• Home
  • »
  • News
  • »
  • national-international
  • »
  • Queen Elizabeth: ರಾಣಿ ಎಲಿಜಬೆತ್​ರವರ​ 12 ಕುದುರೆಗಳನ್ನು ಹರಾಜು ಹಾಕಲು ನಿರ್ಧರಿಸಿದ ಕಿಂಗ್ ಚಾರ್ಲ್ಸ್!

Queen Elizabeth: ರಾಣಿ ಎಲಿಜಬೆತ್​ರವರ​ 12 ಕುದುರೆಗಳನ್ನು ಹರಾಜು ಹಾಕಲು ನಿರ್ಧರಿಸಿದ ಕಿಂಗ್ ಚಾರ್ಲ್ಸ್!

ಕಿಂಗ್ ಚಾರ್ಲ್ಸ್

ಕಿಂಗ್ ಚಾರ್ಲ್ಸ್

ಕಿಂಗ್ ಚಾರ್ಲ್ಸ್ ತಮ್ಮ ದಿವಂಗತ ತಾಯಿ ಎಲಿಜಬೆತ್ II ಅವರ 12 ರೇಸ್‌ ಕುದುರೆಗಳನ್ನು ಹರಾಜಿನಲ್ಲಿ ಮಾರಲಿದ್ದಾರೆ ಎಂದು ವರದಿಯಾಗಿದೆ. ನ್ಯೂಮಾರ್ಕೆಟ್‌ನ ಟ್ಯಾಟರ್ಸಾಲ್ಸ್‌ನಲ್ಲಿ ಕುದುರೆಗಳ ಹರಾಜು ನಡೆಯಲಿದೆ ಎಂದು ತಿಳಿಸಿದ್ದಾರೆ.

  • Share this:

ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್ ಕುದುರೆ (Horse) ಸಾಕಣೆ ಕೇಂದ್ರದಲ್ಲಿನ ಖರ್ಚುವೆಚ್ಚಗಳನ್ನು ತಗ್ಗಿಸಲು ಕಿಂಗ್ ಚಾರ್ಲ್ಸ್ ತಮ್ಮ ದಿವಂಗತ ತಾಯಿ ಎಲಿಜಬೆತ್ II ಅವರ 12 ರೇಸ್‌ ಕುದುರೆಗಳನ್ನು ಹರಾಜಿನಲ್ಲಿ ಮಾರಲಿದ್ದಾರೆ ಎಂದು ವರದಿಯಾಗಿದೆ. ನ್ಯೂಮಾರ್ಕೆಟ್‌ನ ಟ್ಯಾಟರ್ಸಾಲ್ಸ್‌ನಲ್ಲಿ ಕುದುರೆಗಳ ಹರಾಜು ನಡೆಯಲಿದೆ ಎಂದು ತಿಳಿಸಿದ್ದಾರೆ. ರಾಣಿ (Queen) ಸಾಯುವ ಮೊದಲು, 37 ಕುದುರೆಗಳನ್ನು ಹೊಂದಿದ್ದರು ಎನ್ನಲಾಗಿದೆ. ಅರಬ್ ನಾಯಕರು ಮತ್ತು ಅರಬ್ ರಾಜಮನೆತನದ ಸದಸ್ಯರು ರಾಣಿಯ ಕುದುರೆಗಳ ಬಗ್ಗೆ ಬಲವಾದ ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಕುದುರೆಗಳ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಬ್ರಿಟಿಷ್ ರಾಜಮನೆತನದ (British royal family) ನಿಕಟ ಮೂಲಗಳು ಬ್ರಿಟಿಷ್ ರಾಜಪ್ರಭುತ್ವವು ಕುದುರೆ ರೇಸಿಂಗ್ ಅನ್ನು ಇಷ್ಟಪಡುತ್ತದೆ ಆದರೆ ಪಾಲ್ಗೊಳ್ಳುವಿಕೆ ಕಡಿಮೆ ಪ್ರಮಾಣದ್ದಾಗಲಿದೆ ಎಂದು ತಿಳಿಸಿದೆ.


ವಾಸ್ತವವಾಗಿ, ರಾಣಿ ಭಾಗವಹಿಸುತ್ತಿದ್ದ ಕುದುರೆ ರೇಸ್‌ಗಳಾದ ರಾಯಲ್ ಆಸ್ಕಾಟ್‌ನೊಂದಿಗೆ ಮುಂದುವರಿಯುವುದು ರಾಜಮನೆತನದ ಉದ್ದೇಶವಾಗಿದೆ.


ಕಿಂಗ್ ಚಾರ್ಲ್ಸ್ ರಾಜಮನೆತನದ ಅಶ್ವಶಾಲೆಯನ್ನು ಮುಚ್ಚಲಿದ್ದಾರೆಯೇ?
ಕುದುರೆಗಳ ಸಂತಾನ ಅಭಿವೃದ್ಧಿಯನ್ನು ನಿಲ್ಲಿಸಲು ರಾಜಮನೆತನ ನಿರ್ಧರಿಸಿದೆ ಎಂಬುದಾಗಿ ವರದಿಯಾಗಿದ್ದು, ವಾಣಿಜ್ಯ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೂ ಅಶ್ವಶಾಲೆ ಇರಲಿದೆ ಎನ್ನಲಾಗಿದೆ. ನಂತರ ಮುಂದಿನ ಮೂರು ವರ್ಷಗಳಲ್ಲಿ ರಾಜಮನೆತನದ ಕುದುರೆ ಕೇಂದ್ರವು ಮ್ಯೂಸಿಯಂ ಆಗಿ ಕೂಡ ಪರಿವರ್ತನೆಗೊಳ್ಳಬಹುದು ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ.


ರೇಸಿಂಗ್‌ನಲ್ಲಿ ಅದೃಷ್ಟಪರೀಕ್ಷಿಸಿಕೊಳ್ಳಲಿರುವ ಚಾರ್ಲ್ಸ್
ಇನ್ನೊಂದು ಸುದ್ದಿಯ ಪ್ರಕಾರ ಕಿಂಗ್ ಚಾರ್ಲ್ಸ್ ಮುಂದಿನ ವರ್ಷ ಬೃಹತ್ ಅಶ್ವಶಾಲೆಯನ್ನು ಹೊಂದಿದ ನಂತರ ರೇಸಿಂಗ್‌ನಲ್ಲಿ ಅದೃಷ್ಟವನ್ನು ಗಳಿಸುತ್ತಾರೆ ಎಂದು ನಂಬಲಾಗಿದೆ.


ಇದನ್ನೂ ಓದಿ:  Britain Royal Family: ಬ್ರಿಟನ್ ರಾಜಮನೆತನದ ಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ರಾಯಲ್ ಕಹಾನಿ


ಕಿಂಗ್ ಚಾರ್ಲ್ಸ್ ತಮ್ಮ ತಾಯಿಯಿಂದ 60 ಓಟದ ಕುದುರೆಗಳು ಮತ್ತು 38 ಸಾಕುವ ಕುದುರೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು ಈ ಕುದುರೆಗಳಿಂದ ಹೊಸ ವರ್ಷದಲ್ಲಿ ಸುಮಾರು 30 ಮರಿಗಳನ್ನು ನಿರೀಕ್ಷಿಸಲಾಗಿದೆ ಎಂದು ವರದಿಯಾಗಿದೆ.


ಇವುಗಳು ರಾಣಿಯ ಪರಿಚರಣೆಯಲ್ಲಿದ್ದ ಕೊನೆಯ ಕುದುರೆಗಳ ಸಂತಾನವಾಗಿದ್ದು ಈ ಹೊಸ ಸೇರ್ಪಡೆಗಳು ದಾಖಲೆಯ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ ಎಂದು ಊಹಿಸಲಾಗಿದೆ.


ಕುದುರೆಗಳ ಸಂಖ್ಯೆಗಳನ್ನು ಇಳಿಮುಖಗೊಳಿಸಲು ಬಯಸಿರುವ ಕಿಂಗ್ ಚಾರ್ಲ್ಸ್
ರಾಜಮನೆತನದ ಕುದುರೆ ಸಾಕಾಣೆ ಕೇಂದ್ರದಲ್ಲಿರುವ ಕುದುರೆಗಳ ಸಂಖ್ಯೆಗಳನ್ನು ಇಳಿಮುಖಗೊಳಿಸಲು ಕಿಂಗ್ ಚಾರ್ಲ್ಸ್ ಬಯಸಿದ್ದಾರೆ ಎಂದು ಸುದ್ದಿ ಪತ್ರಿಕೆ ವರದಿ ಮಾಡಿದೆ. ರಾಜಮನೆತನ ಹಾಗೂ ಕುದುರೆ ರೇಸಿಂಗ್ ಉದ್ಯಮವು ಮುಂದವರಿಯುತ್ತದೆ.


ರಾಣಿಯು ಕುದುರೆಗಳ ಮೇಲೆ ವಿಶೇಷ ಅಕ್ಕರೆಯನ್ನು ಹೊಂದಿದ್ದರು ಹಾಗೂ ಅವರಿಗೆ ರೇಸ್ ನಡೆಸುವ ಉತ್ಸಾಹವಿತ್ತು. ಆದರೆ ರಾಣಿಯ ಕಾಲದಲ್ಲಿದ್ದಾಗ ನಡೆದಂತೆ ಕುದುರೆ ರೇಸ್‌ಗಳು ನಡೆಯದೇ ಇದ್ದರೂ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ ಎಂದು ರಾಜಮನೆತನದ ವಕ್ತಾರರು ತಿಳಿಸಿದ್ದಾರೆ.


ಕುದುರೆಗಳೆಂದರೆ ರಾಣಿ ಎಲಿಜಬೆತ್‌ಗೆ ತುಂಬಾ ಇಷ್ಟವಾಗಿತ್ತು
ಕುದುರೆ ಸಾಕಣೆಯಲ್ಲಿ ರಾಣಿ ಎಲಿಜಬೆತ್ ಅತೀವ ಶ್ರದ್ಧೆಯನ್ನು ಹೊಂದಿದ್ದರು ಹಾಗೂ ತಮ್ಮ ದಿಗ್ಭ್ರಾಂತಿಗೊಳಿಸುವ ವೃತ್ತಿ ಜೀವನದಲ್ಲಿ ತಮ್ಮ ಕುದುರೆಗಳನ್ನು 3,500 ರೇಸ್‌ಗಳಲ್ಲಿ ತೊಡಗಿಸಿದ ರಾಣಿ, 566 ಗೆಲುವುಗಳನ್ನು ದಾಖಲಿಸಿದ್ದಾರೆ. ಬಹುಮಾನದ ಮೊತ್ತದಲ್ಲಿ 8.7 ಮಿಲಿಯನ್‌ಗೆ ಸಮನಾಗಿರುತ್ತದೆ ಎಂಬುದಾಗಿ ವರದಿಯಾಗಿದೆ. ರಾಣಿಯನ್ನು ಕಳೆದ ವರ್ಷ QIPCO ಬ್ರಿಟಿಷ್ ಚಾಂಪಿಯನ್ಸ್ ಸೀರೀಸ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಲಾಗಿತ್ತು ಮತ್ತು ವಿಶೇಷ ಕೊಡುಗೆದಾರರ ವಿಭಾಗದಲ್ಲಿ ಸದಸ್ಯತ್ವವನ್ನು ಪಡೆದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ:   Queen Elizabeth II: ರಾಣಿ ಎಲಿಜಬೆತ್ ಬದುಕಿನ ಅಪರೂಪದ ಚಿತ್ರಗಳಿವು


ಹಾಲ್ ಆಫ್ ಫೇಮ್‌ ಸೇರ್ಪಡೆಗೊಂಡಿದ್ದ ರಾಣಿ
ರಾಣಿಯ ಸಲಹೆಗಾರರಲ್ಲಿ ಒಬ್ಬರಾದ ಜಾನ್ ವಾರೆನ್ ಹೇಳುವಂತೆ ಕುದುರೆ ಸಾಕಣೆಯಲ್ಲಿ ಆಕೆ ಸಮರ್ಪಣಾ ಭಾವವನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ. ಹಾಲ್ ಆಫ್ ಫೇಮ್‌ಗೆ ರಾಣಿಯನ್ನು ಸೇರ್ಪಡೆಗೊಳಿಸಿದ್ದು ಅವರಿಗೆ ಸಾಕಷ್ಟು ಹೆಮ್ಮೆಯ ವಿಷಯವಾಗಿತ್ತು. ರೇಸಿಂಗ್ ಹಾಗೂ ಕುದುರೆ ಸಂತಾನೋತ್ಪತ್ತಿಗೆ ರಾಣಿಯು ನೀಡಿರುವ ಕೊಡುಗೆಗಳು ಅಜೀವ ಬದ್ಧತೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Published by:Ashwini Prabhu
First published: