ಈಗಾಗಲೇ ಕೋವಿಡ್(Covid)ನಿಂದ ತತ್ತರಿಸಿರುವ ಉತ್ತರ ಕೊರಿಯಾ(North Korea)ಗೆ ಇತ್ತೀಚೆಗೆ ಸುರಿದ ಭಾರಿ ಮಳೆಯು(Heavy Rainfall) ದೊಡ್ಡ ಹೊಡೆತ ನೀಡಿದೆ. ಅತಿವೃಷ್ಟಿಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಆಹಾರ(Food) ಬಿಕ್ಕಟ್ಟಿಗೆ ಕಾರಣವಾಗಿದೆ. ಹೀಗಾಗಿ 2025ರವರೆಗೆ ಅಂದರೆ ಮುಂದಿನ ನಾಲ್ಕು ವರ್ಷದವರೆಗೆ ಜನರು ಕಡಿಮೆ ಆಹಾರ ಸೇವಿಸುವಂತೆ(Eat less) ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim jong un) ಮನವಿ ಮಾಡಿಕೊಂಡಿದ್ದಾರೆ. ಹಣಕಾಸಿನ ಕೊರತೆಯಿಂದಾಗಿ ಹೊರ ದೇಶಗಳಿಂದಲೂ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಜನರು ಸಹಕರಿಸಿ 2025ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು ಹಾಗೂ ಅನವಶ್ಯಕವಾಗಿ ಊಟವನ್ನಯ ವೇಸ್ಟ್ ಮಾಡಬೇಡಿ. ನಿಮ್ಮ ಹೊಟ್ಟೆಗೆ ಎಷ್ಟು ಬೇಕೋ ಅಷ್ಟೇ ತಿನ್ನಿ ಎಂದು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಕೇಳಿಕೊಂಡಿದ್ದಾರೆ.
ಆಹಾರ ಹಾಹಾಕಾರಕ್ಕೆ ಕಾರಣವೇನು?
ಹಣಕಾಸಿನ ಕೊರತೆಯಿಂದ ಉತ್ತರ ಕೊರಿಯಾಗೆ ಹೊರ ದೇಶಗಳಿಂದ ಆಹಾರ ಸಾಮಾಗ್ರಿಗ ಪೂರೈಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಅಧಿಕಾರಿಗಳು ಕೃಷಿ ಉತ್ಪಾದನೆಯನ್ನು ಹೆಚ್ಚಳ ಮಾಡುವ ಮಾರ್ಗವನ್ನು ಕಂಡುಹಿಡಿಯಬೇಕು ಎಂದು ಕಿಮ್ ಹೇಳಿದ್ದಾರೆ. 2025ರೊಳಗೆ ಚೀನಾ ಜೊತೆಗಿನ ಗಡಿಯನ್ನು ಪುನಾರಂಭಿಸುವವರೆಗೆ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂದು ಕಿಮ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಉತ್ತರ ಕೊರಿಯಾದಲ್ಲಿ ಆಹಾರ ಕೊರತೆ ಎದುರಾಗಿದೆ. ಜನ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಇದನ್ನು ಓದಿ :
ತೂಕ ಇಳಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ - ಹುಟ್ಟಿಕೊಂಡ ಹಲವಾರು ಪ್ರಶ್ನೆಗಳು
ಚೀನಾ ಜೊತೆ ಹೊಂದಿದ್ದ ಗಡಿ ಬಂದಾಗಿದ್ದೇ ಸಮಸ್ಯೆ
ಕ್ರೂರಿ ಕೊರೋನಾ ಇಡೀ ವಿಶ್ವವನ್ನು ನಡುಗಿಸಿಬಿಟ್ಟಿತ್ತು. ಎಲ್ಲಾ ದೇಶಗಳು ಕೊರೋನಾ ಅಬ್ಬರಕ್ಕೆ ಸಿಲುಕಿ ಪರದಾಡಿತ್ತು. ಆದರೆ ಉತ್ತರ ಕೊರಿಯಾದಲ್ಲಿ ಬೆರಳಿಕೆಯಷ್ಟು ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿತ್ತು. ಇದಕ್ಕೆ ಕಾರಣ ಉತ್ತರ ಕೊರಿಯಾ ಚೀನಾ ಜೊತೆ ಹಂಚಿಕೊಂಡಿದ್ದ ಗಡಿಯನ್ನು ಮುಚ್ಚಿತ್ತು. ಆದರೆ ಈ ನಿರ್ಧಾರದಿಂದ ಉತ್ತರ ಕೊರಿಯಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತೆ ಎಂಬುದು ಕಿಮ್ಗೆ ಗೊತ್ತಿರಲಿಲ್ಲ. ದಿನ ಕಳೆದಂತೆ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಉತ್ತರ ಕೊರಿಯಾದಲ್ಲಿ ಸಕ್ಕರೆ, ಸೋಯಾಬೀನ್ ಎಣ್ಣೆ ಮತ್ತು ಹಿಟ್ಟಿನ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಜೂನ್ 2021ರಿಂದ ಉತ್ತರ ಕೊರಿಯಾದಲ್ಲಿ ಬೆಲೆಗಳು ಹೆಚ್ಚಾಗಲಾರಂಭಿಸಿದ್ದವು.
ಇದನ್ನು ಓದಿ :
ಸರ್ವಾಧಿಕಾರಿ ಕಿಮ್ ಜಾಂಗ್ ಉತ್ತರ ಕೊರಿಯಾದಲ್ಲಿ ಜೀನ್ಸ್, ವಿದೇಶಿ ಸಿನಿಮಾಗಳನ್ನು ನಿಷೇಧಿಸಿದ್ದೇಕೆ?
ಕೇವಲ 2 ತಿಂಗಳ ಆಹಾರ ಮಾತ್ರ ಉಳಿದಿದೆ.
ಇನ್ನು ಉತ್ತರ ಕೊರಿಯಾದಲ್ಲಿ ಹಲವು ವರ್ಷಗಳಿಂದ ಆಹಾರ ಬಿಕ್ಕಟ್ಟು ಸಮಸ್ಯೆಯಿದೆ. ಆದರೆ ಈ ಬಾರಿಯಾಗಿರು ವ ಸಮಸ್ಯೆ ದೇಶಕ್ಕೆ ಹೆಚ್ಚು ಪೆಟ್ಟು ನೀಡುತ್ತಿದ್ದು, ಉತ್ತರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಇಂಗ್ಲೀಷ್ ಮಾಧ್ಯಮವೊಂದರ ವರದಿ ಪ್ರಕಾರ, ಇಡೀ ದೇಶದಲ್ಲಿ ಕೇವಲ 2 ತಿಂಗಳ ಆಹಾರ ಮಾತ್ರ ಉಳಿದಿದೆಯಂತೆ. ಇದು ಸತ್ಯ ಎಂದು ಸ್ವತಃ ಕಿಮ್ ಜಾಂಗ್ ಉನ್ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಮಹಾಮಾರಿ ರೋಗ ಪ್ರಾರಂಭವಾದಾಗಿನಿಂದಲೂ ಚೀನಾದಿಂದ ಉತ್ತರ ಕೊರಿಯಾಕ್ಕೆ ಆಹಾರ ರಫ್ತು ಶೇಕಡಾ 80 ರಷ್ಟು ಕಡಿಮೆಯಾಗಿದೆ. ಕೇವಲ 2 ರಿಂದ 3 ತಿಂಗಳವರೆಗೆ ಅಗತ್ಯವಿರುವ ಆಹಾರ ಪದಾರ್ಥಗಳ ಬಿಕ್ಕಟ್ಟು ಎದುರಾಗಿದೆ. ಇದು ಸರಿ ಹೋಗದಿದ್ದರೆ ಈ ತಿಂಗಳ ಅಂತ್ಯದ ವೇಳೆಗೆ ಉತ್ತರ ಕೊರಿಯಾ ಮಂದಿ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ