• Home
  • »
  • News
  • »
  • national-international
  • »
  • John Shaw: ಕರುಳಿನ ಕ್ಯಾನ್ಸರ್​; ಉದ್ಯಮಿ ಕಿರಣ್ ಮಜುಮ್ದಾರ್ ಶಾ ಪತಿ ಜಾನ್ ಶಾ ನಿಧನ

John Shaw: ಕರುಳಿನ ಕ್ಯಾನ್ಸರ್​; ಉದ್ಯಮಿ ಕಿರಣ್ ಮಜುಮ್ದಾರ್ ಶಾ ಪತಿ ಜಾನ್ ಶಾ ನಿಧನ

ಕಿರಣ್ ಮಜುಮ್ದಾರ್ ಶಾ ಮತ್ತು ಜಾನ್ ಶಾ

ಕಿರಣ್ ಮಜುಮ್ದಾರ್ ಶಾ ಮತ್ತು ಜಾನ್ ಶಾ

ಕರುಳಿನ ಕ್ಯಾನ್ಸರ್​ನಿಂದ  ಜಾನ್ ಶಾ ಅವರು ಬಳಸುತ್ತಿದ್ದರು.  

  • News18 Kannada
  • Last Updated :
  • Bangalore [Bangalore], India
  • Share this:

ಪ್ರಖ್ಯಾತ ಉದ್ಯಮಿ ಕಿರಣ್ ಮಜುಮ್ದಾರ್ ಶಾ (Kiran Mazumdar Shaw Husband) ಅವರ ಪತಿ ಜಾನ್ ಶಾ ಅವರು (John Shaw Passed Away) ನಿಧನರಾಗಿದ್ದಾರೆ. ಕರುಳಿನ ಕ್ಯಾನ್ಸರ್​ನಿಂದ  ಜಾನ್ ಶಾ ಅವರು ಬಳಸುತ್ತಿದ್ದರು.   ಕಳೆದ ಕೆಲ ದಿನಗಳಿಂದ ಜಾನ್ ಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ವರದಿಗಳು ತಿಳಿಸಿವೆ. ಬಯೋಕಾನ್ (Biocon) ಕಂಪನಿಯ  ಸಲಹಾ ಸಮೀತಿಯ ಜವಾಬ್ದಾರಿ ನಿಭಾಯಿಸುತ್ತಿದ್ದರು. 


ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿದ್ದ ಜಾನ್ ಶಾ
ಅವರು ಮಧುರಾ ಕೋಟ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿದ್ದರು.  ಜೊತೆಗೆ ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬಯೋಕಾನ್ ಸಂಸ್ಥೆಯ ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ ಜಾನ್ ಶಾ  ಹಲವಾರು ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 1999 ರಿಂದ ಅವರು ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Kargil: ಕಾರ್ಗಿಲ್‌ನಲ್ಲಿ ಯೋಧರೊಂದಿಗೆ 'ವಂದೇ ಮಾತರಂ' ಹಾಡಿದ ಪ್ರಧಾನಿ ನರೇಂದ್ರ ಮೋದಿ


ಬಯೋಕಾನ್ ಹಿಂದಿನ ಬೆನ್ನೆಲುಬು
ಬಯೋಕಾನ್ 2001 ರಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಅಣುವನ್ನು ತಯಾರಿಸಲು US ಆಹಾರ ಮತ್ತು ಔಷಧ ಆಡಳಿತದಿಂದ (FDA) ಅನುಮೋದಿಸಿದ ಮೊದಲ ಭಾರತೀಯ ಕಂಪನಿಯಾಗಿದೆ.


ಪ್ರಖ್ಯಾತ ಗೋಲ್ಡ್ಸ್‌ ಜಿಮ್ ಮಾಲೀಕ ದುರ್ಮರಣ, ವಿಮಾನ ಅಪಘಾತದಲ್ಲಿ 6 ಮಂದಿ ಸಾವು
ವಿಶ್ವದಾದ್ಯಂತ ಪ್ರಖ್ಯಾತವಾಗಿರುವ ಗೋಲ್ಡ್ಸ್ ಜಿಮ್‌ನ ಮಾಲೀಕ ಜರ್ಮನಿಯ ಪ್ರಸಿದ್ಧ ಉದ್ಯಮಿ ರೈನರ್ ಸ್ಕಾಲರ್  ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರೈನರ್ ಸ್ಕಾಲರ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇನ್ನೂ 5 ಮಂದಿ ಇದ್ದರು. ಆದರೆ ಎಲ್ಲರೂ ಕಣ್ಮರೆಯಾಗಿದ್ದರು. ಇದೀಗ ಅವರ ವಿಮಾನ ಅಪಘಾತಕ್ಕೆ ಒಳಗಾಗಿದೆ ಎನ್ನಲಾಗಿದ್ದು, ರೈನರ್ ಸ್ಕಾಲರ್ ಸೇರಿದಂತೆ ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾಗಿ ಮೂಲಗಳು ತಿಳಿಸಿವೆ.


ಇದನ್ನೂ ಓದಿ: Superhighway: ಸಮುದ್ರತೀರದಲ್ಲಿ ಪ್ರಾಚೀನ ಸೂಪರ್ ಹೈವೇ ಪತ್ತೆ!


ಮೆಕ್ಸಿಕೊದಿಂದ (Mexico) ಕರಾವಳಿ ಪ್ರವಾಸಿ ಪಟ್ಟಣವಾದ ಲಿಮೋನ್‌ಗೆ (Limón) ತೆರಳುವಾಗ ವಿಮಾನವು ರಾಡಾರ್‌ನಿಂದ ಕಣ್ಮರೆಯಾಯಿತು, ಈ ವಿಮಾನದಲ್ಲಿ ಜರ್ಮನಿಯ ಉದ್ಯಮಿ ರೈನರ್ ಸ್ಕಾಲರ್ ವಿಮಾನದಲ್ಲಿದ್ದರು. ಬಳಿಕ ಕೋಸ್ಟರಿಕಾದ ಕರಾವಳಿಯಲ್ಲಿ ಕೆರಿಬಿಯನ್ ಸಮುದ್ರಕ್ಕೆ (Caribbean Sea) ಆ ವಿಮಾನ ಅಪ್ಪಳಿಸಿತು, ಅದರಲ್ಲಿದ್ದ ಎಲ್ಲಾ ಆರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ.


ಮೊದಲು ಸಂಪರ್ಕ ಕಳೆದುಕೊಂಡ ವಿಮಾನ
ಜರ್ಮನಿಯ ಉದ್ಯಮಿ ರೈನರ್ ಸ್ಕಾಲರ್ ಮತ್ತು ಅವರ ಮಕ್ಕಳು ಕೋಸ್ಟಾ ರಿಕಾಗೆ ತೆರಳುವಾಗ ವಿಮಾನದಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ. ಖಾಸಗಿ ವಿಮಾನದಲ್ಲಿ ರೈನರ್ ಸ್ಕಾಲರ್, ಕ್ರಿಸ್ಟಿಯಾನೆ ಸ್ಕಿಕೋರ್ಸ್ಕಿ ಮತ್ತು ಅವರ ಮಕ್ಕಳು ಮತ್ತು ಫಿಟ್ನೆಸ್ ತರಬೇತುದಾರರು ಇದ್ದರು. ಅವರೆಲ್ಲ ಕೋಸ್ಟಾ ರಿಕಾಗೆ ಪ್ರಯಾಣಿಸುವಾಗ ನಾಪತ್ತೆಯಾಗಿದ್ದರು. ಕೆರಿಬಿಯನ್‌ನಲ್ಲಿರುವ ಬಾರ್ರಾ ಡೆಲ್ ಪ್ಯಾರಿಸ್ಮಿನಾ ಮೂಲಕ ಹಾದುಹೋಗುವಾಗ ವಿಮಾನವು ನಿಯಂತ್ರಣ ಗೋಪುರದೊಂದಿಗೆ ಸಂಪೂರ್ಣ ಸಂಪರ್ಕವನ್ನು ಕಳೆದುಕೊಂಡಿತು ಎನ್ನವಾಗಿದೆ.


ಇದನ್ನೂ ಓದಿ: Car Blast: ಕೊಯಮತ್ತೂರು ಬಳಿ ಸ್ಫೋಟಗೊಂಡ ಕಾರಿನ ಹಿಂದೆ ಉಗ್ರರ ಕೈವಾಡ! ಮೃತನ ಮನೆಯಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!


ಎಲ್ಲಾ ಐದು ಪ್ರಯಾಣಿಕರು ಜರ್ಮನ್ ಪ್ರಜೆಗಳು ಎಂದು ಊಹಿಸಲಾಗಿದೆ. ಇನ್ನು ಪೈಲಟ್ ಸ್ವಿಸ್ ಪ್ರಜೆಯಾಗಿದ್ದರು. ನಾಪತ್ತೆಯಾದ ಅವಳಿ-ಎಂಜಿನ್ ಟರ್ಬೊಪ್ರಾಪ್ ವಿಮಾನದ ತುಣುಕುಗಳು ಹಿಂದಿನ ದಿನ ಸಾಗರದಲ್ಲಿ ಪತ್ತೆಯಾಗಿವೆ ಎಂದು ಕೋಸ್ಟರಿಕಾದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: