Sabarimala Temple: ಇಂದಿನಿಂದ ಶಬರಿಮಲೆ ದೇಗುಲ ಓಪನ್‌: ಭಕ್ತರಿಗೆ 2 ಡೋಸ್​ ವ್ಯಾಕ್ಸಿನ್​ ಕಡ್ಡಾಯ!

Sabarimala Temple: ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯವು ಇಂದಿನಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ. ಇಲ್ಲಿಗೆ ಬಂದು ಅಯ್ಯಪ್ಪನ ದರ್ಶನ ಪಡೆಯುವ ಭಕ್ತರಿಗೆ ಕೋವಿಡ್​ ಲಸಿಕೆಯ ಪ್ರಮಾಣಪತ್ರ, ಜೊತೆಗೆ 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್​ ವರದಿಯನ್ನು ಕಡ್ಡಾಯ ಮಾಡಲಾಗಿದೆ.

ಶಬರಿಮಲೆ

ಶಬರಿಮಲೆ

  • Share this:
ಎರಡು ತಿಂಗಳ ಕಾಲ ನಡೆಯುವ ಮಂಡಲ-ಮಕರವಿಳಕ್ಕು(ಮಕರ ಸಂಕ್ರಾಂತಿ)ಗಾಗಿ ಶಬರಿಮಲೆ ದೇಗುಲ(Sabarimala Temple)ವನ್ನು ಇಂದು ಸಂಜೆಯಿಂದ  ತೆರಯಲಾಗುತ್ತೆ. ನಾಳೆಯಿಂದ  ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತೆ.  ಕೇರಳದ (Kerala) ಶಬರಿಮಲೆಯ ಅಯ್ಯಪ್ಪ ದೇವಾಲಯವು (Sabarimala Ayyappa Temple) ಇಂದಿನಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ. ಇಲ್ಲಿಗೆ ಬಂದು ಅಯ್ಯಪ್ಪನ ದರ್ಶನ ಪಡೆಯುವ ಭಕ್ತರಿಗೆ ಕೋವಿಡ್​ ಲಸಿಕೆಯ ಪ್ರಮಾಣಪತ್ರ(Vaccine Certificate), ಜೊತೆಗೆ 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್​ ವರದಿ(Negative Report)  ಯನ್ನು ಕಡ್ಡಾಯ ಮಾಡಲಾಗಿದೆ.  ಮಂಡಲಪೂಜೆಗಾಗಿ ದೇವಸ್ಥಾನವನ್ನು ಡಿಸೆಂಬರ್​ 25ರವರಗೆ ತೆರಯಲಾಗಿರುತ್ತೆ. ಮಕರ ಸಂಕ್ರಾಂತಿ ಉತ್ಸವಕ್ಕಾಗಿ 2021ರ ಜನವರಿ 20ರವರೆಗೆ ಭಕ್ತರಿಗೆ ದೇವಲಾಯದ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ನಾಳೆಯಂದ ಪಾದಯಾತ್ರೆ ಆರಂಭವಾಗಲಿದ್ದು, ಇಂದು ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ.ಜಯರಾಜ್ ಪೊಟ್ಟಿ(V.K Jayaraj Potti) ಅವರು ದೇವಾಲಯದ ಗರ್ಭಗುಡಿಯನ್ನು ತೆರೆಯಲಿದ್ದಾರೆ.

RT-PCR ರಿಪೋರ್ಟ್ ಕಡ್ಡಾಯ

ಕೋವಿಡ್-19 ಪ್ರೋಟೋಕಾಲ್‍ಗೆ ಬದ್ಧವಾಗಿ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಭಕ್ತರು ದೇಗುಲಕ್ಕೆ ಭೇಟಿ ನೀಡುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್​ಟಿ-ಪಿಸಿಆರ್​ ಟೆಸ್ಟ್ ರಿಪೋರ್ಟ್ ಅನ್ನು ಇಲ್ಲಿ ಸಲ್ಲಿಸಬೇಕು. ಇದರ ಜೊತೆಗೆ ಎರಡು ಡೋಸ್​ ಲಸಿಕೆಯನ್ನು ಪಡೆದುಕೊಂಡಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಇದರ ಜೊತೆ ಎಲ್ಲಾ ಭಕ್ತರು ತಮ್ಮ ಆಧಾರ್​ ಕಾರ್ಡ್​ಗಳನ್ನು ಸಹ ತೋರಿಸಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಮಂಡಲ-ಮಕರವಿಳಕ್ಕು ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆ ಹಾಗೂ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ವೈದ್ಯಕೀಯ ಸೌಲಭ್ಯಗಳು ಲಭ್ಯ

ಪಂಪಾದಿಂದ ಅಯ್ಯಪ್ಪನ ದೇವಾಲಯವರೆಗಿನ 4.5 ಕಿಮೀ ಟ್ರೆಕ್ಕಿಂಗ್ ಮಾರ್ಗದಲ್ಲಿ ಐದು ಸ್ಥಳಗಳಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಆಮ್ಲಜನಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.   ದೇವಸ್ಥಾನಕ್ಕೆ ಪ್ರಯಾಣಿಸುವಾಗ ಯಾರಾದರೂ ಅತಿಯಾದ ಹೃದಯ ಬಡಿತ, ಉಸಿರಾಟದ ತೊಂದರೆ ಅಥವಾ ಎದೆ ನೋವು ಅನುಭವಿಸಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ತರಬೇತಿ ಪಡೆದ ಸ್ಟಾಫ್ ನರ್ಸ್ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಎಲ್ಲಾ ಸಮಯದಲ್ಲೂ ಲಭ್ಯವಿರುತ್ತವೆ ಅಂತ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಕೇರಳದಲ್ಲಿ ಕೋವಿಡ್ ನಿಯಮ ಸಡಿಲಿಕೆ, ಶಬರಿಮಲೆಗೆ ಹೋಗಲು ಯಾವೆಲ್ಲಾ ದಾಖಲೆ ಬೇಕು ?

ಪಂಪಾ ನದಿ ನೀರಿನ ಮಟ್ಟ ಹೆಚ್ಚಳ

ಅಕ್ಟೋಬರ್​ನಿಂದ ನಿರಂತರವಾಗಿ ಭಾರಿ ಮಳೆ (Heavy Rain) ಸುರಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇರಳದ ಪತ್ತನಂತಿಟ್ಟಜಿಲ್ಲೆಯಲ್ಲಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಅ.21ರವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಕೇರಳದಲ್ಲಿ ಕೆಲವು ದಿನಗಳಿಂದ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಪಂಪಾ ನದಿ ನೀರಿನ ಮಟ್ಟಹೆಚ್ಚಾಗಿದೆ.  ಈ ಮಧ್ಯೆ ನಾಳೆಯಿಂದ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿಗೆ ಬರುವ ಭಕ್ತರು ಪಂಪಾ ನದಿಯಲ್ಲಿ ಮಿಂದೆದ್ದು ಬಳಿಕ ದೇವರ ದರ್ಶನ ಪಡೆಯುವುದು ವಾಡಿಕೆ. ಆದರೆ ಪಂಪಾ ನದಿ ನೀರಿನ ಮಟ್ಟ ಹೆಚ್ಚುರುವುದರಿಂದ ಅಲ್ಲಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿದೆ.

ಇದನ್ನು ಓದಿ : ಶಬರಿಮಲೆಗೆ ಸಿಗುತ್ತಿದೆ ರೈಲ್ವೆ ಸಂಪರ್ಕ; 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಜೀವ

ಭಕ್ತರು ಎಚ್ಚರದಿಂದ ಇರುವಂತೆ ಸೂಚನೆ

ಮಳೆಯಿಂದಾಗಿ ಇಲ್ಲಿನ ಅನೇಕ ರಸ್ತೆಗಳು, ಸೇತುವೆಗಳು ಮುಳುಗಿ ಅವಘಡ ಸಂಭವಿಸಿರುವ ಕಾರಣ ಮತ್ತು ಮಳೆಗೆ ಮತ್ತಷ್ಟುಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆಯಿಂದ ಭಕ್ತರ ಇರುವಂತೆ ಸೂಚನೆ  ನೀಡಲಾಗಿದೆ. ಶಬರಿಮಲೆ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಮಾತ್ರ ಅನುಮತಿ ನೀಡಲಾಗಿದೆ.  ಭಕ್ತರ ದರ್ಶನ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅಲ್ಲಿನ ಸರ್ಕಾರ ಕೈಗೊಂಡಿದೆ.
Published by:Vasudeva M
First published: