• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Opinion: ಖಲಿಸ್ತಾನಿ ಬೆಂಬಲಿಗರು ಜ.26ರ ರೈತ ಹೋರಾಟವನ್ನು ಜಲಿಯನ್​ ವಾಲಾಬಾಗ್​ 2.0 ಆಗಿ ಪರಿವರ್ತಿಸಲು ಬಯಸಿದ್ದರೇ?

Opinion: ಖಲಿಸ್ತಾನಿ ಬೆಂಬಲಿಗರು ಜ.26ರ ರೈತ ಹೋರಾಟವನ್ನು ಜಲಿಯನ್​ ವಾಲಾಬಾಗ್​ 2.0 ಆಗಿ ಪರಿವರ್ತಿಸಲು ಬಯಸಿದ್ದರೇ?

ಜನವರಿ 26 ರಂದು ಕೆಂಪುಕೋಟೆ ಬಳಿ ನಡೆದ ಗಲಭೆ.

ಜನವರಿ 26 ರಂದು ಕೆಂಪುಕೋಟೆ ಬಳಿ ನಡೆದ ಗಲಭೆ.

ಈ ವೇಳೆ ಅನುಮಾನಿತ ವ್ಯಕ್ತಿಗಳನ್ನು ಏಕೆ ಬಂಧಿಸಿಲ್ಲ? ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್​ಪಿಸಿ) ಯ ಸೆಕ್ಷನ್ 107 ಮತ್ತು 116 (3) ರ ಅಡಿಯಲ್ಲಿ ಯಾವುದೇ ಪೂರ್ವಭಾವಿ ಕ್ರಮ ಕೈಗೊಂಡಿಲ್ಲ. ಹೀಗೆ ಎಲ್ಲಾ ವಿಭಾಗಗಳಲ್ಲೂ ಪೊಲೀಸ್​ ಇಲಾಖೆ ವಿಫಲವಾಗಿದೆ.

  • Share this:

    ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಬಳಿ ನಡೆದ ದುರದೃಷ್ಟಕರ ಹಿಂಸಾಚಾರವು ಕಾನೂನು ಜಾರಿ ಸಂಸ್ಥೆಗಳು ಮತ್ತು ಪೊಲೀಸರಿಗೆ ಪಾಠವಾಗಿ ಪರಿಣಮಿಸಿದೆ. ಯಾವುದೇ ಜನಸಮೂಹವು ಪ್ರತಿಕೂಲವಾಗಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ಮತ್ತು ಅದಕ್ಕಿಂತ ಹೆಚ್ಚಾಗಿ ನಾಯಕರಿಲ್ಲದ ಮತ್ತು ಆಜ್ಞೆ ಇಲ್ಲದ ಜನ ಸಮೂಹದಲ್ಲಿ ಏಕರೂಪತೆ ಇರಲು ಸಾಧ್ಯವಿಲ್ಲ ಎಂಬುದು ಜ.26ರ ಗಲಭೆಯಿಂದಾಗಿ ಸಾಬೀತಾಗಿದೆ. ಈ ಸಂದರ್ಭದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕೆಲವು ನಾಯಕರು ನೀಡಿದ ಬೇಜವಾಬ್ದಾರಿ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನೂ ಮಾಡಿತ್ತು. ಮಂಗಳವಾರದ ಪ್ರತಿಭಟನೆಯಲ್ಲಿ ಹಿಂಸಾಚಾರ ಒಳನುಸುಳಲು ಕೆಲವು ಅನಪೇಕ್ಷಿತ ಅಂಶಗಳು ಸಹ ಕಾರಣವಾಗಿವೆ. ಈ ಮೊದಲು ಉಮರ್ ಖಾಲಿದ್ ಅವರ ಪೋಸ್ಟರ್‌ಗಳನ್ನು ಪ್ರತಿಭಟನಾ ಸ್ಥಳದಲ್ಲಿ ಅಂಟಿಸಲಾಗಿತ್ತು. ಆದರೆ, ಇದು ಪೊಲೀಸರ ಗಮನಕ್ಕೆ ಬರಲಿಲ್ಲ.


    ಈ ವೇಳೆ ಅನುಮಾನಿತ ವ್ಯಕ್ತಿಗಳನ್ನು ಏಕೆ ಬಂಧಿಸಿಲ್ಲ? ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್​ಪಿಸಿ) ಯ ಸೆಕ್ಷನ್ 107 ಮತ್ತು 116 (3) ರ ಅಡಿಯಲ್ಲಿ ಯಾವುದೇ ಪೂರ್ವಭಾವಿ ಕ್ರಮ ಕೈಗೊಂಡಿಲ್ಲ. ಹೀಗೆ ಎಲ್ಲಾ ವಿಭಾಗಗಳಲ್ಲೂ ಪೊಲೀಸ್​ ಇಲಾಖೆ ವಿಫಲವಾಗಿದೆ.


    ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ದೆಹಲಿಯ ಒಳಗೆ ಅನುಮತಿಸಿದ್ದರು. ಅಲ್ಲದೆ, ಜನವರಿ 25 ರಂದು 37 ಅಂಶಗಳ ನಿರ್ದೇಶನವನ್ನೂ ನೀಡಿದ್ದರು. ಆದರೆ, ಈ ಯಾವ ನಿರ್ದೇಶನವನ್ನೂ ಪಾಲಿಸಲಾಗಿಲ್ಲ, ಕಾರ್ಯಗತಗೊಳಿಸಲಾಗಿಲ್ಲ. ಇದೂ ಸಹ ಹಿಂಸಾಚಾರಕ್ಕೆ ಕಾರಣವಾಗಿದೆ.


    ರ್ಯಾಲಿ ನಡೆಯುತ್ತಿದ್ದ ಸ್ಥಳಗಳಲ್ಲಿ ಪೊಲೀಸರು ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಬೇಕಿತ್ತು. ಒಂದು ವೇಳೆ ಬಂದೋಬಸ್ತ್​ ಬಿಗಿ ಮಾಡಿದ್ದರೆ ರೈತರ  ರ್ಯಾಲಿ ಹಾದಿ ತಪ್ಪುತ್ತಿರಲಿಲ್ಲ. ಎಚ್ಚರಗೊಳ್ಳುವ ಕರೆ ತಡವಾಗಿ ಬಂದರೂ ಕೆಂಪು ಕೋಟೆಯನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಬೇಕಾಗಿತ್ತು. ಆದರೆ, ಪೊಲೀಸರು ಇದ್ಯಾವುದನ್ನೂ ಮಾಡಿರಲಿಲ್ಲ.


    ಮತ್ತೊಂದು ಜಲಿಯನ್​ ವಾಲಾಬಾಗ್ ಅಲ್ಲ:


    ಆದರೆ, ಕೆಂಪುಕೋಟೆಯ ಬಳಿ ಗಲಭೆ ಭುಗಿಲೆದ್ದಿದ್ದರೂ ಪ್ರತಿಭಟನಾಕಾರರ ವಿರುದ್ಧ ಆಯುಧಗಳನ್ನು ಬಳಸದೆ ಸಂಯಮ ತೋರಿಸಿದ್ದಕ್ಕಾಗಿ ನಾವು ಪೊಲೀಸರನ್ನು ಅಭಿನಂದಿಸಲು ಬಯಸುತ್ತೇವೆ.


    ಕೆಂಪುಕೋಟೆಯ ಬಳಿ ಹಿಂಸಾಚಾರವನ್ನು ಸೃಷ್ಟಿಸುವುದೇ ಪಾಕಿಸ್ತಾನ ಮತ್ತು ಖಲಿಸ್ತಾನಿ ಬೆಂಬಲಿಗರ ಗೇಮ್ ಪ್ಲಾನ್ ಆಗಿತ್ತು. ಜನವರಿ 26 ರಂದು ಈ ಭಾಗವನ್ನು ಅವರು ಜಲಿಯನ್ ವಾಲಾಬಾಗ್ ಆಗಿ ಪರಿವರ್ತಿಸಲು ಪ್ರಯತ್ನಿಸಿದ್ದರು ಮತ್ತು ಬ್ರಿಟೀಷ್ ಅಧಿಕಾರಿ ಜನರಲ್ ಡೈಯರ್ ಅವರನ್ನು ಬ್ರಾಂಡ್ ಮಾಡಲು ಬಯಸಿದ್ದರು.


    ಆದರೆ, ಪೊಲೀಸರು ಪ್ರತಿಭಟನಾಕಾರರ ಬಲೆಗೆ ಬೀಳಲಿಲ್ಲ. ಬದಲಿಗೆ ಗುಂಡು ಹಾರಿಸದೆ ಸಂಯಮದಿಂದ ಪ್ರಬುದ್ಧತೆಯಿಂದ ವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದೆಹಲಿ ಪೊಲೀಸರ ಮಹಿಲಾ ತುಕಡಿಯನ್ನು ನಾನು ಅಭಿನಂದಿಸುತ್ತೇನೆ. ದೊಡ್ಡ ಮತ್ತು ಹಠಾತ್ ಪ್ರಚೋದನೆ, ಅಪಾಯದ ಸಂಭಾವ್ಯತೆ ಇದ್ದರೂ ಅವರು ಅಚಲವಾಗಿ ನಿಂತು ಭಾರೀ ಶಸ್ತ್ರಸಜ್ಜಿತ ಮತ್ತು ಹಿಂಸಾತ್ಮಕ ಚಳವಳಿಗಾರರನ್ನು ಕೆಚ್ಚೆದೆಯಿಂದ ಮುಖಾಮುಖಿಯಾದರು.


    ಇದನ್ನೂ ಓದಿ: HD Kumaraswamy: ಅನ್ಯ ಶಕ್ತಿಗಳು ರೈತ ಹೋರಾಟವನ್ನೇ ತಲೆಕೆಳಗು ಮಾಡಲು ಯತ್ನಿಸುತ್ತಿವೆ; ಹೆಚ್​.ಡಿ. ಕುಮಾರಸ್ವಾಮಿ


    ಮುಂದೇನು?


    ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 22 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತನಿಖೆಯನ್ನು ಅಪರಾಧ ಶಾಖೆಗೆ ನಿಯೋಜಿಸಲಾಗಿದೆ. ಪ್ರಮುಖ ರಿಂಗ್‌ಲೀಡರ್‌ಗಳನ್ನು ಗುರುತಿಸಲು ತನಿಖೆಯ ಎಲ್ಲಾ ವೈಜ್ಞಾನಿಕ ಸಾಧನಗಳನ್ನು-ಮುಖ-ಗುರುತಿಸುವಿಕೆ ಸಾಫ್ಟ್‌ವೇರ್, ದೊಡ್ಡ ಡೇಟಾ ವಿಶ್ಲೇಷಣೆ ಮತ್ತು ಸಾಫ್ಟ್‌ವೇರ್-ಚಾಲಿತ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಳ್ಳಬೇಕು. ಅವರ ಗುರುತಿಗಾಗಿ ಪೊಲೀಸ್ ಇಲಾಖೆ ಭಾರೀ ಬಹುಮಾನಗಳನ್ನು ಘೋಷಿಸಬೇಕು, ಇವರ ಹೆಡೆಮುರಿ ಕಟ್ಟಲು ಒಂದು ಉತ್ತಮ ತಂಡವನ್ನು ಕಟ್ಟಬೇಕು. ಅವರಿಗೆ ಪಾಠ ಕಲಿಸಬೇಕು. ಆ ಮೂಲಕ ಗಣರಾಜ್ಯೋತ್ಸವದ ಪವಿತ್ರತೆ ಮತ್ತು ತ್ರಿವರ್ಣವು ಅಸಡ್ಡೆಯ ವಿಚಾರವಲ್ಲ ಎಂದು ಸಾರಬೇಕು.


    ಲಖಾ ಸಿದ್ಧಾಂತ್ ಮತ್ತು ದೀಪ್ ಸಿಧು ಪ್ರತಿಭಟನೆಯ ನಡುವೆ ಬೆಂಕಿ ಹಚ್ಚುವಂತಹ ಬಾಷಣಗಳನ್ನು ಮಾಡಿದ್ದರು. ಅದು ದಾಖಲೆಯಲ್ಲಿದೆ; ಅವರ ಎಲ್ಲಾ ಸ್ಥಿರಾಸ್ಥಿ ಮತ್ತು ಚರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಎಂಸಿಒಸಿಎ (ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್) ಅಡಿಯಲ್ಲಿ ನಿಬಂಧನೆಗಳನ್ನು ಹಾಕಬೇಕು. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವು ಅಪರಾಧಿಗಳಿಗೆ ಸಹಾಯ ಮಾಡದಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಗಲಭೆಯಿಂದಲಾದರೂ ಆಡಳಿತವು ಪಾಠ ಕಲಿಯಬೇಕು.

    Published by:MAshok Kumar
    First published: