ನರೇಂದ್ರ ದಾಮೋದರದಾಸ್ ಮೋದಿ (Narendra Modi), ಭಾರತದ 14ನೇ ಮತ್ತು ಪ್ರಸ್ತುತ ಪ್ರಧಾನಿ. ಗುಜರಾತ್ನಲ್ಲಿ (Gujrat)ಹೆಚ್ಚು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿದವರು. 2014ರಲ್ಲಿ ದೇಶದಲ್ಲಿ ಎನ್ಡಿಎ (NDA)ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ ಕೀರ್ತಿ ಮೋದಿ ಅವರದ್ದು. ಗುಜರಾತ್ನ ವಡೋದರ ಹಾಗೂ ವಾರಣಾಸಿ ಎರಡೂ ಕ್ಷೇತ್ರದ ಸಂಸದರಾಗಿರುವ ಮೋದಿ ಅವರ ಅಲೆ ದೇಶದಲ್ಲಿ ಹೆಚ್ಚಾಗಿದೆ. ಚುನಾವಣೆಯಲ್ಲಿ ಗೆದ್ದು ಬಿಜೆಪಿ (BJP) ಹಲವು ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಈ ನಡುವೆ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ನಾನಾ ಸರ್ಕಸ್ ನಡೆಸುತ್ತಿದೆ. ಈ ಎಲ್ಲಾದರ ಮಧ್ಯೆ ಕಾಂಗ್ರೆಸ್ ನಾಯಕರೊಬ್ಬರು (Congress Leader) ಭಾನುವಾರ ಪ್ರಧಾನಿಯನ್ನು ಕೊಲ್ಲಬೇಕು ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ (Controversial Statement) ಇದೀಗ ಸ್ಪಷ್ಟನೆ ನೀಡಿದ್ದಾರೆ.
ಸಮಾಜದಲ್ಲಿರುವ ಕೆಟ್ಟದ್ದನ್ನು ತೊಡೆದು ಹಾಕಲು ಮೋದಿ ಕೊಲ್ಲಿ
ಹೌದು, ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ಅವರು ಭಾನುವಾರ, ಸಮಾಜದಲ್ಲಿರುವ ಕೆಟ್ಟದ್ದನ್ನು ತೊಡೆದು ಹಾಕಬೇಕೆಂದರೆ ಮೋದಿಯನ್ನು ಕೊಲ್ಲಬೇಕು ಎಂದು ಹೇಳಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಮೋದಿಯವರ ಈ ಚುನಾವಣೆಯನ್ನು ಕೊನೆಗೊಳಿಸೋಣಾ
ಪ್ರಧಾನಿ ಮೋದಿಯವರ ಈ ಚುನಾವಣೆಯನ್ನು ಕೊನೆಗೊಳಿಸೋಣಾ. ಧರ್ಮದ ಆಧಾರದ ಮೇಲೆ ಬಿಜೆಪಿ ಜನರನ್ನು ವಿಭಜಿಸುತ್ತಿದ್ದಾರೆ ಮತ್ತು ಅವರ ಆಡಳಿತದಲ್ಲಿ ದಲಿತರು ದೊಡ್ಡ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.
ನೀವು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಬೇಕು. ಅಂದರೆ ಚುನಾವಣೆಯಲ್ಲಿ ಅವರನ್ನು ಸೋಲಿಸಬೇಕು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾದ ನಂತರ, ತಾವು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಂವಿಧಾನವನ್ನು ಉಳಿಸಲು ಮೋದಿಯನ್ನು ಸೋಲಿಸಿ
“ನಾನು ಗಾಂಧಿಯನ್ನು ನಂಬುವ ಮನುಷ್ಯ, ನಾನು ಈ ರೀತಿ ಮಾತನಾಡಲಾರೆ, ಸಂವಿಧಾನವನ್ನು ಉಳಿಸಲು ಮೋದಿಯನ್ನು ಸೋಲಿಸಬೇಕಾದ ರಾಜಕೀಯ ವಾತಾವರಣವನ್ನು ನಾನು ಅರ್ಥಮಾಡಿಕೊಂಡಿದ್ದೇನೆ.
ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ರಕ್ಷಣೆ ಮತ್ತು ನಿರುದ್ಯೋಗವನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ. ಹೀಗಾಗಿ ‘ಮೋದಿಯನ್ನು ಕೊಲ್ಲಬೇಕು ಅಂದರೆ ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಹೇಳಿದ್ದೇನೆ. ಆದರೆ ನನ್ನ ಮಾತನ್ನು ಸಂಪೂರ್ಣವಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜಾ ಪಟೇರಿಯಾ ವಿರುದ್ಧ ಪನ್ನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ಈ ಹಿನ್ನೆಲೆ ಬಿಜೆಪಿ ನಾಯಕರಾದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ರಾಜಾ ಪಟೇರಿಯಾ ವಿರುದ್ಧ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು ಮತ್ತು ಅವರ ವಿರುದ್ಧ ಪನ್ನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಸೂಚಿಸಿದರು.
ಇದು ಇಟಲಿಯ ಕಾಂಗ್ರೆಸ್ ಅಂದ ನರೋತ್ತಮ್ ಮಿಶ್ರಾ
ನಂತರ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ನರೋತ್ತಮ್ ಮಿಶ್ರಾ ಅವರು, ನಾನು ಪಟೇರಿಯಾ ಅವರ ಹೇಳಿಕೆಗಳನ್ನು ಕೇಳಿದೆ.
ಇದು ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅಲ್ಲ, ಇದು ಇಟಲಿಯ ಕಾಂಗ್ರೆಸ್ ಮತ್ತು ಇಟಲಿಯ ಮನಸ್ಥಿತಿ ಮುಸೊಲಿನಿಯದ್ದು ಎಂಬುವುದು ಅವರ ಮಾತಿಂದ ಸ್ಪಷ್ಟವಾಗಿದೆ. ಕೂಡಲೇ ರಾಜಾ ಪಟೆರಿಯಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಎಸ್ಪಿಗೆ ಸೂಚನೆ ನೀಡುತ್ತಿದ್ದೇನೆ ಎಂದಿದ್ದರು.
ಇತ್ತೀಚೆಗಷ್ಟೇ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಚಾರಿತ್ರಿಕ ವಿಜಯ
ಇತ್ತೀಚೆಗಷ್ಟೇ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಚಾರಿತ್ರಿಕ ವಿಜಯ ಸಾಧಿಸಿತು. 1962ರಲ್ಲಿ ರಾಜ್ಯ ರಚನೆಯಾದ ಬಳಿಕ ನಡೆದ ಎಲ್ಲಾ ಚುನಾವಣೆಯ ದಾಖಲೆ ಧೂಳಿಪಟ ಮಾಡಿತು. 156 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ 2002ರ ತನ್ನ ದಾಖಲೆಯನ್ನೇ ಮುರಿದು ಹೊಸ ಐತಿಹಾಸ ಬರೆಯಿತು.
ಕಳೆದ 27 ವರ್ಷದಿಂದ ರಾಜ್ಯದ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಿ ಗೆಲುವು ಪಡೆದಿರುವುದು ಚರಿತ್ರೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ