King Charles III: ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಸದ್ದು ಮಾಡುತ್ತಿದೆ ರಾಜ ಚಾರ್ಲ್ಸ್ ಬಗೆಗಿನ ಈ ಭವಿಷ್ಯವಾಣಿ!

ರಾಣಿ ಎಲಿಜಬೆತ್ II ರ ಸುದೀರ್ಘ ಆಳ್ವಿಕೆಯ ನಂತರ ಹಿರಿಯ ಮಗ 73 ವರ್ಷದ ಚಾರ್ಲ್ಸ್ ತನ್ನ ತಾಯಿಯ ಮರಣದ ನಂತರ ರಾಜನಾಗಿದ್ದಾರೆ. ರಾಜ ಚಾರ್ಲ್ಸ್ III ಬ್ರಿಟನ್‌ ರಾಜನಾಗಿ ಘೋಷಣೆಯಾಗಿದ್ದಾರೆ, ಆದರೆ ಇವರ ಅಧಿಕಾರವಧಿ ಬಗ್ಗೆ 16 ನೇ ಶತಮಾನದ ದಾರ್ಶನಿಕರೊಬ್ಬರು ಭವಿಷ್ಯ ನುಡಿದಿದ್ದಾರೆ. 

ಕಿಂಗ್ ಚಾರ್ಲ್ಸ್ ಮತ್ತು ಪ್ರಿನ್ಸ್ ಹ್ಯಾರಿ

ಕಿಂಗ್ ಚಾರ್ಲ್ಸ್ ಮತ್ತು ಪ್ರಿನ್ಸ್ ಹ್ಯಾರಿ

  • Share this:
ವಾಣಿರಾಣಿ ಎಲಿಜಬೆತ್‌ II (Queen Elizabeth II) ಸಾವಿನ ನಂತರ ಅವರ ಪುತ್ರ ಚಾರ್ಲ್ಸ್ III ಬ್ರಿಟನ್‌ನ ರಾಜನ ಪಟ್ಟಕ್ಕೆ ಏರಿದ್ದಾರೆ. ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಚಾರ್ಲ್ಸ್ III (Charles III) ಅವರನ್ನು ಬ್ರಿಟನ್ ರಾಜ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ರಾಣಿ ಎಲಿಜಬೆತ್ II ರ ಸುದೀರ್ಘ ಆಳ್ವಿಕೆಯ ನಂತರ ಹಿರಿಯ ಮಗ 73 ವರ್ಷದ ಚಾರ್ಲ್ಸ್ ತನ್ನ ತಾಯಿಯ ಮರಣದ ನಂತರ ರಾಜನಾಗಿದ್ದಾರೆ. ರಾಜ ಚಾರ್ಲ್ಸ್ III ಬ್ರಿಟನ್‌ ರಾಜನಾಗಿ (King of Britain) ಘೋಷಣೆಯಾಗಿದ್ದಾರೆ, ಆದರೆ ಇವರ ಅಧಿಕಾರವಧಿ ಬಗ್ಗೆ 16 ನೇ ಶತಮಾನದ ದಾರ್ಶನಿಕರೊಬ್ಬರು ಭವಿಷ್ಯ ನುಡಿದಿದ್ದಾರೆ. 

ರಾಜ ಚಾರ್ಲ್ಸ್ III ಅಧಿಕಾರವಧಿ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯ ನುಡಿ
ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಮೈಕೆಲ್ ಡಿ ನಾಸ್ಟ್ರೆಡೇಮ್‌ನ ಭವಿಷ್ಯ ವಾಣಿಯನ್ನು ಮಾರಿಯೋ ರೀಡಿಂಗ್ ಎಂಬ ಲೇಖಕರು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ಕಿಂಗ್ ಚಾರ್ಲ್ಸ್‌ನ ಆಳ್ವಿಕೆಯ ಬಗ್ಗೆ ಮತ್ತು ರಾಣಿಯ ಸಾವಿನ ವರ್ಷವನ್ನು ನಾಸ್ಟ್ರೆಡೇಮ್‌ ಅವರು ಊಹಿಸಿದ್ದರು ಎಂದು ರೀಡಿಂಗ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

"ಕಿಂಗ್ ಚಾರ್ಲ್ಸ್‌ ಹೆಚ್ಚು ಕಾಲ ರಾಜನ ಪಟ್ಟದಲ್ಲಿ ಉಳಿಯುವುದಿಲ್ಲ "
ನಾಸ್ಟ್ರಾಡಾಮಸ್ ನ ಭವಿಷ್ಯವನ್ನು ಉಲ್ಲೇಖಿಸಿ ಬರಹಗಾರ ಮಾರಿಯೋ ರೀಡಿಂಗ್ ತಮ್ಮ ಬರಹದಲ್ಲಿ ರಾಜ ಚಾರ್ಲ್ಸ್ III ಬ್ರಿಟನ್‌ನ ಮುಖ್ಯಸ್ಥನಾಗಿ ಅಲ್ಪಾವಧಿಗೆ ಮಾತ್ರ ಕಾರ್ಯನಿರ್ವಹಿಸುತ್ತಾನೆ ಎಂದು 16ನೇ ಶತಮಾನದ ದರ್ಶಕರು ಭವಿಷ್ಯ ನುಡಿದಿದ್ದಾರೆ ಎಂದು ವಿವರಿಸಿದ್ದಾರೆ. ಕಿಂಗ್ ಚಾರ್ಲ್ಸ್‌ನ ಆಳ್ವಿಕೆಯು ಚಿಕ್ಕದಾಗಿದೆ ಮತ್ತು ಅವರ ಕಿರಿಯ ಮಗ ಪ್ರಿನ್ಸ್ ಹ್ಯಾರಿ ಅವರ ಸ್ಥಾನವನ್ನು ಪಡೆಯುತ್ತಾನೆ ಎಂದು ಸೂಚಿಸಿವೆ ಇವರ ಲೇಖನ ಬರಹಗಳು.

ಇದನ್ನೂ ಓದಿ:  Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

ರಾಣಿಯ ಮರಣದ ಬಗ್ಗೆಯೂ ಹೇಳಿದ್ದ ಪ್ರವಾದಿ
ನಾಸ್ಟ್ರಾಡಾಮಸ್‌ ಪ್ರವಾದಿಯ ಭವಿಷ್ಯವನ್ನು ಉಲ್ಲೇಖಿಸಿ ಮಾರಿಯೋ ರೀಡಿಂಗ್, ಅವರು 1555 ರಲ್ಲಿ ಬರೆದ ನಿಗೂಢ ಕವಿತೆಗಳಲ್ಲಿ ರಾಣಿಯ ಮರಣದ ಬಗ್ಗೆಯೂ ತಿಳಿಸಿದ್ದರು. "2022 ರ ಸುಮಾರಿಗೆ ರಾಣಿ ಎಲಿಜಬೆತ್ II ಸಾಯುತ್ತಾರೆ, ಸುಮಾರು ತೊಂಬತ್ತಾರು ವಯಸ್ಸಿನಲ್ಲಿ, ಅವರ ತಾಯಿಯ ಜೀವಿತಾವಧಿಯು ಐದು ವರ್ಷಗಳಷ್ಟು ಕಡಿಮೆಯಿದೆ" ಎಂದು ನಾಸ್ಟ್ರಾಡಾಮಸ್ ಹೇಳಿರುವುದಾಗಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ತಾಯಿ ನಂತರ ಪಟ್ಟಕ್ಕೆ ಬರುವ ಚಾರ್ಲ್ಸ್ ರಾಜನನ್ನು "ದ್ವೀಪಗಳ ರಾಜ" ಎಂದಿದ್ದಾರೆ. ಚಾರ್ಲ್ಸ್ ರಾಜನ ಸಮಯದಲ್ಲಿ ಕಾಮನ್ ವೆಲ್ತ್‌ ಒಕ್ಕೂಟ ದೇಶಗಳು ಒಡೆಯುತ್ತವೆ ಎಂದು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಂಗ್ ಚಾರ್ಲ್ಸ್ ನಂತರ ‌ಪ್ರಿನ್ಸ್ ಹ್ಯಾರಿ ಪಟ್ಟಕ್ಕೆ
ಕಿಂಗ್ ಚಾರ್ಲ್ಸ್ ಆಳ್ವಿಕೆಯ ಬಗ್ಗೆಯೂ ಲೇಖನದಲ್ಲಿ ಉಲ್ಲೇಖಿಸಿದ ಅವರು, "ಪ್ರಿನ್ಸ್ ಚಾರ್ಲ್ಸ್ 2022ರಲ್ಲಿ ಸಿಂಹಾಸನವನ್ನು ಏರಿದಾಗ ಅವರಿಗೆ ಎಪ್ಪತ್ನಾಲ್ಕು ವರ್ಷ ವಯಸ್ಸಾಗಿರುತ್ತದೆ, ಕಿಂಗ್ ಚಾರ್ಲ್ಸ್ ತನ್ನ ವಯಸ್ಸಿನ ಕಾರಣದಿಂದ ಪದತ್ಯಾಗ ಮಾಡುತ್ತಾನೆ ಮತ್ತು ನಂತರ ಪ್ರಿನ್ಸ್ ಹ್ಯಾರಿ ಬ್ರಿಟಿಷ್ ಸಿಂಹಾಸನವನ್ನು ಏರುತ್ತಾರೆ" ಎಂದು ರೀಡಿಂಗ್ ಬರೆದಿದ್ದಾರೆ.

ಇದನ್ನೂ ಓದಿ:  Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ಸೆಪ್ಟೆಂಬರ್ 11 ರ ದಾಳಿ ಬಗ್ಗೆಯೂ ಹೇಳಿದ್ದ ನಾಸ್ಟ್ರಾಡಾಮಸ್
ವಿಶ್ವದ ಶ್ರೇಷ್ಠ ಪ್ರವಾದಿಯಾದ ನಾಸ್ಟ್ರಾಡಾಮಸ್ ತನ್ನ ಭವಿಷ್ಯಗಳಿಂದಲೇ ಪ್ರಖ್ಯಾತಿಯಾಗಿದ್ದಾನೆ. ಹಿಟ್ಲರನ ಆಳ್ವಿಕೆ, ವಿಶ್ವ ಸಮರ II, 9/11 ದಾಳಿಗಳು ಮತ್ತು ಫ್ರೆಂಚ್ ಕ್ರಾಂತಿ ಸೇರಿದಂತೆ ಅವರು ನುಡಿದ ಭವಿಷ್ಯವಾಣಿಗಳ ಪೈಕಿ ಶೇ.85ರಷ್ಟು ನಿಜವಾಗಿದೆ. 2022ರ ವರ್ಷಕ್ಕೆ ಸಂಬಂಧಿಸಿದಂತೆ ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಈ ವರ್ಷದಲ್ಲಿ ಪರಮಾಣು ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದಾನೆ. ನಾಸ್ಟ್ರಾಡಾಮಸ್ 500 ವರ್ಷಗಳ ಹಿಂದೆ 2022ರ ಹಣದುಬ್ಬರದ ಸಮಸ್ಯೆ ಬಗ್ಗೆ ಊಹಿಸಿದ್ದರು.
Published by:Ashwini Prabhu
First published: