• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • KGF Chapter 2: ರಾಕಿ ಭಾಯ್ ಪಾತ್ರದಿಂದ ಫುಲ್ ಫಿದಾ! ಫುಲ್ ಪ್ಯಾಕ್ ಸಿಗರೇಟ್ ಸೇದಿದ 15ರ ಹುಡುಗ ತೀವ್ರ ಅಸ್ವಸ್ಥ!

KGF Chapter 2: ರಾಕಿ ಭಾಯ್ ಪಾತ್ರದಿಂದ ಫುಲ್ ಫಿದಾ! ಫುಲ್ ಪ್ಯಾಕ್ ಸಿಗರೇಟ್ ಸೇದಿದ 15ರ ಹುಡುಗ ತೀವ್ರ ಅಸ್ವಸ್ಥ!

ಕೆಜಿಎಫ್ ಚಾಪ್ಟರ್ 2

ಕೆಜಿಎಫ್ ಚಾಪ್ಟರ್ 2

ರಾಕಿ ಭಾಯ್' ನಂತಹ ಪಾತ್ರಗಳು ತೀವ್ರ ಗಾಢ ಪರಿಣಾಮ ಬೀರಬಲ್ಲವು. ಈ ಪಾತ್ರಗಳನ್ನೇ ಯುವ ಜನರು ಅನುಸರಿಸಿ ಅಪಾಯಕ್ಕೆ ಈಡಾಗುವ ಸಾಧ್ಯತೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಕೆಯ ಮಾತು ಹೇಳಿದ್ದಾರೆ.

  • Share this:

ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು (KGF Chapter 2) ಎರಡು ದಿನಗಳಲ್ಲಿ ಮೂರು ಬಾರಿ ವೀಕ್ಷಿಸಿದ ಬಾಲಕನೋರ್ವ ರಾಕಿ ಭಾಯ್ ಪಾತ್ರದಿಂದ (Rocky Bhai)  ಸ್ಪೂರ್ತಿ ಪಡೆದು ಅನಾಹುತವನ್ನೇ ಸೃಷ್ಟಿಸಿದ ವಿಚಿತ್ರ ಘಟನೆ ನಡೆದಿದೆ. ರಾಕಿ ಭಾಯ್ ಪಾತ್ರದಿಂದ ತೀವ್ರವಾಗಿ ಪ್ರಭಾವಿತನಾದ ಹೈದರಾಬಾದ್​ನ 15 ವರ್ಷದ ಹುಡುಗನೋರ್ವ (Hyderabad Boy Ill) ಒಂದು ಪೂರ್ಣ ಪ್ಯಾಕ್ ಸಿಗರೇಟ್ ಸೇದಿ ಅಪಾಯಕ್ಕೆ ಸಿಲುಕಿದ್ದಾನೆ ಎಂದು ವರದಿಯಾಗಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಾಕಿ ಭಾಯ್ ಪಾತ್ರದಿಂದ ಪ್ರಭಾವಿತನಾಗಿ ಒಂದು ಪ್ಯಾಕ್ ಸಿಗರೇಟ್ ಸೇದಿ ತಮ್ಮ ಮಗನಿಗೆ ಈ ಪರಿಸ್ಥಿತಿ ಉಂಟಾಗಿದೆ (KGF Chapter 2 Rocky Bhai)  ಎಂದು ಸ್ವತಃ ಪೋಷಕರೇ ಖಚಿತಪಡಿಸಿದ್ದಾರೆ ಎನ್ನಲಾಗಿದೆ.


ಬಾಲಕನಿಗೆ ತೀವ್ರ ಗಂಟಲು ನೋವು ಹಾಗೂ ಕೆಮ್ಮು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್‌ನ ನಿವಾಸಿಯಾಗಿರುವ 15 ವರ್ಷದ ನಗರದ ಬಂಜಾರಾ ಹಿಲ್ಸ್‌ನಲ್ಲಿರುವ ಸೆಂಚುರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.


ಬಾಲಕನಿಗೆ ಕೌನ್ಸೆಲಿಂಗ್
ಶನಿವಾರ, ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಯ ವೈದ್ಯರು ಹದಿಹರೆಯದವರಿಗೆ ಈ ಯುವಕನಿಗೆ ಕೌನ್ಸೆಲಿಂಗ್ ಮಾಡುವುದರ ಜೊತೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಘೋಷಿಸಿದ್ದಾರೆ.


'ಚಲನಚಿತ್ರ ನಿರ್ಮಾಪಕರ ನೈತಿಕ ಹೊಣೆಗಾರಿಕೆ'
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಶ್ವಾಸಕೋಶಶಾಸ್ತ್ರಜ್ಞ ಡಾ ರೋಹಿತ್ ರೆಡ್ಡಿ ಪಥೂರಿ, “ಹದಿಹರೆಯದವರು ರಾಕಿ ಭಾಯ್‌ನಂತಹ ಪಾತ್ರಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಈ ವೇಳೆ ಈ ಬಾಲಕ ಸಿಗರೇಟ್‌ ತುಂಬಿದ ಪ್ಯಾಕೆಟ್‌ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದ. ಚಲನಚಿತ್ರಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುವ ಅಂಶವಾಗಿದೆ. ಚಲನಚಿತ್ರ ನಿರ್ಮಾಪಕರು ಮತ್ತು ನಟರು ಸಿಗರೇಟ್ ಸೇದುವುದು ಅಥವಾ ತಂಬಾಕು ಜಗಿಯುವುದು ಅಥವಾ ಆಲ್ಕೋಹಾಲ್ ಸೇವನೆಯಂತಹ ಕಾರ್ಯಗಳನ್ನು ಹೆಚ್ಚು ಎತ್ತಿ ಹಿಡಿಯದಿರುವ ನೈತಿಕ ಜವಾಬ್ದಾರಿಯನ್ನು ಹೊಂದಿರುತ್ತಾರೆ. 'ರಾಕಿ ಭಾಯ್' ನಂತಹ ಪಾತ್ರಗಳು ತೀವ್ರ ಗಾಢ ಪರಿಣಾಮ ಬೀರಬಲ್ಲವು. ಈ ಪಾತ್ರಗಳನ್ನೇ ಯುವ ಜನರು ಅನುಸರಿಸಿ ಅಪಾಯಕ್ಕೆ ಈಡಾಗುವ ಸಾಧ್ಯತೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.


ಪೋಷಕರು ವಹಿಸಬೇಕು ಎಚ್ಚರಿಕೆ
ಹದಿಹರೆಯದವರ ಪಾಲಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ? ಅವರ ಮಗುವಿನ ಕೃತ್ಯಗಳ ಮೇಲೆ ಯಾವ ಅಂಶಗಳು ಪ್ರಭಾವ ಬೀರುತ್ತಿವೆ ಎಂಬುದರ ಮೇಲೆ ನಿಗಾ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಪಶ್ಚಾತ್ತಾಪ ಪಡುವ ಬದಲು, ತಂಬಾಕು ಸೇವನೆ ಮತ್ತು ಮದ್ಯಪಾನದಂತಹ ಕೃತ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ" ಎಂದು ಡಾ ರೋಹಿತ್ ರೆಡ್ಡಿ ಹೇಳಿದರು.


ಇದನ್ನೂ ಓದಿ: Hombale Films: ಕೆಜಿಎಫ್ ಗೆದ್ದಾಯ್ತು, ಈಗ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ರೆಡಿಯಾದ ಹೊಂಬಾಳೆ ಫಿಲಂಸ್, ಶೀಘ್ರದಲ್ಲೇ ಘೋಷಣೆ!


ಸಿಗರೇಟ್ ಸೇವನೆ ಅಥವಾ ಧೂಮಪಾನವು ಯುವಜನರಲ್ಲಿ ಗಮನಾರ್ಹವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಉಸಿರಾಟದ ಕಾಯಿಲೆಗಳ ಸಂಖ್ಯೆ ಮತ್ತು ತೀವ್ರತೆಯ ಹೆಚ್ಚಳ, ದೈಹಿಕ ಸಾಮರ್ಥ್ಯ ಕಡಿಮೆಯಾಗುವುದು ಮತ್ತು ಶ್ವಾಸಕೋಶದ ಬೆಳವಣಿಗೆ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಬೀರುವ ಅಪಾಯಕಾರಿ ಪರಿಣಾಮಗಳಾಗಿವೆ.


ಕೆಜಿಎಫ್ 3 ಚಿತ್ರದಲ್ಲಿ ಬಾಲಿವುಡ್‌ನ ಹೃತಿಕ್ ರೋಷನ್?
 ಕೆಜಿಎಫ್ 3 ಚಿತ್ರದಲ್ಲಿ ಬಾಲಿವುಡ್ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅವರು ಅಭಿನಯಿಸಲಿದ್ದಾರೆ ಎಂಬ ಮಾಹಿತಿಯೊಂದು ಎಲ್ಲಡೆ ವೈರಲ್ ಆಗುತ್ತಿದೆ. ಇದನ್ನು ಕೇಳಿದ ಸಿನಿ ಪ್ರೇಮಿಗಳು ಸಕತ್ ಥ್ರಿಲ್ ಆಗಿದ್ದು, ಚಿತ್ರವು ಇನ್ನೊಂದು ಲೇವಲ್​ ಗೆ ಹೋಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಈಗಾಗಲೇ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಹೃತಿಕ್ ರೋಷನ್ ಅವರನ್ನು ಭೆಟಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಕಿರಂಗದೂರು ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: Ravichandran: ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅಡಿಪಾಯ ಹಾಕಿದ್ದೆ ನಾನು: ಕೆಜಿಎಫ್ ಯಶಸ್ಸಿನ ಬಗ್ಗೆ ರವಿಚಂದ್ರನ್ ಹೇಳಿಕೆ


ಸ್ಪಷ್ಟನೆ ನೀಡಿದ ವಿಜಯ್ ಕಿರಂಗದೂರು
ಇನ್ನು, ಕೆಜಿಎಫ್ 3 ಸಿನಿಮಾದಲ್ಲಿ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ನಟಿಸಲಿದ್ದಾರೆ ಎಂಬ ಮಾಹಿತಿ ಎಲ್ಲಡೆ ಹರಿದಾಡುತ್ತಿದ್ದಂತೆ ನಿರ್ಮಾಪಪ ವಿಜಯ್ ಕಿರಂಗದೂರು ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಾವಿನ್ನೂ ಕೆಜಿಎಫ್ 3 ಕುರಿತ ಸ್ಟಾರ್‌ಕಾಸ್ಟ್ ಬಗ್ಗೆ ಏನೂ ನಿರ್ಧಾರ ತೆಗೆದುಕೊಂಡಿಲ್ಲ.

top videos
    First published: