KGF Inspired Killer: ಕೆಜಿಎಫ್​ ಸಿನಿಮಾವೇ ಕೊಲ್ಲಲು ಪ್ರೇರಣೆಯಾಯ್ತು; ಖತರ್ನಾಕ್ ಆಸಾಮಿ ಅರೆಸ್ಟ್

19 ವರ್ಷದ ಶಿವ ಪ್ರಸಾದ್ ಎಂದು ಗುರುತಿಸಲಾದ ವ್ಯಕ್ತಿ, ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್‌ನಿಂದ ಪ್ರೇರಿತನಾಗಿ ಪ್ರಸಿದ್ಧನಾಗಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ.

ಬಂಧಿತ ಆರೋಪಿ

ಬಂಧಿತ ಆರೋಪಿ

 • Share this:
  ಭೂಪಾಲ್: ಕೆಜಿಎಫ್ ಸಿನಿಮಾದಿಂದ ಪಾತ್ರದಿಂದ ಪ್ರೇರಿತಗೊಂಡು ಕೊಲೆ ಮಾಡುತ್ತಿದ್ದ (KGF Inspired Teen Serial Killer) ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳು ನಿದ್ದೆಯಲ್ಲಿರುವಾಗಲೇ ಕೊಂದಿರುವ ಶಂಕಿತ ಸರಣಿ ಹಂತಕನೊಬ್ಬನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ವ್ಯಕ್ತಿ ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 19 ವರ್ಷದ ಶಿವ ಪ್ರಸಾದ್ ಎಂದು ಗುರುತಿಸಲಾದ ವ್ಯಕ್ತಿ, ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್‌ನಿಂದ (KGF Film) ಪ್ರೇರಿತನಾಗಿ ಪ್ರಸಿದ್ಧನಾಗಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ.

  ಸಾಗರ್ ಎಂಬ ಪ್ರದೇಶದಲ್ಲಿ ಮೂರು ರಾತ್ರಿಗಳಲ್ಲಿ ಮೂರು ವ್ಯಕ್ತಿಗಳನ್ನು ಈತ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಭೂಪಾಲ್​ನಲ್ಲಿ ಇನ್ನೊಂದು ಕೊಲೆ ಮಾಡಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಪ್ರಸಿದ್ಧನಾಗುವುದೇ ಈತನ ಉದ್ದೇಶವಾಗಿರುವುದರಿಂದ ಪದೇ ಪದೇ ಕೊಲೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: Shocking News: ಛೇ, ಹೀಗಾಗಬಾರದಿತ್ತು! ಪ್ರೀತಿಯ ನಾಯಿ ಮೃತಪಟ್ಟಿದ್ದಕ್ಕೆ ಡಿಗ್ರಿ ವಿದ್ಯಾರ್ಥಿ ಮಾಡಿದ್ದೇನು?

  ಮೊಬೈಲ್ ಫೋನ್ ಲೊಕೇಷನ್ ಆಧರಿಸಿ ಅರೆಸ್ಟ್
  ಈತ ತನ್ನ ಎರಡನೇ ಅಥವಾ ಮೂರನೇ ಕೊಲೆ ಮಾಡಿದ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಹೊತ್ತೊಯ್ಯುತ್ತಿದ್ದಾಗ ಪೊಲೀಸರು ಆತನನ್ನು ಬೆನ್ನಟ್ಟಿದ್ದಾರೆ. ಫೋನ್ ಸ್ಥಳದ ಆಧಾರದ ಮೇಲೆ ಅವನನ್ನು ಭೋಪಾಲ್‌ನಲ್ಲಿ ಹಿಡಿಯಲಾಯಿತು ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

  ಇದನ್ನೂ ಓದಿ: YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

  ಸರಣಿ ಕೊಲೆಗಳ ಪಟ್ಟಿ ಹೀಗಿದೆ
  ಗುರುವಾರ ರಾತ್ರಿ ಅವರು ಸೋನು ವರ್ಮಾ (23) ಎಂಬ ವ್ಯಕ್ತಿಯನ್ನು ಮಾರ್ಬಲ್ ರಾಡ್ ಬಳಸಿ ಶಿವಪ್ರಸಾದ್ ಕೊಲೆ ಮಾಡಿದ್ದ​. ಈ ಸೋನು ವರ್ಮಾ ಮಾರ್ಬಲ್ ಅಂಗಡಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು ಎಂದು ತಿಳಿದುಬಂದಿದೆ.  ಕಾರ್ಖಾನೆಯೊಂದರ ಸಿಬ್ಬಂದಿ ಕಲ್ಯಾಣ್ ಲೋಧಿ ಅವರನ್ನು ಆಗಸ್ಟ್ 28 ರಂದು ಕೊಂದಿದ್ದ ಈ ವ್ಯಕ್ತಿ ಅವರ ತಲೆಯನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದ. ಮರುದಿನ ರಾತ್ರಿಯೇ ಕಲಾ ಮತ್ತು ವಾಣಿಜ್ಯ ಕಾಲೇಜಿನ 60 ವರ್ಷದ ಭದ್ರತಾ ಸಿಬ್ಬಂದಿ ಶಂಭು ನಾರಾಯಣ ದುಬೆ ಅವರನ್ನು ಕಲ್ಲಿನಿಂದ ಹೊಡೆದು ಕೊಂದಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. 

  ಪ್ರತಿ ರಾತ್ರಿ ರೇಪ್, ಕ್ಷಣ ಕ್ಷಣ ನರಳಾಟಕ್ಕಿಂತ ಒಂದೇ ಬಾರಿ ಸಾಯೋದು ಮೇಲು: ಮಹಿಳೆಯ ವಿಡಿಯೋ ವೈರಲ್
  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban in Afghanistan) ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ, ಆಫ್ಘನ್ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ತಾಲಿಬಾನ್‌ನ ಆಂತರಿಕ ಸಚಿವಾಲಯದ ಮಾಜಿ ವಕ್ತಾರ ಸಯೀದ್ ಖೋಸ್ತಿ ಈ ಹಿಂದೆ ಬಲವಂತವಾಗಿ ಮದುವೆಯಾಗಿ ಈಗ ಕಿರುಕುಳ ನೀಡುತ್ತಿರುವ ಅಫ್ಘಾನ್ ಮಹಿಳೆ (Afghan Woman) ಇಲಾಹಾ ಇದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ವಾಸ್ತವವಾಗಿ, ಸಯೀದ್ ಖೋಸ್ತಿ ಅವರ ಪತ್ನಿ ಇಲಾಹಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ತೀವ್ರವಾಗಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, 24 ವರ್ಷದ ಇಲಾಹಾ ತನ್ನ ನೋವನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ತಾಲಿಬಾನ್ ನ ಮಾಜಿ ವಕ್ತಾರ ಸಯೀದ್ ಖೋಸ್ತಿ ಅವರು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ ಮತ್ತು ನಾನು ಇಲಾಹಾಳನ್ನು ಬಲವಂತವಾಗಿ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.

  ಅದೇ ಸಮಯದಲ್ಲಿ, ಅಫ್ಘಾನಿಸ್ತಾನದ ಆನ್‌ಲೈನ್ ವೆಬ್‌ಸೈಟ್ ಖಮಾಮ್ ಪ್ರಕಾರ, ಇಲಾಹಾ ಅವರ ಈ ಆರೋಪಗಳ ನಂತರ, ಸಯೀದ್ ಖೋಸ್ತಿ ಕೂಡ ಇಬ್ಬರ ನಡುವಿನ ನಂಬಿಕೆ ಕೊರತೆಯನ್ನು ಆಧಾರವಾಗಿಟ್ಟುಕೊಂಡು ವಿಚ್ಛೇದನ ನೀಡಿದ್ದಾರೆ.
  Published by:guruganesh bhat
  First published: