ಅಯ್ಯೋ ಪಾಪ ಕಳ್ಳ: ಕಳ್ಳತನದ ವಿಡಿಯೋ ನೋಡಿದವರು ಹೀಗೆ ಹೇಳುತ್ತಿರುವುದೇಕೆ?

ಆದರೆ ಆಕೆಯ ಬ್ಯಾಂಕ್ ಬ್ಯಾಲೆನ್ಸ್​ನಲ್ಲಿ ಯಾವುದೇ ಹಣವಿರಲಿಲ್ಲ. ಇದನ್ನು ನೋಡಿದ ಕಳ್ಳನ ಮನ ಕರಗಿಬಿಟ್ಟಿದೆ. ಅಷ್ಟೇ ಅಲ್ಲದೆ ತಾನು ಬೆದರಿಸಿ ಪಡೆದ 26 ಸಾವಿರ ರೂ. ಅನ್ನು ಮರಳಿಸಿ ನಗುತ್ತಾ ಕಾಲ್ಕಿತ್ತಿದ್ದಾನೆ.

zahir | news18
Updated:March 13, 2019, 6:03 PM IST
ಅಯ್ಯೋ ಪಾಪ ಕಳ್ಳ: ಕಳ್ಳತನದ ವಿಡಿಯೋ ನೋಡಿದವರು ಹೀಗೆ ಹೇಳುತ್ತಿರುವುದೇಕೆ?
ಕಳ್ಳ
  • News18
  • Last Updated: March 13, 2019, 6:03 PM IST
  • Share this:
ಆನೆ ಕದ್ದರೂ ಕಳ್ಳ, ಅಡಕೆ ಕದ್ದರೂ ಕಳ್ಳ ಎಂದು ನಾಣ್ಣುಡಿಯೊಂದಿದೆ. ಅಂದರೆ ಕಳ್ಳ ಕಳ್ಳನೇ. ಆದರೆ ಕಳ್ಳರಲ್ಲೂ ಮಾನವೀಯತೆ ಇದೆಯಾ ಎಂದು ಕೇಳಿದರೆ ಹಲವು ಉತ್ತರಗಳು ಬರಬಹುದು. ಆದರೆ ಚೀನಾದಲ್ಲಿ ನಡೆದಿರುವ ಕಳ್ಳನ ಸಹಾನುಭೂತಿಯನ್ನು ನೋಡಿದರೆ ಕಳ್ಳರಲ್ಲೂ ಒಳ್ಳೆಯವರಿದ್ದಾರಾ? ಎಂಬ ಪ್ರಶ್ನೆಯೊಂದು ನಿಮ್ಮಲ್ಲೂ ಮೂಡಬಹುದು.

ಹೆಯುವಾನ್ ನಗರದ ಎಟಿಎಂನಲ್ಲಿ ಕಳ್ಳತನಕ್ಕೆ ಪ್ಲಾನ್ ಹಾಕಿಕೊಂಡಿದ್ದ ಕಳ್ಳನೊಬ್ಬ ಮಹಿಳೆಯೊಬ್ಬರೊಂದಿಗೆ ವರ್ತಿಸಿದ ರೀತಿ ಈಗ ಭಾರೀ ವೈರಲ್ ಆಗಿದೆ. ಏಕೆಂದರೆ ಹಣ ದೋಚಲು ಎಟಿಎಂಗೆ ನುಗ್ಗಿದ್ದ ಕಳ್ಳ ಅಲ್ಲಿ ನಗದು ವಿತ್​ಡ್ರಾ ಮಾಡುತ್ತಿದ್ದ ಮಹಿಳೆಗೆ ಚೂರಿ ತೋರಿಸಿ ಬೆದರಿಸಿದ್ದನು. ಹೆದರಿದ ಮಹಿಳೆಯು ತನ್ನಲ್ಲಿದ್ದ 2500 ಯುವಾನ್( ಸುಮಾರು 26 ಸಾವಿರ) ಹಣವನ್ನು ಮರುಮಾತನಾಡದೇ ಕಳ್ಳನ ಕೈಗಿತ್ತಳು. ಇದರಿಂದ ತೃಪ್ತಿಯಾಗದ ಕಳ್ಳ ಆಕೆಗೆ ಮತ್ತಷ್ಟು ಹಣವನ್ನು ಡ್ರಾ ಮಾಡಲು ಹೇಳಿದ್ದಾನೆ.

ಆದರೆ ಆಕೆಯ ಬ್ಯಾಂಕ್ ಬ್ಯಾಲೆನ್ಸ್​ನಲ್ಲಿ ಯಾವುದೇ ಹಣವಿರಲಿಲ್ಲ. ಇದನ್ನು ನೋಡಿದ ಕಳ್ಳನ ಮನ ಕರಗಿಬಿಟ್ಟಿದೆ. ಅಷ್ಟೇ ಅಲ್ಲದೆ ತಾನು ಬೆದರಿಸಿ ಪಡೆದ 26 ಸಾವಿರ ರೂ. ಅನ್ನು ಮರಳಿಸಿ ನಗುತ್ತಾ ಕಾಲ್ಕಿತ್ತಿದ್ದಾನೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದನ್ನು ನೋಡಿದ ಹಲವರು ಕಳ್ಳನ ಔದಾರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ಕೆಲವರು ಅಯ್ಯೋ ಪಾಪ, ತುಂಬಾ ಒಳ್ಳೆಯ ಕಳ್ಳ ಎಂದು ಪ್ರತಿಕ್ರಿಯಿಸಿದ್ದಾರೆ.


ಆದರೆ ಏನು ಮಾಡುವುದು ಕಳ್ಳ ಏನಿದ್ದರೂ ಕಳ್ಳನೇ ಅಲ್ವಾ. ಹೀಗಾಗಿ ವಿಡಿಯೋ ಪರಿಶೀಲಿಸಿದ ಚೀನಾದ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಕಳ್ಳರಲ್ಲೂ ಮಾನವೀಯತೆ ಇದೆಯಾ ಎಂಬ ಪ್ರಶ್ನೆ ಮಾತ್ರ ವಿಡಿಯೋ ನೋಡಿದವರಲ್ಲಿ ಮೂಡುತ್ತಿರುವುದು ಸುಳ್ಳಲ್ಲ.

ಇದನ್ನೂ ಓದಿ: VIDEO: ಸರ್ಫ್​ ಎಕ್ಸೆಲ್​ ಜಾಹೀರಾತಿನಲ್ಲಿ ಲವ್​ ಜಿಹಾದ್?​ ಅಷ್ಟಕ್ಕೂ ಇದರಲ್ಲೇನಿದೆ?
First published:March 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading