ಗುಪ್ತಚರ ಸಂಸ್ಥೆಗಳೆಂದರೆ ಯಾರಿಗೆ ತಾನೇ ಕುತೂಹಲ ಇರುವುದಿಲ್ಲ? ದೇಶದ ಒಳಗಿನ ಮತ್ತು ಹೊರಗಿನ ಶತ್ರುಗಳ ಬಗ್ಗೆ ಹಾಗೂ ದೇಶಕ್ಕೆ ಅನಾಹುತವಾಗಬಲ್ಲಂಥ ಮಾಹಿತಿಯನ್ನು ಗುಪ್ತಚರರು ಬಹಳ ರಹಸ್ಯವಾಗಿ ಕಲೆಹಾಕಿ ಸರ್ಕಾರಕ್ಕೆ ಮಾಹಿತಿ ನೀಡುತ್ತಿರುತ್ತಾರೆ. ಆ ಮೂಲಕ ದೇಶಕ್ಕೆ ಭದ್ರತೆ ಒದಗಿಸುತ್ತಾರೆ. ಇಂಥ ಸಂಸ್ಥೆಗಳಲ್ಲಿ ಕೆಲಸ ಮಾಡಲು ನಿಮಗೆ ಯಾವತ್ತಾದರೂ ಅನಿಸಿರಬಹುದು. ಐಎಎಸ್, ಐಪಿಎಸ್ನಂತೆ ಇಂಟೆಲಿಜೆನ್ಸ್ ಬ್ಯೂರೋ, ರಾ (RAW) ಅಧಿಕಾರಿಗಳಾಗಿಯೂ ಕೆಲಸ ಮಾಡುವ ಅವಕಾಶ ಇದೆ. ಈ ಎರಡು ಗುಪ್ತಚರ ಸಂಸ್ಥೆಗಳಲ್ಲಿ ಉದ್ಯೋಗ ಮಾಡಲು ಅರ್ಹತೆಗಳೇನು ಎಂಬ ವಿವರ ಇಲ್ಲಿದೆ.
ಐಬಿ ಮತ್ತು ರಾ ಸಂಸ್ಥೆಗಳಿಗೆ ಇರುವ ಆಯ್ಕೆ ಪ್ರಕ್ರಿಯೆ ಬಹಳ ಕಠಿಣವಾದುದು. ಶೈಕ್ಷಣಿಕ ಅರ್ಹತೆ ಯಾವುದೇ ಪದವಿಯಾದರೂ ಪರೀಕ್ಷೆ, ಸಂದರ್ಶನ ಇತ್ಯಾದಿ ಪ್ರಕ್ರಿಯೆಗಳು ಕಠಿಣವಾಗಿರುತ್ತವೆ. ಅಭ್ಯರ್ಥಿಗಳು ಭಾರತದ ಪ್ರಜೆಗಳಾಗಿರಬೇಕು. ಕ್ರಿಮಿನಲ್ ಬ್ಯಾಕ್ಗ್ರೌಂಡ್ ಇರಬಾರದು. ಡ್ರಗ್ ಅಡಿಕ್ಟ್ ಆಗಿರಬಾರದು ಎಂಬ ಸಾಮಾನ್ಯ ನಿಯಮಗಳಿವೆ. ಇಂಟೆಲಿಜೆನ್ಸ್ ಬ್ಯೂರೋದ ಅಧಿಕಾರಿ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪೂರೈಸಿರಬೇಕು. RAW ಅಧಿಕಾರಿ ಆಗಲು ಒಳ್ಳೆಯ ಶಿಕ್ಷಣದ ಜೊತೆಗೆ ಯಾವುದೇ ಒಂದು ವಿದೇಶಿ ಭಾಷೆಯಲ್ಲಿ ಹಿಡಿತವಿರಬೇಕು.
ವಯಸ್ಸಿನ ಮಿತಿ:
ಐಬಿ ಕೆಲಸಕ್ಕೆ ಪ್ರಯತ್ನಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ 56 ವರ್ಷ ಇರಬೇಕು. ಅದೇ ರಾ ಸಂಸ್ಥೆಯಾದರೆ ಅಭ್ಯರ್ಥಿಗಳಿಗೆ 20 ವರ್ಷ ಕೆಲಸದ ಅನುಭವ ಇರಬೇಕು. ಇವಿಷ್ಟೂ ಸಾಮಾನ್ಯ ಅರ್ಹತೆ ಮತ್ತು ಮಾನದಂಡಗಳ ವಿಚಾರವಾಯಿತು. ಆದರೆ, ಗುಪ್ತಚರ ಸಂಸ್ಥೆಗಳಲ್ಲಿ ನೇಮಕಾತಿ ಆಗಬೇಕಾದರೆ ಇತರ ಮುಖ್ಯ ಪ್ರಕ್ರಿಯೆಗಳಿವೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಬಹಳ ಕಠಿಣವಾಗಿರುತ್ತವೆ.
ಪರೀಕ್ಷೆಗಳು:
ಇಂಟೆಲಿಜೆನ್ಸ್ ಬ್ಯೂರೋ ಸಂಸ್ಥೆಗೆ ಸೇರಬಯಸುವ ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ ಆಯೋಜಿಸುವ ಸಿಜಿಪಿಇ (ಕಂಬೈನ್ಡ್ ಗ್ರಾಜುಯೇಟ್ ಪ್ರಿಲಿಮಿನರಿ ಎಕ್ಸಾಮ್) ಪರೀಕ್ಷೆ ಬರೆಯಬೇಕು. ಪ್ರತೀ ವರ್ಷವೂ ಈ ಪರೀಕ್ಷೆ ಇರುತ್ತದೆ. ಇದರ ಆಧಾರದ ಮೇಲೆ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: BEL Recruitment 2020: ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಇನ್ನು, ರಾ ಏಜೆಂಟ್ ಆಗಬೇಕಾದರೆ ಗ್ರೂಪ್ ಎ ಸಿವಿಲ್ ಸರ್ವಿಸಸ್ ಎಕ್ಸಾಂ ಬರೆಯಬೇಕು. ಈ ಪರೀಕ್ಷೆಯ ಎಲ್ಲಾ ಹಂತಗಳಲ್ಲೂ ತೇರ್ಗಡೆಯಾಗುವ ಅರ್ಹತಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ RAW ಪರೀಕ್ಷೆ ನೀಡಲಾಗುತ್ತದೆ. ಆ ಬಳಿಕ ಸಂದರ್ಶನ ಇರುತ್ತದೆ. ರಾ ಏಜೆಂಟ್ ಆಗುವವರು ಬಹಳ ತೀಕ್ಷ್ಣಮತಿಯವರಾಗಿರಬೇಕು. ಈ ಹಿನ್ನೆಲೆಯಲ್ಲಿ ಈ ಗುಪ್ತಚರ ಸಂಸ್ಥೆಗೆ ಕೆಲಸಕ್ಕೆ ಸೇರಿಸಿಕೊಳ್ಳಲು ಕಠಿಣ ಪ್ರಕ್ರಿಯೆಗಳಿರುತ್ತದೆ. ನೀವು ಗುಪ್ತಚರ ಏಜೆಂಟ್ ಆಗಬೇಕಿದ್ದರೆ, ಎಲ್ಲಾ ಅರ್ಹತೆ ಇದ್ದರೆ ಕೂಡಲೇ ಅತ್ತ ಚಿತ್ತ ಹರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ