• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕಾಂಗ್ರೆಸ್​ಗೆ ಬುದ್ಧಿವಂತ ಮಹಿಳೆಯರು ಬೇಕಾಗಿಲ್ಲ; ಅವರ ಬುದ್ಧಿ ಕುಂಠಿತ: ತಮಿಳುನಾಡು ಕೈ ನಾಯಕರ ವಿರುದ್ಧ ಖುಷ್ಭೂ ವಾಗ್ದಾಳಿ

ಕಾಂಗ್ರೆಸ್​ಗೆ ಬುದ್ಧಿವಂತ ಮಹಿಳೆಯರು ಬೇಕಾಗಿಲ್ಲ; ಅವರ ಬುದ್ಧಿ ಕುಂಠಿತ: ತಮಿಳುನಾಡು ಕೈ ನಾಯಕರ ವಿರುದ್ಧ ಖುಷ್ಭೂ ವಾಗ್ದಾಳಿ

ಖುಷ್ಬೂ ಸುಂದರ್

ಖುಷ್ಬೂ ಸುಂದರ್

Khushbu Sundar: ದ್ರಾವಿಡ ಚಳುವಳಿ ಪಿತಾಮಹ ಪೆರಿಯಾರ್​ ಇವಿ ರಾಮಸ್ವಾಮಿ ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದವರು. ಅವರ ಅನುಯಾಯಿಯಾದ ನನಗೆ, ಕಾಂಗ್ರೆಸ್​ ಪಕ್ಷ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡಲಿಲ್ಲ

  • Share this:

ಚೆನ್ನೈ (ಅ.13):  ಕಾಂಗ್ರೆಸ್​ ತೊರೆದು ಬಿಜೆಪಿಯ ಕಮಲ ಹಿಡಿದ ಒಂದು ದಿನದೊಳಗೆ ತಮ್ಮ ಮಾಜಿ ಪಕ್ಷದ ವಿರುದ್ಧ ನಟಿ, ರಾಜಕಾರಣಿ ಖುಷ್ಭೂ ಸುಂದರ್​ ವಾಗ್ದಾಳಿ ನಡೆಸಿದ್ದಾರೆ. 'ಕಾಂಗ್ರೆಸ್​ಗೆ ಬುದ್ದಿವಂತ ಮಹಿಳೆಯರು ಬೇಕಾಗಿಲ್ಲ. ಅಲ್ಲಿ ಸತ್ಯವನ್ನು ಗಟ್ಟಿಯಾಗಿ ಹೇಳುವ ಹಕ್ಕಿಲ್ಲ' ಎಂದು ಕಿಡಿಕಾರಿದ್ದಾರೆ. ತಮಿಳುನಾಡಿನ ಕಾಂಗ್ರೆಸ್ ವಕ್ತಾರೆಯಾಗಿದ್ದ ನಟಿ  ಬಿಜೆಪಿ, ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಿದ್ದರು. ಆದರೆ, ಈಗ ಅಧಿಕೃತವಾಗಿ ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್​ ವಿರುದ್ಧ ಹರಿಹಾಯಲು ಮುಂದಾಗಿದ್ದಾರೆ. ತಮಿಳುನಾಡು ಕಾಂಗ್ರೆಸ್​ನ ಗಟ್ಟಿಧ್ವನಿಯಾಗಿದ್ದ ಖುಷ್ಭೂ ಯಾಕಾಗಿ ಪಕ್ಷವನ್ನು ತೊರೆದಿದ್ದಾಗಿ ತಿಳಿಸಿದ್ದಾರೆ. 'ಕಾಂಗ್ರೆಸಿನ ಕೆಲ ನಾಯಕರು ತಮ್ಮನ್ನು ತುಳಿಯುತ್ತಿದ್ದರು ಹಾಗೂ ಸರ್ವಧಿಕಾರಿಗಳಂತೆ ವರ್ತಿಸುತ್ತಿದ್ದರು' ಎಂದು ಆರೋಪಿಸಿದ್ದಾರೆ.


ದೆಹಲಿಯಲ್ಲಿ ಬಿಜೆಪಿ ಸೇರ್ಪಡನೆಗೊಂಡು ಇಂದು ಚೆನ್ನೈಗೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿಯೇ ಕಾಂಗ್ರೆಸ್​ ಬಗ್ಗೆ ಟೀಕೆ ಶುರು ಮಾಡಿದರು. ತಮಿಳುನಾಡು ರಾಜ್ಯ ಕಾಂಗ್ರೆಸ್​ ನಾಯಕರು 'ಬುದ್ಧಿ ಕುಂಠಿತವಾಗಿದೆ' ಎಂದು ವಾಗ್ದಾಳಿ ನಡೆಸಿದರು.


ಬಳಿಕ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ಕಾಂಗ್ರೆಸ್​ಗೆ ನಿಷ್ಠೆಯಾಗಿದ್ದೆ. ಆದರೆ, ಕಾಂಗ್ರೆಸ್​ ನನಗೆ ಅಗೌರ ತೋರಿಸಿತು. ಅವರಿಗೆ ಕುಶಲಮತೆ ಇರುವವರು ಬೇಡ'  ಎಂದರು.


'ದ್ರಾವಿಡ ಚಳುವಳಿ ಪಿತಾಮಹ ಪೆರಿಯಾರ್​ ಇವಿ ರಾಮಸ್ವಾಮಿ ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದವರು. ಅವರ ಅನುಯಾಯಿಯಾದ ನನಗೆ, ಕಾಂಗ್ರೆಸ್​ ಪಕ್ಷ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡಲಿಲ್ಲ'  ಎಂದು ಆಪಾದಿಸಿದ್ದಾರೆ.


ಈ ಹಿಂದೆ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿ ಈಗ ಅದೇ ಪಕ್ಷಕ್ಕೆ ಸೇರಿರುವ ಬಗ್ಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ಸದಸ್ಯೆಯಾದಾಗ ಬಿಜೆಪಿಯನ್ನು ಟೀಕಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸುತ್ತಿರಲಿಲ್ಲ. ಪ್ರಧಾನಿ ಮೋದಿ ಅವರ ಕೆಲವು ವಿಷಯಗಳನ್ನು ಶ್ಲಾಘಿಸಿದ್ದೇನೆ ಎಂದು ಕೂಡ ತಿಳಿಸಿದರು.


ಪ್ರಧಾನ ಮಂತ್ರಿಯವರ ಹೊಸ ಶಿಕ್ಷಣ ಪದ್ಧತಿಯನ್ನು ನಾನು ಪ್ರಶಂಸಿದ್ದೆ. ಈ ವೇಳೆ ರಾಹುಲ್ ಗಾಂಧಿ ಅವರ ಚಿಂತನೆಯನ್ನು ಟೀಕಿಸಿದ್ದೆ. ಈ ಕುರಿತ ಟ್ವೀಟ್​ನಲ್ಲಿ ಅವರು ಪಕ್ಷದೊಂದಿಗಿನ ಅನುಮಾನಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ ಕೈಗೊಂಬೆಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.


ಇದನ್ನು ಓದಿ: ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ನಟಿ ಖುಷ್ಬೂ


ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್​ ಅಧಿಕಾರ ಹೊಂದುವುದು ಅನುಮಾನವಾಗಿದೆ. ಈ ಹಿನ್ನಲೆ ತಮ್ಮ ರಾಜಕೀಯ ಬೆಳವಣಿಗೆಗಾಗಿ ಅವರು ಬಿಜೆಪಿ ಸೇರ್ಪಡನೆಗೊಂಡಿದ್ದಾರೆ. 2021ರ ವಿಧಾನಸಭಾ ಚುನಾವಣೆ ಕೂಡ ಇದರ ಪ್ರಮುಖ ಭಾಗವಾಗಿದೆ. ಈಗಾಗಲೇ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ಈ ಚುನಾವಣೆಯಲ್ಲಿ ದೊಡ್ಡ ಸ್ಥಾನ ಸಿಗುವ ನಿರೀಕ್ಷೆ ಕೂಡ ಖುಷ್ಭೂ ಅವರಿಗೆ ಇದೆ. ಇದು ತಪ್ಪಿದ್ದಲ್ಲಿ ರಾಜ್ಯಸಭಾ ಸ್ಥಾನವಾದರೂ ಸಿಗಲಿದೆ ಎಂಬ ಮಾತು ಕೇಳಿಬಂದಿದೆ.


2010ರಲ್ಲಿ ಡಿಎಂಕೆ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ನಟಿ 2014ರಲ್ಲಿ ಕಾಂಗ್ರೆಸ್​ ಸೇರಿದ್ದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್​ ಎಂಬುದು ಮನೆಯ ಅನುಭವ ನೀಡುವ ಪಕ್ಷ. ದೇಶವನ್ನು ಒಂದುಗೂಡಿಸುವ ಹಾಗೂ ಜನರಿಗೆ ಒಳಿತು ಮಾಡುವ ಏಕೈಕ ಪಕ್ಷ ಎಂದರೆ ಕಾಂಗ್ರೆಸ್​ ಎಂದಿದ್ದರು.

First published: