ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಕೇರಳದ ಸಶಸ್ತ್ರ ಪಡೆಗಳು ದೋಣಿಯಲ್ಲಿ ರೂಪಿಸಿದ ‘75’

ಕೇರಳದಲ್ಲಿ, ರಾಜ್ಯದ ರಾಜಧಾನಿ ತಿರುವನಂತಪುರಂನ ಅಕ್ಕುಲಮ್ ಸರೋವರದಲ್ಲಿ ವಿಶೇಷ ದೋಣಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್ ಆಯೋಜಿಸಿದ್ದ ಈ ದೋಣಿ ಸ್ಪರ್ಧೆಯಲ್ಲಿ 75 ಸೈನಿಕರು ಭಾಗವಹಿಸಿದ್ದರು.

ಭಾರತ ಸೇನೆಯ ಮದ್ರಾಸ್ ರೆಜಿಮೆಂಟ್ ಆಯೋಜಿಸಿದ ದೋಣಿ ಸ್ಪರ್ಧೆಯಲ್ಲಿ 75 ಸೈನಿಕರು ಭಾಗವಹಿಸಿದ್ದರು. (ಕ್ರೆಡಿಟ್ಸ್: ಟ್ವಿಟರ್/ ಎಎನ್ಐ).

ಭಾರತ ಸೇನೆಯ ಮದ್ರಾಸ್ ರೆಜಿಮೆಂಟ್ ಆಯೋಜಿಸಿದ ದೋಣಿ ಸ್ಪರ್ಧೆಯಲ್ಲಿ 75 ಸೈನಿಕರು ಭಾಗವಹಿಸಿದ್ದರು. (ಕ್ರೆಡಿಟ್ಸ್: ಟ್ವಿಟರ್/ ಎಎನ್ಐ).

 • Share this:

  ತಿರುವನಂತಪುರಂನ ಅಕ್ಕುಲಮ್ ಸರೋವರದಲ್ಲಿ ವಿಶೇಷ ದೋಣಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಎಲ್ಲಾ ದೋಣಿಗಳನ್ನು ಸರೋವರದಲ್ಲಿ ‘75’ ಸಂಖ್ಯೆಯ ಆಕಾರದಲ್ಲಿ ನಿಲ್ಲಿಸುವ ಮೂಲಕ ಸ್ಪರ್ಧೆಯ ಸಮಾರೋಪ ನಡೆಯಿತು. ಆಗಸ್ಟ್ 15 ರಂದು ದೇಶದ ವಿವಿಧ ಭಾಗಗಳಲ್ಲಿ 75 ನೇ ಸ್ವಾತಂತ್ರ್ಯೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಇಡೀ ದೇಶವೇ ದೇಶ ಭಕ್ತಿಯಲ್ಲಿ ಮುಳುಗಿ ಹೋಗಿತ್ತು. ಕೋವಿಡ್ -19 ನಿಯಮಾವಳಿಗಳ ಕಾರಣದಿಂದಾಗಿ ಆಚರಣೆಗಳ ಸಂಖ್ಯೆ ಕಡಿಮೆ ಇದ್ದರೂ, ದೇಶದ ಜನರ ಉತ್ಸಾಹ ಮತ್ತು ಹುಮ್ಮಸ್ಸಿಗೆ ಕೊರತೆ ಇರಲಿಲ್ಲ. ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಅಂಗವಾಗಿ, ಸಶಸ್ತ್ರ ಪಡೆಗಳು ದೇಶದ ವಿವಿಧ ಭಾಗಗಳಲ್ಲಿ ಹಲವಾರು ಸಮಾರಂಭಗಳನ್ನು ಹಮ್ಮಿಕೊಂಡಿದ್ದವು.


  ಕೇರಳದಲ್ಲಿ, ರಾಜ್ಯದ ರಾಜಧಾನಿ ತಿರುವನಂತಪುರಂನ ಅಕ್ಕುಲಮ್ ಸರೋವರದಲ್ಲಿ ವಿಶೇಷ ದೋಣಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್ ಆಯೋಜಿಸಿದ್ದ ಈ ದೋಣಿ ಸ್ಪರ್ಧೆಯಲ್ಲಿ 75 ಸೈನಿಕರು ಭಾಗವಹಿಸಿದ್ದರು. ಎಲ್ಲಾ ದೋಣಿಗಳನ್ನು ಸರೋವರದಲ್ಲಿ ‘75’ ಸಂಖ್ಯೆಯ ಆಕಾರದಲ್ಲಿ ನಿಲ್ಲಿಸುವ ಮೂಲಕ ಸ್ಪರ್ಧೆಯ ಸಮಾರೋಪ ನಡೆಯಿತು.


  ಪಂಗೊಡೆ ಮಿಲಿಟರಿ ಸ್ಟೇಶನ್‍ನ ಬ್ರಿಗೇಡಿಯರ್ ಕಾರ್ತಿಕ್ ಶೇಷಾದ್ರಿ ಅಕ್ಕುಲಮ್ ಸರೋವರದ ಬಳಿ ನಡೆದ ಈ ಸಮಾರಂಭವನ್ನು ಉದ್ಘಾಟಿಸಿದರು ಎಂದು ಎಎನ್‍ಐ ಸುದ್ದಿ ಸಂಸ್ಥೆ ತಿಳಿಸಿದೆ. ಈ ಸಮಾರಂಭದ ಕುರಿತ ಒಂದು ವಿಡಿಯೋ ದೃಶ್ಯವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ನಮ್ಮ ರಾಷ್ಟ್ರ ಧ್ವಜದ ತ್ರಿವರ್ಣ ಬಣ್ಣ ಹೊಂದಿರುವ ಎಲ್ಲಾ ದೋಣಿಗಳು ಸರೋವರದಲ್ಲಿ ‘75’ ಸಂಖ್ಯೆಯ ಆಕಾರದಲ್ಲಿ ನಿಂತಿರುವ ದ್ರೋಣ್ ದೃಶ್ಯ ಆ ವಿಡಿಯೋದಲ್ಲಿ ಇದೆ.


  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಈ ವಿಡಿಯೋ ದೃಶ್ಯವನ್ನು ಸುಮಾರು 9 ಸಾವಿರ ಮಂದಿ ವೀಕ್ಷಿಸಿದ್ದಾರೆ ಮತ್ತು ಈ ವಿಡಿಯೋ ಇದುವರೆಗೆ ಸುಮಾರು 600 ಮೆಚ್ಚುಗೆಗಳನ್ನು ಗಳಿಸಿದೆ.


  ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಅನ್ನೋ ಸಂಸ್ಕೃತಿ ಇಲ್ಲ, ಅಧಿಕಾರಕ್ಕೆ ಬಂದ್ಮೇಲೆ ನಿರ್ಧಾರ; ಜಿ. ಪರಮೇಶ್ವರ್

  ಪಂಗೊಡೆ ಮಿಲಿಟರಿ ಸ್ಟೇಶನ್ ರಾಜಭವನದಲ್ಲಿ ಸನ್ಮಾನ ಸಮಾರಂಭವನ್ನು ಕೂಡ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮದ್ ಖಾರ್, ಗ್ಯಾಲಂಟರಿ ಪ್ರಶಸ್ತಿ ಪಡೆದವರನ್ನು ಮತ್ತು ವೀರ ನಾರಿಯರನ್ನು ಸನ್ಮಾನಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಸಶಸ್ತ್ರ ಪಡೆಗಳ ಶ್ರದ್ಧೆ ಮತ್ತು ತ್ಯಾಗವನ್ನು ರಾಜ್ಯಪಾಲರು ಶ್ಲಾಘಿಸಿದರು.


  ಈ ಸಮಾರಂಭವನ್ನು ಆಚರಿಸಲು ಭಾರತೀಯ ಕರಾವಳಿ ಪಡೆಯ ವತಿಯಿಂದ ಪ್ಯಾನ್ ಇಂಡಿಯಾ ಧ್ವಜಾರೋಹಣ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅದರ ಭಾಗವಾಗಿ ಐಜಿಸಿ ಸ್ಟೇಶನ್‍ನ ಒಂದು ತಂಡವು ಕೋವಲಂ ಕರಾವಳಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು.


  ಇದನ್ನೂ ಓದಿ; EXCLUSIVE |ನಾವು ಬದುಕುತ್ತೇವೊ ಇಲ್ಲವೋ ಗೊತ್ತಿಲ್ಲ; ಅಘ್ಘಾನ್ ಮಾಜಿ ಸಚಿವರ ಅಸಹಾಯಕ ಮಾತು!

  ಭಾರತೀಯ ಕೋಸ್ಟ್ ಗಾರ್ಡ್ ಹಡಗು ಸಿ-427 ಮತ್ತು ಸಿ-441 ಕೂಡ ರಾಷ್ಟ್ರ ಧ್ವಜವನ್ನು ಹಾರಿಸಿದವು. ಕೊಲ್ಲಂ ಮತ್ತು ವಿಸಂಜಾಮ್‍ನ ಹಡಗುಗಳಲ್ಲೂ ಇದೇ ರೀತಿ ಆಚರಣೆ ನಡೆಯಿತು.ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ವಿವಿಧ ಯೋಜನೆಗಳನ್ನು ಘೋಷಿಸಿದರು ಮತ್ತು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಈ ಸಮಾರಂಭಕ್ಕೆ ಟೋಕಿಯೋ ಒಲಂಪಿಕ್ಸ್ 2020ರ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: