PM Kisan ಯೋಜನೆಯ 9 ನೇ ಕಂತು ಬಿಡುಗಡೆ: ರೈತರ ಖಾತೆಗೆ 19,500 ಕೋಟಿ ರೂ. ಜಮೆ

PM Kisan Yojana 9th Installment: ಹಣವನ್ನು ಪಡೆಯಲು ರೈತರಿಗೆ ಕೆಲವೊಂದು ಮಾನದಂಡಗಳನ್ನು ಈ ಯೋಜನೆ ಒದಗಿಸಿದ್ದು ಪಿಎಂ-ಕಿಸಾನ್ ಯೋಜನೆಯಿಂದ ಹಣ ದೊರೆತಿರುವುದನ್ನು ಹೇಗೆ ಪರಿಶೀಲಿಸಬಹುದು ಎಂಬುದರ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೇಂದ್ರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯ 9 ನೇ ಕಂತನ್ನು 12 ಕೋಟಿ ರೈತರ ಖಾತೆಗಳಿಗೆ ಈಗಾಗಲೇ ವರ್ಗಾಯಿಸಿದ್ದು ಪಿಎಂ-ಕಿಸಾನ್ ಯೋಜನೆ ಅಥವಾ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಭಾರತ ಸರ್ಕಾರದಿಂದ 100% ಧನಸಹಾಯದ ಉದ್ದೇಶ ಹೊಂದಿರುವ ಸರಕಾರಿ ಯೋಜನೆಯಾಗಿದೆ. ಈ ನಿಧಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ಹಣ ಸೌಲಭ್ಯವನ್ನು ಒದಗಿಸುತ್ತಿದ್ದು ಮೊದಲ ಕಂತು ಸಾಮಾನ್ಯವಾಗಿ ಡಿಸೆಂಬರ್ 1 ಹಾಗೂ ಮಾರ್ಚ್ 31 ರ ನಡುವೆ ಇರುತ್ತದೆ. ಎರಡನೇ ಕಂತು ಏಪ್ರಿಲ್ 1 ಮತ್ತು ಜುಲೈ 31 ರ ಮಧ್ಯಭಾಗದಲ್ಲಿ ಹಾಗೂ ಮೂರನೇ ಕಂತು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ಬರುತ್ತದೆ. ಈ ಯೋಜನೆಗೆ ಭಾರತದಾದ್ಯಂತ ಸರಿಸುಮಾರು 12.11 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಸುಮಾರು 9.75 ಕೋಟಿ ರೈತರು ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ.


9ನೇ ಕಂತಿನೊಂದಿಗೆ 19,500 ಕೋಟಿ ರೂ. ಹಣವನ್ನು ಸರಕಾರವು ಬಿಡುಗಡೆ ಮಾಡಿದ್ದು ಪ್ರತಿಯೊಬ್ಬ ರೈತರಿಗೆ ವಾರ್ಷಿಕವಾಗಿ 6000 ರೂ. ಒದಗಿಸುತ್ತವೆ. ಹಣವನ್ನು ಪಡೆಯಲು ರೈತರಿಗೆ ಕೆಲವೊಂದು ಮಾನದಂಡಗಳನ್ನು ಈ ಯೋಜನೆ ಒದಗಿಸಿದ್ದು ಪಿಎಂ-ಕಿಸಾನ್ ಯೋಜನೆಯಿಂದ ಹಣ ದೊರೆತಿರುವುದನ್ನು ಹೇಗೆ ಪರಿಶೀಲಿಸಬಹುದು ಎಂಬುದರ ವಿವರ ಇಲ್ಲಿದೆ.


ಮೊದಲಿಗೆ ಅಧಿಕೃತ ಪಿಎಂ-ಕಿಸಾನ್ ಯೋಜನಾ ವೆಬ್‌ಸೈಟ್‌ಗೆ ಹೋಗಿ (pmkisan.gov.in)
ಒಮ್ಮೆ ನೀವು ವೆಬ್‌ಸೈಟ್‌ನ ಹೋಮ್‌ಪೇಜ್‌ಗೆ ಹೋದ ನಂತರ, ‘ಫಾರ್ಮರ್ಸ್ ಕಾರ್ನರ್’ ಎಂಬ ಆಯ್ಕೆ ಕ್ಲಿಕ್ ಮಾಡಿ.


ಇದನ್ನೂ ಓದಿ:  OBC Bill- ಓಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಲು ವಿಪಕ್ಷಗಳ ನಿರ್ಧಾರ

ಈ ವಿಭಾಗದಲ್ಲಿ, ಮುಖಪುಟದ ಬಲಭಾಗದಲ್ಲಿರುವ 'ಫಲಾನುಭವಿಗಳ ಸ್ಟೇಟಸ್' ಟ್ಯಾಬ್ ಇರುವ ಆಯ್ಕೆಯ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ. ಒಮ್ಮೆ ನೀವು ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ನೀಡಿದ ಹೊಸ ಆಯ್ಕೆಗಳಿಂದ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಬೇಕಾದ ಹೊಸ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ ಮತ್ತು ಅದಕ್ಕಾಗಿ ಮಾಹಿತಿಯನ್ನು ಕೆಳಗಿನ ಬಾಕ್ಸ್‌ನಲ್ಲಿ ನಮೂದಿಸಿ.


ಇದನ್ನೂ ಓದಿ: ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ವಿದ್ಯಾರ್ಥಿ, ನೂರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಹಾಸನದ ಹುಡುಗ

ಮಾಹಿತಿ ನಮೂದಿಸಿದ ನಂತರ, ‘ಡೇಟಾ ಪಡೆದುಕೊಳ್ಳಿ’ ಮೇಲೆ ಕ್ಲಿಕ್ ಮಾಡಿ ಹಾಗೂ ಮಾಹಿತಿ ನಿಮಗೆ ಲಭ್ಯವಾಗುತ್ತದೆ.


ಪಿಎಂ-ಕಿಸಾನ್ ಯೋಜನೆಯ ಫಲಾನುಭವಿ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ..
ಪಿಎಂ-ಕಿಸಾನ್ ಯೋಜನಾ ವೆಬ್‌ಸೈಟ್‌ಗೆ ಭೇಟಿ ನೀಡಿ
ಈ ಪುಟವನ್ನು ತಲುಪಿದ ನಂತರ, ‘ಫಾರ್ಮರ್ಸ್ ಕಾರ್ನರ್’ ಆಯ್ಕೆಯನ್ನು ಕ್ಲಿಕ್ ಮಾಡಿ
ಒಮ್ಮೆ ನಿಮ್ಮನ್ನು ಮರುನಿರ್ದೇಶಿಸಲಾದ ನಂತರ, ನಿಮ್ಮ ಪ್ರಾದೇಶಿಕ ಮತ್ತು ಭೌಗೋಳಿಕ ವಿವರಗಳನ್ನು ಆಯ್ಕೆ ಮಾಡುವ ಮೂಲಕ ನೀವು ಹುಡುಕಾಟ ಮಾನದಂಡಗಳನ್ನು ಹೊಂದಿಸಬೇಕಾಗುತ್ತದೆ. ನಿಮಗೆ ಸಂಬಂಧಿಸಿದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ. ಈ ಡೇಟಾದ ಮೂಲಕ ನೀವು ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು, ಪಟ್ಟಿಯು ರೈತರ ಹೆಸರು ಮತ್ತು ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಮೊತ್ತವನ್ನು ಸಹ ಹೊಂದಿರುತ್ತದೆ.


ಅಗತ್ಯ ವಿವರಗಳನ್ನು ಭರ್ತಿಮಾಡಿದ ನಂತರ, ‘ವರದಿ ಪಡೆದುಕೊಳ್ಳಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಫಲಾನುಭವಿಗಳ ಸಂಪೂರ್ಣ ಪಟ್ಟಿ ದೊರೆಯುತ್ತದೆ. ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಎಂದು ಹುಡುಕುವುದು ಮಾತ್ರ ನಿಮ್ಮ ಕೆಲಸವಾಗಿರುತ್ತದೆ.


ಈ ಮೊದಲೇ ತಿಳಿಸಿರುವಂತೆ ಪಿಎಂ-ಕಿಸಾನ್ ಯೋಜನೆಗೆ ಅರ್ಹತೆ ಪಡೆಯಲು ರೈತರು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ದೇಶಾದ್ಯಂತ ಇನ್ನೂ ಅನೇಕ ರೈತರು ಈ ಯೋಜನೆಯ ಫಲಾನುಭವಿಗಳಲ್ಲ. ತಮ್ಮ ಹೆಸರಿನಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರವೇ ಯೋಜನೆಯಿಂದ ಪ್ರಯೋಜನ ಪಡೆಯಬಹುದಾಗಿದೆ. ವೈದ್ಯರು, ಸಿಎ, ವಕೀಲರು, ಸಂಸದರು, ಶಾಸಕರಿಗೆ ಈ ಯೋಜನೆಯಿಂದ ಯಾವುದೇ ನೆರವು ದೊರೆಯುವುದಿಲ್ಲ. ನೀವು ರೈತರಾಗಿದ್ದು ನಿಮ್ಮ ಹೆಸರಿನಲ್ಲಿ ಜಮೀನು ಇದ್ದರೂ ಕೂಡ, ನೀವು ಮಾಸಿಕ ಪಿಂಚಣಿ 10,000 ರೂ. ಗಿಂತ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಅನರ್ಹರಾಗಿರುತ್ತೀರಿ.


ಈ ಯೋಜನೆಯ ವ್ಯಾಪ್ತಿಯಲ್ಲಿ ಯೋಜನೆಯ ಹಣವನ್ನು ಮೂರು, ನಾಲ್ಕು ಮಾಸಿಕ ತಿಂಗಳ ಅವಧಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ಅರ್ಹ ರೈತರ ಕುಟುಂಬಗಳಿಗೆ 2,000 ರೂ. ವರ್ಗಾಯಿಸಲಾಗುತ್ತದೆ. ಹೀಗೆ ವಾರ್ಷಿಕವಾಗಿ 6,000 ರೂ. ಅನ್ನು ರೈತರ ಕುಟುಂಬಕ್ಕೆ ವರ್ಗಾಯಿಸಲಾಗುತ್ತದೆ ಎಂದು ಕೃಷಿ ಸಚಿವರಾದ ನರೇಂದ್ರ ಸಿಂಗ್ ತಿಳಿಸಿದ್ದಾರೆ. ಈ ವರ್ಷದ ಜೂನ್ ಅಂತ್ಯದವರೆಗೆ ಪಿಎಂ-ಕಿಸಾನ್ ಯೋಜನೆಯಡಿ 68.76 ಕೋಟಿ ವಹಿವಾಟುಗಳನ್ನು ನಡೆಸಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.


Published by:Sharath Sharma Kalagaru
First published: