Kirron Kher: ಬ್ಲಡ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ನಟಿ, ಸಂಸದೆ ಕಿರಣ್​ ಖೇರ್​

ಖೇರ್​ ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಅವರು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದುವಾರಕ್ಕೆ ಒಂದು ದಿನ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

 ಕಿರಣ್​ ಖೇರ್

ಕಿರಣ್​ ಖೇರ್

 • Share this:
  ನಟಿ, ಲೋಕಸಭಾ ಸದಸ್ಯೆ ಕಿರಣ್​ ಖೇರ್​ (68) ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಚಂಡೀಗಢ ಕ್ಷೇತ್ರದ ಬಿಜೆಪಿ ಸಂಸದೆಯಾಗಿರುವ ಅವರು, ಮಲ್ಟಿಪಲ್​ ಮೈಲೋಮಾ ಅಂದರೆ, ಒಂದು ರೀತಿಯ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಕ್ಷದ ಪದಾಧಿಕಾರಿ ಅರುಣ್​ ಸೂದ್​ ತಿಳಿಸಿದ್ದಾರೆ. ಕಳೆದ ವರ್ಷದಿಂದ ಅವರು ಈ ಕ್ಯಾನ್ಸರ್​ಗೆ ಚಿಕಿತ್ಸೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಚಂಡೀಗಢದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಖೇರ್​ ಚೇತರಿಕೆ ಕಾಣುತ್ತಿದ್ದಾರೆ. ಕಳೆದ ವರ್ಷದ ನವೆಂಬರ್​ನಲ್ಲಿ ಖೇರ್​ ಅವರ ಕೈ ಮುರಿದಿತ್ತು. ಈ ವೇಳೆ ಅವರು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರಿಗೆ ಕ್ಯಾನ್ಸರ್​ ಇರುವುದು ಪತ್ತೆಯಾಗಿತ್ತು.

  ಈ ರಕ್ತದ ಕ್ಯಾನ್ಸರ್​ ಅವರ ಎಡಗೈ ಮತ್ತು ಬಲ ಭುಜಕ್ಕೆ ಹರಡಿತ್ತು. ಚಿಕಿತ್ಸೆಗಾಗಿ ಅವರು, ಕಳೆದ ಡಿಸೆಂಬರ್​ 4ರಂದು ಮುಂಬೈಗೆ ಹೊರಟರು ಎಂದು ಜನರಿಗೆ ಮಾಹಿತಿ ನೀಡಿದರು. ಖೇರ್​ ಕಾಣದಿರುವ ಬಗ್ಗೆ ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಈ ಮಾಹಿತಿಯನ್ನು ಅವರು ತಿಳಿಸಿದರು.

  ಖೇರ್​ ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಅವರು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದುವಾರಕ್ಕೆ ಒಂದು ದಿನ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅವರು ನಿರಂತರ ಚಿಕಿತ್ಸೆಯಲ್ಲಿರುವುದರಿಂದ ನಾವು ಚಂಡೀಗಢ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಕಾಳಜಿಗೆ ಬದ್ಧವಾಗಿದ್ದೇವೆ ಎಂದರು.

  ಹಿಂದಿಯಲ್ಲಿ ಬಹುಬೇಡಿಕೆಯ ಪೋಷಕ ನಟಿಯಾಗಿರುವ ಕಿರಣ್​ ಖೇರ್​, ನಟ ಅನುಪಮ್​​ ಖೇರ್​ ಅವರನ್ನು ಮದುವೆಯಾಗಿದ್ದಾರೆ. 2014ರಲ್ಲಿ ರಾಜಕೀಯಕ್ಕೆ ಧುಮುಕಿದ ಕಿರಣ್​ ಖೇರ್​, ಎರಡನೇ ಬಾರಿ ಸಂಸದೆಯಾಗಿದ್ದಾರೆ.
  Published by:Seema R
  First published: