• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shah Rukh Khan: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದ ಶಾರುಖ್‌ಖಾನ್!

Shah Rukh Khan: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದ ಶಾರುಖ್‌ಖಾನ್!

ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದ ಶಾರುಖ್‌ಖಾನ್!

ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದ ಶಾರುಖ್‌ಖಾನ್!

ಕಿಮೋ ಥೆರಪಿಗೆ ಒಳಗಾಗಿದ್ದ ಶಿಬಾನಿ ಚಕ್ರವರ್ತಿ ಅವರ ಕೊನೆಯ ಆಸೆಯ ಬಗ್ಗೆ ಅವರ ಮಗಳು ಪ್ರಿಯಾ ಚಕ್ರವರ್ತಿ ತನ್ನ ತಾಯಿಯ ಕೊನೆಯ ಆಸೆಯನ್ನು ಈಡೇರಿಸುವಂತೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

  • Local18
  • 2-MIN READ
  • Last Updated :
  • Share this:

ಮುಂಬೈ: ದೇಶ ವಿದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.


ಖರ್ದಹರ್ ದಕ್ಷಿಣ ಪಲ್ಲಿ ಕಾಳಿಮಂದಿರ್ ಪ್ರದೇಶದ ನಿವಾಸಿ ಶಿಬಾನಿ ಚಕ್ರವರ್ತಿ (60) ಅವರು ಕಳೆದ ಹತ್ತಾರು ವರ್ಷಗಳಿಂದ ಶಾರುಖ್ ಖಾನ್ ಅವರ ಅಪ್ಪಟ ಅಭಿಮಾನಿ. ಶಾರುಖ್ ಖಾನ್ ಅವರ ಯಾವುದೇ ಸಿನಿಮಾ ಬಂದರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು. ಖಾನ್ ಅವರನ್ನು ಆರಾಧಿಸುತ್ತಿದ್ದ ಶಿಬಾನಿ ಚಕ್ರವರ್ತಿ ಅವರು ಕಳೆದ ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನೇನು ತಾನು ಬದುಕೋದೆ ಇಲ್ಲ ಎಂದು ವೈದ್ಯರು ಹೇಳಿದಾಗ ತಮ್ಮ ಕೊನೆಯ ಆಸೆಯಾಗಿ ಶಾರುಖ್ ಖಾನ್ ಅವರನ್ನು ನೋಡೋದಾಗಿ ಹೇಳಿದ್ದರು.


ಇದನ್ನೂ ಓದಿ: Garden Lizards: ಯಾರಿಗೂ ಕಮ್ಮಿ ಇಲ್ಲದಂತೆ ಜಬರ್ದಸ್ತ್‌ ಫೈಟಿಂಗ್‌ನಲ್ಲಿ ಜಗವನ್ನೇ ಮರೆತ ಅಪರೂಪದ ಹಲ್ಲಿಗಳು!


ಅಂದ ಹಾಗೆ  ಶಿಬಾನಿ ಚಕ್ರವರ್ತಿ ಅವರಿಗೆ ಕೆಲ ಸಮಯದ ಹಿಂದೆ ಕ್ಯಾನ್ಸರ್ ಕಾಯಿಲೆ ಅಪ್ಪಳಿಸಿತ್ತು. ಈ ಕಾಯಿಲೆ ವಾಸಿಯಾಗುವ ಹಂತ ದಾಟಿ ಶಿಬಾನಿ ಅವರನ್ನು ಆವರಿಸಿತ್ತು. ಹೀಗಾಗಿ ತಾನು ಬದುಕೋದೆ ಇಲ್ಲ ಅನ್ನೋದು ಗೊತ್ತಾದಾಗ ವೈದ್ಯರ ಮೂಲಕ ತನ್ನ ಕೊನೆಯ ಆಸೆಯನ್ನು ಹೇಳಿದ್ದಾರೆ. ಶಿಬಾನಿ ಅವರ ಅಭಿಮಾನ ಮತ್ತು ಬೇಡಿಕೆಯ ಬಗ್ಗೆ ತಿಳಿದುಕೊಂಡ ಸ್ಟಾರ್ ನಟ ಶಾರುಖ್ ಖಾನ್ ಆಸ್ಪತ್ರೆಗೆ ಬಂದು ಶಿಬಾನಿ ಚಕ್ರವರ್ತಿ ಅವರನ್ನು ಭೇಟಿಯಾಗಿದ್ದಾರೆ. ಆ ಮೂಲಕ ತನ್ನ ಅಭಿಮಾನಿಯ ಮನದಾಸೆಯನ್ನು ಈಡೇರಿಸಿದ್ದಾರೆ.


ಅರ್ಧಗಂಟೆ ಮಾತುಕತೆ


ಅಭಿಮಾನಿಯ ಇಂಗಿತ ಶಾರುಖ್ ಖಾನ್‌ಗೆ ತಿಳಿಯಲು ಸಹಾಯ ಮಾಡಿದ್ದು ಸೋಶಿಯಲ್ ಮೀಡಿಯಾ. ಕಿಮೋ ಥೆರಪಿಗೆ ಒಳಗಾಗಿದ್ದ ಶಿಬಾನಿ ಚಕ್ರವರ್ತಿ ಅವರ ಕೊನೆಯ ಆಸೆಯ ಬಗ್ಗೆ ಅವರ ಮಗಳು ಪ್ರಿಯಾ ಚಕ್ರವರ್ತಿ ತನ್ನ ತಾಯಿಯ ಕೊನೆಯ ಆಸೆಯನ್ನು ಈಡೇರಿಸುವಂತೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಬಾಲಿವುಡ್‌ ಸೂಪರ್‌ಸ್ಟಾರ್‌ಗೆ ತಲುಪಿದ್ದು, ಹೀಗಾಗಿ ತನ್ನ ಅಭಿಮಾನಿಯ ಕೊನೆಯ ಆಸೆಯನ್ನು ಈಡೇರಿಸಲೇಬೇಕು ಎಂದು ನಿರ್ಧರಿಸಿದ ಶಾರುಖ್‌ ಖಾನ್ ಅವರು ಮನ್ನತ್‌ನಿಂದ ವಿಡಿಯೋ ಕರೆ ಮಾಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಶಿಬಾನಿ ಜೊತೆ ಮಾತನಾಡಿದ್ದಾರೆ.


ಇದನ್ನೂ ಓದಿ: Jamaishashti Offer: ಕೇವಲ ₹299ಕ್ಕೆ 21 ಬಗೆಯ ತಿನಿಸುಗಳ ಆಫರ್! ಇದು ಜಮೈಷಷ್ಠಿ ಹಬ್ಬದ ವಿಶೇಷ ಕೊಡುಗೆ


ತನ್ನ ನೆಚ್ಚಿನ ನಟ ತನ್ನ ಜೊತೆ ಮಾತನಾಡಿದ್ದರಿಂದ ಪುಳಕಿತಗೊಂಡ ಶಿಬಾನಿ ಅವರು, ಇದು ಕನಸೋ ನನಸೋ ಎಂದು ರೋಮಾಂಚನಗೊಂಡಿದ್ದಾರೆ. ತುಂಬಾ ಆತ್ಮೀಯವಾಗಿ ಮಾತನಾಡಿದ ಶಾರುಖ್, ಶಿಬಾನಿ ಅವರಿಗೆ ಎಲ್ಲಾ ರೀತಿಯ ಆರ್ಥಿಕ ಸಹಾಯ ಮಾಡುವ ವಿಶ್ವಾಸ ನೀಡಿದ್ದಾರೆ. ಅಲ್ಲದೇ, ಅವಕಾಶ ಸಿಕ್ಕರೆ ಭೇಟಿಯಾಗುವುದಾಗಿಯೂ ಹೇಳಿದ್ದಾರೆ ಎಂದು ಶಿಬಾನಿ ಕುಟುಂಬಸ್ಥರು ಹೇಳಿದ್ದಾರೆ.




ಇದೇ ವೇಳೆ ಶಿಬಾನಿಗೆ ಬೇಯಿಸಿದ ಮೀನಿನ ಕರ್ರಿಯನ್ನು ತಿನ್ನುವಂತೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಲಹೆ ನೀಡಿದ್ದಾರೆ. ತನ್ನ ಮಗಳು ಪ್ರಿಯಾಳ ಮದುವೆಯ ಆಸೆಯನ್ನು ಶಿಬಾನಿ ದೇವಿ ವ್ಯಕ್ತಪಡಿಸಿದಾಗ, ಶಾರುಖ್ ತಾನು ಕೂಡ ಆ ಮದುವೆಯಲ್ಲಿ ಭಾಗಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಶಾರುಖ್ ಮಾತು ಕೇಳಿ ಶಿಬಾನಿ ದೇವಿಗೆ ಸಂತಸದಿಂದ ಕಣ್ಣೀರು ತಡೆಯಲಾಗಲಿಲ್ಲ.

First published: