• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Controversy: ಇಂದಿರಾ, ರಾಜೀವ್ ಸಾವು ಅಪಘಾತವಷ್ಟೇ, ಅವರನ್ನು ಹುತಾತ್ಮ ಎನ್ನಲಾಗುವುದಿಲ್ಲ! ಬಿಜೆಪಿ ಸಚಿವನಿಂದ ವಿವಾದಾತ್ಮಕ ಹೇಳಿಕೆ

Controversy: ಇಂದಿರಾ, ರಾಜೀವ್ ಸಾವು ಅಪಘಾತವಷ್ಟೇ, ಅವರನ್ನು ಹುತಾತ್ಮ ಎನ್ನಲಾಗುವುದಿಲ್ಲ! ಬಿಜೆಪಿ ಸಚಿವನಿಂದ ವಿವಾದಾತ್ಮಕ ಹೇಳಿಕೆ

ಇಂದಿರಾ ಗಾಂಧಿ-ರಾಜೀವ್ ಗಾಂಧಿ

ಇಂದಿರಾ ಗಾಂಧಿ-ರಾಜೀವ್ ಗಾಂಧಿ

ಚಂದ್ರಶೇಖರ್​ ಅಜಾದ್​, ರಾಮ್​ ಪ್ರಸಾದ್​ ಬಿಸ್ಮಿಲ್ ಹಾಗೂ ಅಂತಹ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ಬೇಡಿಕೆಗಳನ್ನು ಒಪ್ಪಿಕೊಳ್ಳದೆ ಅವರು ನೀಡಿದ ಶಿಕ್ಷೆಯನ್ನು ಅನುಭವಿಸಿ ಪ್ರಾಣ ಬಿಟ್ಟಿದ್ದಾರೆ, ಅವರನ್ನು ಹುತಾತ್ಮರು ಎನ್ನಬಹುದು. ಯಾರಿಂದಲಾದರೂ ಕೆಟ್ಟ ಘಟನೆ ನಡೆದರೆ, ಅದರಲ್ಲಿ ಸಾವನ್ನಪ್ಪಿದರೆ ಅದನ್ನು ಅಪಘಾತ ಎಂದು ಕರೆಯಲಾಗುತ್ತದೆ ಎಂದು ಉತ್ತರಾಖಂಡ ಬಿಜೆಪಿ ಸಚಿವ ಗಣೇಶ್ ಜೋಶಿ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Dehradun, India
  • Share this:

    ಡೆಹ್ರಾಡೂನ್: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ (Indira Gandhi) ಮತ್ತು ರಾಜೀವ್ ಗಾಂಧಿ (Rajeev Gandhi) ಹತ್ಯೆಯಾಗಿದ್ದರು, ಅವರು ಹುತಾತ್ಮರಾಗಿಲ್ಲ (Martyrdom) ಅವರ ಸಾವು ಕೇವಲ ಅಪಘಾತ ಎಂದು ಉತ್ತರಾಖಂಡದ ಸಚಿವ ಗಣೇಶ್ ಜೋಶಿ (Ganesh Joshi)ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಮಂಗಳವಾರ ಮಾಧ್ಯಮದವರ ಜೊತೆಗೆ ಮಾತನಾಡಿದ ಗಣೇಶ್ ಜೋಶಿ, ಅಪಘಾತ ಮತ್ತು ಹುತಾತ್ಮರಾಗುವುದಕ್ಕೂ ತುಂಬಾ ವ್ಯತ್ಯಾಸವಿದೆ. ಆದರೆ ಮಾಜಿ ಪ್ರಧಾನಿಗಳ ವಿಚಾರದಲ್ಲಿ ನಡೆದ ಘಟನೆಯನ್ನು ಅಪಘಾತ ಎಂದು ಕರೆದರೆ ಉತ್ತಮ ಎಂದು ಹೇಳಿದ್ದಾರೆ.


    ಹುತಾತ್ಮತೆ ಹಾಗೂ ಅಪಘಾತಕ್ಕೂ ವ್ಯತ್ಯಾಸವಿದೆ


    ನೀವೊಮ್ಮೆ ಇತಿಹಾಸವನ್ನು ಒಮ್ಮೆ ನೋಡಿದರೆ ಹುತಾತ್ಮತೆ ಮತ್ತು ಅಪಘಾತಕ್ಕೆ ವ್ಯತ್ಯಾಸ ತಿಳಿಯುತ್ತದೆ. ಚಂದ್ರಶೇಖರ್​ ಅಜಾದ್​, ರಾಮ್​ ಪ್ರಸಾದ್​ ಬಿಸ್ಮಿಲ್ ಹಾಗೂ ಅಂತಹ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ಬೇಡಿಕೆಗಳನ್ನು ಒಪ್ಪಿಕೊಳ್ಳದೆ ಅವರು ನೀಡಿದ ಶಿಕ್ಷೆಯನ್ನು ಅನುಭವಿಸಿ ಪ್ರಾಣ ಬಿಟ್ಟಿದ್ದಾರೆ, ಅವರನ್ನು ಹುತಾತ್ಮರು ಎನ್ನಬಹುದು. ಯಾರಿಂದಲಾದರೂ ಕೆಟ್ಟ ಘಟನೆ ನಡೆದರೆ, ಅದರಲ್ಲಿ ಸಾವನ್ನಪ್ಪಿದರೆ ಅದನ್ನು ಅಪಘಾತ ಎಂದು ಕರೆಯಲಾಗುತ್ತದೆ ಎಂದು ಜೋಶಿ ಹೇಳಿದ್ದಾರೆ.


    ಹತ್ಯೆಗೀಡಾಗಿದ್ದ ಇಂದಿರಾ ಗಾಂಧಿ-ರಾಹುಲ್ ಗಾಂಧಿ


    ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಡಿಸೆಂಬರ್ 31, 1984ರಲ್ಲಿ ಸ್ವತಃ ಇಬ್ಬರು ಅಂಗರಕ್ಷಕರೇ ಗುಂಡು ಹಾರಿಸಿಕೊಂದಿದ್ದರು. ಅದೇ ವರ್ಷ ಜೂನ್​ನಲ್ಲಿ ಗೋಲ್ಡನ್ ಟೆಂಪಲ್​ನಿಂದ ಉಗ್ರರನ್ನು ಹೊರ ಹಾಕಲು ನಡೆಸಿದ ನಡೆಸಿದ ಮಿಲಿಟರಿ ಕಾರ್ಯಾಚರಣಗೆ ಪ್ರತೀಕಾರವಾಗಿ ಹತ್ಯೆ ಮಾಡಲಾಗಿತ್ತು.


    ಇಂದಿರಾ ಗಾಂಧಿ ಹತ್ಯೆಯ ನಂತರ ಪ್ರಧಾನಿಯಾಗಿದ್ದ, ಅವರ ಪುತ್ರ ರಾಜೀವ್ ಗಾಂಧಿ ಅವರನ್ನು ಮೇ 21, 1991 ರಂದು ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾಗ ಎಲ್​ಟಿಟಿಐ ಬಂಡುಕೋರರು ಆತ್ಮಾಹುತಿ ಬಾಂಬ್​ ದಾಳಿ ಮೂಲಕ ಹತ್ಯೆ ಮಾಡಿದ್ದರು.


    ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆ ನನಗೂ ಅಲ್ಲ ಕಾಂಗ್ರೆಸ್‌ಗೂ ಅಲ್ಲ, ಭಾರತದ ಜನರಿಗಾಗಿ: ರಾಹುಲ್ ಗಾಂಧಿ

     ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ


    ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಇಬ್ಬರು ದೊಡ್ಡ ನಾಯಕರು, ಹಾಗೂ ಪ್ರಧಾನ ಮಂತ್ರಿಯಾಗಿದ್ದರು. ಆದರೆ ಅವರಿಬ್ಬರು ಅಪಘಾತಕ್ಕೆ ಒಳಗಾಗಿದ್ದರು. ಇಂದಿರಾಗಾಂಧಿ ಅವರ ಅಂಗರಕ್ಷಕರಿಂದ ಕೊಲ್ಲಲ್ಪಟ್ಟಿದ್ದಾರೆ. ಹಾಗಾಗಿ ಅದು ಅಪಘಾತವೇ ಹೊರತು ಹುತಾತ್ಮರಾದಂತಲ್ಲ. ಹುತಾತ್ಮ ಮತ್ತು ಅಪಘಾತ ಎರಡೂ ಬೇರೆ ಬೇರೆ ಎನ್ನುವ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ ಎಂದು ಜೋಶಿ ಹೇಳಿದ್ದಾರೆ.




    ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು


    ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೂಪ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರ್​ಎಸ್​ಎಸ್​ ನೋವು ಏನೆಂಬುದು ಅರ್ಥವಾಗುವುದಿಲ್ಲ ಎಂದಿದ್ದರು ಆ ಹೇಳಿಕೆಗೆ ಜೋಶಿ ತಿರುಗೆಟು ನೀಡುವ ಬರದಲ್ಲಿ ಮಾಜಿ ಪ್ರಧಾನಿಗಳ ಹತ್ಯೆಯ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.


    ಬಿಜೆಪಿ ಆರ್​ಎಸ್​ಎಸ್​ ನೋವು ಅರ್ಥವಾಗಲ್ಲ


    ಪುಲ್ವಾಮದಲ್ಲಿ ನಮ್ಮ ಸೈನಿಕರು ಮಡಿದರು. ಅವರ ಮನೆಯವರಿಗೆ ಈ ಸುದ್ದಿ ಬಹಳ ನೋವನ್ನು ಉಂಟುಮಾಡಿರುತ್ತದೆ. ಆದರೆ ಅಜ್ಜಿ ಇಂದಿರಾಗಾಂದಿ ಮತ್ತು ನಮ್ಮ ತಂದೆ ರಾಹುಲ್ ಗಾಂಧಿ ಹತ್ಯೆಯಾದಾಗ ನನಗೆ ಆಗಿದೆ. ಆದರೆ ಪಿಎಂ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಆರ್‌ಎಸ್‌ಎಸ್‌ನಂತಹ ಹಿಂಸಾಚಾರ ಮಾಡುವವರಿಗೆ ನೋವು ಅರ್ಥವಾಗುವುದಿಲ್ಲ, ಆದರೆ ನಾವು ಅರ್ಥಮಾಡಿಕೊಳ್ಳಬಹುದು. ಭಾರತದ ತಳಹದಿಯನ್ನು ಕೆಡವಲು ಯತ್ನಿಸುವ ಸಿದ್ಧಾಂತದ ವಿರುದ್ಧ ನಾವೆಲ್ಲರು ನಿಂತು ಹೋರಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.


     Uttarakhand Minister joshi
    ಉತ್ತರಾಖಂಡ ಸಚಿವ ಗಣೇಶ್ ಜೋಶಿ


    ಮೋದಿಯವರಿಂದಲೇ ರಾಹುಲ್ ಧ್ವಜಾರೋಹಣ ಮಾಡಿದ್ದಾರೆ


    ರಾಹುಲ್ ಗಾಂಧಿ ಅವರು ಜನವರಿ 30 ರಂದು ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜವನ್ನು ಯಶಸ್ವಿಯಾಗಿ ಹಾರಿಸಿದ್ದಾರೆ. ಇದು ಅವರಿಂದ ಸಾಧ್ಯವಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಎಂದು ಜೋಶಿಯವರು ಹೇಳಿದ್ದಾರೆ.
    " ಆರ್ಟಿಕಲ್ 370 ಅನ್ನು ಬಿಜೆಪಿ ಸರ್ಕಾರ ರದ್ದುಗೊಳಿಸದಿದ್ದರೆ, ರಾಹುಲ್ ಗಾಂಧಿ ಇಂದು ಅಲ್ಲಿ ದೈರ್ಯವಾಗಿ ನಿಂತು ಧ್ವಜಾರೋಹಣ ಮಾಡಲು ಸಾಧ್ಯವಾಗುತ್ತಿತ್ತೇ? ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಇದೆಲ್ಲವನ್ನು ಅವರೂ ಏಕೆ ಮಾಡಲಿಲ್ಲ?" ಅವರು ಟೀಕಿಸಿದ್ದಾರೆ.

    Published by:Rajesha B
    First published: