿ ಮತ್ತೊಮ್ಮೆ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆಯೇ. ಆದಾಯ ತೆರಿಗೆ ಇಲಾಖೆ ನೀಡಿರುವ ಸುತ್ತೋಲೆಯ ಪ್ರಕಾರ, ಆಧಾರ್​ಗೆ ಲಿಂಕ್ ಆಗದ ಪಾನ್ ನಂಬರ್​ಗಳೆಲ್ಲವೂ ಜುಲೈ 1ರಿಂದ ನಿಷ್ಕ್ರಿಯಗೊಳ್ಳುತ್ತವೆ.

ನಿಮ್ಮ PAN ನಂಬರ್ ನಿರುಪಯುಕ್ತಗೊಂಡರೆ ಬಹಳ ಕಡೆ ಅದರ ಪರಿಣಾಮ ಆಗುತ್ತದೆ. ಬ್ಯಾಂಕು ಇತ್ಯಾದಿ ಕಡೆ ಖಾತೆಗಳಿಗೆ ಪಾನ್ ನಂಬರ್ ಅತ್ಯಗತ್ಯ ಇರುವುದರಿಂದ ಅದಿಲ್ಲದೇ ನಿಮ್ಮ ಬಹುತೇಕ ಹಣಕಾಸು ವಹಿವಾಟು ಸ್ಥಗಿತಗೊಂಡಂತೆಯೇ ಆಗುತ್ತದೆ. ನೀವು ಐಟಿ ರಿಟರ್ನ್ ಫೈಲ್ ಮಾಡಬಹುದಾದರೂ ಮರಳಿ ಬರುವ ಹಣವನ್ನ ಪಡೆಯಲಾದರೂ ಪಾನ್ ಅವಶ್ಯಕ.

ಇದನ್ನೂ ಓದಿ: PPF Rate - ಪಿಪಿಎಫ್ ದರ 46 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯುತ್ತಾ?

ಆಧಾರ್-ಪಾನ್ ಲಿಂಕ್ ಮಾಡುವುದು ಹೇಗೆ?

ಆಧಾರ್ ನಂಬರ್ ಮತ್ತು ಪಾನ್ ನಂಬರ್ ಎರಡನ್ನೂ ಲಿಂಕ್ ಮಾಡುವ ಪ್ರಕ್ರಿಯೆ ಬಹಳ ಸರಳ ಇದೆ. http://www.incometaxindiaefiling.gov.in/home ಈ ವೆಬ್​ಸೈಟ್​​ಗೆ ಹೋಗಿ ನೀವು ನಿಮ್ಮ ಆಧಾರ್​ನ 12 ಅಂಕಿ ಸಂಖ್ಯೆಯನ್ನ ಮತ್ತು PAN ಕಾರ್ಡ್​​ನ ವಿವರವನ್ನು ನಮೂದಿಸಿ ಲಿಂಕ್ ಮಾಡುವ ಅವಕಾಶ ಇದೆ. ಆನ್​ಲೈನ್ ತಲೆನೋವು ಬೇಡ ಎನ್ನುವುದಾದರೆ SMS ಮೂಲಕವೂ ಮಾಡಬಹುದು. UIDPAN ಎಂದು ಟೈಪಿಸಿ 567678 ಅಥವಾ 56161 ನಂಬರ್​ಗೆ ಎಸ್ಸೆಮ್ಮೆಸ್ ಕಳುಹಿಸಬಹುದು.ಮೊಬೈಲ್ ಮತ್ತು ಆನ್​ಲೈನ್​ನಲ್ಲಿ ಮಾಡಲು ಭಯ ಎನ್ನುವುದಾದರೆ PAN ಸರ್ವಿಸ್ ಸೆಂಟರ್​ಗಳಿಗೆ ಹೋಗಿ ಅಲ್ಲಿಂದಲೇ ನೀವು ಲಿಂಕ್ ಮಾಡಿಸಬಹುದು.
First published: June 22, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading