Narendra Modi: ಪ್ರಧಾನಿ ಮೋದಿ ಹತ್ಯೆಗೆ ಸಂಚು, ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಇ-ಮೇಲ್..!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ನವದೆಹಲಿ (ಏಪ್ರಿಲ್ 1): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಇನ್ನು, ಪ್ರಧಾನಿ ಮೋದಿ ಹತ್ಯೆಗೆ ಬರೋಬ್ಬರಿ 20 ಕೆಜಿ ಆರ್‌ಡಿಎಕ್ಸ್‌ನೊಂದಿಗೆ (RDX) ಸ್ಲೀಪರ್ ಸೆಲ್ ಮೂಲಕ ಕೊಲ್ಲಲು ಸಂಚು ರೂಪಿಸಲಾಗಿದೆ ಎಂಬ ಎಚ್ಚರಿಕೆಯ ಇ-ಮೇಲ್ (E-Mail) ಒಂದು ಬಂದಿದೆ ಎಂದು ಸೆಕ್ಯೂರಿಟಿ ಏಜೆನ್ಸಿ ಮಾಹಿತಿ ನೀಡಿದೆ. ಸದ್ಯ ಈ ಇ-ಮೇಲ್ ದೆಹಲಿ ಪೊಲೀಸ್ ಆಯುಕ್ತರಿಗೆ ತಲುಪಿದ್ದು, ಇ ಮೇಲ್ ಸಂದೇಶ ಬಂದ ಕೂಡಲೇ ಪ್ರಧಾನಿ ಮೋದಿ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ದೆಹಲಿಯಾದ್ಯಂತ (Delhi) ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೂ ಮೇಲ್ ರವಾನಿಸಲಾಗಿದೆ.

ಲೋಕಸಭೆ ಚುನಾವಣೆ ವೇಳೆ ಮೋದಿ ಹತ್ಯೆಗೆ ಸಂಚು:

ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಮೋದಿ ಅವರಿಗೆ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇನ್ನು, ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ದೆಹಲಿ ಪೊಲೀಸರಿಗೆ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೆ ಇ-ಮೇಲ್ ಸಂದೇಶ ರವಾನಿಸಲಾಗಿದೆ.

ಎನ್​ಐಎನಿಂದ ತನಿಖೆ:

ಈಗಾಗಲೇ ಬಂದಿರುವ ಇ-ಮೇಲ್​ನಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕವಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಜೊತೆಗೆ ಮೋದಿ ಅವರ ಹತ್ಯೆಗೆ ಈಗಾಗಲೇ ಆರ್‌ಡಿಎಕ್ಸ್ ಸಂಗ್ರಹಿಸಲಾಗಿದ್ದು, ಒಟ್ಟು 20 ಕೆಜಿ ಆರ್‌ಡಿಎಕ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಚ್ಚರಿಕೆ ಸಂದೇಶವನ್ನು ಮೇಲ್​ ಮೂಲಕ ನೀಡಲಾಗಿದೆ. ಇನ್ನು ಇ-ಮೇಲ್​ ಅನ್ನ ಮುಂಬೈನ ರಾಷ್ಟ್ರೀಯ ತನಿಖಾ ತಂಡಕ್ಕೆ ಸೆಕ್ಯೂರಿಟಿ ಏಜೆನ್ಸಿ ನೀಡಿದೆ. ಆದರೆ ಈ ಮೇಲ್ ಎಷ್ಟು ನಿಜ, ಅದನ್ನು ಎಲ್ಲಿಂದ ಕಳುಹಿಸಲಾಗಿದೆ? ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಈವರೆಗ ಲಭ್ಯವಾಗಿಲ್ಲ. ಆದರೂ ಸದ್ಯ ಎನ್​ಐಎ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Pariksha Pe Charcha: ವಿದ್ಯಾರ್ಥಿಗಳೊಂದಿಗೆ ನರೇಂದ್ರ ಮೋದಿ ‘ಪರೀಕ್ಷಾ ಪೆ ಚರ್ಚಾ’; 'ಭವಿಷ್ಯದ ನಾಯಕ'ರಿಗೆ ಪ್ರಧಾನಿ ಟಿಪ್ಸ್!

ಇ-ಮೇಲ್​ನಲ್ಲಿ ಏನಿದೆ..?:

ಹಲೋ ಎಲ್ಲರೂ ಇಲ್ಲಿ ಕೇಳಿ. ನನ್ನ ಬಳಿ 20ಕ್ಕೂ ಹೆಚ್ಚು ಆರ್​ಡಿಎಕ್ಸ್​ಗಳು ಇವೆ. 20 ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡಲು ಪ್ಲಾನ್ ರೂಪಿಸಿದ್ದೇನೆ. ಅದೂ ಕೂಡ ಪ್ರಮುಖ ನಗರಗಳಲ್ಲಿ. ನಾನು ಪ್ರಧಾನಿ ಮೋದಿಯನ್ನ ಕೊಲ್ಲಲು ನಿಶ್ಚಯಿಸಿದ್ದೇನೆ. ನಾನು ಅದನ್ನ ಮಾಡುತ್ತೇನೆ. ಮೋದಿ ನನ್ನ ಜೀವನವನ್ನ ಹಾಳು ಮಾಡಿದ್ದಾರೆ. ನಾನು ಯಾರನ್ನೂ ಬಿಡುವುದಿಲ್ಲ.

ನಾನು ಸರಿಸುಮಾರು 2 ಲಕ್ಷ ಮಂದಿಯನ್ನ ಕೊಲ್ಲುತ್ತೇನೆ. ನನ್ನ ಬಾಂಬ್​ನಿಂದ ಜನರು ಸತ್ತರೆ ಅವರೂ ಕೂಡ ಸಾಯುತ್ತಾರೆ. ನಾನು ಈಗಾಗಲೇ ಕೆಲವು ಉಗ್ರರನ್ನ ಭೇಟಿ ಮಾಡಿದ್ದೇನೆ. ಅವರು ನನಗೆ ಆರ್​ಡಿಎಕ್ಸ್​ ಪಡೆಯಲು ಸಹಾಯ ಮಾಡಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ನನಗೆ ಖುಷಿ ಇದೆ. ನಾನು ಎಲ್ಲ ಕಡೆಯೂ ಬ್ಲಾಸ್ಟ್​ ಮಾಡಿಯೇ ಮಾಡುತ್ತೇನೆ. ನೀವು ನನ್ನನ್ನ ತಡೆಯಬಹುದು, ಆದರೆ ಪ್ಲಾನ್ ಈಗಾಗಲೇ ರೆಡಿಯಾಗಿದೆ.

ಇದನ್ನೂ ಓದಿ: ಕರ್ನಾಟಕದ ವಿರುದ್ಧ ಮತ್ತೆ ತಮಿಳುನಾಡು ಕಿರಿಕ್! ಪ್ರಧಾನಿ Narendra Modiಗೆ ದೂರು ಕೊಟ್ಟ ಎಂ.ಕೆ. ಸ್ಟಾಲಿನ್

ಪ್ರಧಾನಿ ಮೋದಿಗೆ ಭದ್ರತೆ ಹೆಚ್ಚಳ:

ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು ಬಹಿರಂಗವಾದ ನಂತರ ಭದ್ರತಾ ಪಡೆಗಳು ಎಚ್ಚೆತ್ತುಕೊಂಡಿದ್ದು, ಇಮೇಲ್ ಕಳುಹಿಸಿದವರನ್ನು ಪತ್ತೆ ನಡೆಸಲಾರಂಭಿಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರತಾ ಪಡೆಗಳು ಹೆಚ್ಚಿನ ಭದ್ರತೆಯನ್ನು ಒದಗಿಸಿದೆ.
Published by:shrikrishna bhat
First published: