HOME » NEWS » National-international » KIM JONG UN APOLOGISES TO NORTH KOREA WITH TEARS TWITTER WONDERS IF THIS IS END OF THE WORLD MAK

ಉತ್ತರ ಕೊರಿಯಾ ಜನರ ಬಳಿ ಮೊದಲ ಬಾರಿ ಕಣ್ಣೀರಿಡುತ್ತಾ ಕ್ಷಮೆ ಕೇಳಿದ ಅಧ್ಯಕ್ಷ ಕಿಮ್ ಜಾಂಗ್ ಉನ್; ಕಾರಣವೇನು ಗೊತ್ತಾ?

ಕೊರೋನಾ ವೈರಸ್ ವಿರೋಧಿ ಕ್ರಮಗಳು, ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ಹಲವು ಚಂಡಮಾರುತಗಳ ಪರಿಣಾಮವು ನಾಗರಿಕರ ಜೀವನವನ್ನು ಸುಧಾರಿಸುವ ಭರವಸೆಗಳನ್ನು ಈಡೇರಿಸದಂತೆ ಸರ್ಕಾರವನ್ನು ತಡೆಯುತ್ತಿದೆ ಎಂದು ಕಿಮ್ ಹೇಳಿದ್ದಾರೆ.

news18-kannada
Updated:October 14, 2020, 9:46 AM IST
ಉತ್ತರ ಕೊರಿಯಾ ಜನರ ಬಳಿ ಮೊದಲ ಬಾರಿ ಕಣ್ಣೀರಿಡುತ್ತಾ ಕ್ಷಮೆ ಕೇಳಿದ ಅಧ್ಯಕ್ಷ ಕಿಮ್ ಜಾಂಗ್ ಉನ್; ಕಾರಣವೇನು ಗೊತ್ತಾ?
ಕಿಮ್ ಜಾಂಗ್ ಉನ್.
  • Share this:
ಕೊರಿಯಾ: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮೊದಲ ಬಾರಿಗೆ ತಮ್ಮ ದೇಶದ ಜನರ ಎದುರು ಸಾರ್ವಜನಿಕವಾಗಿ ಕ್ಷಮೆ ಕೇಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ. ಅಲ್ಲದೆ, ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ವಾರಾಂತ್ಯದಲ್ಲಿ ನಡೆದ ಮಿಲಿಟರಿ ಪೆರೇಡ್‌ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿರುವ ಕಿಮ್​ ಜಾಂಗ್ ಉನ್, "ಉತ್ತರ ಕೊರಿಯಾದ ನಾಗರೀಕರ ಜೀವನವನ್ನು ಸುಧಾರಿಸುವಲ್ಲಿ ಮತ್ತು ಕೊರೊನಾ ನಿರ್ವಹಣೆಯಲ್ಲಿ ನಾನು ವಿಫಲನಾಗಿದ್ದೇನೆ. ಆದರೂ ಈ ದೇಶದ ಜನ ನನ್ನನ್ನು ನಂಬಿದ್ದಾರೆ ಎಂದು ಕಣ್ಣೀರು ಸುರಿಸಿದ್ದಾರೆ. ಅಲ್ಲದೆ, ಕೊರೋನಾ ಸಂದರ್ಭದಲ್ಲಿ ಸೈನಿಕರ ತ್ಯಾಗಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ಕಣ್ಣೀರಿಡುತ್ತಾ ನಾಗರೀಕರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಶನಿವಾರ, ಆಡಳಿತಾರೂಢ ಕಾರ್ಮಿಕರ ಪಕ್ಷ ಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ, ಇತ್ತೀಚೆಗೆ ಎದುರಾಗಿದ್ದ ವಿಕೋಪಕ್ಕೆ ಸ್ಪಂದಿಸಿದ್ದಕ್ಕಾಗಿ ಮತ್ತು ದೇಶದಲ್ಲಿ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಸಹಾಯ ಮಾಡಿದ್ದಕ್ಕಾಗಿ ಸಾವಿರಾರು ಸೈನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲಿನ ದೂರದರ್ಶನ ಕೇಂದ್ರವು ಬಿಡುಗಡೆ ಮಾಡಿದ ವೀಡಿಯೊ ತುಣುಕಿನಲ್ಲಿ ಕಿಮ್ ಕಣ್ಣೀರು ಹಾಕುತ್ತಿದ್ದರು.ಕೊರೋನಾ ವೈರಸ್ ವಿರೋಧಿ ಕ್ರಮಗಳು, ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ಹಲವು ಚಂಡಮಾರುತಗಳ ಪರಿಣಾಮವು ನಾಗರಿಕರ ಜೀವನವನ್ನು ಸುಧಾರಿಸುವ ಭರವಸೆಗಳನ್ನು ಈಡೇರಿಸದಂತೆ ಸರ್ಕಾರವನ್ನು ತಡೆಯುತ್ತಿದೆ ಎಂದು ಕಿಮ್ ಹೇಳಿದರು.

ಇದನ್ನೂ ಓದಿ : EPFO: ಗ್ರಾಹಕರ ಅನುಕೂಲಕ್ಕಾಗಿ ವಾಟ್ಸಾಪ್ ಸಹಾಯವಾಣಿ ಆರಂಭಿಸಿದ ನಿವೃತ್ತಿ ನಿಧಿ ಸಂಸ್ಥೆ

"ನಮ್ಮ ಜನರ ಕಷ್ಟಗಳನ್ನು ನಿವಾರಿಸಲು ನನ್ನ ಪ್ರಯತ್ನಗಳು ಮತ್ತು ಪ್ರಾಮಾಣಿಕತೆ ಸಾಕಾಗಲಿಲ್ಲ. ಆದರೂ ನನ್ನ ಜನರು ಯಾವಾಗಲೂ ನನ್ನ ಕೈಬಿಟ್ಟಿಲ್ಲ. ನನ್ನನ್ನು ಸಂಪೂರ್ಣವಾಗಿ ನಂಬಿದ್ದಾರೆ. ನನ್ನ ಅಯ್ಕೆ ಮತ್ತು ದೃಢನಿರ್ಧಾರವನ್ನು ಬೆಂಬಲಿಸಿದ್ದಾರೆ” ಎಂದು ಹೇಳಿದರು.
ಈಗಾಗಲೇ ತನ್ನ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ವಿಧಿಸಿರುವ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಉತ್ತರ ಕೊರಿಯಾದ ಆರ್ಥಿಕತೆಯು ತೀವ್ರವಾಗಿ ಸ್ಥಗಿತಗೊಂಡಿದೆ. ಕೊರೊನಾ ವೈರಸ್ ಅನ್ನು ತಡೆಗಟ್ಟುವ ಪ್ರಯತ್ನದಲ್ಲಿ ದೇಶವು ಎಲ್ಲಾ ಗಡಿ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಇದಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ.

ಅದರೆ, ಸಾರ್ವಜನಿಕವಾಗಿ ಮೊದಲ ಬಾರಿಗೆ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ತನ್ನ ದೇಶದ ಜನರ ಬಳಿ ಕ್ಷಮೆ ಕೋರಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಅನೇಕರು ಟ್ವಿಟರ್​ನಲ್ಲಿ ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
Published by: MAshok Kumar
First published: October 14, 2020, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories