• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Kissing Device: ಸಂಗಾತಿಯಿಂದ ದೂರವಿದ್ದ ವ್ಯಕ್ತಿಯಿಂದ ‌ಕಿಸ್ಸಿಂಗ್‌ ಡಿವೈಸ್ ಆವಿಷ್ಕಾರ! ಇದ್ರಲ್ಲಿ ನೀವೂ ಮುತ್ತು ಕೊಡಬಹುದು ನೋಡಿ!

Kissing Device: ಸಂಗಾತಿಯಿಂದ ದೂರವಿದ್ದ ವ್ಯಕ್ತಿಯಿಂದ ‌ಕಿಸ್ಸಿಂಗ್‌ ಡಿವೈಸ್ ಆವಿಷ್ಕಾರ! ಇದ್ರಲ್ಲಿ ನೀವೂ ಮುತ್ತು ಕೊಡಬಹುದು ನೋಡಿ!

ಕಿಸ್ಸಿಂಗ್ ಡಿವೈಸ್

ಕಿಸ್ಸಿಂಗ್ ಡಿವೈಸ್

ಸಾಮಾಜಿಕ ಜಾಲತಾಣಗಳಲ್ಲಿ ಕಿಸ್ಸಿಂಗ್‌ ಡಿವೈಸ್‌ ಬಗ್ಗೆ ಪರ ವಿರೋಧಗಳು ಕೇಳಿ ಬಂದಿವೆ. ಕೆಲವರು ನಿಜಕ್ಕೂ ಇದು ದೂರವಿರುವ ಪ್ರೀತಿಪಾತ್ರರಿಗೆ ನಮ್ಮ ಚುಂಬನದ ಪ್ರೀತಿಯನ್ನು ಕಳುಹಿಸಬಹುದಾದ ಉತ್ತಮ ಸಾಧನವಾಗಿದೆ

 • Trending Desk
 • 5-MIN READ
 • Last Updated :
 • New Delhi, India
 • Share this:

ಬೀಜಿಂಗ್: ನಾನೊಂದು ತೀರ.. ನೀನೊಂದು ತೀರ ಇರುವ ಪ್ರೇಮಿಗಳಿಗೆ, ದಂಪತಿಗಳಿಗೆ ಡಿಜಿಟಲ್‌, ಟೆಕ್‌ ವಲಯಗಳ ಪ್ರಭಾವದಿಂದ ಅವರನ್ನು ಹತ್ತಿರ ಸೇರಿಸುವ ಕೊಂಡಿಯಾಗಿ ಫೋನ್‌ ಕೆಲಸ ಮಾಡುತ್ತಿದೆ ಎಂದರೆ ನೀವು ನಂಬಲೇಬೇಕು. ಆದರೆ ಫೋನ್‌ ಅನ್ನು ಮಾತನಾಡಲು, ಪರಸ್ಪರ ವಿಡಿಯೋ ಕಾಲ್‌ (Video Call) ಮಾಡಿ ಮುಖ ನೋಡಿಕೊಳ್ಳಲು ಬಳಸಬಹುದಾದರೂ ವಾಸ್ತವ ನಿಕಟವಾದ ಅಂದರೆ ಪರಸ್ಪರ ಚುಂಬಿಸುವುದಾಗಲಿ, ಪ್ರೀತಿಯ ಅಪ್ಪುಗೆಯಾಗಲಿ (Kissing Device)  ಇಂತಹ ಕೆಲ ಕ್ಷಣಗಳನ್ನು ಫೋನ್‌ನಲ್ಲಿ ಹಂಚಿಕೊಳ್ಳುವುದನ್ನು ಯೋಚಿಸಲೂ ಸಾಧ್ಯವಿಲ್ಲ.


ಇಂತಹ ಪರಿಸ್ಥಿತಿಯನ್ನು ಅನೇಕ ದಂಪತಿಗಳು, ಪ್ರೇಮಿಗಳು ಅನುಭವಿಸುತ್ತಿದ್ದಾರೆ. ಇದೇ ರೀತಿ ಚೀನಾದ ವ್ಯಕ್ತಿ ಜಿಯಾಂಗ್ ಝೊಂಗ್ಲಿ ಕೂಡ ಇಂತದ್ದೇ ಪರಿಸ್ಥಿತಿಯನ್ನು ಎದುರಿಸಿದ್ದು, ಅದಕ್ಕಾಗಿ ಅವರು ಒಂದು ಸೂಪರ್‌ ಪರಿಹಾರ ಕಂಡುಕೊಂಡಿದ್ದಾರೆ. ಈ ವಿನೂತನ ಸಾಧನವನ್ನು ದೂರವಿರುವ ಪ್ರೇಮಿಗಳು, ದಂಪತಿಗಳು ನೋಡಿದರೆ ನಾವೂ ತೆಗೆದುಕೊಳ್ಳಬೇಕು ಅನ್ನಿಸೋದು ಗ್ಯಾರೆಂಟಿ.


ಸಂಗಾತಿಯಿಂದ ದೂರವಿದ್ದ ಝೋಂಗ್ಲಿ ಮಾಡಿದ್ರೂ ಸೂಪರ್ ಆವಿಷ್ಕಾರ
ಜಿಯಾಂಗ್ ಝೊಂಗ್ಲಿ ಎಂಬ ವ್ಯಕ್ತಿ ಪ್ರೀತಿಯಲ್ಲಿದ್ದು, ಗೆಳತಿ ಮತ್ತು ಈತ ಇಬ್ಬರೂ ದೂರ ದೂರದ ಊರಿನಲ್ಲಿ ಇದ್ದರು. ದೂರದ ಕಾರಣ, ಅವರ ಸಂವಹನವು ಕೇವಲ ಫೋನ್ ಕರೆಗಳಿಗೆ ಸೀಮಿತವಾಗಿತ್ತು.


ಈ ಸಮಯದಲ್ಲಿ ಝೊಂಗ್ಲಿ ದೂರದ ದಂಪತಿಗಳು ಎದುರಿಸುವ ಸವಾಲುಗಳನ್ನು ನಿವಾರಿಸಲು ನವೀನ ಪರಿಹಾರವನ್ನು ಕಂಡುಕೊಂಡರು. ಇದೇ, ಝೊಂಗ್ಲಿಗೆ ದಂಪತಿಗಳು ವಾಸ್ತವ ನಿಕಟ ಕ್ಷಣಗಳನ್ನು ಹಂಚಿಕೊಳ್ಳಲು ಅನುಮತಿಸುವ ಸಾಧನವನ್ನು ಆವಿಷ್ಕರಿಸಲು ಸ್ಫೂರ್ತಿ ನೀಡಿತು.


ಚೀನಾದಲ್ಲಿ ಸಂಚಲನ ಮೂಡಿಸಿದೆ ಕಿಸ್ಸಿಂಗ್ ಡಿವೈಸ್
ಹೌದು, ಝೋಂಗ್ಲಿ 'ಕಿಸ್ಸಿಂಗ್ ಡಿವೈಸ್' ಎಂಬ ಸಾಧನವನ್ನು ಕಂಡುಹಿಡಿದಿದ್ದು, ಝೊಂಗ್ಲಿ ಅವರ ಈ ಆವಿಷ್ಕಾರವು ಸದ್ಯ ಚೀನಾದಲ್ಲಿ ಸಂಚಲನ ಮೂಡಿಸಿದೆ. ದೂರವಿರುವ ಪ್ರೇಮಿಗಳು, ದಂಪತಿಗಳಂತೂ ಹೊಸ ಸಾಧನಕ್ಕೆ ಮಾರುಹೋಗಿದ್ದಾರೆ.


ಕಂಡುಹಿಡಿದವರು ಯಾರು?
'ಕಿಸ್ಸಿಂಗ್ ಡಿವೈಸ್' ಎಂದು ಕರೆಯಲ್ಪಡುವ ಈ ಸಾಧನವು ಚೀನಾದ ಚಾಂಗ್‌ಝೌ ವಿಶ್ವವಿದ್ಯಾಲಯದ ಆವಿಷ್ಕಾರವಾಗಿದೆ. ದೂರವಿರುವ ದಂಪತಿಗಳು ಪೋನ್‌ನಲ್ಲೇ ಪರಸ್ಪರ ಚುಂಬಿಸಿಕೊಂಡರೂ ಅದು ವಾಸ್ತವವಾದ ಅನುಭವ ನೀಡುವುದಿಲ್ಲ.


ಹೇಗೆ ಕೆಲಸ ಮಾಡುತ್ತೆ ಈ ಸಾಧನ?
ಆದರೆ ಕಾಂಟ್ರಾಪ್ಶನ್ 'ಸಿಲಿಕಾನ್ ತುಟಿಗಳಿಂದ ಮಾಡಲ್ಪಟ್ಟ ಈ ಸಾಧನವು ಒತ್ತಡ ಸಂವೇದಕಗಳು ಮತ್ತು ಪ್ರಚೋದಕಗಳೊಂದಿಗೆ ವಿನ್ಯಾಸಗೊಂಡಿದ್ದು, ನಿಜವಾಗಿ ಚುಂಬಿಸಿದ ಅನುಭವ ನೀಡುತ್ತದೆ ಮತ್ತು ಬಳಕೆದಾರರ ತುಟಿಗಳ ಒತ್ತಡ, ಚಲನೆ ಮತ್ತು ತಾಪಮಾನವನ್ನು ಪುನರಾವರ್ತಿಸಬಹುದಾಗಿದೆ. ಈ ಸಾಧನವು ನಿಜವಾದ ಕಿಸ್ ಅನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ದೂರವಿರುವ ದಂಪತಿಗಳಿಗೆ, ಪ್ರೇಮಿಗಳಿಗೆ ನಿಜವಾಗಿ ಚುಂಬಿಸಿದ ಅನುಭವವನ್ನು ಸೃಷ್ಟಿಸಲು ಝೋಂಗ್ಲಿ ಈ ಸಾಧನವನ್ನು ಕಂಡುಕೊಂಡಿದ್ದಾರೆ. ಕಿಸ್ಸಿಂಗ್ ಡಿವೈಸ್ ಸಾಧನವು ಚೈನೀಸ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಉಂಟುಮಾಡಿದೆ. ಅನೇಕರು ಸಾಧನದ ಉಪಯೋಗ ಮತ್ತು ದುರುಪಯೋಗ ಎರಡರ ಬಗ್ಗೆಯೂ ಕಾಳಜಿ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Pakistan: ಪಾಕಿಸ್ತಾನದ ಮೊದಲ ಟ್ರಾನ್ಸ್‌ಜೆಂಡರ್‌ ಟಿವಿ ನಿರೂಪಕಿ ಮಾರ್ವಿಯಾ ಮಲಿಕ್ ಮೇಲೆ ಗುಂಡಿನ ದಾಳಿ!


ಕಿಸ್ಸಿಂಗ್ ಡಿವೈಸ್ ಬಳಕೆ ಹೇಗೆ?
ಚುಂಬನವನ್ನು ಕಳುಹಿಸಲು ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಸಾಧನವನ್ನು ತಮ್ಮ ಫೋನ್‌ನ ಚಾರ್ಜಿಂಗ್ ಪೋರ್ಟ್‌ಗೆ ಸೇರಿಸಬೇಕು. ದಂಪತಿಗಳು ವಿಡಿಯೋ ಕಾನ್ಫರೆನ್ಸ್ ಅನ್ನು ಪ್ರಾರಂಭಿಸಬಹುದು. ಅಪ್ಲಿಕೇಶನ್ ಮೂಲಕ ತಮ್ಮ ಪ್ರೀತಿಪಾತ್ರರಿಗೆ ಚುಂಬನಗಳನ್ನು ಪರಸ್ಪರ ಕಳುಹಿಸಬಹುದು


ಇದನ್ನೂ ಓದಿ: Marriage: ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ! ಭಾರತದಲ್ಲೂ ಇದೆ ಈ ವಿಚಿತ್ರ ಸಂಪ್ರದಾಯ!

top videos


  ಕಿಸ್ಸಿಂಗ್ ಡಿವೈಸ್ ವಿರುದ್ಧ ಪರ-ವಿರೋಧ ಅಭಿಪ್ರಾಯ
  ಸಾಮಾಜಿಕ ಜಾಲತಾಣಗಳಲ್ಲಿ ಕಿಸ್ಸಿಂಗ್‌ ಡಿವೈಸ್‌ ಬಗ್ಗೆ ಪರ ವಿರೋಧಗಳು ಕೇಳಿ ಬಂದಿವೆ. ಕೆಲವರು ನಿಜಕ್ಕೂ ಇದು ದೂರವಿರುವ ಪ್ರೀತಿಪಾತ್ರರಿಗೆ ನಮ್ಮ ಚುಂಬನದ ಪ್ರೀತಿಯನ್ನು ಕಳುಹಿಸಬಹುದಾದ ಉತ್ತಮ ಸಾಧನವಾಗಿದೆ. ಇನ್ನೂ ಕೆಲವರು ಕಿಸ್ಸಿಂಗ್‌ ಡಿವೈಸ್‌ ವಿರುದ್ಧ ಇದೊಂದು ಅಶ್ಲೀಲವಾದ ಸಾಧನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು ಖರೀದಿಸಿ ಬಳಸಿಕೊಳ್ಳುತ್ತಾರೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು