ಬಹುತೇಕ ಅತ್ಯಾಚಾರ ಪ್ರಕರಣಗಳು ಕಪೋಲಕಲ್ಪಿತ; ಮಹಿಳೆಯರು ಸುಳ್ಳುಗಾರರೆಂದ ಹರಿಯಾಣ ಮುಖ್ಯಮಂತ್ರಿ

ರಾಜ್ಯದಲ್ಲಿ ಹೆಚ್ಚಾಗುತ್ತಿರುವ  ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹುತೇಕ ಒಪ್ಪಿತ ಸಂಬಂಧಗಳೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಮಹಿಳೆಯರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ಧಾರೆ.

Seema.R | news18
Updated:November 17, 2018, 7:09 PM IST
ಬಹುತೇಕ ಅತ್ಯಾಚಾರ ಪ್ರಕರಣಗಳು ಕಪೋಲಕಲ್ಪಿತ;  ಮಹಿಳೆಯರು ಸುಳ್ಳುಗಾರರೆಂದ ಹರಿಯಾಣ ಮುಖ್ಯಮಂತ್ರಿ
ಹರಿಯಾಣ ಮುಖ್ಯಮಂತ್ರಿ
  • News18
  • Last Updated: November 17, 2018, 7:09 PM IST
  • Share this:
ನವದೆಹಲಿ (ನ.17): ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಬಹುತೇಕವು ಸುಳ್ಳುಗಳು ಮಹಿಳೆಯರು ತಮ್ಮ ಪರಿಚಿತ ವ್ಯಕ್ತಿಗಳೊಂದಿಗೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಾಗ ಅತ್ಯಾಚಾರ ಅಸ್ತ್ರವನ್ನು ಬಳಸುತ್ತಾರೆ ಎಂದು  ಹರಿಯಾಣ ಮುಖ್ಯಮಂತ್ರಿ  ಮನೋಹರ್​ ಲಾಲ್​ ಖಟ್ಟರ್ ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ಧಾರೆ.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದೆ. ಆದರೆ, ಈ ಪ್ರಕರಣಗಳಲ್ಲಿ ದೌರ್ಜನ್ಯ ನಡೆದಿರುವುದಿಲ್ಲ.  ಅನೇಕವು ಸುಳ್ಳು ಪ್ರಕರಣಗಳಾಗಿದೆ. ಅಲ್ಲದೇ ಈ ವಿಷಯದಲ್ಲಿ ಮಹಿಳೆಯರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದಿದ್ದಾರೆ.

ಇದನ್ನು ಓದಿ: ಅಧಿಕಾರಿಯ ಅಮಾನವೀಯತೆಗೆ ಮಗು ಬಲಿ; ಆ್ಯಂಬುಲೆನ್ಸ್​ ಸಿಗದೆ ಮಗನ ಶವದ ಜೊತೆ 8 ಗಂಟೆ ಬಸ್​ನಲ್ಲಿ ಪ್ರಯಾಣಿಸಿದ ಅಪ್ಪ

ರಾಜ್ಯದಲ್ಲಿ ಹೆಚ್ಚಾಗುತ್ತಿರುವ  ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹುತೇಕ ಒಪ್ಪಿತ ಸಂಬಂಧಗಳೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಮಹಿಳೆಯರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ಧಾರೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿಲ್ಲ ಎಂದಿದ್ದಾರೆ.

 

ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡ 80ರಿಂದ90ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆ ಮತ್ತು ಆರೋಪಿ ಪರಸ್ಪರ ಪರಿಚಿತರಾಗಿರುತ್ತಾರೆ. ಅವರ ನಡುವಿನ ಸಂಬಂಧ ಏನಾದರೂ ಅಡಚಣೆ ಉಂಟಾದಲ್ಲಿ ಈ ರೀತಿ ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ. ಇದು ಎಫ್​ಐಆರ್​ ಪ್ರಕರಣಗಳಲ್ಲಿ ಬಯಲು ಕೂಡ ಆಗಿದೆ ಎಂದಿದ್ದಾರೆ.

First published:November 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading