ಕೇರಳದಲ್ಲಿ ಭಾರೀ ಮಳೆಗೆ 20 ಜನರ ಸಾವು; 26 ವರ್ಷಗಳ ಬಳಿಕ ತೆರೆದ ಇಡುಕ್ಕಿ ಜಲಾಶಯದ ಗೇಟ್​

news18
Updated:August 9, 2018, 3:04 PM IST
ಕೇರಳದಲ್ಲಿ ಭಾರೀ ಮಳೆಗೆ 20 ಜನರ ಸಾವು; 26 ವರ್ಷಗಳ ಬಳಿಕ ತೆರೆದ ಇಡುಕ್ಕಿ ಜಲಾಶಯದ ಗೇಟ್​
news18
Updated: August 9, 2018, 3:04 PM IST
ನ್ಯೂಸ್​ 18 ಕನ್ನಡ

ಕೇರಳದ ಇಡುಕ್ಕಿ ಜಲಾಶಯ ಬರೋಬ್ಬರಿ 26 ವರ್ಷಗಳ ಬಳಿಕ ಭರ್ತಿಯಾಗಿದೆ. ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಿದೆ. ಈ ಹಿನ್ನಲೆಯಲ್ಲಿ ಜಲಾಶಯದ ಗೇಟ್​ ತೆರೆಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕೇರಳದ ಅತಿ ದೊಡ್ಡ ಜಲಾಶಯ ಇದಾಗಿದ್ದು ಅತಿ ಹೆಚ್ಚಿನ ನೀರಿನ ಸಂಗ್ರಹವನ್ನು ಹೊಂದಿರುವ ಜಲಾಶಯ ಇದಾಗಿದೆ. 26 ವರ್ಷಗಳಿಂದ ಜಲಾಶಯ ತುಂಬುವಷ್ಟು ನೀರು ಸಂಗ್ರಹವಾಗಿರಲಿಲ್ಲ.  ಆದರೆ  ಈ ಬಾರಿ ಸುರಿದ ಭಾರೀ ಮಳೆಯಿಂದ ಈ ಜಲಾಶಯ ಭರ್ತಿಯಾಗಿದ್ದು ಗುರುವಾರ ಗರಿಷ್ಠ ಮಟ್ಟ 2,398.80 ಅಡಿ ನೀರು ಸಂಗ್ರಹವಾಗಿದೆ.

ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಿದ ಹಿನ್ನಲೆ ಇಂದು ಜಲಾಶಯದ 3 ಗೇಟ್​ಗಳನ್ನು ನಾಲ್ಕುಗಂಟೆಗಳ ಕಾಲ ತೆರೆಯಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಪೆರಿಯಾರ್​ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. 2,400 ಅಡಿಗಳ ನೀರು ಸಂಗ್ರಹ ಸಾಮಾರ್ಥ್ಯವನ್ನು  ಈ ಜಲಾಶಯ ಹೊಂದಿದೆ. ಜಲಾಶಯದ ಗೇಟ್​ ತೆರೆಯುತ್ತಿರುವ ಹಿನ್ನಲೆ ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆಯನ್ನು ಘೋಷಣೆ ಮಾಡಲಾಗಿದೆ.

ಇದಮಲಯರ್​ ಜಲಾಶಯ ಕೂಡ ಭರ್ತಿ:  ಎರ್ನಕುಲಂ ಜಿಲ್ಲೆಯ ಜಲಾಶಯವಾದ ಇದಮಲಯರ್​ ಜಲಾಶಯ ಕೂಡ ಭರ್ತಿಯಾಗಿದ್ದು, ಅದರ ಗೇಟ್​ ಕೂಡ ತೆರೆಯಲಾಗಿದೆ.  ಪೆರಿಯಾರ್​ ನದಿ ತೀರದಿಂದ ಸ್ಥಳಾಂತರ ಹೊಂದುವಂತೆ ಕೇರಳ ವಿಪತ್ತು ನಿರ್ವಹಣಾ  ಅಧಿಕಾರಿಗಳು ಸೂಚನೆ ನೀಡಿದ್ದಾರೆ.

18 ಸಾವು:  ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಸೇರಿದಂತೆ ಮಳೆ ಹಾನಿಯಿಂದಾಗಿ 20 ಜನರು ಸಾವನ್ನಪ್ಪಿದ್ದಾರೆ ಎಂದು ಕೇರಳ ವಿಪತ್ತು ನಿರ್ವಹಣಾ  ಅಧಿಕಾರಿಗಳು ಖಚಿತಪಡಿಸಿದ್ದಾರೆ.
Loading...

ಇಡುಕ್ಕಿ ಜಲಾಶಯದ ಗೇಟ್​ ತೆರೆದ ಹಿನ್ನಲೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಪೆರಿಯಾರ್​ ನದಿ ನೀರಿನ ಹರಿವಿನಲ್ಲಿ ಏರಿಕೆ ಕಂಡಿದೆ.

ವಿಮಾನ ಹಾರಾಟ ಸ್ಥಗಿತ: ಮಳೆ ಹಿನ್ನಲೆ ಹವಾಮಾನ ವೈಪರೀತ್ಯ ಉಂಟಾಗಿದ್ದು, ವಿಮಾನ ಹಾರಾಟ ಸ್ಥಗಿತ ಮಾಡಲಾಗುವುದು ಎಂದು ಹಿರಿಯ ಅಧಿಕಾರಿ ಪಿ ಎಸ್​​ ಜಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಧ್ಯಾಹ್ನ .1.10ರ ಬಳಿಕ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ವಿಮಾನ ಆಗಮಿಸುವುದಿಲ್ಲ ಎಂದು ತಿಳಿಸಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ