ಕೆಲವೊಮ್ಮೆ ಮಹಿಳೆ(Women)ಯರು ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳು ಅಪಾಯದಲ್ಲಿದ್ದಾಗ ಸಹಾಯ(Help)ಕ್ಕಾಗಿ ಕೂಗಿಕೊಂಡರೂ ಯಾವುದೇ ಪ್ರಯೋಜನವಾಗುವುದಿಲ್ಲ. ಆದರೆ ಕೆಲವೊಮ್ಮೆ ಕೆಲವು ಮಾಹಿತಿಗಳು ಮತ್ತು ಕೈ ಸನ್ನೆ(Hand Gestures)ಗಳು ಅವರನ್ನು ಅಪಾಯದಿಂದ ಕಾಪಾಡುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತವೆ.ಎಷ್ಟೋ ಜನರು ಈ ತಂತ್ರಜ್ಞಾನವನ್ನು ಯಾವುದಕ್ಕೋ ದುರುಪಯೋಗ ಪಡಿಸಿಕೊಳ್ಳುತ್ತಾರೆ, ಆದರೆ ಅದೇ ತಂತ್ರಜ್ಞಾನ(Technology) ನಮ್ಮ ಉಪಯೋಗಕ್ಕೂ ಬರುತ್ತದೆ ಎಂಬುದಕ್ಕೆ ಈ ನೈಜ ಘಟನೆಯೊಂದು ಉತ್ತಮವಾದ ಉದಾಹರಣೆ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕೆಲವು ದಿನಗಳ ಹಿಂದೆ ಅಮೆರಿಕ(America)ದಲ್ಲಿ 16 ವರ್ಷದ ಬಾಲಕಿಯೊಬ್ಬಳು ಕಾಣೆ(Missing)ಯಾಗಿದ್ದಾಳೆ ಎಂದು ವರದಿಯಾಗಿತ್ತು. ಆಕೆಯನ್ನು ಉಳಿಸಿದ್ದು ಟಿಕ್ಟಾಕ್(Tiktok) ಎಂದು ಹೇಳಬಹುದು. ಅರೆ ಈ ಕಾಣೆಯಾದ ಹುಡುಗಿಗೂ ಮತ್ತು ಟಿಕ್ಟಾಕ್ಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಇದು ಹೇಗೆ ಆ ಅಪ್ರಾಪ್ತ ಬಾಲಕಿಯನ್ನು ಅಪಾಯದಿಂದ ಪಾರು ಮಾಡಿದೆ ಎಂದು ನಿಮಗೆ ಅನ್ನಿಸಬಹುದು. ಇದನ್ನೊಮ್ಮೆ ನೀವು ಓದಿಕೊಳ್ಳಿ, ನಿಮಗೂ ಅಪಾಯದ ಸಮಯದಲ್ಲಿ ಸಹಾಯಕ್ಕೆ ಬರಬಹುದು.
ಅಪಹರಣಕ್ಕೊಳಗಾದ ಹದಿಹರೆಯದವಳು ಟಿಕ್ಟಾಕ್ನಲ್ಲಿ ನೋಡಿ ಕಲಿತಂತಹ ಕೆಲವು ಕೈ ಸನ್ನೆ ಬಳಸಿಕೊಂಡು ಸಹಾಯಕ್ಕಾಗಿ ಸನ್ನೆ ಮಾಡಿದಳು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸಹಾಯವಾಗಲು ಅಮೌಖಿಕ ಸೂಚನೆ ಎಂದು ಅರ್ಥೈಸಲಾದ ಕೈ ಸನ್ನೆಗಳನ್ನು ಹದಿಹರೆಯದವರು ಅಪಾಯದಲ್ಲಿದ್ದಾಗ ಅಲ್ಲಿಂದ ಹಾದು ಹೋಗುವ ವಾಹನ ಚಾಲಕರಿಗೆ ಅಪಾಯ ಸಂಕೇತಿಸಲು ಬಳಸಿದರು. ಈ ಸನ್ನೆಯನ್ನು ಗುರುತಿಸಿದ ವಾಹನ ಚಾಲಕ ಕೆಂಟುಕಿ ಅಧಿಕಾರಿಗಳಿಗೆ ಕರೆ ಮಾಡಿ, ಅಪ್ರಾಪ್ತ ವಯಸ್ಸಿನ ಪ್ರಯಾಣಿಕಳೊಬ್ಬಳು ಕೈ ಸನ್ನೆ ಮಾಡುತ್ತಿರುವುದನ್ನು ತಾನು ನೋಡಿದ್ದೇನೆ ಎಂದು ಪೊಲೀಸರ ಬಳಿ ಹೇಳಿದ್ದ.
ಅದೃಷ್ಟವಶಾತ್, ಅದೇ ಸ್ಥಳದಿಂದ ಹಾದು ಹೋಗುವಾಗ ಚಾಲಕನೊಬ್ಬನು ಈ ಕೈ ಸನ್ನೆಗಳನ್ನು ತಡಮಾಡದೆ ಅರ್ಥ ಮಾಡಿಕೊಂಡಿದ್ದು, ಅಧಿಕಾರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ತಡಮಾಡದೆ ತನಿಖಾಧಿಕಾರಿಗಳು ಹೆದ್ದಾರಿಯಿಂದ ನಿರ್ಗಮಿಸುತ್ತಿದ್ದಂತೆ ಆ ಬಾಲಕಿ ಇರುವ ವಾಹನ ತಡೆದು ನಿಲ್ಲಿಸಿ ಆಕೆಯನ್ನು ಕಾಪಾಡಲಾಯಿತು. ನಂತರ ಆ ಬಾಲಕಿಯು ಆಶೆವಿಲ್ಲೆಯಿಂದ ಕಾಣೆಯಾಗಿದ್ದಾಳೆ ಎಂದು ಪೋಷಕರು ದೂರು ಸಲ್ಲಿಸಿದ್ದು ಗೊತ್ತಾಯಿತು.
ಕೆಂಟುಕಿಯ ಲಾರೆಲ್ ಕೌಂಟಿ ಶೆರಿಫ್ ಕಚೇರಿಯ ಮಾಹಿತಿಯ ಪ್ರಕಾರ, ಹದಿಹರೆಯದವಳನ್ನು ಒಂದು ಸಿಲ್ವರ್ ಬಣ್ಣದ ಟೊಯೋಟಾದೊಳಗೆ ಅಪಹರಿಸಿಕೊಂಡು ಹೋಗುತ್ತಿದ್ದಾಗ, ಚಾಲಕನೊಬ್ಬನು "ಕೌಟುಂಬಿಕ ಹಿಂಸಾಚಾರ ಪ್ರತಿನಿಧಿಸುವ ಕೈ ಸನ್ನೆಯನ್ನು ಮಾಡಿ ನನಗೆ ಸಹಾಯಬೇಕು" ಎಂದು ಹೇಳುವ ಸಂಕೇತಗಳನ್ನು ಬಳಸಿರುವುದನ್ನು ನೋಡಿದ್ದಾನೆ. ಅಧಿಕಾರಿಗಳನ್ನು ಎಚ್ಚರಿಸಿದ ಚಾಲಕ ಪೊಲೀಸರು ಬರುವ ಮೊದಲು ಅಪಹರಣಕಾರನ ಕಾರನ್ನು ಸಾಕಷ್ಟು ದೂರ ಹಿಂಬಾಲಿಸಿದ ಎಂದು ವರದಿ ಹೇಳಿದೆ.
"ಸಿಗ್ನಲ್ ಫಾರ್ ಹೆಲ್ಪ್" ಅಭಿಯಾನವನ್ನು ಕೆನಡಾದ ಮಹಿಳಾ ಒಕ್ಕೂಟವು 2020ರಲ್ಲಿ ಪ್ರಾರಂಭಿಸಿತು. ಮನೆ ಮತ್ತು ಇತರ ಕಡೆಗಳಲ್ಲಿ ಸಂಭಾವ್ಯ ತೊಂದರೆಗಳ ಬಗ್ಗೆ ಇತರರನ್ನು ಎಚ್ಚರಿಸಲು ಜನರಿಗೆ ಒಂದು ಮಾರ್ಗವಾಗಲು ಇದನ್ನು ಪರಿಚಯಿಸಲಾಯಿತು ಮತ್ತು ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಕೂಡ ಆಗಿದೆ. ಯಾವುದೇ ಅಪಾಯದಲ್ಲಿದ್ದರು ಈ ಸನ್ನೆಗಳ ಮೂಲಕ ಬೇರೆಯವರಿಗೆ ಎಚ್ಚರಿಸಬಹುದು. ಇದನ್ನು ಕಲಿತುಕೊಂಡಿದ್ದ ಬಾಲಕಿ, ಸನ್ನೆಗಳ ಮೂಲಕ ಆಕೆ ಕಿಡ್ನಾಪ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ