HOME » NEWS » National-international » KHURDISH DOCTOR WHO TRAINED IN BENGALURU PASSED AWAY SHE HELPED YAZIDIS IN ISIS AFFECTED IRAQ AND SYRIA SKTV

ಬೆಂಗಳೂರಿನಲ್ಲಿ ಹೃದಯ ಶಸ್ತ್ರಚಿಕಿತ್ಸೆ ತರಬೇತಿ ಪಡೆದಿದ್ದ ಖುರ್ದಿಸ್ತಾನದ ವೈದ್ಯೆ ಸಾವು, ಯುದ್ಧ ಸಂತ್ರಸ್ತರ ರಕ್ಷಿಸಿದ್ದ ದಿಟ್ಟೆ !

ಡಾ ನೆಮಾಮ್ ಸುಮಾರು 7 ವರ್ಷಗಳ ಮುಂಚೆ ರಾಜಧಾನಿ ಬೆಂಗಳೂರಿನಲ್ಲಿ ಒಂದು ವರ್ಷ ವಾಸವಿದ್ದರು. ಹೃದಯ ಬಡಿಯುತ್ತಾ ಇರುವಾಗಲೇ ಕ್ಲಿಕ್ಟಕರ ಶಸ್ತ್ರಚಿಕಿತ್ಸೆ ಮಾಡುವ ವಿಧಾನಗಳನ್ನು ಕಲಿಯಲು ಆಕೆ ಇಲ್ಲಿ ಬಂದಿದ್ರು. ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿರುವ ಡಾ ವಿವೇಕ್ ಜವಳಿ ಅವರ ಬಳಿ ಈ ಎಲ್ಲಾ ವಿಧಾನಗಳನ್ನು ಕಲಿತಿದ್ದರು ಡಾ ನೆಮಾಮ್. ಚೈತನ್ಯದ ಚಿಲುಮೆಯಾಗಿದ್ದ ಡಾ ನೆಮಾಮ್ ಗಫೂರಿ ಖುದ್ದು ಓರ್ವ ನಿರಾಶ್ರಿತ ಕುಟುಂಬಕ್ಕೆ ಸೇರಿದವರು. ಸದ್ದಾಂ ಹುಸೇನ್ನ ದುರಾಡಳಿತಕ್ಕೆ ಬೇಸತ್ತು ದೇಶ ಬಿಟ್ಟು ಪಲಾಯನಗೈದ ಲಕ್ಷಾಂತರ ಕುಟುಂಬಗಳಲ್ಲಿ ಇವರದ್ದೂ ಒಂದು.

news18-kannada
Updated:April 3, 2021, 4:13 PM IST
ಬೆಂಗಳೂರಿನಲ್ಲಿ ಹೃದಯ ಶಸ್ತ್ರಚಿಕಿತ್ಸೆ ತರಬೇತಿ ಪಡೆದಿದ್ದ ಖುರ್ದಿಸ್ತಾನದ ವೈದ್ಯೆ ಸಾವು, ಯುದ್ಧ ಸಂತ್ರಸ್ತರ ರಕ್ಷಿಸಿದ್ದ ದಿಟ್ಟೆ !
ಡಾ ವಿವೇಕ್ ಜವಳಿ ಜೊತೆ ಡಾ ನೆಮಾಮ್ ಘಫೂರಿ
  • Share this:
ಸ್ವೀಡನ್ (ಏಪ್ರಿಲ್ 03): ಜಗತ್ತು ಅದೆಷ್ಟೇ ಮುಂದುವರೆದಿದೆ ಎಂದುಕೊಂಡರೂ ಇಂದಿಗೂ ಅದೆಷ್ಟೋ ಅಮೂಲ್ಯ ಜೀವಗಳು ಸದ್ದಿಲ್ಲದೇ ಮಣ್ಣಾಗುತ್ತಿವೆ. ಸದಾ ಯುದ್ಧದಿಂದ ಕಂಗೆಟ್ಟಿರುವ ತನ್ನ ದೇಶದ ಜನರಿಗೆ ಆರೋಗ್ಯದ ಮೂಲಕವಾದರೂ ಒಂದಷ್ಟು ನೆಮ್ಮದಿ ಕೊಡಲು ಬಯಸಿದ್ದ ವೈದ್ಯೆಯೊಬ್ಬರು ಅದಕ್ಕಾಗಿಯೇ ಬೆಂಗಳೂರಿಗೆ ಬಂದು ಒಂದು ವರ್ಷದ ಕಾಲ ವಿಶಿಷ್ಟ ಬಗೆಯ ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ತರಬೇತಿ ಪಡೆದು ಮರಳಿದ್ದರು. ಆದರೆ ಅಲ್ಲಿನ ಸಾವು, ನೋವು ಆಕೆಯನ್ನು ಯುದ್ಧ ಸಂತ್ರಸ್ತರ ಸೇವೆಗೆ ನಿಲ್ಲಿಸಿತ್ತು ನಿರಂತರ ಹೋರಾಟದ ಬದುಕು ನಡೆಸಿದ್ದ ಆಕೆಯನ್ನು ಒಂದು ಯಃಕಶ್ಚಿತ್ ವೈರಾಣು ಬಲಿ ತೆಗೆದುಕೊಂಡುಬಿಟ್ಟಿದೆ.

ಆಕೆ ಡಾ ನೆಮಾಮ್ ಗಫೂರಿ. ಉತ್ತರ ಇರಾಕ್ ಮತ್ತು ಸಿರಿಯಾಗಳಲ್ಲಿಇದ್ದ ಜಗತ್ತು ಮರೆತ ಯುದ್ಧ ನಿರಾಶ್ರಿತರ ಪಾಲಿನ ಏಕೈಕ ಆಶಾಕಿರಣವಾಗಿದ್ದಾಕೆ. 52 ವರ್ಷದ ಡಾ ಗಫೂರಿ 10 ದಿನಗಳ ಹಿಂದೆರದ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಖುರ್ದಿಸ್ಥಾನದ ಎರ್ಬಿಲ್ ನಿಂದ ಸ್ವೀಡನ್ ಗೆ ಆಕೆಯನ್ನು ಏರ್​ಲಿಫ್ಟ್ ಮಾಡಲಾಗಿತ್ತು. ಸ್ವೀಡನ್ ನ ಸ್ಟಾಕ್​ಹೋಮ್​ನಲ್ಲಿ ಕೋವಿಡ್ ನ್ಯುಮೋನಿಯಾಗೆ ಈಕೆ ಏಪ್ರಿಲ್ 2ರಂದು ಉಸಿರು ಚೆಲ್ಲಿದ್ದಾರೆ. ಇಷ್ಟು ವರ್ಷಗಳೂ ನಿರಂತರವಾಗಿ ಐಸಿಸ್ ಉಗ್ರರ ದಬ್ಬಾಳಿಕೆಗೆ ನರಳಿದ್ದ ಅನೇಕರ ಪಾಲಿಗೆ ಇದ್ದ ಏಕೈಕ ಭರವಸೆಯಾಗಿದ್ದರು ಡಾ ನೆಮಾಮ್ ಗಫೂರಿ. ಯುದ್ಧಪೀಡಿತ ಸಿರಿಯಾ ಮತ್ತು ಇರಾಕ್​ನಿಂದ ಕಳೆದುಹೋದ ಅದೆಷ್ಟೋ ಮಕ್ಕಳನ್ನು ಐಸಿಸ್ ಉಗ್ರರ ಕಣ್ತಪ್ಪಿಸಿ ಅವರ ತಾಯಂದಿರ ಬಳಿ ಸೇರಿಸಿದ ಧೀರೆ ಈಕೆ.

ಇಂಥಾ ಡಾ ನೆಮಾಮ್ ಸುಮಾರು 7 ವರ್ಷಗಳ ಮುಂಚೆ ರಾಜಧಾನಿ ಬೆಂಗಳೂರಿನಲ್ಲಿ ಒಂದು ವರ್ಷ ವಾಸವಿದ್ದರು. ಹೃದಯ ಬಡಿಯುತ್ತಾ ಇರುವಾಗಲೇ ಕ್ಲಿಕ್ಟಕರ ಶಸ್ತ್ರಚಿಕಿತ್ಸೆ ಮಾಡುವ ವಿಧಾನಗಳನ್ನು ಕಲಿಯಲು ಆಕೆ ಇಲ್ಲಿ ಬಂದಿದ್ರು. ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿರುವ ಡಾ ವಿವೇಕ್ ಜವಳಿ ಅವರ ಬಳಿ ಈ ಎಲ್ಲಾ ವಿಧಾನಗಳನ್ನು ಕಲಿತಿದ್ದರು ಡಾ ನೆಮಾಮ್.

ಚೈತನ್ಯದ ಚಿಲುಮೆಯಾಗಿದ್ದ ಡಾ ನೆಮಾಮ್ ಗಫೂರಿ ಖುದ್ದು ಓರ್ವ ನಿರಾಶ್ರಿತ ಕುಟುಂಬಕ್ಕೆ ಸೇರಿದವರು. ಸದ್ದಾಂ ಹುಸೇನ್​ನ ದುರಾಡಳಿತಕ್ಕೆ ಬೇಸತ್ತು ದೇಶ ಬಿಟ್ಟು ಪಲಾಯನಗೈದ ಲಕ್ಷಾಂತರ ಕುಟುಂಬಗಳಲ್ಲಿ ಇವರದ್ದೂ ಒಂದು. ಹಾಗಾಗಿ ಚಿಕ್ಕಂದಿನಿಂದಲೇ ನಿರಾಶ್ರಿತರ ಬದುಕಿನ ಬವಣೆಯನ್ನು ಅನುಭವಿಸಿ ಅರಿತಿದ್ದರು ಆಕೆ. ಇವರ ಕುಟುಂಬ  ಸ್ವೀಡನ್ನಿಗೆ ತೆರಳಿ ಅಲ್ಲಿ ನೆಲೆಸಿದ್ದರು. ಆದರೆ ಉತ್ತಮ ವಿದ್ಯಾಭ್ಯಾಸ ಪಡೆದು ವೈದ್ಯೆಯಾದ ನಂತರವೂ ಪದೇ ಪದೇ ಇದೇ ಯುದ್ಧಭೂಮಿಗೆ ಬಂದು ನಿರಾಶ್ರಿತರ ನೆರವಿಗೆ ನಿಂತುಬಿಡುತ್ತಿದ್ದರು ಡಾ ನೆಮಾಮ್.
Youtube Video

ಬೆಂಗಳೂರಿನಲ್ಲಿ ಇದ್ದಷ್ಟು ದಿನ ತಾನು ಹೋದಲ್ಲೆಲ್ಲಾ ಜನರ ಸ್ನೇಹವನ್ನು ಬಹಳ ಸುಲಭವಾಗಿ ಸಂಪಾದಿಸುತ್ತಿದ್ದ ಅಪರೂಪದ ವ್ಯಕ್ತಿ ಆಕೆ ಎಂದು ನೆನಪಿಸಿಕೊಳ್ತಾರೆ ಆಕೆಯ ಮಾರ್ಗದರ್ಶಕರಾಗಿದ್ದ ಡಾ ವಿವೇಕ್ ಜವಳಿ. ತಮ್ಮ ವಿಭಾಗದ ಎಲ್ಲಾ ಸಿಬ್ಬಂದಿಯ ಜೊತೆ ಆಕೆಯ ಗೆಳೆತನವಿತ್ತು. ಇಲ್ಲಿಂದ ಕಲಿತ ವಿಶೇಷ ವಿದ್ಯೆಗಳನ್ನು ಬಳಸಿ ಮುಂದೆ ಇರಾಕಿ ಖುರ್ದಿಸ್ತಾನದಲ್ಲಿ ನ್ಯಾಷನಲ್ ಹಾರ್ಟ್ ಸೆಂಟರ್ ನಿರ್ಮಿಸಿ ಮುನ್ನಡೆಸುವ ಅಭಿಲಾಷೆ ಹೊಂದಿದ್ದರಂತೆ ಡಾ ನೆಮಾಮ್. ಆ ಮೂಲಕ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಅಲ್ಲಿನ ಜನರ ಬೆಂಬಲಕ್ಕೆ ನಿಲ್ಲುವ ಉದ್ದೇಶವಿದೆ ಎಂದು ಡಾ ವಿವೇಕ್ ಜವಳಿ ಬಳಿ ತಿಳಿಸಿದ್ದರಂತೆ.

ತನ್ನೊಡನೆ ರಾಷ್ಟ್ರೀಯ ಕಾರ್ಯಾಗಾರಗಳಿಗೆ ಭೇಟಿ ನೀಡುತ್ತಿದ್ದ ಆಕೆಗೆ ಹೊಸತನ್ನು ಕಲಿಯುವ ಹಂಬಲವಿತ್ತು. ದೇಶದ ಬಹುತೇಕ ಎಲ್ಲಾ ಹೃದ್ರೋಗ ತಜ್ಞರಿಗೆ ಡಾ ನೆಮಾಮ್ ಪರಿಚಿತರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಡಾ ಜವಳಿ. ಸಾವಿರಾರು ಎಜಿದಿ ಬಾಲಕಿಯರನ್ನು ಅಪಹರಿಸಿ ಲೈಂಗಿಕ ನಿರಾಶ್ರಿತರಂತೆ ನಡೆಸಿಕೊಳ್ತಿದ್ದ ಐಸಿಸ್ ಮೇಲೆ ಆಕೆಗೆ ವಿಪರೀತ ಕೋಪವಿತ್ತು. ನ್ಯಾಶನಲ್ ಹಾರ್ಟ್ ಸೆಂಟರ್ ತೆರೆಯುವ ತನ್ನ ಕನಸನ್ನು ಅಲ್ಲೇ ಬಿಟ್ಟು ಐಸಿಸ್ – ಪೇಶ್ಮೆರ್ಗಾ ನಡುವಿನ ಯುದ್ಧದಲ್ಲಿ ನೊಂದವರ ಸಹಾಯಕ್ಕೆ ನಿಂತುಬಿಟ್ಟಿದ್ದಳಾಕೆ. ಇಷ್ಟೆಲ್ಲಾ ಉತ್ತಮ ಕೆಲಸಗಳಿಗೆ ಜೀವನವನ್ನೇ ಮುಡಿಪಾಗಿಟ್ಟ ಆಕೆಯ ಸಾವು ಅನೇಕರ ಪಾಲಿಗೆ ದೊಡ್ಡ ಆಘಾತವಾಗಿದೆ.
Published by: Soumya KN
First published: April 3, 2021, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories