• Home
  • »
  • News
  • »
  • national-international
  • »
  • Judiciary: 'ಲಕ್ಷ್ಮಣ ರೇಖೆ' ದಾಟಿದ ಕಿರಣ್ ರಿಜಿಜು: ನ್ಯಾಯಾಂಗದ ಬಗ್ಗೆ ಸಚಿವರ ಹೇಳಿಕೆಗೆ ಸಾಳ್ವೆ ಗರಂ!

Judiciary: 'ಲಕ್ಷ್ಮಣ ರೇಖೆ' ದಾಟಿದ ಕಿರಣ್ ರಿಜಿಜು: ನ್ಯಾಯಾಂಗದ ಬಗ್ಗೆ ಸಚಿವರ ಹೇಳಿಕೆಗೆ ಸಾಳ್ವೆ ಗರಂ!

ಕಾನೂನು ಸಚಿವ ಕಿರಣ್ ರಿಜಿಜು

ಕಾನೂನು ಸಚಿವ ಕಿರಣ್ ರಿಜಿಜು

ಮಂಡಳಿ ತೆರವುಗೊಳಿಸಿದ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಸರಕಾರ ಯಾವುದೇ ಪ್ರಕ್ರಿಯೆಗಳನ್ನು ನಡೆಸುತ್ತಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌ನ ಹೇಳಿಕೆಯನ್ನು ಕಾನೂನು ಸಚಿವರಾದ ಕಿರಣ್ ರಿಜಿಜು ಟೀಕಿಸಿದ್ದರು.

  • Trending Desk
  • 5-MIN READ
  • Last Updated :
  • New Delhi, India
  • Share this:

    ನೇಮಕಾತಿ ಮಂಡಳಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರ ಹಾಗೂ ನ್ಯಾಯಾಂಗದ ನಡುವಿನ ತಿಕ್ಕಾಟವನ್ನು ಟೀಕಿಸಿ ಸಚಿವ ಕಿರಣ್ ರಿಜಿಜು (Kiren Rijiju) ನೀಡಿರುವ ಹೇಳಿಕೆಗೆ ಹಿರಿಯ ವಕೀಲರಾದ ಹರೀಶ್ ಸಾಳ್ವೆ (Harish Salve)ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಕಿಡಿ ಕಾರಿರುವ ಸಾಳ್ವೆ ಕೇಂದ್ರ ಕಾನೂನು ಸಚಿವರು (Law Minister) ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಎಂದು ಗುಡುಗಿದ್ದಾರೆ.  ಮಂಡಳಿ ತೆರವುಗೊಳಿಸಿದ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಸರಕಾರ ಯಾವುದೇ ಪ್ರಕ್ರಿಯೆಗಳನ್ನು ನಡೆಸುತ್ತಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌ನ ಹೇಳಿಕೆಯನ್ನು ಕಾನೂನು ಸಚಿವರಾದ ಕಿರಣ್ ರಿಜಿಜು ಟೀಕಿಸಿದ್ದರು.


    ಹೌದು ಈ ವಿಚಾರವ ಟೀಕಿಸಿದ್ದ ರಿಜಿಜು ಸರಕಾರವು ಫೈಲ್‌ಗಳ ಪ್ರಕ್ರಿಯೆ ನಡೆಸುತ್ತಿಲ್ಲವೆಂದು ಹೇಳಬೇಡಿ. ಹಾಗಾಗಿದ್ದರೆ ಫೈಲ್‌ಗಳನ್ನು ಸರಕಾರಕ್ಕೆ ಕಳುಹಿಸಬೇಡಿ, ನೀವೇ ನಿಮ್ಮಷ್ಟಕ್ಕೆ ನೇಮಕಾತಿಗಳನ್ನು ನಡೆಸಿ ಹಾಗೂ ಆಡಳಿತ ನಡೆಸಿ ಎಂದು ಸುಪ್ರೀಂ ಕೋರ್ಟ್‌ ಮೇಲೆ ಅಸಮಾಧಾನವನ್ನು ಹೊರಹಾಕಿದ್ದರು.


    ಇದನ್ನೂ ಓದಿ: Explained: ಕೋಟ್ಯಂತರ ಜೀವ ಕಾಪಾಡಿದ್ದ ORS ನ ಸಂಶೋಧಕ ಡಾ. ದಿಲೀಪ್ ಅವರ ಬಗ್ಗೆ ಕಂಪ್ಲೀಟ್‌ ಮಾಹಿತಿ


    ಭಾರತದ ನ್ಯಾಯಾಂಗ ವ್ಯವಸ್ಥೆ ಕುಂಟುತ್ತಿದೆ


    ರಿಜಿಜು ಈ ಮಾತುಗಳನ್ನು ಖಂಡಿಸಿರುವ ವಕೀಲ ಹರೀಶ್ ಸಾಳ್ವೆ ಅವರು ಲಕ್ಷ್ಮಣ ರೇಖೆಯನ್ನು ದಾಟಿದ್ದು, ರಾಜ್ಯಾಂಗಕ್ಕೆ ವಿರುದ್ಧವಾದ ಕಾನೂನು ಪ್ರಕ್ರಿಯೆಗೊಳ್ಳುತ್ತಿದ್ದರೂ ಸುಪ್ರೀಂ ಕೋರ್ಟ್ ಕೈಕಟ್ಟಿರಬೇಕು. ಅಂತಹ ಕಾನೂನನ್ನು ಮಾರ್ಪಡಿಸುವ ಸರಕಾರದ ಕ್ರಮಕ್ಕೆ ಕಾನೂನು ಮೂಕನಾಗಿರಬೇಕು ಎಂಬುದು ಕಿರಣ್ ರಿಜಿಜು ಅವರ ಅನಿಸಿಕೆಯಾಗಿದ್ದರೆ, ಅದು ತಪ್ಪು ಅಭಿಪ್ರಾಯ ಎಂದು ಹರೀಶ್ ಸಾಳ್ವೆ ಟೀಕಿಸಿದ್ದಾರೆ.


    ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಹಿರಿಯ ವಕೀಲ ಹರೀಶ್ ಸಾಳ್ವೆ


    ಟೈಮ್ಸ್ ನೌ ಶೃಂಗಸಭೆ 2022 ರಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರೊಂದಿಗೆ ಭಾರತದ ನ್ಯಾಯಾಂಗ ವ್ಯವಸ್ಥೆ ಏಕೆ ನಿಧಾನಗೊಳ್ಳುತ್ತಿದೆ ಎಂಬ ವಿಷಯದ ಕುರಿತು ಸಾಳ್ವೆ ಅನಿಸಿಕೆ ಹಂಚಿಕೊಂಡಿದ್ದು, ಸುಪ್ರೀಂ ಕೋರ್ಟ್ ಮಂಡಳಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಕಿರಣ್ ರಿಜಿಜು ವ್ಯವಸ್ಥೆಯ ಟೀಕಕಾರರಾಗಿ ಟೀಕೆಗಳನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.


    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅಸಮಾಧಾನ


    ಮಂಡಳಿ ವ್ಯವಸ್ಥೆಯನ್ನು ಸಂವಿಧಾನಕ್ಕೆ ಅನಗತ್ಯ ಎಂದು ಬಣ್ಣಿಸಿದ ರಿಜಿಜು, ಕೊಲಿಜಿಯಂ (ಮಂಡಳಿ) ವ್ಯವಸ್ಥೆಯನ್ನು ಯಾವ ನಿಬಂಧನೆಯ ಅಡಿಯಲ್ಲಿ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.


    ರಿಜಿಜು ಅವರ ಟೀಕೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌ಕೆ ಕೌಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ರೀತಿ ನಡೆಯಬಾರದಿತ್ತು ಎಂದು ತಿಳಿಸಿದ್ದಾರೆ. ಕೇಂದ್ರ ಕಾನೂನು ಸಚಿವರ ಹೆಸರು ಬಹಿರಂಗಪಡಿಸದೇ ಅವರ ಟೀಕೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಕೌಲ್, ಟೀಕಾಕಾರರಿಗೆ ಅಧಿಕಾರ ನೀಡಲಿ ನಮಗೆ ಯಾವುದೇ ತೊಂದರೆ ಇಲ್ಲ, ಎಲ್ಲಾ ಪತ್ರಿಕಾ ವರದಿಗಳನ್ನು ನಿರ್ಲಕ್ಷಿಸಿರುವುದಾಗಿ ತಿಳಿಸಿರುವ ಕೌಲ್, ಉನ್ನತ ಹುದ್ದೆಯಲ್ಲಿರುವವರು ನ್ಯಾಯಾಂಗದ ಕೆಲಸವನ್ನು ತಾವೇ ಮಾಡುತ್ತೇವೆ ಎಂದು ಹೇಳಿದರೆ ಅವರೇ ಮಾಡಲಿ, ನಮಗೇನೂ ಸಮಸ್ಯೆಯಿಲ್ಲ. ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಹಾಗೂ ಉನ್ನತ ಹುದ್ದೆಯಲ್ಲಿರುವವರು ಟೀಕೆಗಳನ್ನು ಮಾಡುವ ಮುನ್ನ ಯೋಚಿಸಬೇಕು ಎಂದು ಕೌಲ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.


    ನೇಮಕಾತಿಯಲ್ಲಿ ರಾಜಕೀಯ ತಂತ್ರ


    ಈ ತಿಂಗಳ ಆರಂಭದಲ್ಲಿ ಮಂಡಳಿಯು ಸೂಚಿಸಿದ ಹೆಸರುಗಳು ಒಳಗೊಂಡಂತೆ ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗಿ ನೇಮಕ ಮಾಡಲು ಶಿಫಾರಸು ಮಾಡಲಾದ ಹೆಸರುಗಳನ್ನು ಬಾಕಿ ಇರಿಸಿರುವ ಕೇಂದ್ರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.


    ಇದನ್ನೂ ಓದಿ: APJ Abdul Kalam: ಯುವಕರಿಗೆ ಸ್ಫೂರ್ತಿ ತುಂಬುತ್ತೆ ಕಲಾಂರ ಸಾಧನೆ! ಭಾರತದ ಕ್ಷಿಪಣಿ ಮನುಷ್ಯನ ಹೆಜ್ಜೆ ಗುರುತು ಇಲ್ಲಿದೆ


    ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಶಿಫಾರಸು ಮಾಡಲಾದ ವ್ಯಕ್ತಿಗಳು ತಮ್ಮ ಒಪ್ಪಿಗೆಯನ್ನು ಹಿಂಪಡೆಯಬೇಕು ಎಂಬ ನಿಟ್ಟಿನಲ್ಲಿ ಕೇಂದ್ರವು ಶಿಫಾರಸು ಮಾಡಿದ ಹೆಸರುಗಳನ್ನು ತಡೆಹಿಡಿಯುತ್ತಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು ಹೆಸರುಗಳನ್ನು ಕೇಂದ್ರವು ತಡೆಹಿಡಿದಿರುವುದು ಒಂದು ರೀತಿಯ ಸಾಧನವಾಗಿ ಮಾರ್ಪಡುತ್ತಿದೆ ಎಂದು ಆಪಾದಿಸಿತ್ತು.


    ಕೇಂದ್ರವು ಎರಡನೆಯ ಪುನರಾವರ್ತನೆಯ ನಂತರ ನೇಮಕಾತಿಯನ್ನು ಮಾತ್ರ ನೀಡಬೇಕಾಗಿದೆ ಆದರೆ ಹೆಸರುಗಳನ್ನು ತಡೆಹಿಡಿದಿರುವುದು ಸ್ವೀಕಾರಾರ್ಹವಲ್ಲ; ವ್ಯಕ್ತಿಗಳು ತಮ್ಮ ಹೆಸರನ್ನು ಹಿಂಪಡೆಯುವಂತೆ ಅವರ ಮೇಲೆ ಒತ್ತಡ ಹೇರಲು ಇದೊಂದು ಸಾಧನವಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎಎಸ್ ಓಕಾ ಅವರ ಪೀಠವು ಉಲ್ಲೇಖಿಸಿದೆ.

    Published by:Precilla Olivia Dias
    First published: