ಲೋಕಪಾಲ್​ ಸಭೆ ಬಹಿಷ್ಕರಿಸಿದ ಖರ್ಗೆ; ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಬಿಡಲ್ಲ ಎಂದು ಮೋದಿಗೆ ಹೇಳಿದ ಕಾಂಗ್ರೆಸ್ ನಾಯಕ

2013ರಂದು ಲೋಕಸಭೆ ಲೋಕಪಾಲ್​ ಕಾಯ್ದೆ ಅಂಗೀಕಾರ ಮಾಡಿತ್ತು. ಆಗ ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿ ಇತ್ತು. ಈ ಕಾಯ್ದೆ ಪ್ರಕಾರ, ಕೇಂದ್ರದಲ್ಲಿ ಲೋಕಪಾಲ್​ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಿಸಿ, ಭ್ರಷ್ಟಾಚಾರ ಎಸಗಿದ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ಅಧಿಕಾರವನ್ನು ಈ ಕಾಯ್ದೆ ನೀಡಿತ್ತು.

HR Ramesh | news18
Updated:March 15, 2019, 2:14 PM IST
ಲೋಕಪಾಲ್​ ಸಭೆ ಬಹಿಷ್ಕರಿಸಿದ ಖರ್ಗೆ; ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಬಿಡಲ್ಲ ಎಂದು ಮೋದಿಗೆ ಹೇಳಿದ ಕಾಂಗ್ರೆಸ್ ನಾಯಕ
ಮೋದಿ-ಖರ್ಗೆ
HR Ramesh | news18
Updated: March 15, 2019, 2:14 PM IST
ನವದೆಹಲಿ: ಇಂದು ನಡೆಯಲಿರುವ ಲೋಕ್​ಪಾಲ್​ ಸಮಿತಿ ಸಭೆಗೆ ಬಹಿಷ್ಕಾರ ಹಾಕಲು ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ತೀರ್ಮಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಲವಾಗಿ ಆರೋಪಿಸಿ, ಖರ್ಗೆ ಅವರು ಸಮಿತಿ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಖರ್ಗೆ ಅವರು, 'ವಿಶೇಷ ಆಹ್ವಾನಿತ ಲೋಕಪಾಲ್ ಆಯ್ಕೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ನಿಯಮವೇನಿಲ್ಲ.  ವಿರೋಧ ಪಕ್ಷಗಳ ಧ್ವನಿ ಅಡಗಿಸುವುದಕ್ಕೆ ನಾನು ಬಿಡುವುದಿಲ್ಲ," ಎಂದು ಹೇಳಿದ್ದಾರೆ.

ಅತಿದೊಡ್ಡ ವಿರೋಧ ಪಕ್ಷದ ಲೋಕಪಾಲ್ ಆಯ್ಕೆ ಸಮಿತಿ ಸದಸ್ಯನನ್ನು ಒಳಗೊಂಡಂತೆ 2014 ರಿಂದೀಚೆಗೆ ಲೋಕಪಾಲ್ ಕಾಯಿದೆಯ ಸಂಬಂಧಿತ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಯಾವುದೇ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ ಎಂದು ಖರ್ಗೆ ಅವರು ಹೇಳಿದ್ದಾರೆ.

ದೇಶದ ಮೊದಲ ಲೋಕಪಾಲ್ ನೇಮಕ ಸಮಿತಿ ​ ಮತ್ತು ಅದರ ಸದಸ್ಯರ​ ನೇಮಕಕ್ಕೆ ಆಯ್ಕೆ ಸಮಿತಿ ರಚಿಸುವ ಸಲುವಾಗಿ ಸಭೆ ಸೇರಲು ಇನ್ನು 10 ದಿನಗಳಲ್ಲಿ ದಿನಾಂಕ ನಿಗದಿ ಮಾಡುವಂತೆ ಮಾರ್ಚ್​ 7ರಂದು​ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿತ್ತು.

ಪ್ರಧಾನಿ, ಲೋಕಸಭೆ ಸ್ಪೀಕರ್, ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ವಿರೋಧ ಪಕ್ಷದ ನಾಯಕ ಮತ್ತು ಶ್ರೇಷ್ಠ ಜ್ಯುರಿಗಳು ಲೋಕಪಾಲ್​ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.  ಆದರೆ, ವಿರೋಧ ಪಕ್ಷದ ನಾಯಕನಿಗೆ ಅಲ್ಲಿ ಯಾವುದೇ ಸ್ಥಾನವನ್ನು ನಿಗದಿ ಮಾಡಿಲ್ಲ. ಸರ್ಕಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಶೇಷ ಆಹ್ವಾನಿತ ಎಂದು ನಿಗದಿ ಮಾಡಿ ಸಭೆಗೆ ಆಹ್ವಾನ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಖರ್ಗೆ, ಇದು ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ. ಈ ಸಭೆಯಿಂದ ನಾನು ಹೊರಗುಳಿಯುತ್ತಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ