ಕಿಸಾನ್ ಕ್ರೆಡಿಟ್ ಕಾರ್ಡ್​ ಬಳಕೆದಾರರೇ ಎಚ್ಚರ!; ಗಡುವಿನೊಳಗೆ ಸಾಲ ತೀರಿಸದಿದ್ದರೆ ಶೇ. 3ರಷ್ಟು ಬಡ್ಡಿ ಹೆಚ್ಚಳ

ಕೇಂದ್ರ ಸರ್ಕಾರ ರೈತರಿಗೆ ಆಗಸ್ಟ್​ 31ರವರೆಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​ನ ಕೃಷಿ ಸಾಲ ಮರುಪಾವತಿಗೆ ಅವಕಾಶ ನೀಡಿದೆ. ಆದರೆ, ಆ ಅವಧಿಯೊಳಗೆ ರೈತರು ಸಾಲ ತೀರಿಸದೆ ಇದ್ದರೆ ಶೇ. 4ರ ಬದಲಾಗಿ ಶೇ. 7ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.

Sushma Chakre | news18-kannada
Updated:July 14, 2020, 7:01 PM IST
ಕಿಸಾನ್ ಕ್ರೆಡಿಟ್ ಕಾರ್ಡ್​ ಬಳಕೆದಾರರೇ ಎಚ್ಚರ!; ಗಡುವಿನೊಳಗೆ ಸಾಲ ತೀರಿಸದಿದ್ದರೆ ಶೇ. 3ರಷ್ಟು ಬಡ್ಡಿ ಹೆಚ್ಚಳ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜು. 14): ಭಾರತದಲ್ಲಿ 7 ಕೋಟಿಗೂ ಹೆಚ್ಚು ಜನರು ಕಿಸಾನ್ ಕ್ರೆಡಿಟ್ ಕಾರ್ಡ್​ ಹೊಂದಿದ್ದಾರೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀವು ಸಾಲ ಪಡೆದು, ಅದನ್ನು ಮರುಪಾವತಿ ಮಾಡುವಾಗ ಶೇ 4ರಷ್ಟು ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಆದರೆ, ನೀವೇನಾದರೂ 48 ದಿನಗಳೊಳಗೆ ಸಾಲ ಮರುಪಾವತಿ ಮಾಡದೇ ಇದ್ದರೆ ಬಡ್ಡಿಯೂ ಹೆಚ್ಚಾಗುತ್ತದೆ. ಹಾಗಾದರೆ, ನಿಗದಿತ ಸಮಯಕ್ಕಿಂತ ತಡವಾಗಿ ನೀವು ಸಾಲದ ಮೊತ್ತವನ್ನು ಹಿಂತಿರುಗಿಸುವುದಾದರೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ...

ನೀವೇನಾದರೂ ಕಿಸಾನ್​ ಕ್ರೆಡಿಟ್ ಕಾರ್ಡ್​ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ. ನಮ್ಮ ದೇಶದಲ್ಲಿ 7 ಕೋಟಿಗೂ ಅಧಿಕ ಕಿಸಾನ್ ಕ್ರೆಡಿಟ್ ಕಾರ್ಡ್​ ಬಳಕೆದಾರರಿದ್ದಾರೆ. ಒಂದುವೇಳೆ ಅವರು ಈ ಕ್ರೆಡಿಟ್​ ಕಾರ್ಡ್​ ಬಳಸಿ ತೆಗೆದುಕೊಂಡ ಸಾಲವನ್ನು ತೀರಿಸದೆ ಇದ್ದರೆ ಶೇ. 4ರ ಬದಲಾಗಿ ಶೇ. 7ರಷ್ಟು ಬಡ್ಡಿ ಹಣವನ್ನು ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ರೈತರಿಗೆ ಆಗಸ್ಟ್​ 31ರವರೆಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​ನ ಕೃಷಿ ಸಾಲ ಮರುಪಾವತಿಗೆ ಅವಕಾಶ ನೀಡಿದೆ. ಆದರೆ, ಆ ಅವಧಿಯೊಳಗೆ ರೈತರು ಸಾಲ ತೀರಿಸದೆ ಇದ್ದರೆ ಶೇ. 7ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಆಗಸ್ಟ್​ 31ರೊಳಗೆ ಸಾಲಿ ಮರುಪಾವತಿ ಮಾಡಿದರೆ ಶೇ. 4ರಷ್ಟು ಮಾತ್ರ ಬಡ್ಡಿ ವಿಧಿಸಲಾಗುತ್ತದೆ.

ಇದನ್ನೂ ಓದಿ: Assam Flood: ಅಸ್ಸಾಂ ಪ್ರವಾಹಕ್ಕೆ 76 ಬಲಿ; ಊರಿಗೆ ಊರೇ ಮುಳುಗಡೆ, 50ಕ್ಕೂ ಹೆಚ್ಚು ಕಾಡುಪ್ರಾಣಿಗಳು ಜಲಸಮಾಧಿ

ಕಿಸಾನ್​ ಕ್ರೆಡಿಟ್ ಕಾರ್ಡ್​ನ ಸಾಲವನ್ನು ತೀರಿಸಲು ಮಾರ್ಚ್​ 31 ಕೊನೆಯ ದಿನವಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಆ ಅವಧಿಯನ್ನು ಆಗಸ್ಟ್​ 31ರವರೆಗೆ ವಿಸ್ತರಿಸಲಾಗಿತ್ತು. ರೈತರು ಸಾಲ ಮರುಪಾವತಿ ಮಾಡಿದ ಬಳಿಕ ಮತ್ತೆ ಸಾಲ ಪಡೆಯಬಹುದಾಗಿದೆ. ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ಕೇಂದ್ರ ಸರ್ಕಾರ ಮಾರ್ಚ್​ 31ರವರೆಗಿದ್ದ ಗಡುವನ್ನು ಮೇ 31ರವರೆಗೆ ವಿಸ್ತರಿಸಿತ್ತು. ಆದರೆ, ಲಾಕ್​ಡೌನ್​ ವಿಸ್ತರಣೆಯಾದ ಕಾರಣ ಆ ಗಡುವನ್ನು ಮತ್ತೆ ಆಗಸ್ಟ್​ 31ರವರೆಗೆ ವಿಸ್ತರಿಸಲಾಯಿತು.

ರೈತರು, ಮೀನುಗಾರರು, ಪಶುಸಂಗೋಪನೆ ನಡೆಸುವವರು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್​ ಪಡೆಯಬಹುದಾಗಿದೆ. ಇವರೆಲ್ಲ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಯಾವುದೇ ಕೋ-ಆಪರೇಟಿವ್ ಬ್ಯಾಂಕ್, ಎಸ್​ಬಿಐ, ಬಿಓಐ, ಐಡಿಬಿಐನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್​ ವಿತರಿಸಲಾಗುತ್ತದೆ. ಕಿಸಾನ್ ಕಾರ್ಡ್​​ ಪಡೆಯಲು ಇಚ್ಛಿಸುವವರು ನಿಮ್ಮ ಬ್ಯಾಂಕ್​ನ ಅಧಿಕೃತ ವೆಬ್​ ಸೈಟ್​ಗೆ ಭೇಟಿ ನೀಡಿ ಅಥವಾ ನಿಮ್ಮ ಬ್ಯಾಂಕ್​ಗೆ ಭೇಟಿ ನೀಡಬೇಕು.

ಲೋನ್​ ಆಯ್ಕೆ ಕ್ಲಿಕ್​ ಮಾಡಿದ ನಂತರ ‘Apply for KCC’ ಎಂದು ಸರ್ಚ್​ ಮಾಡಬೇಕು. ಅಲ್ಲಿ ಸಿಗುವ ಫಾರ್ಮ್ ​ಅನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಬಳಿಕ ‘submit’ ಬಟನ್​ ಕ್ಲಿಕ್​ ಮಾಡಿದರೆ ಒಂದು ಸಂಖ್ಯೆ ಸಿಗುತ್ತದೆ. ಆ ಸಂಖ್ಯೆಯನ್ನು ಸೇವ್​ ಮಾಡಿಟ್ಟುಕೊಳ್ಳಬೇಕು. ಅಥವಾ ನೇರವಾಗಿ ಬ್ಯಾಂಕ್​ಗೆ ಹೋಗಿಯೂ ಕಾರ್ಡ್​ ಪಡೆಯಬಹುದು. ಕಿಸಾನ್​ ಕಾರ್ಡ್​ ಪಡೆಯಲು ಆಧಾರ್,​ ಪಾನ್​, ವೋಟಿಂಗ್ ಕಾರ್ಡ್​ ಅಥವಾ ಡ್ರೈವಿಂಗ್​ ಲೈಸೆನ್ಸ್​​ನ ಪ್ರತಿ ಬೇಕಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್​ನಿಂದ ಸುಲಭವಾಗಿ ದೀರ್ಘಾವಧಿ ಸಾಲ ಲಭ್ಯವಾಗಲಿದೆ. ಗೊಬ್ಬರ, ಬಿತ್ತನೆ ಬೀಜಗಳ ಖರೀದಿಯಲ್ಲಿ ಸಹಕಾರಿಯಾಗಲಿದೆ.
Published by: Sushma Chakre
First published: July 14, 2020, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading