• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Organ Donation: ಮೆದುಳು ನಿಷ್ಕ್ರಿಯಗೊಂಡು ವಿದೇಶಿ ಪ್ರವಾಸಿ ಮೃತ್ಯು; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

Organ Donation: ಮೆದುಳು ನಿಷ್ಕ್ರಿಯಗೊಂಡು ವಿದೇಶಿ ಪ್ರವಾಸಿ ಮೃತ್ಯು; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

ಅಂಗಾಂಗ ದಾನ

ಅಂಗಾಂಗ ದಾನ

ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಗ ತಿಳಿಸಿರುವಂತೆ ಮಹಿಳೆ ಜಾತಿ ಧರ್ಮ ಹಾಗೂ ರಾಷ್ಟ್ರೀಯತೆಯನ್ನು ಮೀರಿದ ಸ್ವಾರ್ಥರಹಿತ ತ್ಯಾಗಕ್ಕೆ ಮುಂದಾಗಿದ್ದು, ನಿಜಕ್ಕೂ ಇದು ಸಾರ್ಥಕ ಬದುಕಾಗಿದೆ ಎಂದು ಕೊಂಡಾಡಿದ್ದಾರೆ.

  • Trending Desk
  • 4-MIN READ
  • Last Updated :
  • Bangalore, India
  • Share this:

ದಾನಗಳಲ್ಲೇ ಅತ್ಯಂತ ಶ್ರೇಷ್ಟ ದಾನ ಅಂಗಾಂಗ ದಾನವಾಗಿದೆ. ಸಾವಿನ ನಂತರವೂ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಆಶಾಕಿರಣವಾಗುವುದು ಅಷ್ಟೊಂದು ನೀರಸವಾದ ವಿಷಯವಲ್ಲ. ಇದೀಗ 40 ರ ಹರೆಯದ ವಿದೇಶಿ ಪ್ರವಾಸಿಗರೊಬ್ಬರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಬ್ರೈನ್ ಹ್ಯಾಮರೇಜ್‌ನಿಂದ (Brain Hemorrhage) ಮೃತಪಟ್ಟಿದ್ದು, ತಮ್ಮ ಅಂಗಾಂಗ ದಾನ (Organ Donation) ಮಾಡುವ ಮೂಲಕ ಆರು ಜನರ ಪ್ರಾಣ ಉಳಿಸಿದ್ದಾರೆ.


ಬ್ರೈನ್ ಹ್ಯಾಮರೇಜ್‌ನಿಂದ ಮೃತಪಟ್ಟ ವಿದೇಶಿ ಪ್ರಜೆ


ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ ವಿದೇಶಿ ಪ್ರಜೆಯೊಬ್ಬರು ತಮ್ಮ 40 ರ ಹರೆಯದಲ್ಲಿ ಬ್ರೈನ್ ಹ್ಯಾಮರೇಜ್‌ನಿಂದ ಮರಣಹೊಂದಿದ್ದಾರೆ. ತಮ್ಮ ಮರಣದಲ್ಲೂ ಸಾರ್ಥಕತೆ ಮೆರೆದ ಈ ವಿದೇಶಿ ಪ್ರಜೆ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಆರು ಜನರ ಪ್ರಾಣ ಉಳಿಸಿದ್ದಾರೆ. ಅವರ ಹೆಸರು, ವಯಸ್ಸು ಹಾಗೂ ರಾಷ್ಟ್ರೀಯತೆ ಮೊದಲಾದ ವಿವರಗಳನ್ನು ಗೌಪ್ಯತೆಯ ಕಾರಣದಿಂದ ಬಹಿರಂಗಪಡಿಸಿಲ್ಲವಾದರೂ ಮಹಿಳೆ ಮತ್ತೊಬ್ಬರ ಜೀವನಕ್ಕೆ ದಾರಿದೀಪವಾಗಿದ್ದಾರೆ.


ದಾನಿಯ ಅಂಗಾಂಗಳನ್ನು ಅಗತ್ಯವಿರುವವರಿಗೆ ಒದಗಿಸುವ ಜವಾಬ್ದಾರಿ ತೆಗೆದುಕೊಂಡ ಸ್ಪರ್ಶ್ ಆಸ್ಪತ್ರೆ, ಆಕೆಯ ನಿಸ್ವಾರ್ಥ ಸೇವೆಗೆ ಮೆಚ್ಚುಗೆಯನ್ನು ಸೂಚಿಸಿದೆ.


ಇದನ್ನೂ ಓದಿ: Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!


ಅಂಗಾಂಗ ದಾನ ಮಾಡಿ ಮರಣದಲ್ಲೂ ಸಾರ್ಥಕತೆ ಮೆರೆದ ಪ್ರಜೆ


ಬೆಂಗಳೂರಿನ ಆರ್‌ಆರ್‌ನಗರದಲ್ಲಿರುವ ಸ್ಪರ್ಶ್ ಆಸ್ಪತ್ರೆಯು ಈ ಮಾಹಿತಿಯನ್ನು ಹಂಚಿಕೊಂಡಿದ್ದು ಪ್ರವಾಸಿಗರ ಕುಟುಂಬವು ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ, ಅವರ ಗುರುತನ್ನು ಗೌಪ್ಯತೆಯ ಕಾರಣಕ್ಕಾಗಿ ಬಹಿರಂಗಪಡಿಸಲಾಗಿಲ್ಲ ಎಂದು ತಿಳಿಸಿದೆ.


ಆಸ್ಪತ್ರೆಯ ಮೂಲಗಳ ಪ್ರಕಾರ ದಾನಿಯ ಯಕೃತ್ತು ಹಾಗೂ ಕಿಡ್ನಿಯನ್ನು ನಗರದ ಆರ್‌ ಆರ್ ಆಸ್ಪತ್ರೆಯಲ್ಲಿದ್ದ ಬೇರೆ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿಮಾಡಲಾಗಿದೆ ಎಂಬುದು ತಿಳಿದು ಬಂದಿದ್ದು ಇನ್ನೊಂದು ಕಿಡ್ನಿಯನ್ನು ಐಎನ್‌ಯು ಆಸ್ಪತ್ರೆಗೆ ರವಾನಿಸಲಾಗಿದೆ ಎಂಬುದು ತಿಳಿದು ಬಂದಿದೆ. ಆಕೆಯ ಹೃದಯ ಕವಾಟಗಳನ್ನು ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಗಿದ್ದು ಕಾರ್ನಿಯಾವನ್ನು ನಾರಾಯಣ ನೇತ್ರಾಲಯ ಹಾಗೂ ಚರ್ಮವನ್ನು ವಿಕ್ಟೋರಿಯಾ ಚರ್ಮ ಬ್ಯಾಂಕ್‌ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.


ಮಹಿಳೆಯ ಕುಟುಂಬದ ನಿರ್ಧಾರಕ್ಕೆ ಚಿರಋಣಿ


ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಗ ತಿಳಿಸಿರುವಂತೆ ಮಹಿಳೆ ಜಾತಿ ಧರ್ಮ ಹಾಗೂ ರಾಷ್ಟ್ರೀಯತೆಯನ್ನು ಮೀರಿದ ಸ್ವಾರ್ಥರಹಿತ ತ್ಯಾಗಕ್ಕೆ ಮುಂದಾಗಿದ್ದು, ನಿಜಕ್ಕೂ ಇದು ಸಾರ್ಥಕ ಬದುಕಾಗಿದೆ ಎಂದು ಕೊಂಡಾಡಿದ್ದಾರೆ. ಆಕೆಗೆ ಹಾಗೂ ಆಕೆಯ ಕುಟುಂಬಕ್ಕೆ ನಾವು ಚಿರಋಣಿಗಳು ಹಾಗೂ ಅವರ ಈ ನಿಸ್ವಾರ್ಥ ಸೇವೆಗೆ ನಾವು ಗೌರವ ಸಲ್ಲಿಸುತ್ತಿದ್ದೇವೆವೆ ಎಂದು ಜೋಸೆಫ್ ತಿಳಿಸಿದ್ದಾರೆ. ಇವರ ಈ ತ್ಯಾಗವು ಸಮಾಜಕ್ಕೆ ಒಂದು ಮಾದರಿಯಾಗಿದ್ದು ಇದರಿಂದ ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದುಬರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Canada: ನಕಲಿ ಕಾಲೇಜು ಪ್ರವೇಶ ಪತ್ರ ಪಡೆದ ಪ್ರಕರಣ; ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಮುಂದಾದ ಕೆನಡಾ!


ಕುಟುಂಬದ ನಿರ್ಧಾರವನ್ನು ಶ್ಲಾಘಿಸಿದ ಸ್ಪರ್ಶ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಘ, ಅಂಗಾಂಗಗಳ ದಾನವು ಜೀವನವನ್ನು ಬದಲಾಯಿಸಬಹುದು ಮತ್ತು ಹಲವಾರು ವ್ಯಕ್ತಿಗಳ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆಕೆಯ ಕಾರ್ಯವು ನಿಸ್ವಾರ್ಥತೆಯ ಪ್ರತೀಕವಾಗಿದ್ದು ಇದು ಜಾತಿ, ಮತ, ಧರ್ಮ ಹಾಗೂ ಗಡಿಗಳ ಸರಹದ್ದುಗಳನ್ನು ಮೀರಿದೆ ಎಂದು ಕೊಂಡಾಡಿದ್ದಾರೆ.


ಮಹಿಳೆಯ ಕುಟುಂಬದಿಂದ ಲಿಖಿತ ಒಪ್ಪಿಗೆ


ಪ್ರೋಟೋಕಾಲ್ ಪ್ರಕಾರ, ಕರ್ನಾಟಕದಲ್ಲಿ ಶವಗಳ ಅಂಗಾಂಗ ದಾನವನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಂಸ್ಥೆಯಾದ SOTTO (ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ) ಅಧಿಕಾರಿಗಳು ಮಹಿಳೆಯ ಕುಟುಂಬದಿಂದ ಲಿಖಿತ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಅಂಗಾಂಗ ಸ್ವೀಕರಿಸುವವರ ವೇಟಿಂಗ್ ಲಿಸ್ಟ್ ಪ್ರಕಾರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

top videos
    First published: