ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ಮೊಘಲ್ ಉದ್ಯಾನವನವನ್ನು ಜನವರಿ (January) 31 ರಂದು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾಗಿದೆ. ಉದ್ಯಾನವನದ ಹೆಸರನ್ನು ಬದಲಾಯಿಸಲಾಗಿದ್ದು ಹೊಸ ಹೆಸರಾದ ಅಮೃತ್ ಉದ್ಯಾನವನ ಇದೀಗ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಹಿಂದೆ ಇದ್ದ ಮೊಘಲ್ ಉದ್ಯಾನವನದ ಹೆಸರನ್ನು ಅಮೃತ್ ಉದ್ಯಾನವನ ಎಂಬುದಾಗಿ ಬದಲಾಯಿಸಿದ್ದು ವಸಾಹತು ಶಾಹಿ ಆಡಳಿತದ ಅವಶೇಷವನ್ನು ಭಗ್ನಾವಶೇಷಗೊಳಿಸಿರುವುದು ಮಾತ್ರವಲ್ಲದೆ ಅಮೃತ ಕಾಲ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷವು (BJP) ತನ್ನ ಅಧಿಕಾರ ವ್ಯಾಪ್ತಿಗೆ ಬರುವ ಪ್ರತಿಯೊಂದು ರಾಜ್ಯದಲ್ಲೂ (State) ನಗರಗಳ ಹೆಸರನ್ನು ಮರುನಾಮಕರಣ ಮಾಡುತ್ತಿರುವುದು ಇತಿಹಾಸವನ್ನು ಮರು ಬರೆಯಲು ಸರಕಾರದ ಮತ್ತೊಂದು ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿಯವರ ವಿಮರ್ಶಕರು ಗಮನಸೆಳೆದಿದ್ದಾರೆ.
ಮೊಘಲ್ ಇಂಡಿಯಾದ ವಾಸ್ತುಶಿಲ್ಪ ಶೈಲಿಯ ಕುರಿತು ಪುಸ್ತಕಗಳನ್ನು ಬರೆದಿರುವ ಭಾರತೀಯ ಪುರಾತತ್ವ ಸಮೀಕ್ಷೆಯ ಮಾಜಿ ನಿರ್ದೇಶಕ ಜಿ ಎಸ್ ಖ್ವಾಜಾ ಉದ್ಯಾನವನದ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ
ಮೊಘಲ್ ಗಾರ್ಡನ್ಸ್ ಎಂಬ ಹೆಸರು ಹೇಗೆ ಬಂತು? ಅದಕ್ಕೂ ಮೊಘಲರಿಗೂ ಏನು ಸಂಬಂಧ?
ಚಹರ್ ಬಾಗ್ ಮಾದರಿಯ ಉದ್ಯಾನಗಳನ್ನು ಇರಾನ್‌ನಿಂದ ಭಾರತಕ್ಕೆ ತಂದವರು ಮೊಘಲರು ಹಾಗಾಗಿಯೇ ಉದ್ಯಾನಗಳಿಗೆ ಅವರ ಹೆಸರನ್ನೇ ಇಡಲಾಗಿದೆ. ಮೊಘಲರ ಅವಧಿಯಲ್ಲಿಯೇ ಉದ್ಯಾನದ ಈ ಶೈಲಿ ಜನಪ್ರಿಯತೆಯನ್ನು ಪಡೆದುಕೊಂಡಿತು.
ಇದನ್ನೂ ಓದಿ: ಡ್ರೀಮ್ ಇಲೆವೆನ್‌ನಲ್ಲಿ ಸಿಕ್ತು ಬಂಪರ್, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಿಯುಸಿ ಓದುತ್ತಿದ್ದ ಹುಡುಗ!
ಮೊಘಲ್ ಚಕ್ರವರ್ತಿ ಜಹಾಂಗೀರ್ ಅವರ ಮಾವ, ಸಾಮ್ರಾಜ್ಞಿ ನೂರ್ ಜಹಾನ್ ಅವರ ತಂದೆಯಾದ ಇತಿಮದ್-ಉದ್-ದೌಲಾ ವಾಸ್ತುಶಿಲ್ಪಿಯಾಗಿದ್ದರು ಹಾಗೂ ಭಾರತದ ನೆಲದಲ್ಲಿ ಈ ಮಾದರಿಯ ಉದ್ಯಾನಗಳನ್ನು ಜನಪ್ರಿಯಗೊಳಿಸಿದರು ಎಂದು ಖ್ವಾಜಾ ತಿಳಿಸಿದ್ದಾರೆ.
ಮೊಘಲ್ ಶೈಲಿಯ ಉದ್ಯಾನ ಪರಿಕಲ್ಪನೆಯನ್ನು ಭಾರತಕ್ಕೆ ತಂದವರು ಬಾಬರ್ ಅಲ್ಲವೇ? ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಖ್ವಾಜಾ ಬಾಬರ್ ಆಗ್ರಾದಲ್ಲಿ ಅರಾಮ್ ಬಾಗ್ (ಈಗ ರಾಮ್ ಬಾಗ್ ಎಂದು ಕರೆಯಲಾಗುತ್ತದೆ) ಎಂಬ ಉದ್ಯಾನವನ್ನು ನಿರ್ಮಿಸಿದನು ಎಂಬುದಾಗಿ ತಿಳಿಸಿದ್ದಾರೆ.
ಬಾಬರ್ ಮರಣದ ನಂತರ ಆ ಉದ್ಯಾನದಲ್ಲಿಯೇ ಆತನ ಸಮಾಧಿ ಮಾಡಲಾಯಿತು ನಂತರ ಆತನ ದೇಹವನ್ನು ಕಾಬೂಲ್‌ಗೆ ಸ್ಥಳಾಂತರಿಸಲಾಯಿತು ಮತ್ತು ಬಾಗ್-ಎ-ಬಾಬರ್‌ನಲ್ಲಿ ಸಮಾಧಿ ಮಾಡಲಾಯಿತು ಎಂದು ಖ್ವಾಜಾ ತಿಳಿಸಿದ್ದಾರೆ. ಹಾಗಾಗಿ ಮೊಘಲ್ ಅವಧಿಯ ಉದ್ಯಾನದ ಪರಿಕಲ್ಪನೆಯು ಬಾಬರ್‌ನ ಅವಧಿಯಿಂದಲೇ ಆರಂಭವಾಯಿತು ಎಂಬ ಮಾಹಿತಿಯನ್ನು ಖ್ವಾಜಾ ನೀಡಿದ್ದಾರೆ.
ಬಾಬರ್ ಉಜ್ಬೇಕಿಸ್ತಾನ್‌ನ ಫರ್ಗಾನಾ ಕಣಿವೆಯ ಮೂಲದವನಾಗಿದ್ದು ಆ ಮಾದರಿಯ ಉದ್ಯಾನಗಳ ರಚನೆಯನ್ನು ಭಾರತದಲ್ಲಿ ಕಂಡಿರಲಿಲ್ಲ. ಈ ಕಾರಣದಿಂದ ಇಂತಹ ಉದ್ಯಾನಗಳನ್ನು ಭಾರತದಲ್ಲಿ ಆರಂಭಿಸಿದನು. ಉಜ್ಬೇಕಿಸ್ತಾನ್‌ನಿಂದ ಪಡೆದ ವಿವಿಧ ಹಣ್ಣು ಹಾಗೂ ಹೂವುಗಳನ್ನು ಈ ಉದ್ಯಾನದಲ್ಲಿ ಬೆಳೆಸಿದರು ಎಂದು ಖ್ವಾಜಾ ಮಾಹಿತಿ ನೀಡಿದ್ದಾರೆ.
ಬಾಬರ್ ತನ್ನ ಆತ್ಮಚರಿತ್ರೆ ತುಜ್ಕ್-ಎ-ಬಾಬ್ರಿ (ಬಾಬರ್ನಾಮಾ) ದಲ್ಲಿ ಉದ್ಯಾನವನ್ನು ಹೇಗೆ ನಿರ್ಮಿಸಬೇಕು ಮತ್ತು ನಗರವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ಅವರು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಖ್ವಾಜಾ ಮಾಹಿತಿ ನೀಡಿದ್ದಾರೆ.
ಮೊಘಲರ ಮೊದಲು ಭಾರತದಲ್ಲಿ ಉದ್ಯಾನಗಳ ಪರಿಕಲ್ಪನೆ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಖ್ವಾಜಾ, ಕೆಲವೊಂದು ಮರಗಳು ಆ ಸಮಯದಲ್ಲಿ ಉದ್ಯಾನಗಳಲ್ಲಿತ್ತು ಅದರಲ್ಲಿ ವಾಟಿಕಾ, ಆಲದ ಮರ, ಅಶೋಕ ವೃಕ್ಷ ಮೊದಲಾದ ಸಸ್ಯ ಸಂಪತ್ತುಗಳಿದ್ದವು ಎಂಬುದಾಗಿ ಖ್ವಾಜಾ ತಿಳಿಸಿದ್ದಾರೆ.
ಚಹಾರ್ ಬಾಗ್ ಉದ್ಯಾನದ ಪರಿಕಲ್ಪನೆ ಏನು?
ಉದ್ಯಾನದ ಮಾದರಿಯಾಗಿದ್ದು, ಇದರಲ್ಲಿ ಎರಡು ನೀರಿನ ಕಾಲುವೆಗಳು ಪರಸ್ಪರ ಇಬ್ಭಾಗವಾಗುತ್ತವೆ. ನಂತರ ಅವು ಉದ್ಯಾನವನವನ್ನು ನಾಲ್ಕು ಭಾಗಗಳಾಗಿ ವಿಭಾಗಿಸುತ್ತವೆ. ಹಾಗಾಗಿ ಇಂತಹ ಉದ್ಯಾನಕ್ಕೆ ಚಹಾರ್ ಬಾಗ್ ಎಂಬ ಹೆಸರಿದೆ. ಏಕೆಂದರೆ ಒಂದೇ ಉದ್ಯಾನದಲ್ಲಿ ನಾಲ್ಕು ವಿಭಾಗಗಳನ್ನು ಹೊಂದಿರುವ ಉದ್ಯಾನವನ ಇದಾಗಿದೆ. ಉದ್ಯಾನದ ಮಧ್ಯಭಾಗದಲ್ಲಿ ಅರಮನೆ ಅಥವಾ ಸಮಾಧಿ ಇರುವುದು ಇಂತಹ ಉದ್ಯಾನವನಗಳ ವಿಶೇಷತೆಯಾಗಿದೆ ಎಂದು ಖ್ವಾಜಾ ತಿಳಿಸಿದ್ದಾರೆ.
ಹೇಗೆ ಮತ್ತು ಯಾವಾಗ ಮೊಘಲರು ಇರಾನಿ ಶೈಲಿಯ ವಾಸ್ತುಶಿಲ್ಪ ಮತ್ತು ಉದ್ಯಾನಗಳಿಂದ ಪ್ರಭಾವಿತರಾಗಲು ಪ್ರಾರಂಭಿಸಿದರು?
ಎರಡನೇ ಮೊಘಲ್ ಚಕ್ರವರ್ತಿ ಹುಮಾಯೂನ್ ಶೇರ್ ಶಾ ಸೂರಿಗೆ ಯುದ್ಧದಲ್ಲಿ ಸೋತ ನಂತರ, ಆತ ಇರಾನ್‌ಗೆ ತೆರಳಿದನು ಮತ್ತು ಆಗಿನ ಇರಾನ್‌ನ ಶಾ ಅಡಿಯಲ್ಲಿ ಆಶ್ರಯ ಪಡೆದನು.
ಇರಾನ್‌ನ ಸಫಾವಿಡ್ ರಾಜವಂಶದ ಸಹಾಯದಿಂದ ಭಾರತದಲ್ಲಿ ಪುನಃ ತನ್ನ ಅಧಿಪತ್ಯವನ್ನು ಆರಂಭಿಸಿದನು. ಆತ ಭಾರತಕ್ಕೆ ಹಿಂತಿರುಗಿದಾಗ, ಅನೇಕ ಇರಾನಿಯನ್ನರು, ಕವಿಗಳು, ಕ್ಯಾಲಿಗ್ರಾಫರ್ಗಳು ಮತ್ತು ವರ್ಣಚಿತ್ರಕಾರರು ಭಾರತಕ್ಕೆ ಬಂದರು. ಮೊಘಲ್ ಚಕ್ರವರ್ತಿ ಜಹಾಂಗೀರ್‌ನ ಮಾವ ಇತಿಮದ್-ಉದ್-ದೌಲಾ ತಮ್ಮೊಂದಿಗೆ ಅನೇಕ ವಾಸ್ತುಶಿಲ್ಪಿಗಳನ್ನು ಭಾರತಕ್ಕೆ ಕರೆತಂದರು.
ಭಾರತದಲ್ಲಿ ಇಸ್ಲಾಮಿಕ್ ವಾಸ್ತುಶೈಲಿಯನ್ನು ಗಮನಿಸಿದರೆ, ಇರಾನಿನ ಪ್ರಭಾವದಿಂದಾಗಿ ಆ ರಚನೆಗಳಲ್ಲಿ ಸೌಂದರ್ಯವಿರುವುದನ್ನು ಗುರುತಿಸಬಹುದಾಗಿದೆ.
ಸುಲ್ತಾನರ ಯುಗದ (1206-1526) ಕಾಲದಲ್ಲಿ, ಅವರು ನಿರ್ಮಿಸಿದ ಇಸ್ಲಾಮಿಕ್ ರಚನೆಗಳು ಬಹಳ ದೃಢವಾಗಿದ್ದವು. ಗುಮ್ಮಟವು ವರ್ಧವೃತ್ತದಲ್ಲಿತ್ತು ಹಾಗೂ ಅದನ್ನು ತುಂಬಾ ಭಾರವಾಗಿ ನಿರ್ಮಿಸಲಾಗುತ್ತಿತ್ತು. ಇರಾನಿಯನ್ನರು ಭಾರತದಲ್ಲಿ ಇಸ್ಲಾಮಿಕ್ ರಚನೆಗಳಿಗೆ ಜೀವಂತಿಕೆ ಹಾಗೂ ಸೌಂದರ್ಯವನ್ನು ತಂದರು.
ಚಹಾರ್‌ಬಾಗ್ ವಿನ್ಯಾಸ ಹೊಂದಿರುವ ಭಾರತದ ಮೊದಲ ಉದ್ಯಾನವನ
ಹುಮಾಯೂನ್‌ನ ರಾಣಿ ಹಾಜಿ ಬೇಗಂ ಇರಾನ್‌ನ ಚಹರ್-ಬಾಗ್ ಮಾದರಿಯಲ್ಲಿ ಹುಮಾಯೂನ್‌ಗಾಗಿ ಸಮಾಧಿಯನ್ನು ನಿರ್ಮಿಸಿದಳು.
ಇರಾನ್‌ನ ಸುಲ್ತಾನಿಯಾದಲ್ಲಿ ಸುಲ್ತಾನ್ ಮುಹಮ್ಮದ್ ಖುದಾಬಂಡಾ ಉಲ್ಜಯ್ತು ಅವರ ಸಮಾಧಿಯ ವಿನ್ಯಾಸದಿಂದ ಮೊಘಲ್ ಎಂಜಿನಿಯರ್‌ಗಳು ಪ್ರಭಾವಿತರಾದರು.
ಮೊಘಲರು ತಮ್ಮ ಕಟ್ಟಡಗಳನ್ನು ನಿರ್ಮಿಸಲು ಪ್ರಾರಂಭಿಸಿದಾಗ, ಅವರು ಭಾರತದಲ್ಲಿ ಈ ಉದ್ಯಾನಗಳನ್ನು ನಿರ್ಮಿಸಲು ಪ್ರಾರಂಭಿಸಿದ ಇರಾನ್‌ನಿಂದ ಸಿವಿಲ್ ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ಮಿಮಾರ್‌ಗಳು (ಮೇಸನ್‌ಗಳು), ಕ್ಯಾಲಿಗ್ರಾಫರ್‌ಗಳು ಮತ್ತು ವರ್ಣಚಿತ್ರಕಾರರನ್ನು ಪಡೆದುಕೊಂಡರು.
ಮೊಘಲರು ಭಾರತದಲ್ಲಿ ಎಷ್ಟು ಉದ್ಯಾನಗಳನ್ನು ನಿರ್ಮಿಸಿದರು?
ಅವಿಭಜಿತ ಭಾರತದ ಒಟ್ಟು ಉದ್ಯಾನಗಳನ್ನು ಎಣಿಕೆ ಮಾಡಿದಾಗ ಇಂತಹ ಉದ್ಯಾನಗಳ ಸಂಖ್ಯೆ ಬಹಳಷ್ಟಾಗುತ್ತದೆ. ಅದು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಉದ್ಯಾನಗಳನ್ನು ಈ ಸಂಖ್ಯೆ ಒಳಗೊಂಡಿದೆ.
ಈ ಮೂರು ದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಸುಮಾರು 30 ಉದ್ಯಾನಗಳನ್ನು ನಿರ್ಮಿಸಿರಬೇಕು ಎಂಬುದು ಖ್ವಾಜಾ ಅಭಿಪ್ರಾಯವಾಗಿದೆ. ಇಂದಿನ ದಿನಗಳಲ್ಲಿ ಈ ಉದ್ಯಾನಗಳು ಭಾರತದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕಂಡುಬರುತ್ತವೆ.
ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಮೊಘಲರು ಮಹಲ್ ಗುಲಾರಾವನ್ನು ನಿರ್ಮಿಸಿದರು. ಬುರ್ಹಾನ್‌ಪುರವನ್ನು ದರೂರ್-ಸುರೂರ್ (ಆನಂದಿಸುವ ಸ್ಥಳ) ಎಂದು ಕರೆಯಲಾಗುತ್ತಿತ್ತು. ಮೊಘಲರು ಮೊಘಲ್ ಶೈಲಿಯ ಉದ್ಯಾನಗಳನ್ನು ನಿರ್ಮಿಸಿದ್ದು ತಮ್ಮ ಆಳ್ವಿಕೆಯ ಸಮಯದಲ್ಲಿ ಹೆಚ್ಚಿನ ಉದ್ಯಾನಗಳನ್ನು ನಿರ್ಮಿಸಿದ್ದಾರೆ.
ಮೊಘಲರು ಉದ್ಯಾನ ರಚನೆಯ ಸಮಯದಲ್ಲಿ ಪರಿಚಯಿಸಿದ ಕಲ್ಪನೆಗಳು ಯಾವುವು?
ಆಯತಾಕಾರದ ಮುತ್ತಿನ ತೋಟಗಳು, ಉದ್ದನೆಯ ಚಿಟ್ಟೆ ಉದ್ಯಾನಗಳು, ವೃತ್ತಾಕಾರದ ಉದ್ಯಾನಗಳು ಮತ್ತು ತಾರಸಿ ತೋಟಗಳ ಪರಿಕಲ್ಪನೆಯನ್ನು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಾರಿಗೆ ತಂದಿದೆಯಾದರೂ ಇಂತಹ ವಿನ್ಯಾಸಗಳನ್ನು ಮೊಘಲರು ಜಾರಿಗೆ ತರಲಿಲ್ಲ.
ಶ್ರೀನಗರದ ಉದ್ಯಾನಗಳಲ್ಲಿ ಟುಲಿಪ್‌ಗಳಂತಹ ವಿದೇಶಿ ಹೂವುಗಳನ್ನು ಸಂಪೂರ್ಣವಾಗಿ ಬೆಳೆದಿದ್ದಾರೆ. ಈ ಉದ್ಯಾನವನ ಶ್ರೀನಗರದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಹೂವುಗಳನ್ನು ಇರಾನ್‌ನಿಂದ ತಂದು ಈ ಉದ್ಯಾನದಲ್ಲಿ ನೆಡಲಾಗಿದೆ. ಮಂಡುವಿನಲ್ಲಿಯೂ ಮೊಘಲರು ಅನೇಕ ಒಳ್ಳೆಯ ತೋಟಗಳನ್ನು ನಿರ್ಮಿಸಿದರು ಎಂಬುದು ಖ್ವಾಜಾ ಅಭಿಪ್ರಾಯವಾಗಿದೆ.
ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಹೆಸರನ್ನು ಅಮೃತ್ ಉದ್ಯಾನ್ ಎಂದು ಬದಲಾಯಿಸಲಾಗಿದೆ
1917 ರಲ್ಲಿ, ಹಳೆಯ ತುಘಲಕ್ ಆಳ್ವಿಕೆಯ ನಗರದ ಆಧಾರವನ್ನು ಪಡೆದುಕೊಂಡು ಬ್ರಿಟಿಷರು ಹೊಸ ದೆಹಲಿಯ ಹೊಸ ನಗರವನ್ನು ನಿರ್ಮಿಸಿದರು.
1911 ರಲ್ಲಿ ಕಲ್ಕತ್ತಾವನ್ನು ಬದಲಿಸಿ ದೆಹಲಿಯು ಬ್ರಿಟಿಷ್ ಭಾರತದ ರಾಜಧಾನಿಯಾದ ನಂತರ ನಗರದ ಬದಲಾವಣೆಯನ್ನು ಮಾಡಿದರು. ಅಧ್ಯಕ್ಷರ ಅರಮನೆಯಲ್ಲಿರುವ ಮೊಘಲ್ ಉದ್ಯಾನವನಗಳಿಗೂ ಮೊಘಲರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ವಾಸ್ತುಶಿಲ್ಪಿ ಎಡ್ವರ್ಡ್ ಲುಟ್ಯೆನ್ಸ್ ಪಾತ್ರ ಇಲ್ಲಿ ಮಹತ್ವದ್ದಾಗಿದೆ.
ವಿಲಿಯಂ ಮಸ್ಟೋ ಅವರು ಆ ಸಮಯದಲ್ಲಿ ತೋಟಗಾರಿಕಾ ನಿರ್ದೇಶಕರಾಗಿದ್ದರು ಮತ್ತು ಅವರು ಕಾಶ್ಮೀರದ ಶಾಲಿಮಾರ್ ಮತ್ತು ನಿಶಾತ್ ಉದ್ಯಾನಗಳಂತಹ ಉದ್ಯಾನವನಗಳನ್ನು ಗಮನದಲ್ಲಿಟ್ಟುಕೊಂಡು ಈ ರಾಷ್ಟ್ರಪತಿ ಭವನದ ಉದ್ಯಾನ ಯೋಜನೆಯನ್ನು ರೂಪಿಸಿದರು.
ಈ ಕಾಶ್ಮೀರ ಉದ್ಯಾನಗಳನ್ನು ಮೊಘಲರು ನಿರ್ಮಿಸಿದ್ದರಿಂದ, ವಿಲಿಯಂ ಮುಸ್ಟೋ ಅವರು ಮೊಘಲರ ಹೆಸರನ್ನು ರಾಷ್ಟ್ರಪತಿ ಭವನದ ಉದ್ಯಾನವನಕ್ಕೆ ಇರಿಸಿದ್ದರು ಎಂಬುದು ಖ್ವಾಜಾ ಹೇಳಿಕೆಯಾಗಿದೆ. ಮೊಘಲ್ ಉದ್ಯಾನದ ಮಾದರಿಯಲ್ಲಿ ನಿರ್ಮಿಸಿದ ಕಾರಣ ಅವರು ಮೊಘಲ್ ಗಾರ್ಡನ್ಸ್ ಎಂದು ಹೆಸರಿಟ್ಟರು.
ಉದ್ಯಾನಗಳಿಗೆ ಕಾರಂಜಿ ಪರಿಕಲ್ಪನೆಯನ್ನು ಭಾರತದಲ್ಲಿ ಮೊಘಲರು ಪರಿಚಯಿಸಿದರು ಇದು ಎಷ್ಟು ನಿಜ
ಹೌದು. ಅಬ್ದುಲ್ ರಹೀಮ್ ಖಾನ್-ಇ-ಖಾನನ್ ಭಾರತದ ಉದ್ಯಾನಗಳಲ್ಲಿ ಕಾರಂಜಿ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದರು. ಮೊಘಲರು ಉದ್ಯಾನದ ಮಧ್ಯಭಾಗದಲ್ಲಿ ಕಾರಂಜಿ ಇರುತ್ತದೆ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ