• Home
  • »
  • News
  • »
  • national-international
  • »
  • Kim Jong Un Daughter: ಮೊಟ್ಟಮೊದಲ ಬಾರಿಗೆ ಮಗಳ ಮುಖ ಬಹಿರಂಗಪಡಿಸಿದ ಉತ್ತರ ಕೊರಿಯಾದ ಅಧ್ಯಕ್ಷ!

Kim Jong Un Daughter: ಮೊಟ್ಟಮೊದಲ ಬಾರಿಗೆ ಮಗಳ ಮುಖ ಬಹಿರಂಗಪಡಿಸಿದ ಉತ್ತರ ಕೊರಿಯಾದ ಅಧ್ಯಕ್ಷ!

ಮಗಳ ಜೊತೆ ಕಿಮ್ ಜೊಂಗ್ ಉನ್

ಮಗಳ ಜೊತೆ ಕಿಮ್ ಜೊಂಗ್ ಉನ್

ಕಿಮ್ ಮಗಳಿಗೆ‌ ಸುಮಾರು 12-13 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರದ ಉಡಾವಣೆಯಲ್ಲಿ ಕಿಮ್ ಅವರ ಪತ್ನಿ ರಿ ಸೋಲ್ ಜು ಕೂಡ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

  • Share this:

ಸಿಯೋಲ್: ತನ್ನ ವೈಯಕ್ತಿಕ ಬದುಕನ್ನು ಮತ್ತು ಪತ್ನಿ ಮತ್ತು ಮಕ್ಕಳ ಬಗ್ಗೆ ಎಲ್ಲೂ ಸಹ ಪ್ರಸ್ತಾಪಿಸದ ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜೊಂಗ್ ಉನ್ (Kim Jong Un) ಮೊದಲ ಬಾರಿಗೆ ತನ್ನ ಮಗಳ ಮುಖ ದರ್ಶನವನ್ನು ಜಗತ್ತಿಗೆ ಮಾಡಿಸಿದ್ದಾರೆ. ಪರಮಾಣು ಸಶಸ್ತ್ರ ದೇಶದ ಅತಿದೊಡ್ಡ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯ ಹಿಂದಿನ ದಿನ ಅಪ್ಪ-ಮಗಳು (Farher And Daugher) ಒಟ್ಟಿಗೆ ಕ್ಷಿಪಣಿಯನ್ನು ಪರಿಶೀಲಿಸಿದ್ದಾರೆ.ತಂದೆ ಮತ್ತು ಮಗಳು ಕೈ-ಕೈ ಹಿಡಿದು ಒಟ್ಟಿಗೆ ಇರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದೆ.


ಕ್ಷಿಪಣಿ ಪರಿಶೀಲನೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಪ್ಪ-ಮಗಳು
ಉತ್ತರ ಕೊರಿಯಾ ಶುಕ್ರವಾರ ಹ್ವಾಸಾಂಗ್-17 ಖಂಡಾಂತರ ಕ್ಷಿಪಣಿ (ICBM) ಪರೀಕ್ಷೆ ನಡೆಸಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ KCNA ಶನಿವಾರ ವರದಿ ಮಾಡಿದೆ. ಎಂದೂ ಸಹ ಸಾರ್ವಜನಿಕವಾಗಿ ಪರಿಚಯಿಸದ ಕಿಮ್ ಜೊಂಗ್ ಉನ್ ಇದೇ ಮೊದಲ ಬಾರಿಗೆ ಮಗಳನ್ನು ಹೊರ ಕರೆತಂದಿದ್ದಾರೆ. ಕ್ಷಿಪಣಿ ಪರೀಶಿಲನೆಯಲ್ಲಿ ಕಿಮ್‌ ಮಗಳ ಉಪಸ್ಥಿತಿ ನೋಡಿ ಕೆಲವರಂತೂ ಆಶ್ಚರ್ಯಚಕಿತರಾಗಿದ್ದಾರೆ.


ಉತ್ತರ ಕೊರಿಯಾ ಶುಕ್ರವಾರ ಹ್ವಾಸಾಂಗ್-17 ICBM ಎಂಬ ಕ್ಷಿಪಣಿಯನ್ನು ಉಡಾವಣೆ ಮಾಡಿದೆ. ಕ್ಷಿಪಣಿಯು ಮೇಲಂತಸ್ತಿನ ಪಥದಲ್ಲಿ 1,000km (622 ಮೈಲುಗಳು) ಪ್ರಯಾಣಿಸಿತು ಮತ್ತು ಹೊಕ್ಕೈಡೋದ ಉತ್ತರ ಪ್ರಾಂತ್ಯದ ಒಶಿಮಾ-ಓಶಿಮಾ ದ್ವೀಪದ ಪಶ್ಚಿಮಕ್ಕೆ 200km (124 ಮೈಲುಗಳು) ಇಳಿಯಿತು ಎಂದು ಜಪಾನಿನ ಅಧಿಕಾರಿಗಳು ತಿಳಿಸಿದ್ದಾರೆ.


ಹೆಸರನ್ನು ಬಹಿರಂಗಪಡಿಸದ ವರದಿಗಳು
ಉತ್ತರ ಕೋರಿಯಾದ ಸುದ್ದಿ ಸಂಸ್ಥೆ KCNA, ಅಧ್ಯಕ್ಷರ ಮಗಳ ಫೋಟೋವನ್ನು ಮಾತ್ರ ಬಹಿರಂಗಪಡಿಸಿದ್ದು, ಬಾಲಕಿಯ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ಬಿಳಿ ಪಫಿ ಕೋಟ್‌ನಲ್ಲಿ ತಮ್ಮ ತಂದೆಯೊಂದಿಗೆ ಕೈ ಹಿಡಿದುಕೊಂಡು ಬೃಹತ್ ಕ್ಷಿಪಣಿಯನ್ನು ನೋಡುತ್ತಿರುವ ಫೋಟೋಗಳು ಈಗ ಸಾಕಷ್ಟು ವೈರಲ್‌ ಆಗುತ್ತಿದ್ದು, ಮಗಳ ಫೋಟೋವನ್ನು ರಿವೀಲ್‌ ಮಾಡಿರುವುದರ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.


"ಸಾರ್ವಜನಿಕವಾಗಿ ಕಿಮ್ ಮಗಳನ್ನು ಇದೇ ಮೊದಲು ನೋಡಿದ್ದು"
ಇದೇ ಮೊದಲ ಬಾರಿಗೆ ಕಿಮ್‌ ಮಗಳನ್ನು ಸಾರ್ವಜನಿಕ ಸಭೆಯಲ್ಲಿ ನೋಡಿದ್ದಾಗಿ ಕೆಲವರು ಹೇಳಿದ್ದಾರೆ. "ನಾವು ಸಾರ್ವಜನಿಕ ಸಮಾರಂಭದಲ್ಲಿ ಕಿಮ್ ಜಾಂಗ್ ಉನ್ ಅವರ ಮಗಳನ್ನು ಇದೇ ಮೊದಲು ನೋಡಿದ್ದು" ಎಂದು ಯುಎಸ್ ಮೂಲದ ಉತ್ತರ ಕೊರಿಯಾದ ಸ್ಟಿಮ್ಸನ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕೆಲ್ ಮ್ಯಾಡೆನ್ ತಿಳಿಸಿದ್ದಾರೆ. ಇದು ನಿಜಕ್ಕೂ ಮಹತ್ವದ್ದಾಗಿದೆ ಮತ್ತು ಕಿಮ್ ಜಾಂಗ್ ಉನ್ ಅವರ ಕಡೆಯಿಂದ ಒಂದು ನಿರ್ದಿಷ್ಟ ಮಟ್ಟದ ಸೌಕರ್ಯವನ್ನು ಪ್ರತಿನಿಧಿಸುತ್ತದೆ. ಇವರ ಈ ನಡೆಗಳು ಸಾರ್ವಜನಿಕವಾಗಿ ಮುಕ್ತರಾಗಿರಲು ಸಹಾಯ ಮಾಡುತ್ತದೆ ಎಂದಿದ್ದಾರೆ.


ಕಿಮ್‌ಗೆ ಮೂವರು ಮಕ್ಕಳು
ಇನ್ನೂ ಉತ್ತರ ಕೋರಿಯಾ ಅಧ್ಯಕ್ಷ ಕಿಮ್‌ಗೆ ಮೂವರು ಮಕ್ಕಳಿದ್ದಾರೆ, ಎರಡು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೆಲವರು ಮೂರು ಮಕ್ಕಳಲ್ಲಿ ಒಬ್ಬರನ್ನು ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ರಜಾದಿನದ ಆಚರಣೆಗಳಲ್ಲಿ ನೋಡಿದ್ದಾಗಿ ಹೇಳಿದ್ದಾರೆ.


ಇದನ್ನೂ ಓದಿ: Telangana: 100 ಕೋಟಿ ರೂಗೆ ಶಾಸಕರ ಖರೀದಿಗೆ ಯತ್ನ: ಬಿಜೆಪಿ ಮುಖಂಡ ಬಿಎಲ್ ಸಂತೋಷ್​ಗೆ ಸಂಕಷ್ಟ!


2013 ರಲ್ಲಿ ನಿವೃತ್ತ ಅಮೇರಿಕನ್ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್ ಕಿಮ್‌ಗೆ ಜು ಏ ಎಂಬ ಮಗಳು ಇದ್ದಾಳೆ ಎಂದು ಬಹಿರಂಗಪಡಿಸಿದ್ದರು. "ಆ ವರ್ಷ ಉತ್ತರ ಕೊರಿಯಾ ಪ್ರವಾಸದ ನಂತರ, ರಾಡ್‌ಮನ್ ಅವರು ದಿ ಗಾರ್ಡಿಯನ್ ಪತ್ರಿಕೆಗೆ ಕಿಮ್ ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆದುದ್ದಾಗಿ ಮತ್ತು ಮಕ್ಕಳನ್ನು ಎತ್ತಿಕೊಂಡಿದ್ದಾಗಿ ತಿಳಿಸಿದ್ದರು. ಜೊತೆಗೆ ಉತ್ತರ ಕೊರಿಯಾದ ನಾಯಕ "ಒಳ್ಳೆಯ ತಂದೆ" ಎಂದು ರಾಡ್ಮನ್ ಆ ಸಮಯದಲ್ಲಿ ಹೇಳಿದರು.


ಇದು ಮುಂದಿನ ಉತ್ತರಾಧಿಕಾರಿಯ ಸುಳಿವೇ?
ಕಿಮ್ ಮಗಳಿಗೆ‌ ಸುಮಾರು 12-13 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರದ ಉಡಾವಣೆಯಲ್ಲಿ ಕಿಮ್ ಅವರ ಪತ್ನಿ ರಿ ಸೋಲ್ ಜು ಕೂಡ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಕೆಲವರು ಕಿಮ್‌ ಮತ್ತು ಮಗಳನ್ನು ಒಟ್ಟಿಗೆ ನೋಡಿ ಒಂದು ರೀತಿಯಲ್ಲಿ, ಇದು ಕಿಮ್ ಮುಂದಿನ ಪೀಳಿಗೆಗೆ ಆಡಳಿತದ ರಾಜದಂಡವನ್ನು ರವಾನಿಸುವ ಸಾಂಕೇತಿಕ ಚಿತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: Hindu-Muslim Love Story: ಹಿಂದೂ ಹುಡುಗನ ಪ್ರೀತಿಸಿ, ಮದ್ವೆಯಾದ ಮುಸ್ಲಿಂ ಯುವತಿ! ಸನಾತನ ಧರ್ಮ ಸ್ವೀಕರಿಸಿದವಳಿಗೆ ಸಂತರ ಆಶೀರ್ವಾದ


ಉತ್ತರ ಕೊರಿಯಾದ ಸಂಸ್ಥಾಪಕ ನಾಯಕ ಕಿಮ್ ಇಲ್ ಸುಂಗ್ ಅವರ ಮೊಮ್ಮಗ ಮತ್ತು ದೇಶವನ್ನು ಮುನ್ನಡೆಸಲು ಕಿಮ್ ಕುಟುಂಬದ ಮೂರನೇ ತಲೆಮಾರಿನ ಕಿಮ್ - 2009 ರಲ್ಲಿ ಸಿಯೋಲ್‌ನ ಬೇಹುಗಾರಿಕಾ ಸಂಸ್ಥೆಯ ವರದಿ ಪ್ರಕಾರ ರಿ ಸೋಲ್ ಜು ಅವರನ್ನು ವಿವಾಹವಾಗಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: