Prince William: ಪ್ರಿನ್ಸ್ ವಿಲಿಯಮ್ ಇನ್ನು ವೇಲ್ಸ್‌ನ ರಾಜಕುಮಾರ! ಕಿಂಗ್ ಚಾರ್ಲ್ಸ್‌ರಿಂದ ಘೋಷಣೆ

 ಪ್ರಿನ್ಸ್ ವಿಲಿಯಮ್ ಮತ್ತು ಕ್ಯಾಥರೀನ್

ಪ್ರಿನ್ಸ್ ವಿಲಿಯಮ್ ಮತ್ತು ಕ್ಯಾಥರೀನ್

ಎಲಿಜಬೆತ್‌ ರಾಣಿಯ ಮರಣದ ಮರುದಿನ ರಾಜ ಚಾರ್ಲ್ಸ್‌ ದೂರದರ್ಶನದಲ್ಲಿ ತಮ್ಮ‌ ಮೊದಲ ಭಾಷಣವನ್ನು ಮಾಡಿದರು. ಅಂದು ಮಾಡಿದ ತಮ್ಮ ಮೊದಲ ಭಾಷಣದಲ್ಲಿ, ರಾಜ ಚಾರ್ಲ್ಸ್, ರಾಜಕುಮಾರ ವಿಲಿಯಂ ಮತ್ತು ಅವನ ಹೆಂಡತಿ ಕ್ಯಾಥರೀನ್ ಅವರನ್ನು ವೇಲ್ಸ್‌ ನಗರಕ್ಕೆ ಹೊಸ ರಾಜಕುಮಾರ ಮತ್ತು ರಾಜಕುಮಾರಿ ಎಂದು ಘೋಷಿಸಿದರು.

ಮುಂದೆ ಓದಿ ...
  • Share this:

ಬಂಗೋರ್, ಯುಕೆ: ಬ್ರಿಟನ್‌ (Britain) ದೇಶವನ್ನು ಸುದಿರ್ಘವಾಗಿ ಆಳಿದ ಎಲಿಜಬೆತ್‌ ರಾಣಿಯ (Queen Elizabeth) ಮರಣವು ಎಲ್ಲರಿಗೂ ದುಃಖ ತರುವ ವಿಷಯವಾಗಿದೆ. ರಾಣಿಯ ಮರಣದ ನಂತರ ಮುಂದಿನ ರಾಜನೆಂದು ಎಲಿಜಬೆತ್‌ ರಾಣಿಯ ಮಗ ಚಾರ್ಲ್ಸ್‌ ಎಂದು ಮುಂಚಿತವಾಗಿ ಹೇಳಲಾಗಿತ್ತು. ಆದ್ದರಿಂದ ಎಲಿಜಬೆತ್‌ ರಾಣಿಯ ಮರಣದ ಮರುದಿನ ರಾಜ ಚಾರ್ಲ್ಸ್‌ (King Charles) ದೂರದರ್ಶನದಲ್ಲಿ ತಮ್ಮ‌ ಮೊದಲ ಭಾಷಣವನ್ನು ಮಾಡಿದರು. ಅಂದು ಮಾಡಿದ ತಮ್ಮ ಮೊದಲ ಭಾಷಣದಲ್ಲಿ, ರಾಜ ಚಾರ್ಲ್ಸ್ ರಾಜಕುಮಾರ ವಿಲಿಯಂ (Prince William) ಮತ್ತು ಅವನ ಹೆಂಡತಿ ಕ್ಯಾಥರೀನ್ ಅವರನ್ನು ವೇಲ್ಸ್‌ (Wales) ನಗರಕ್ಕೆ ಹೊಸ ರಾಜಕುಮಾರ ಮತ್ತು ರಾಜಕುಮಾರಿ ಎಂದು ಘೋಷಿಸಿದರು.


ವೇಲ್ಸ್‌ ನಗರಕ್ಕೆ ರಾಜ ರಾಣಿಯಾಗಿ ಘೋಷಣೆ 
ಅವರನ್ನು ಇಷ್ಟು ಬೇಗ ಏಕೆ ರಾಜ ರಾಣಿ ಎಂದು ಘೋಷಣೆ ಮಾಡಿದರು ಎಂದು ಅನೇಕರು ಪ್ರಶ್ನೆ ಮಾಡುತ್ತಿರಬಹುದು. ಇಂತಹ ದುಃಖದ ಸಮಯದಲ್ಲಿ ಅವರ ಪಟ್ಟಾಭಿಷೇಕ ಆಗಬೇಕಿತ್ತಾ ಎಂದು ಕೆಲವರು ಕೇಳುತ್ತಲೇ ಇದ್ದಾರೆ. ಅದಕ್ಕೆ ರಾಣಿ ಎಲಿಜಬೆತ್ ಅವರ ಮರಣದ ಹಿನ್ನೆಲೆಯಲ್ಲಿ ಬಾಹ್ಯವಾಗಿ ದೇಶದಲ್ಲಿ ಸ್ಥಿರತೆ ಮತ್ತು ಕೆಲಸ ಕಾರ್ಯಗಳು ತಮ್ಮ ನಿರಂತರತೆಯನ್ನು ಸಾಧಿಸುವ ಯೋಜನೆಯ ನಿಮಿತ್ತ ಇವರನ್ನು ಬೇಗನೆ ರಾಜ-ರಾಣಿ ಎಂದು ವೇಲ್ಸ್‌ ನಗರಕ್ಕೆ ಘೋಷಣೆ ಮಾಡಲಾಗಿದೆ ಎಂದು ಚಾರ್ಲ್‌ ಹೇಳಿದ್ದಾರೆ.


ಆದರೆ ವೇಲ್ಸ್‌ನ ಮೊದಲ ಮಂತ್ರಿ ಮಾರ್ಕ್ ಡ್ರೇಕ್‌ಫೋರ್ಡ್, ವಿಲಿಯಂ ಅವರ ನೇಮಕಾತಿಯ ಬಗ್ಗೆ ಮುಂಚಿತವಾಗಿ ಸೂಚನೆ ನೀಡಲಾಗಿಲ್ಲ ಎಂದು ಹೇಳಿಕೊಂಡರು. ಈ ಸುದ್ದಿಯಿಂದ ವಿಲಿಯಂ ನೇಮಕಾತಿಯು ಹಿನ್ನೆಡೆಯನ್ನು ಸಾಧಿಸಿದೆ. ದೇಶದಲ್ಲಿ ಈಗ ಇರುವ ಪ್ರೋಟೋಕಾಲ್ ಕೂಡ ಇದರ ಅಗತ್ಯವನ್ನು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು. ಆದರೆ ರಾಜಕುಮಾರ ವಿಲಿಯಂ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, "ವೇಲ್ಸ್ ನಗರದ ಜನರಿಗೆ ಸೇವೆ ಮಾಡುವ ಅಗಾಧವಾದ ಬಯಕೆಯನ್ನು ನಾನು ಹೊಂದಿದ್ದೇನೆ” ಎಂದು ಅದರ ಬಗ್ಗೆ ಮಾತನಾಡಿದ್ದಾರೆ.


ವಿಲಿಯಂ ಅವರನ್ನು ರಾಜನಾಗಿ ರದ್ದುಗೊಳಿಸಬೇಕೆಂಬ ಅಲ್ಲಿನ ಜನರ ಆಶಯ
ಈಗ ಕೂಡಲೇ ರಾಜಕುಮಾರ ಪಟ್ಟಾಭಿಷೇಕ ಆಗಲೇಬೇಕಿತ್ತಾ? ಅಷ್ಟೊಂದು ಅಗತ್ಯವೇನಿತ್ತು? ಇದು ಬಹುಶಃ ಪ್ರಾರಂಭಿಸಲು ಉತ್ತಮ ಮಾರ್ಗವಲ್ಲ ಎಂದು ಮಾಜಿ ಪ್ಲಾಯ್ಡ್ ಸಿಮ್ರು ನಾಯಕ ಲಾರ್ಡ್ ಎಲಿಸ್-ಥಾಮಸ್ ಅವರಂತಹ ಕೆಲವರು ರಾಜ ಚಾರ್ಲ್ಸ್‌ ಅವರ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: King Charles III: ರಾಣಿ ಎಲಿಜಬೆತ್ ಸಾವಿನ ಬೆನ್ನಲ್ಲೇ ಸದ್ದು ಮಾಡುತ್ತಿದೆ ರಾಜ ಚಾರ್ಲ್ಸ್ ಬಗೆಗಿನ ಈ ಭವಿಷ್ಯವಾಣಿ!


ಇದರ ನಂತರ ರಾಜಕುಮಾರ ವಿಲಿಯಂ ಅವರನ್ನು ರಾಜನಾಗಿ ರದ್ದುಗೊಳಿಸಬೇಕೆಂಬ ಅರ್ಜಿಯು ಪ್ರಾರಂಭವಾದ ಕೆಲವೇ ದಿನಗಳಲ್ಲಿ 25,000 ಸಹಿಗಳನ್ನು ಗಳಿಸಿದೆ. ಇದರ ಕುರಿತು ರಾಜಕೀಯ ವಿಮರ್ಶಕರು ಇದು ವೇಲ್ಸ್‌ ನಗರಕ್ಕೆ ಮತ್ತು ರಾಜಕುಮಾರ ವಿಲಿಯ್ಸಂಗೆ ಜನರು ನೀಡುತ್ತಿರುವ ಅಗೌರವವೆಂದು ಉಲ್ಲೇಖಿಸುತ್ತಾರೆ.


ಇದರಿಂದ ಅದು ವೇಲ್ಸ್‌ ನಗರದ ಸ್ಥಾನಮಾನವನ್ನು ತನ್ನದೇ ಆದ ರೀತಿಯಲ್ಲಿ ಒಂದು ದೇಶ ಮತ್ತು ರಾಷ್ಟ್ರವಾಗಿ ದುರ್ಬಲಗೊಳಿಸುತ್ತದೆ. ಕೆಲವರಿಗೆ, ಅದು ಮುಂದುವರಿದ ದೇಶವಾಗಿ ಗೋಚರವಾದರೂ ಸಹ, ವೇಲ್ಸ್‌ ನಗರಕ್ಕೆ ಸಿಕ್ಕಿರುವ ಒಂದು ಪ್ರಭುತ್ವವಾಗಿ ಸಂಬಂಧಿಸಿರುವ ಐತಿಹಾಸಿಕ ದಬ್ಬಾಳಿಕೆ ಮತ್ತು ಆ ದೇಶದ ಮೇಲಿರುವ ಇಂಗ್ಲಿಷ್ ಆಕ್ರಮಣವನ್ನು ಸಂಕೇತಿಸುತ್ತದೆ.


ಟೈವೈಸಾಗ್ ಸಿಮ್ರು ಅಥವಾ ಪ್ರಿನ್ಸ್ ಆಫ್ ವೇಲ್ಸ್
"ಟೈವೈಸಾಗ್ ಸಿಮ್ರು", ಅಥವಾ ಪ್ರಿನ್ಸ್ ಆಫ್ ವೇಲ್ಸ್, ಇದು ಮೂಲತಃ 12 ನೇ ಶತಮಾನದ ಪೂರ್ವದ ಸ್ಥಳೀಯ ವೆಲ್ಸ್‌ ನಗರದ ರಾಜರು ಮತ್ತು ರಾಜಕುಮಾರರು ಹೊಂದಿದ್ದ ಐತಿಹಾಸಿಕ ಹೆಸರಾಗಿದೆ. ಅವರು ಹೆಚ್ಚಾಗಿ ವಾಯುವ್ಯ ವೇಲ್ಸ್‌ನ ಗ್ವಿನೆಡ್‌ನಿಂದ ಆಳಿದರು. ವೇಲ್ಸ್‌ನ ವಿಜಯದ ನಂತರ (1277-1283), ಎಡ್ವರ್ಡ್ I ವೇಲ್ಸ್‌ನಲ್ಲಿ ಬ್ರಿಟನ್‌ ದೇಶದ ಕಿರೀಟದ ಸ್ಥಾನವನ್ನು ಕ್ರೋಢೀಕರಿಸಲು ಮುಂದಾದನು.


ಇದರ ನಂತರ ಅವನ ಮಗನನ್ನು ವೇಲ್ಸ್‌ನ ಮೊದಲ ಇಂಗ್ಲಿಷ್ ರಾಜಕುಮಾರ ಎಂದು ಘೋಷಿಸಿದನು. ಅಂದಿನಿಂದ ಈ ಹೆಸರನ್ನು ಇಂಗ್ಲಿಷ್ ಮತ್ತು ನಂತರ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಗೆ ನೀಡಲಾಯಿತು. ಅದರ ಜೊತೆಗೆ ಈ ಹೆಸರನ್ನು ಈ ವೇಲ್ಸ್‌ ನಗರದ ರಾಜರು ತಮ್ಮಷ್ಟಕ್ಕೆ ತಾವು ನೀಡುವುದಿಲ್ಲ.


ಜನರ ಅಭಿಪ್ರಾಯ ಸಂಗ್ರಹಿಸಿ ರಾಜನ ಆಯ್ಕೆ
ಜನರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಿ ನಂತರ ರಾಜರ ಸ್ಥಾನವನ್ನು ನೀಡುತ್ತಾರೆ. ಈಗ ರಾಜ ಚಾರ್ಲ್ಸ್‌ ವಿಲಿಯ್ಸಂ ಅನ್ನು ರಾಜನೆಂದು ಘೋಷಣೆ ಮಾಡಿದಷ್ಟು ಅವಸರ ಈ ಹಿಂದೆ ಯಾರು ಮಾಡಿಲ್ಲ ಎಂದು ಹೇಳುತ್ತಾರೆ.


ಉದಾಹರಣೆಗೆ, ರಾಣಿಯ ಆಳ್ವಿಕೆಯು ಪ್ರಾರಂಭವಾದ ಸುಮಾರು ಆರು ವರ್ಷಗಳ ನಂತರ 1958 ರಲ್ಲಿ ಚಾರ್ಲ್ಸ್‌ ಒಂಬತ್ತು ವರ್ಷದವನಾಗಿದ್ದಾಗ ಅವರನ್ನು ವೇಲ್ಸ್‌ ನಗರಕ್ಕೆ ರಾಜನೆಂದು ನಾಮಕರಣ ಮಾಡಲಾಯಿತು. ಮುಖ್ಯವಾಗಿ, ವೇಲ್ಸ್‌ನ ರಾಜಕುಮಾರನಾಗಿ ಚಾರ್ಲ್ಸ್‌ನ ನೇಮಕವು ಅಧಿಕಾರ ವಿಕೇಂದ್ರೀಕರಣದ ಪೂರ್ವ ದಿನಾಂಕ, 1998ರ ವೇಲ್ಸ್‌ ಸರ್ಕಾರದ ಅಂಗೀಕಾರ ಮತ್ತು ಅದರ ನಂತರದ ತಿದ್ದುಪಡಿಗಳು ಮತ್ತು ಸೆನೆಟ್ಟಿನ ರಚನೆ ಆದ ನಂತರ ಅಗಿದೆ.


ಇದನ್ನೂ ಓದಿ:  Queen Elizabeth II: ಯಾವೆಲ್ಲಾ ದೇಶದ ನಾಯಕರು ಭಾಗಿಯಾಗ್ತಾರೆ ರಾಣಿ ಅಂತ್ಯಕ್ರಿಯೆಯಲ್ಲಿ? ಇಲ್ಲಿದೆ ಮಾಹಿತಿ


ಈ ಬೆಳವಣಿಗೆಗಳ ಪರಿಣಾಮವಾಗಿ, ವೇಲ್ಸ್ ನಗರವು ಈಗ ಮಹತ್ವದ ರಾಜಕೀಯ ಸ್ವಾಯತ್ತತೆಯನ್ನು ಹೊಂದಿದೆ. ಈ ಟೀಕೆಗಳ ಬಗ್ಗೆ ನಿಸ್ಸಂದೇಹವಾಗಿ ಜಾಗೃತರಾದ ರಾಜಕುಮಾರ ವಿಲಿಯಂ ಅವರು ವೇಲ್ಸ್‌ಗೆ ಸೇವೆ ಸಲ್ಲಿಸುವುದು ಒಂದು "ಗೌರವ" ಎಂದು ಹೇಳಿಕೆ ನೀಡಿರುವುದು ಸ್ಪಷ್ಟವಾಗುತ್ತದೆ ಎಂದು ರಾಜಕೀಯ ವಿಮರ್ಶಕರು ಕಾಲೆಳೆದಿದ್ದಾರೆ.


ಆಧುನಿಕ ಯುಗದಲ್ಲಿ ವೇಲ್ಸ್‌ನ ರಾಜಕುಮಾರನ ನೇಮಕಾತಿಯನ್ನು ನಿಯಂತ್ರಿಸುವ ಯಾವುದೇ ಸಾಂವಿಧಾನಿಕ "ರೂಲ್‌ಬುಕ್" ಇಲ್ಲ. ಸಂಸತ್ತಿನಿಂದ ಶಾಸನಬದ್ಧವಾದ ಯಾವುದೇ ಔಪಚಾರಿಕ ಸಾರ್ವಜನಿಕ ಜವಾಬ್ದಾರಿಗಳನ್ನು ಕಚೇರಿಯು ಆದೇಶಿಸುವುದಿಲ್ಲ ಅಥವಾ ಕಾನೂನು ಅಥವಾ ಪದ್ಧತಿಯ ಮೂಲಕ ವಿಲಿಯಂಗೆ ನಿಯೋಜಿಸಲಾಗಿದೆ ಎಂದು ಕೂಡ ಹೇಳಲಾಗುವುದಿಲ್ಲ.


ರಾಜಕುಮಾರ ವಿಲಿಯಂ ಬಗ್ಗೆ ರಾಜಕೀಯ ವಿಮರ್ಶಕರು ಏನು ಹೇಳಿದ್ದಾರೆ 
ರಾಜಕುಮಾರ ವೀಲಿಯಂ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಗೆ ಕೇಂದ್ರಬಿಂದುವಾಗಿ ಸಾರ್ವಭೌಮನನ್ನು ಬೆಂಬಲಿಸುವ ಕನಿಷ್ಠ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. ಆದ್ದರಿಂದ ರಾಜಕುಮಾರ ವಿಲಿಯಂ ತಂದೆಗಿಂತ ಕೊಂಚ ಭಿನ್ನ ವ್ಯಕ್ತಿತ್ವವನ್ನು ಹೊಂದಿರುವುದರಿಂದ, ರಾಜಕೀಯ ನೀತಿ ನಿಯಮಗಳನ್ನು ಜಾಗೃತೆಯಿಂದ ಪಾಲಿಸಬಹುದು ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.


ವೇಲ್ಸ್‌ನ ಹೊಸ ರಾಜಕುಮಾರನಾಗಿ ವಿಲಿಯಂ ಸ್ವಲ್ಪ ವಿವೇಚನೆಯನ್ನು ಹೊಂದಿದ್ದಾನೆ. ಚಾರ್ಲ್ಸ್ ಅವರು ವಿಲಿಯಂ ಅವರ ಬಗ್ಗೆ ಕೆಲವು ಭರವಸೆಗಳನ್ನು ಹೊಂದಿದ್ದಾರೆ. ಉದಾಹರಣೆಗೆ ಅವರು ಇತರರ ಬಗ್ಗೆ ಮಾತನಾಡುವಾಗ ಹೆಚ್ಚು ಯೋಚಿಸಿ ಮಾತನಾಡುತ್ತಾರೆ. ಯಾವುದೇ ವಿಷಯ ಘಟಿಸಿದರೂ ಅದರಲ್ಲಿ ತಪ್ಪು ಯಾವುದು, ಸರಿ ಯಾವುದು? ಎಂಬುದರ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಾರೆ.


ಇದನ್ನೂ ಓದಿ:  Queen Elizabeth II: ರಾಣಿ ಎಲಿಜಬೆತ್‌ ದೀರ್ಘಾಯುಷ್ಯದ ಗುಟ್ಟು ಇಲ್ಲಿದೆ ನೋಡಿ


ವಿಲಿಯಂ ಅವರು ದೇಶದಲ್ಲಿ ಹೆಚ್ಚು ತಾಂಡವಾಡುತ್ತಿರುವ ಅಸಮಾನತೆಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಬೇಕೆಂದು ರಾಜ ಚಾರ್ಲ್ಸ ಬಯಸುತ್ತಾರೆ. ಅದರ ಜೊತೆಗೆ, ವಿಲಿಯಂ ಅವರು ರಾಜನಾಗಿ ನೇಮಕಾತಿ ಆದ ಕೂಡಲೇ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ದತ್ತಿಗಳ ಸಂಖ್ಯೆಯನ್ನು ಮರುಕಳಿಸುವ ಮತ್ತು ಸಿಬ್ಬಂದಿಗಳನ್ನು ಕಡಿಮೆ ಮಾಡುವ ಮೂಲಕ ಸುಧಾರಣೆ ತರುವ ಭರವಸೆಯ ಉದ್ದೇಶವನ್ನು ಈಗಾಗಲೇ ಸೂಚಿಸಿದ್ದಾರೆ.


ಒಟ್ಟಾರೆಯಾಗಿ ವೇಲ್ಸ್‌ ನಗರದ ಅಧಿಕೃತ ರಾಜಕುಮಾರನಾಗಿರುವ ವಿಲಿಯಂ ಗೆ ರಾಜನಾಗಿ ಅನೇಕ ಸವಾಲುಗಳು ಇರುವುದು ನಿಜ. ಅವುಗಳನ್ನು ಹೇಗೆ ಜಾಣ್ಮೆಯಿಂದ ನಿರ್ವಹಿಸುತ್ತಾರೋ ಮುಂದೆ ನೋಡಬೇಕಿದೆ.

top videos
    First published: