ಗುಜರಾತ್​ನ ಈ ಕ್ಷೇತ್ರ ಜಯಿಸಿದ ಪಕ್ಷಕ್ಕೇ ಕೇಂದ್ರದಲ್ಲಿ ಅಧಿಕಾರವಂತೆ; ಇಲ್ಲಿ ಆಗಿದೆ ಅತ್ಯಧಿಕ ಮತದಾನ

ವಲ್ಸದ್​ನಲ್ಲಿ ಗೆದ್ದ ಪಕ್ಷಕ್ಕೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತಿರುವ ಟ್ರೆಂಡ್ ಇದೆ. ಈ ಬಾರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಇನ್ನಿಲ್ಲದ ಪ್ರಯತ್ನ ಮಾಡಿದೆ.

news18
Updated:April 23, 2019, 9:32 PM IST
ಗುಜರಾತ್​ನ ಈ ಕ್ಷೇತ್ರ ಜಯಿಸಿದ ಪಕ್ಷಕ್ಕೇ ಕೇಂದ್ರದಲ್ಲಿ ಅಧಿಕಾರವಂತೆ; ಇಲ್ಲಿ ಆಗಿದೆ ಅತ್ಯಧಿಕ ಮತದಾನ
ಸಾಂದರ್ಭಿಕ ಚಿತ್ರ
  • News18
  • Last Updated: April 23, 2019, 9:32 PM IST
  • Share this:
ಅಹ್ಮದಾಬಾದ್(ಏ. 23): ಭಾರತದಲ್ಲಿ ಮಂಗಳ ಮತ್ತು ಅಮಂಗಳಕರವೆಂದು ಭಾವಿಸಲಾದ ಅನೇಕ ಸಂಗತಿಗಳಿವೆ. ಕಾಕತಾಳೀಯವಾಗಿ ನಡೆಯುವ ಬೆಳವಣಿಗೆಗಳು ಹಲವು ಕೌತುಕಗಳಿಗೆ ಕಾರಣವಾಗುತ್ತವೆ. ಅಂಥ ಒಂದು ಕೌತುಕದ ವಸ್ತು ಗುಜರಾತ್​ನ ವಲ್ಸದ್ ಕ್ಷೇತ್ರವಾಗಿದೆ. ಈ ಲೋಕಸಭಾ ಕ್ಷೇತ್ರವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕ್ಷೇತ್ರದಲ್ಲಿ ಜಯಿಸಿದ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಾ ಬಂದಿವೆ. ಕಾಕತಾಳೀಯವೋ ಅಲ್ಲವೋ ಒಟ್ಟಿನಲ್ಲಿ ಇದು ಇತಿಹಾಸದ ಸತ್ಯ ಸಂಗತಿಯೂ ಹೌದು.

ವಲ್ಸದ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 74.09% ಮತದಾನವಾಗಿದೆ. ಇದು ಗುಜರಾತ್​ನ 26 ಕ್ಷೇತ್ರಗಳಲ್ಲೇ ಕಂಡು ಬಂದ ಅತ್ಯಧಿಕ ಮತದಾನವಾಗಿದೆ. 2014ರ ಚುನಾವಣೆಯಲ್ಲೂ ಇಲ್ಲಿ 74.88% ಮತದಾನವಾಗಿತ್ತು. ಆಗ ಬಿಜೆಪಿ ವಲ್ಸದ್ ಸೇರಿ ಗುಜರಾತ್​ನ ಎಲ್ಲಾ 26 ಕ್ಷೇತ್ರಗಳನ್ನೂ ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿ ಹಾಲಿ ಸಂಸದ ಡಾ. ಕೆ.ಸಿ. ಪಟೇಲ್ ಅವರನ್ನೇ ಕಣಕ್ಕಿಳಿಸಿದೆ.

ಇದನ್ನೂ ಓದಿ: 3ನೇ ಹಂತದ ಮತದಾನ ಮುಕ್ತಾಯ; ಸುಮಾರು 65% ವೋಟಿಂಗ್ ಅಂದಾಜು; ಬಂಗಾಳ, ಒಡಿಶಾ ಮತ್ತು ಕಾಶ್ಮೀರದ ಹಲವೆಡೆ ಹಿಂಸಾಚಾರ

ಆದರೆ, ವಲ್ಸದ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಷ್ಟು ಸುಗಮವೇನೂ ಅಲ್ಲ. ಯಾಕೆಂದರೆ ಇಲ್ಲಿ ಕಾಂಗ್ರೆಸ್ ಪಕ್ಷ ಕೂಡ ಬಲಶಾಲಿಯಾಗಿದೆ. 2017ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಲ್ಸದ್ ಕ್ಷೇತ್ರದ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್ಸಿಗರು ಗೆಲುವು ಸಾಧಿಸಿದ್ದರು. ಮತ್ತೊಂದು ವಿಚಾರವೆಂದರೆ ವಲ್ಸದ್ ಲೋಕಸಭಾ ಕ್ಷೇತ್ರದಲ್ಲಿ ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚು ಬೆಂಬಲ ಇದ್ದರೆ, ಗ್ರಾಮೀಣ ಭಾಗದ ಜನರು ಕಾಂಗ್ರೆಸ್​ನ ಕೈ ಹಿಡಿಯುತ್ತಾರೆ. ಇವತ್ತು ನಡೆದ ಚುನಾವಣೆಯಲ್ಲಿ ನಗರದವರಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷವು ವಲ್ಸದ್​ನಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದೆ.

(ವರದಿ: ವಿಜಯ್ ಸಿನ್ಹ್ ಪಾರ್ಮಾರ್, ಗುಜರಾತ್)
First published: April 23, 2019, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading