• Home
  • »
  • News
  • »
  • national-international
  • »
  • New Monogram: ಹೊಸ ಮೊನೊಗ್ರಾಮ್ ಅನ್ನು ಅನಾವರಣಗೊಳಿಸಿದ ನೂತನ ದೊರೆ ಚಾರ್ಲ್ಸ್

New Monogram: ಹೊಸ ಮೊನೊಗ್ರಾಮ್ ಅನ್ನು ಅನಾವರಣಗೊಳಿಸಿದ ನೂತನ ದೊರೆ ಚಾರ್ಲ್ಸ್

ನೂತನ ರಾಜನ ಗುರುತಿನ ಚಿಹ್ನೆ

ನೂತನ ರಾಜನ ಗುರುತಿನ ಚಿಹ್ನೆ

ಪ್ರಸ್ತುತ ರಾಜಮನೆತನದ ಶೋಕಾಚರಣೆಯ ಅವಧಿಯು ಅಂತ್ಯಗೊಂಡಿದ್ದು, ಚಾರ್ಲ್ಸ್ ಅವರು ಯುಕೆ ಹೊಸ ರಾಜನಾಗಿ ಬಳಸಲಿರುವ ಹೊಸ ಮೊನೊಗ್ರಾಮ್ ಅನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದಾರೆ. ನೂತನ ರಾಜ ಕಿಂಗ್ ಚಾರ್ಲ್ಸ್ III ರ ಹೊಸ ಸೈಫರ್ ಅನ್ನು ಕಾಲೇಜ್ ಆಫ್ ಆರ್ಮ್ಸ್ ವಿನ್ಯಾಸಗೊಳಿಸಲಾಗಿದೆ.

  • Share this:

ಬ್ರಿಟನ್ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ (Queen) 2ನೇ ಎಲಿಜಬೆತ್ (96) ನಿಧನ ಹಿನ್ನೆಲೆಯಲ್ಲಿ ದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿತ್ತು. ಎಲಿಜಬೆತ್ ಅವರ ಅಂತ್ಯಸಂಸ್ಕಾರದ ನಂತರವೂ ಏಳು ದಿನಗಳವರೆಗೆ ರಾಜಮನೆತನದಲ್ಲಿ (Royal Family) ಶೋಕಾಚರಣೆ ಇರಲಿದೆ ಎಂದು ಬಕ್ಕಿಂಗ್ ಹ್ಯಾಮ್ ಅರಮನೆಯು ಪ್ರಕಟಿಸಿತ್ತು. ಪ್ರಸ್ತುತ ರಾಜಮನೆತನದ ಶೋಕಾಚರಣೆಯ ಅವಧಿಯು ಅಂತ್ಯಗೊಂಡಿದ್ದು, ಚಾರ್ಲ್ಸ್ (Charles) ಅವರು ಯುಕೆ ಹೊಸ ರಾಜನಾಗಿ ಬಳಸಲಿರುವ ಹೊಸ ಮೊನೊಗ್ರಾಮ್ ಅನ್ನು ಮೊದಲ ಬಾರಿಗೆ ಅನಾವರಣಗೊಳಿಸಿದ್ದಾರೆ. ನೂತನ ರಾಜ ಕಿಂಗ್ ಚಾರ್ಲ್ಸ್ III ರ ಹೊಸ ಸೈಫರ್ ಅನ್ನು ಕಾಲೇಜ್ ಆಫ್ ಆರ್ಮ್ಸ್ ವಿನ್ಯಾಸಗೊಳಿಸಿದೆ. ಮೊನೊಗ್ರಾಮ್‌ (Monogram) ಎಂದರೆ ಅಕ್ಷರಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ರೂಪುಗೊಂಡ ಚಿಹ್ನೆ. ಸಾಮಾನ್ಯವಾಗಿ ಹೆಸರಿನ ಸಂಯೋಜಿತ ಮೊದಲಕ್ಷರಗಳಿಂದ ರೂಪುಗೊಂಡ ಗುರುತಿನ ಚಿಹ್ನೆಯಾಗಿದೆ.


ಏನಿದೆ ನೂತನ ರಾಜನ ಗುರುತಿನ ಚಿಹ್ನೆಯಲ್ಲಿ?
ಕಿಂಗ್ ಚಾರ್ಲ್ಸ್ III, ಪ್ರಸ್ತುತ ತಮಗೆ ಸಂಬಂಧಿಸಿದ ಮೊನೊಗ್ರಾಮ್‌ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ಹೊಸ ಮೊನೊಗ್ರಾಮ್‌ ನಲ್ಲಿ ಚಾರ್ಲ್ಸ್ ಹೆಸರನ್ನು ಸೂಚಿಸುವ C ಅಕ್ಷರವಿದ್ದು, ಅದರ ಜೊತೆಗೆ R ಅಕ್ಷರ ಕೂಡ ಇದೆ. ಇಲ್ಲಿ R ಎಂದರೆ ರೆಕ್ಸ್‌ ( Rex) ಎಂದರ್ಥ. ರೆಕ್ಸ್‌ ಎಂದರೆ ಲ್ಯಾಟಿನ್ ಭಾಷೆಯಲ್ಲಿ "ರಾಜ, ಆಡಳಿತಗಾರ" ಎಂಬ ಅರ್ಥವನ್ನು ಸೂಚಿಸುತ್ತದೆ. ಚಕ್ರಾಧಿಪತ್ಯದ ಕಿರೀಟದೊಂದಿಗೆ R ಅಕ್ಷರವನ್ನು ಗುರುತಿಸಲಾಗಿದೆ.
ಆಲ್-ಇನ್-ಗೋಲ್ಡ್ ರಾಯಲ್ ಮೊನೊಗ್ರಾಮ್ ಅನ್ನು ಮುಂಬರುವ ದಿನಗಳಲ್ಲಿ ಕ್ವೀನ್ಸ್ ಸೈಫರ್ E II R ಅನ್ನು ತೆಗೆದುಹಾಕಿ ಯುಕೆಯಾದ್ಯಂತ ವಿವಿಧ ಸಾರ್ವಜನಿಕ ಕಚೇರಿಗಳು, ಪೇಪರ್‌ಗಳು ಮತ್ತು ಬೀದಿ ಪೀಠೋಪಕರಣಗಳಿಗೆ ಸೇರಿಸಲಾಗುತ್ತದೆ.


ಇದನ್ನೂ ಓದಿ: Queen Elizabeth: ರಾಣಿ ಎಲಿಜಬೆತ್ ನಗುವಿಗೆ ನಾಚಿ ನೀರಾಗಿದ್ದ ಪ್ರಿನ್ಸ್ ಹ್ಯಾರಿ! ಇಲ್ಲಿದೆ ಆ ಭಾವುಕ ಕ್ಷಣ


ಪೋಸ್ಟ್ ಆಫೀಸ್ ನಲ್ಲಿ ಮೊದಲ ಬಳಕೆ
ಕಿಂಗ್ ಚಾರ್ಲ್ಸ್ IIIರ ಅಧಿಕೃತ ಮೊನೊಗ್ರಾಮ್‌ ಅನ್ನು ಮೊದಲಿಗೆ ಬಕಿಂಗ್ಹ್ಯಾಮ್ ಅರಮನೆಯಲ್ಲಿರುವ ಕೋರ್ಟ್ ಪೋಸ್ಟ್ ಆಫೀಸ್ ಬಳಸಿಕೊಂಡು ಸ್ಟಾಂಪ್ ಪೋಸ್ಟ್ ಅನ್ನು ಮಾಡುವ ಮೂಲಕ ಕಾರ್ಯಗತಗೊಳಿಸಿದೆ. ಬಕಿಂಗ್ಹ್ಯಾಮ್ ಅರಮನೆಯಲ್ಲಿನ ಈ ಪೋಸ್ಟ್ ಆಫೀಸ್ ಪ್ರತಿ ವರ್ಷ ಆಹ್ವಾನಗಳು, ಪ್ರತಿಕ್ರಿಯೆಗಳು ಮತ್ತು ಸಾರ್ವಜನಿಕ ಮತ್ತು ರಾಜ್ಯ ವ್ಯವಹಾರದ ಸದಸ್ಯರಿಂದ ಸ್ವೀಕರಿಸಿದ ಕಾರ್ಡ್‌ಗಳು ಸೇರಿದಂತೆ ಸುಮಾರು 200,000 ಪತ್ರ ವ್ಯವಹಾರವನ್ನು ನಡೆಸುತ್ತದೆ.


ನೂತನ ರಾಜನ ಮೊನೊಗ್ರಾಮ್‌ ಅನ್ನು ವಿನ್ಯಾಸಗೊಳಿಸಿರುವ ಯುಕೆಯ ಕಾಲೇಜ್ ಆಫ್ ಆರ್ಮ್ಸ್, 1484ರಲ್ಲಿ ಸ್ಥಾಪನೆಯಾಗಿದೆ. ಇದು ಅಂಗೈ ಮತ್ತು ವಂಶಾವಳಿಯ ಕೋಟ್‌ಗಳ ಅಸಲಿ ರೆಜಿಸ್ಟರ್‌ಗಳನ್ನು ರಚಿಸುವ ಕೆಲಸ ಮಾಡುತ್ತದೆ. ಇದು ಹಲವು ಮೊನೊಗ್ರಾಮ್‌ ಗಳನ್ನು ರಾಜನಿಗಾಗಿ ವಿನ್ಯಾಸ ಮಾಡಿರುತ್ತದೆ. ಆದರೆ ಅಂತಿಮವಾಗಿ ರಾಜನು ಅದರಲ್ಲಿ ಒಂದನ್ನು ಆಯ್ಕೆ ಮಾಡುತ್ತಾನೆ. ಹೊಸ ರಾಜನ ಮೊನೊಗ್ರಾಮ್ ಅಧ್ಯಕ್ಷರ ರಚನೆಗಳು, ರಾಜ್ಯ ದಾಖಲೆಗಳು ಮತ್ತು ಕೆಲವು ಪಬ್ಲಿಷ್ ಬಿನ್‌ಗಳಿಗೆ ಮೀಸಲಾಗಿದೆ.


ಇನ್ನೂ ಏನೆಲ್ಲಾ ಬದಲಾಗಲಿದೆ?
ಇದರ ಜೊತೆ ಬ್ರಿಟನ್ ನ ಮಹಾರಾಣಿ 2ನೇ ಎಲಿಜಬೆತ್ ನಿಧನದಿಂದಾಗಿ ಅಲ್ಲಿನ ಕರೆನ್ಸಿ ನೋಟುಗಳು ಹಾಗೂ ನಾಣ್ಯಗಳ ಮೇಲಿನ ಅವರ ಚಿತ್ರ ಮಾಯವಾಗಿ, ಇನ್ನು ಮುಂದೆ ನೂತನ ರಾಜ ಚಾರ್ಲ್ಸ್ ಅವರ ಭಾವಚಿತ್ರ ಮುದ್ರಿತವಾಗುತ್ತವೆ. ಅಲ್ಲಿನ ರಾಷ್ಟ್ರಗೀತೆಯಲ್ಲಿದ್ದ ಗಾಡ್ ಸೇವ್ ದ ಕ್ವೀನ್ ಎಂಬ ಸಾಲು, ಇನ್ನು ಮುಂದೆ ಗಾಡ್ ಸೇವ್ ದ ಕಿಂಗ್ ಎಂದು ಬದಲಾಗಲಿದೆ.


ಇದನ್ನೂ ಓದಿ:  King Charles III: ಕಿಂಗ್ ಚಾರ್ಲ್ಸ್ ಹಿರಿ ಮುತ್ತಜ್ಜ ಮತ್ತು ಕ್ಯಾಮಿಲ್ಲಾ ಪಾರ್ಕರ್ ಮುತ್ತಜ್ಜಿ ನಡುವೆ ಇತ್ತು ಪ್ರೇಮ ಸಂಬಂಧ!


ಇದರ ಜೊತೆಗೆ, ಅಲ್ಲಿನ ಪಾಸ್ ಪೋರ್ಟ್ ಗಳಲ್ಲಿ ಮುದ್ರಿಸಲಾಗುತ್ತಿದ್ದ ಎಲಿಜಬೆತ್ ಅವರ ಭಾವಚಿತ್ರವೂ ಬದಲಾಗಿ ಚಾರ್ಲ್ಸ್ ಅವರ ಭಾವಚಿತ್ರ ಕಾಣಿಸಲಿದೆ. 2024 ರ ಮಧ್ಯದ ವೇಳೆಗೆ ಕಿಂಗ್ ಚಾರ್ಲ್ಸ್ III ರ ಭಾವಚಿತ್ರ ಒಳಗೊಂಡ ಕರೆನ್ಸಿ ನೋಟುಗಳು ಬರುತ್ತವೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಹೇಳಿದೆ.

Published by:Ashwini Prabhu
First published: