King Charles: ಕಿಂಗ್ ಚಾರ್ಲ್ಸ್ ಮತ್ತೆ ಗರಂ, ಕ್ಯಾಮೆರಾದಲ್ಲಿ ದೃಶ್ಯ ಸೆರೆ! ಕಾರಣ ಏನು?

ಬ್ರಿಟನ್‌ ರಾಜ ಚಾರ್ಲ್ಸ್3 ಮತ್ತೆ ಕ್ಯಾಮರಾದೆದುರು ಕೋಪ ತೋರಿದ್ದಾರೆ. ಈ ಮೂಲಕ ಕೋಪದ ವಿಷಯಕ್ಕೆ ಮತ್ತೆ ಜಗತ್ತಿನೆಲ್ಲೆಡೆ ಸುದ್ದಿಯಾಗಿದ್ದಾರೆ. ತೀರಾ ಸಣ್ಣ ದೆನಿಸುವ ವಿಷಯವನ್ನೇ ದೊಡ್ಡದು ಮಾಡಿ ಎಗರಾಡಿದ್ದಾರೆ. ಅಷ್ಟಕ್ಕೂ ಅಂಥದ್ದೇನಾಯಿತು.. ರಾಜ ಕೋಪಗೊಳ್ಳುವಂಥದ್ದೇನಾಗಿತ್ತು ಅನ್ನೋದನ್ನು ಕೇಳಿದ್ರೆ ನೀವೂ ಆಶ್ಚರ್ಯ ಪಡ್ತೀರಾ.

ಬ್ರಿಟನ್‌ ರಾಜ ಚಾರ್ಲ್ಸ್ III

ಬ್ರಿಟನ್‌ ರಾಜ ಚಾರ್ಲ್ಸ್ III

  • Share this:
ಪ್ರಪಂಚದಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಂಡಿರುವವರನ್ನು ಇಡೀ ಜಗತ್ತು (World) ಗಮನಿಸಿರುತ್ತಿರುತ್ತೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ನಿಂತರೂ- ಕುಂತರೂ, ನಕ್ಕರೂ ಅಥವಾ ಸಿಡುಕಿದರೂ ಸುದ್ದಿಯಾಗುತ್ತದೆ. ಅದಕ್ಕಾಗಿಯೇ ವಿಶೇಷ ತರಬೇತಿ ಪಡೆದು ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಂದಿಷ್ಟು ನಿಯಮಗಳನ್ನು ಪಾಲಿಸಿಯೇ ಪಾಲಿಸುತ್ತಾರೆ. ತಮ್ಮ ಭಾವೋದ್ವೇಗಗಳನ್ನು ಆದಷ್ಟು ನಿಯಂತ್ರಣದಲ್ಲಿಡುತ್ತಾರೆ. ಹೇಗೆಂದರೆ ಹಾಗೆ ಮಾತನಾಡೋದಿಲ್ಲ. ಶಿಸ್ತು (Discipline) , ಸಂಯಮ ಗಳನ್ನು ಮರೆಯೋದಿಲ್ಲ. ಆದರೆ ಬ್ರಿಟನ್‌ ಕಿಂಗ್‌ ಚಾರ್ಲ್ಸ್‌ ಕ್ಯಾಮರಾದ ಎದುರು ಸಿಡುಕಿ ಮತ್ತೆ ಸುದ್ದಿಯಾಗಿದ್ದಾರೆ. ಹೌದು.. ಬ್ರಿಟನ್‌ ರಾಜ ಚಾರ್ಲ್ಸ್ 3  (British King Charles III) ಮತ್ತೆ ಕ್ಯಾಮರಾದೆದುರು ಕೋಪ ತೋರಿದ್ದಾರೆ. ಈ ಮೂಲಕ ಕೋಪದ ವಿಷಯಕ್ಕೆ ಮತ್ತೆ ಜಗತ್ತಿನೆಲ್ಲೆಡೆ ಸುದ್ದಿಯಾಗಿದ್ದಾರೆ.

ತೀರಾ ಸಣ್ಣ ದೆನಿಸುವ ವಿಷಯವನ್ನೇ ದೊಡ್ಡದು ಮಾಡಿ ಎಗರಾಡಿದ್ದಾರೆ. ಅಷ್ಟಕ್ಕೂ ಅಂಥದ್ದೇನಾಯಿತು.. ರಾಜ ಕೋಪಗೊಳ್ಳುವಂಥದ್ದೇನಾಗಿತ್ತು ಅನ್ನೋದನ್ನು ಕೇಳಿದ್ರೆ ನೀವೂ ಆಶ್ಚರ್ಯ ಪಡ್ತೀರಾ.

ಅಷ್ಟಕ್ಕೂ ಕೋಪಗೊಳ್ಳೋಕೆ ಕಾರಣ ಏನು 
ಅಂದಹಾಗೆ ಕಿಂಗ್‌ ಚಾರ್ಲ್ಸ್ ಮೊದಲಿನಿಂದಲೂ ಥಟ್ಟನೇ ಕೋಪ ವ್ಯಕ್ತಪಡಿಸೋ ಸ್ವಭಾವದವರು. ಈ ಮೊದಲೂ ಕೂಡ ಅವರು ಹಲವು ಬಾರಿ ಹೀಗೆಯೇ ಸಾರ್ವಜನಿಕರೆದುರು ಕೋಪ ವ್ಯಕ್ತಪಡಿಸಿದ್ದರು. ಅವನ್ನು ಮಾಧ್ಯಮ ವರದಿ ಮಾಡಿತ್ತು. ಇದೀಗ ಒಂದೇ ವಾರದಲ್ಲಿ ಎರಡನೇ ಬಾರಿಗೆ ಕಿಂಗ್‌ ಚಾರ್ಲ್ಸ್‌ ಸಮಾರಂಭವೊಂದರಲ್ಲಿ ತನ್ನ ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Queen Elizabeth II: ರಾಣಿ ಎಲಿಜಬೆತ್‌ ದೀರ್ಘಾಯುಷ್ಯದ ಗುಟ್ಟು ಇಲ್ಲಿದೆ ನೋಡಿಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಕಿಂಗ್‌ ಚಾರ್ಲ್ಸ್‌ ಸಂದರ್ಶಕರ ಪುಸ್ತಕವೊಂದಕ್ಕೆ ಸಹಿ ಹಾಕುತ್ತಿರುವ ವೇಳೆ ಪೆನ್ನಿನ ಇಂಕ್‌ ಅವರ ಕೈ ಮೇಲೆ ಚಿಮ್ಮಿದೆ. ಇದರಿಂದ ಸಿಟ್ಟಿಗೆ ಒಳಗಾದ ಕಿಂಗ್‌ ಓಹ್‌ ದೇವರೇ.. ಐ ಹೇಟ್‌ ದಿಸ್‌ ಪೆನ್‌ ಅಂದರು. ಈ ಪೆನ್ನನ್ನು ದ್ವೇಷಿಸುವುದಾಗಿ ಹೇಳಿ ಸಿಡುಕಿಕೊಂಡೇ ಮೇಲೆದ್ದರು. ತಕ್ಷಣವೇ ಎದ್ದು ನಿಂತು ಪೆನ್ನನ್ನು ಪತ್ನಿ ರಾಣಿ ಕಾನ್ಸೋರ್ಟ್‌ ಕ್ಯಾಮಿಲ್ಲಾ ನೀಡಿದರು. ತನ್ನ ಕೈ ಬೆರಳುಗಳನ್ನು ಒರೆಸಿಕೊಕೊಂಡರು ಮತ್ತು ʼಪ್ರತೀ ಸಲವೂ ಇಂಥದ್ದನ್ನು ಸಹಿಸಿಕೊಳ್ಳೋಕೇ ಆಗಲ್ಲʼ ಎಂದು ಗೊಣಗಿಕೊಳ್ಳುತ್ತ ಎದ್ದು ಹೋದರು.

ಯೌವ್ವನದ ದಿನಗಳಲ್ಲಿ ಕೂಡ ಇಂಥದ್ದೇ ಸನ್ನಿವೇಶಗಳನ್ನು ಸೃಷ್ಟಿಸಿದ್ದರಂತೆ ಈ ರಾಜ
ಅಂದಹಾಗೆ, ಕಿಂಗ್ ಚಾರ್ಲ್ಸ್ ತನ್ನ ಯೌವ್ವನದ ದಿನಗಳಲ್ಲಿ ಕೂಡ ಇಂಥದ್ದೇ ಹಲವು ಸನ್ನಿವೇಶಗಳನ್ನು ಸೃಷ್ಟಿಸಿದ್ದರು. ರಾಯಲ್‌ ಜೀವನ ಚರಿತ್ರೆಕಾರ ಹೋವಾರ್ಡ್‌ ಹಾಡ್ಸ್ಗನ್‌ ಅವರ ಪ್ರಕಾರ, ಅವರು ಒಂದು ಸಭ್ಯತೆಯನ್ನು ರೂಢಿ ಮಾಡಿಕೊಳ್ಳುವಲ್ಲಿ ಇಂಥಹ ಒತ್ತಡವನ್ನು ಅನುಭವಿಸಿದ್ದರು. ರಾಜಮನೆತನದ ವ್ಯಕ್ತಿ ಸಭ್ಯತೆ, ನಗುವ ರೀತಿ, ರಾಜಪ್ರಭುತ್ವವನ್ನು ಉತ್ತೇಜಿಸುವ ರೀತಿ ಹೀಗೆ ಎಲ್ಲದರಲ್ಲೂ ಒಂದು ರೀತಿ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಕಿಂಗ್‌ ಅವರಿಗೆ ಉಂಟಾದ ಮಾನಸಿಕ ಒತ್ತಡವೇ ಅವರ ಈ ಮನಸ್ಥಿತಿಗೆ ಕಾರಣವಾಯಿತು ಎನ್ನುತ್ತಾರೆ.

ಇದನ್ನೂ ಓದಿ: Prince Harry: ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಪ್ರಿನ್ಸ್ ಹ್ಯಾರಿ ಅಧಿಕೃತ ಹೇಳಿಕೆ ಬಿಡುಗಡೆ

ಅಷ್ಟಕ್ಕೂ ಚಾರ್ಲ್ಸ್‌ 1980ರಲ್ಲಿ ಲೇಡಿ ಡಯಾನಾ ಸ್ಪೆನ್ಸರ್‌ ಅವರನ್ನು ಭೇಟಿಯಾದ ನಂತರ ಸ್ವಲ್ಪ ಶಾಂತರಾಗಿರುವಂತೆ ಕಂಡುಬಂದರು. ಆದರೆ ನಂತರ ಆಗಿದ್ದೇ ಬೇರೆ. 1990ರ ದಶಕದಲ್ಲಿ ಡಯಾನಾ ರಿಂದ ಬೇರ್ಪಟ್ಟ ನಂತರ ಚಾರ್ಲ್ಸ್‌ ಮತ್ತೆ ಇಂಥದ್ದೇ ಮನಸ್ಥಿತಿ ಹೊಂದಿದರು. ಅವರು ಕೋಪವನ್ನು ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು. ಅಲ್ಲದೇ ತದನಂತರ ಅವರು ರಾಜಮನೆತನದ ಜವಾಬ್ದಾರಿಗಳನ್ನು ತ್ಯಜಿಸಿ ಇಟಲಿಗೆ ತೆರಳಲು ನಿರ್ಧರಿಸಿದ್ದರು ಎಂದು ಕೂಡ ವರದಿಯಾಗಿತ್ತು.

ಬ್ರಿಟನ್‌ ರಾಣಿ ನಿಧರಾಗಿದ್ದ ಹಿನ್ನೆಲೆ ಗಣ್ಯರಿಂದ ಸಂತಾಪ  
ರಾಜಮನೆತನ ಅದರಲ್ಲೂ ಬ್ರಿಟನ್‌ ರಾಜಮನೆತನವೆಂದರೆ ಇಡೀ ಜಗತ್ತು ಅತ್ತ ತಿರುಗಿ ನೋಡುತ್ತೆ. ಇತ್ತೀಚಿಗಷ್ಟೇ ಬ್ರಿಟನ್‌ ರಾಣಿ ಎಲಿಜಬೆತ್‌ ನಿಧರಾಗಿದ್ದ ಹಿನ್ನೆಲೆ ಇಡೀ ವಿಶ್ವದ ಗಣ್ಯಾತಿ ಗಣ್ಯರು ಅವರ ಸಾವಿಗೆ ಸಂತಾಪ ಸೂಚಿಸಿದ್ದರು. ಅಂಥ ರಾಜಮನೆತನದ ವ್ಯಕ್ತಿಗಳ ನಡುವಳಿಕೆ ಇಡೀ ಜಗತ್ತಿನಲ್ಲಿ ಸುದ್ದಿಯಾಗುತ್ತದೆ. ಅದರಲ್ಲೂ ಇಂಥ ವರ್ತನೆಗಳು ಬಹುಬೇಗ ಸುದ್ದಿಯಾಗುತ್ತವೆ. ಮಾತು ಹಾಗೂ ವರ್ತನೆಯಲ್ಲಿ ಸಂಯಮ ಕಾದುಕೊಳ್ಳದೇ ಹೋದರೆ ಹೀಗೆಯೇ ಋಣಾತ್ಮಕ ಅಂಶಗಳಿಗೆ ಹೆಚ್ಚು ಪ್ರಸಿದ್ಧರಾಗಿ ಬರಬೇಕಾಗುತ್ತದೆ. ‌
Published by:Ashwini Prabhu
First published: