• Home
  • »
  • News
  • »
  • national-international
  • »
  • Rishi Sunak: ಕೊಹಿನೂರ್ ಡೈಮೆಂಡ್ ವಾಪಸ್​ ಬೇಕಂದ್ರೆ ರಿಷಿ ಸುನಕ್​ನ ಕಿಡ್ನಾಪ್ ಮಾಡಿ! ಹೀಗೆ ಹೇಳಿದ್ಯಾರು? ನೋಡಿ

Rishi Sunak: ಕೊಹಿನೂರ್ ಡೈಮೆಂಡ್ ವಾಪಸ್​ ಬೇಕಂದ್ರೆ ರಿಷಿ ಸುನಕ್​ನ ಕಿಡ್ನಾಪ್ ಮಾಡಿ! ಹೀಗೆ ಹೇಳಿದ್ಯಾರು? ನೋಡಿ

ರಿಷಿ ಸುನಕ್​

ರಿಷಿ ಸುನಕ್​

ಕೊಹಿನೂರ್ ವಜ್ರ (Kohinoor Diamond) ವನ್ನು ಭಾರತಕ್ಕೆ ಮರಳಿ ತರುವ ಯೋಜನೆಗೆ ಹರ್ಷ ಗೋಯೆಂಕಾ ತಮ್ಮ ಸ್ನೇಹಿತ ತಿಳಿಸಿದ ಉಪಾಯವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  • Share this:

ಯುಕೆಯ ಪ್ರಧಾನ ಮಂತ್ರಿಯಾಗಿ ರಿಷಿ ಸುನಕ್ (Rishi Sunak) ನೇಮಕಗೊಂಡಾಗಿನಿಂದ ಇಂಟರ್ನೆಟ್‌ (Internet) ನಲ್ಲಿ ಹಾಸ್ಯ (Comedy) ದ, ವ್ಯಂಗದ ಮೀಮ್‌(Meme) ಗಳು ಟ್ರೆಂಡ್  (Trend) ಆಗುತ್ತಲೇ ಇದೆ. ಇದೀಗ RPG ಎಂಟರ್‌ಪ್ರೈಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ (Harsha Goyanka) ತಮ್ಮ ಸ್ನೇಹಿತ ಹೇಳಿದ ಉಪಾಯವೊಂದನ್ನು ಟ್ವಿಟರ್‌ (Twitter) ನಲ್ಲಿ ಪೋಸ್ಟ್ ಮಾಡಿದ್ದು, ರಿಷಿ ಸುನಕ್ ಯುಕೆ ಪ್ರಧಾನಿಯಾಗುವ ಮೂಲಕ ಭಾರತಕ್ಕೆ ಹೆಚ್ಚಿನ ಲಾಭವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೊಹಿನೂರ್ ವಜ್ರ (Kohinoor Diamond) ವನ್ನು ಭಾರತಕ್ಕೆ ಮರಳಿ ತರುವ ಯೋಜನೆಗೆ ಹರ್ಷ ಗೋಯೆಂಕಾ ತಮ್ಮ ಸ್ನೇಹಿತ ತಿಳಿಸಿದ ಉಪಾಯವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ವಿಡಂಬನಾತ್ಮಕವಾಗಿದೆ.


ಕೊಹಿನೂರ್ ಭಾರತಕ್ಕೆ ಮರಳಿ ತರಲು ಹೀಗ್ ಮಾಡ್ಬೇಕಂತೆ!


ಗ್ರೇಟ್ ಬ್ರಿಟನ್‌ನಲ್ಲಿ ನಡೆದ ರಾಜಕೀಯ ಬಿಕ್ಕಟ್ಟು ಹಾಗೂ ರಿಷಿ ಸುನಕ್ ಅವರನ್ನು ಪ್ರಧಾನಿಯಾಗಿ ನೇಮಿಸಿದ ಬಗ್ಗೆ ಅನಿಸಿಕೆ ಹಂಚಿಕೊಂಡು ಗೋಯೆಂಕಾ ತಮ್ಮ ಸ್ನೇಹಿತರೊಬ್ಬರು ಕೊಹಿನೂರ್ ಅನ್ನು ಭಾರತಕ್ಕೆ ಮರಳಿ ಹೇಗೆ ತರಬಹುದು ಎಂದು ತಿಳಿಸಿದ ಉಪಾಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.


ಕೊಹಿನೂರ್ ಅನ್ನು ಮರಳಿ ಹೇಗೆ ಪಡೆಯಬಹುದು ಎಂಬುದಕ್ಕೆ ನನ್ನ ಸ್ನೇಹಿತ ನೀಡಿದ ಉಪಾಯ ಹೀಗಿದೆ ಎಂದು ಬರೆದುಕೊಂಡಿರುವ ಗೋಯೆಂಕಾ, ಮೊದಲಿಗೆ ರಿಷಿ ಸುನಕ್ ಅವರನ್ನು ಭಾರತಕ್ಕೆ ಆಹ್ವಾನಿಸಬೇಕು ನಂತರ ತಮ್ಮ ಅತ್ತೆ ಸುಧಾ ಮೂರ್ತಿಯನ್ನು ಭೇಟಿಮಾಡಲು ಬರುವಾಗ ಅವರನ್ನು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವಂತೆ ಮಾಡಿ ಅಪಹರಿಸಬೇಕು.


ಆಶಿಷ್​ ನೆಹ್ರಾ ಟ್ರೋಲ್​ ಆಗಿದ್ದೇಕೆ?


ನಂತರ ರಿಷಿಯವರ ಬದಲಿಗೆ ಆಶಿಷ್ ನೆಹ್ರಾ ಅವರನ್ನು ಯುಕೆಯ ಪ್ರಧಾನಿಯಾಗಿ ಕಳುಹಿಸಬೇಕು. ಆಶಿಷ್ ನೆಹ್ರಾ ಹಾಗೂ ರಿಷಿ ಸುನಕ್ ನೋಡಲು ಒಂದೇ ಹಾಗೆ ಕಾಣುವುದರಿಂದ ಯಾರಿಗೂ ಇದು ತಿಳಿಯುವುದಿಲ್ಲ ಕೊಹಿನೂರ್ ಮರಳಿಸಲು ಬಿಲ್ ಪಾಸ್ ಮಾಡುವಂತೆ ನೆಹ್ರಾಗೆ ಹೇಳಲಾಗುತ್ತದೆ.


ಇದನ್ನೂ ಓದಿ: ಆರ್ಥಿಕವಾಗಿ ಕಂಗಾಲಾದ ಬ್ರಿಟನ್; ರಿಷಿ ಸುನಕ್ ಮುಂದಿರುವ ಸವಾಲು ಒಂದೆರಡಲ್ಲ


ವೈರಲ್ ಆದ ಹರ್ಷ ಗೋಯೆಂಕಾ ಟ್ವೀಟ್


ಹರ್ಷ ಗೋಯೆಂಕಾ ಅವರ ಪೋಸ್ಟ್ ಟ್ವಿಟರ್‌ನಲ್ಲಿ ಇದೀಗ ವೈರಲ್ ಆಗಿದ್ದು 43,000 ಕ್ಕೂ ಹೆಚ್ಚಿನ ಲೈಕ್ಸ್ ಅನ್ನು ಪಡೆದುಕೊಂಡಿದೆ. ನೆಹ್ರಾ ಅವರು ಯುಕೆ ಪ್ರಧಾನಿಯಾದರೆ ಅವರು ಮಾತನಾಡುವ ಭಾಷೆಯಲ್ಲಿಯೇ ಅವರು ರಿಷಿ ಸುನಕ್ ಅಲ್ಲ ಎಂಬುದು ಖಚಿತವಾಗುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.


ಮತ್ತೊಬ್ಬ ಬಳಕೆದಾರರು, ಕೊಹಿನೂರ್ ಮರಳಿ ಪಡೆಯಲು ರಿಷಿಯವರನ್ನು ಅಪಹರಿಸಬೇಕು ಎಂದೇನಿಲ್ಲ. ರಿಷಿಯವರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ನೆಹ್ರಾ ಬ್ರಿಟನ್‌ಗೆ ಹೋಗಿ ಬಿಲ್ ಪಾಸ್ ಮಾಡಿ ಬರಲಿ ಎಂದು ಹಾಸ್ಯಮಯವಾಗಿ ಬರೆದಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಮಹಿಮೆ ಅಂತಹದ್ದು ಎಂದು ತಿಳಿಸಿದ್ದಾರೆ.ಟ್ವೀಟ್‌ನಲ್ಲಿ, ಗೋಯೆಂಕಾ ಯುಕೆ ರಾಜಕೀಯದ ಬಗ್ಗೆ ಮಾತ್ರವಲ್ಲ, ಕುಖ್ಯಾತ ಬೆಂಗಳೂರು ಟ್ರಾಫಿಕ್ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.


ಯುಕೆಯ ಕ್ಯಾಬಿನೆಟ್ ಆಫೀಸ್‌ ಮೌಸರ್: ಲ್ಯಾರಿ


ಲ್ಯಾರಿ 2011 ರಲ್ಲಿ ನೇಮಕಗೊಂಡ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಯುನೈಟೆಡ್ ಕಿಂಗ್‌ಡಮ್‌ನ ಕ್ಯಾಬಿನೆಟ್ ಆಫೀಸ್‌ಗೆ ಮುಖ್ಯ ಮೌಸರ್ ಆಗಿ ಸೇವೆ ಸಲ್ಲಿಸುತ್ತಿರುವ ದೇಶೀಯ ಬೆಕ್ಕಾಗಿದ್ದು ಈ ಬೆಕ್ಕು ಟ್ವಿಟರ್ ನ ಅಧಿಕೃತ ಟ್ವಿಟರ್ ಖಾತೆಯನ್ನು ಹೊಂದಿದೆ. 11 ವರ್ಷಗಳ ಕಾಲ ಮೌಸರ್ ಇನ್ ಚೀಫ್ ಆಗಿ ಈ ಬೆಕ್ಕು ಆಳ್ವಿಕೆ ನಡೆಸಿದೆ.


ಇದನ್ನೂ ಓದಿ: ಬ್ರಿಟನ್​ ಪಿಎಂ ಭಾರತ ಮೂಲದವರಾಗಿರುತ್ತಾರೆ, 2015ರಲ್ಲಿ ಮೋದಿ ಎದುರೇ ಆಗಿತ್ತು ಈ ಭವಿಷ್ಯವಾಣಿ!


ಲ್ಯಾರಿಯ ವಿಡಂಬನಾತ್ಮಕ ಖಾತೆ ಇದಾಗಿದ್ದು ನಂಬರ್ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಅರ್ಧ ಎಕರೆ ಉದ್ಯಾನವನ್ನು ಹೊಂದಿದೆ. ಲ್ಯಾರಿಗೆ ದುಃಖಕರವಾದ ಸುದ್ದಿಯೆಂದರೆ ಸುನಕ್ ಕುಟುಂಬದ 18-ತಿಂಗಳ ಪ್ರಾಯದ ಮುದ್ದಿನ ಲ್ಯಾಬ್ರಡಾರ್, ನೋವಾ ಜೊತೆಗೆ ಇವೆಲ್ಲವನ್ನೂ ಇದೀಗ ಹಂಚಿಕೊಳ್ಳಬೇಕಾಗಿದೆ.


ಸುನಕ್​ ಬಗ್ಗೆ ಹೀಗಾ ಹೇಳೋದು ಎಂದ ನೆಟ್ಟಿಗರು!


ಲ್ಯಾರಿಯ ಖಾತೆಯಲ್ಲಿ ಸುನಕ್ ಕುಟುಂಬದ ಕುರಿತು ಹೇಳಿಕೆ ಪ್ರಕಟವಾಗಿದ್ದು ಸುನಕ್ ಆಗರ್ಭ ಶ್ರೀಮಂತರಾಗಿರುವುದರಿಂದ ಇನ್ನು ನನ್ನ ಮೆನುವಿನಲ್ಲಿ ಮೀನಿನ ಚಟ್ನಿ ಹಾಗೂ ಕಡಲ ಏಡಿಯ ಖಾದ್ಯವಿರಲಿದೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಹಾಸ್ಯದ ಮತ್ತು ವ್ಯಂಗ್ಯಾತ್ಮಕ ಟ್ವೀಟ್‌ಗಳೊಂದಿಗೆ, ಲ್ಯಾರಿ ಟ್ವಿಟರ್ ಬಳಕೆದಾರರಿಂದ ಅನೇಕ ವಿನೋದಕರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

Published by:ವಾಸುದೇವ್ ಎಂ
First published: