Pakistan Debt - ಇಮ್ರಾನ್ ಖಾನ್ ಸರ್ಕಾರಕ್ಕೆ ಸಾಲ ನೀಡಲ್ಲ ಎಂದ IMF - ಸಾಲ ಕೇಳಿದೆಷ್ಟು ಗೊತ್ತಾ?

IMF rejects loan to Pakistan- ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ಐಎಂಎಫ್ ಮತ್ತು ಪಾಕ್ ಹಣಕಾಸು ಸಚಿವರ ಮಾತುಕತೆ ವಿಫಲವಾಗಿದೆ. ಪಾಕಿಸ್ತಾನಕ್ಕೆ ನೂರು ಕೋಟಿ ಡಾಲರ್ ಹಣದ ಸಾಲ ಕೊಡಲು ಐಎಂಎಫ್ ನಿರಾಕರಿಸಿದೆ ಎಂಬ ಸುದ್ದಿ ಬಂದಿದೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

 • News18
 • Last Updated :
 • Share this:
  ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ (Pakistan)ದ ಕೊನೆ ಆಶಾಕಿರಣ ಸಹ ದೂರವಾಗಿದೆ. ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (International Monetary Fund ಐಎಂಎಫ್) ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಸಾಲ ನೀಡಲು ಹಿಂದೇಟು ಹಾಕಿದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ಮೊದಲ ಕಂತಿನಲ್ಲಿ ನೀಡುವ 1 ಬಿಲಿಯನ್ ಡಾಲರ್ ನೀಡಲ್ಲ ಆಗಲ್ಲ ಎಂಬುದನ್ನು ಐಎಂಎಫ್ ಸ್ಪಷ್ಟಪಡಿಸಿದೆ. ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ಐಎಂಎಫ್ ಮತ್ತ ಪಾಕಿಸ್ತಾನದ ಹಣಕಾಸು ಸಚಿವರ ಮಾತುಕತೆ ವಿಫಲವಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಬಿತ್ತರಿಸಿವೆ.  ಆದ್ರೆ ಇಮ್ರಾನ್ ಖಾನ್ ಸರ್ಕಾರ ಮಾತುಕತೆ ವಿಫಲವಾಗಿರೋದನ್ನು ದೃಢಪಡಿಸಿಲ್ಲ.

  11 ಸುತ್ತಿನ ಮಾತುಕತೆ ವಿಫಲ:

  ದಿ ಎಕ್ಸಪ್ರೆಸ್ ಟ್ರಿಬ್ಯೂನ್ ಭಾನುವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಪಾಕ್ ಹಣಕಾಸು ಸಚಿವ ಶೌಕತ್ ತರೀಕ್ ಅವರ ತಂಡ ಮತ್ತು ಐಎಂಎಫ್ ನಡುವೆ 11 ದಿನಗಳಿಂದ ಮಾತುಕತೆ ನಡೆದಿತ್ತು. ಆದ್ರೆ 11 ದಿನದ ಮಾತುಕತೆ ಯಾವುದೇ ಫಲಪ್ರದ ನೀಡಿಲ್ಲ. ಕೊನೆಯ ದಿ£ ಕೇವಲ ಔಪಚಾರಿಕ ಸಭೆಯಾಗಿ ಅಂತ್ಯಗೊಂಡಿದೆ ಎಂದು ದಿ ಎಕ್ಸಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪಾಕಿಸ್ತಾನ ಮತ್ತು ಐಎಂಎಫ್ ನಡುವೆ ಅಕ್ಟೋಬರ್ 4 ರಿಂದ ಅಕ್ಟೋಬರ್ 15ರವರೆ ಸುದೀರ್ಘ ಮಾತುಕತೆ ನಡೆದಿತ್ತು.

  ಶೌಕತ್ ಆ್ಯಂಡ್ ಟೀಂ ಅಮೆರಿಕದಲ್ಲಿದ್ದಾಗ ಪಾಕಿಸ್ತಾನ ಸರ್ಕಾರ ಒಂದು ಬಾರಿ ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿತ್ತು. ಐಎಂಎಫ್ ಟೀಂ ತೆರಿಗೆ ಸಂಗ್ರಹ ಏರಿಕೆ ಮಾಡಲು ಮುಂದಾಗಿತ್ತು.

  ತೆರಿಗೆ ಹೆಚ್ಚಿಸುತ್ತಿಲ್ಲ ಏಕೆ ಪಾಕಿಸ್ತಾನ ಸರ್ಕಾರ?

  ಐಎಂಎಫ್ ನಿರಂತರವಾಗಿ ತೆರಿಗೆ ಸಂಗ್ರಹ ಹೆಚ್ಚಳ ಮಾಡುವಂತೆ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಆದ್ರೆ ಪಾಕ್ ಸರ್ಕಾರ ಐಎಂಎಫ್ ಷರತ್ತುಗಳನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲ್ಲ. ಇಮ್ರಾನ್ ಖಾನ್ ಸರ್ಕಾರ ತೆರಿಗೆ ಹೆಚ್ಚಿಸುವ ಸ್ಥಿತಿಯಲ್ಲಿಲ್ಲ. ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳು ಭ್ರಷ್ಟರಾಗಿದ್ದು, ಅವರೆಲ್ಲರೂ ಇಮ್ರಾನ್ ಖಾನ್ ಆಳ್ವಿಕೆ ಆಡಳಿತದ ಒಂದು ಭಾಗವಾಗಿದ್ದಾರೆ. ತೆರಿಗೆ ಹೆಚ್ಚಳ ಮಾಡಿದ್ರೆ ಇಮ್ರಾನ್ ಖಾನ್ ಸರ್ಕಾರ ಪತನವಾಗಲಿದೆ ಎಂದು ಪಾಕಿಸ್ತಾನ ಮೂಲದ ಉದ್ಯಮಿ ಸಾಜಿದ್ ತಾರದ್ ಮಾಧ್ಯಮಗಳ ಹೇಳಿಕೆ ನೀಡಿದ್ದಾರೆ. ತೆರಿಗೆ ಹೆಚ್ಚಿಸಲಾದ ಇಮ್ರಾನ್ ಸರ್ಕಾರ, ವಿದ್ಯುತ್ ಬಿಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಸಾಜಿದ್ ತಾರದ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

  ಇದನ್ನೂ ಓದಿ: India vs Pakistan- ಭಾರತ-ಪಾಕ್ ಪಂದ್ಯದ ದಿನ ಸಾನಿಯಾ ಮಿರ್ಜಾ ಮಾಯ ಆಗೋದು ಯಾಕೆ ಗೊತ್ತಾ?

  ಮತ್ತೆ ಪಾಕಿಸ್ತಾನ-ಐಎಂಎಫ್ ಸಭೆ?

  ವರದಿಗಳ ಪ್ರಕಾರ ಪಾಕಿಸ್ತಾನ ಸರ್ಕಾರ ಮತ್ತು ಐಎಂಎಫ್ ನಡುವಿನ ಮಾತುಕತೆ ಮುಂದೆಯೂ ನಡೆಯಲಿದೆಯಂತೆ. ಮುಂದಿನ ಸಭೆಗೆ ಯಾವುದೇ ಸಮಯ ನಿಗದಿಯಾಗಿಲ್ಲ. ಹಣಕಾಸು ಸಚಿವ ಶೌಕತ್ ಹಿಂದಿರುಗಿದ ಬಳಿಕ ಪಾಕಿಸ್ತಾನದಲ್ಲಿ ಈ ಸಂಬಂಧ ಚರ್ಚೆಗಳು ನಡೆಯಲಿವೆ. ಪಾಕ್ ಸರ್ಕಾರ ಆರ್ಥಿಕ ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕವೇ ಐಎಂಎಫ್ ಜೊತೆಗಿನ ಮುಂದಿನ ಸಭೆಯ ಸಮಯ ನಿಗದಿ ಮಾಡುವ ಸಾಧ್ಯತೆಗಳಿವೆ.

  ಇಮ್ರಾನ್ ಖಾನ್ ಸರ್ಕಾರದ ನೀತಿಗಳ ತೆರಿಗೆ ಹೆಚ್ಚಿಸುವ ನಿಯಮಗಳಿಗೆ ಪೂರಕವಾಗಿಲ್ಲ. ಇದರಿಂದ ಪಾಕ್ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿಲ್ಲ. ಇಂತಹ ಪಾಕಿಸ್ತಾನ ಆರ್ಥಿಕ ವ್ಯವಸ್ಥೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಸಾಲಕ್ಕೆ ಸೌದಿ ಅರೇಬಿಯಾದ ನಂತರ ಚೀನಾ ಕೂಡ ಸಾಲಕ್ಕೆ ಖಾತರಿ ನೀಡುತ್ತಿಲ್ಲ ಎಂದು ಐಎಂಎಫ್ ಹೇಳಿಕೆ ಬಿಡುಗಡೆ ಮಾಡಿದೆ.

  ನಾಲ್ಕು ತಿಂಗಳ ಹಿಂದೆ ಪಾಕಿಸ್ತಾನ ಮತ್ತು ಐಎಂಎಫ್ ಸಭೆ ನಡೆದಿತ್ತು. ಎರಡೂ ಕಡೆಗಳಿಂದಲೂ ಮಾತುಕತೆ ವಿಫಲವಾಗಿತ್ತು. ಮೊದಲ ಬಾರಿಗೆ ಜೂನ್ ನಲ್ಲಿ ಸಭೆ ನಡೆದಿತ್ತು. ಅಂದು ಸಹ ಪಾಕ್ ಸರ್ಕಾರ ವಿದ್ಯುತ್ ಬೆಲೆಯನ್ನು ಏರಿಕೆ ಮಾಡಿತ್ತು. ವಿದೇಶಿ ಸಾಲ ಹೊಂದಿರುವ ಪ್ರಮುಖ 10 ದೇಶಗಳಲ್ಲಿ ಪಾಕಿಸ್ತಾನ ಸಹ ಒಂದಾಗಿದೆ.
  Published by:Vijayasarthy SN
  First published: