ಪ್ರತಿಬಾರಿ ಆನ್ಲೈನ್ ಶಾಪಿಂಗ್(Online Shopping) ಮಾಡುವಾಗ ನೂರು ಬಾರಿ ಯೋಚಿಸಿ ಮಾಡಬೇಕು. ಯಾಕಂದರೆ ಆನ್ಲೈನ್ ಶಾಪಿಂಗ್ನಲ್ಲೇ ಹೆಚ್ಚು ವಂಚನೆ(Fraud) ನಡೆಯುತ್ತೆ. ಆನ್ಲೈನ್ನಲ್ಲಿ ಕಣ್ಣಿಗೆ ಕಂಡಿದ್ದೆಲ್ಲ ಪರ್ಚೆಸ್ ಮಾಡೋಣ ಅನ್ನಿಸುತ್ತೆ. ಅನ್ನಿಸದ ತಕ್ಷಣ ಆ ಲಿಂಕ್(Link) ಮೇಲೆ ಕ್ಲಿಕ್(Click) ಮಾಡಿ, ಬುಕ್ ಮಾಡಿ ಪೇಮೆಂಟ್(Payment) ಕೂಡ ಕೊಟ್ಟಿರುತ್ತೀರಾ. ಆದರೆ ಪ್ರಾಡೆಕ್ಟ್ ಮಾತ್ರ ಡೆಲಿವರಿ ಆಗೋದಿಲ್ಲ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯ(Bank Account) ಪರ್ಸೆನಲ್ ಮಾಹಿತಿಯೂ ಸೋರಿಕೆಯಾಗಿರುತ್ತೆ. ಹೌದು, ಪ್ರತಿದಿನ, ಪ್ರತಿ ಗಂಟೆಗೊಮ್ಮೆ ಆನ್ಲೈನ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಈ ಹೆಣ್ಣುಮಕ್ಕಳು ಅಂಗಡಿ ಹೋದರೆ ಕಂಡಿದ್ದು ಬೇಕು ಅನ್ನುತ್ತಾರೆ. ಇನ್ನೂ ಕೈನಲ್ಲೇ ಪ್ರಂಪಚದಲ್ಲಿರುವುದೆಲ್ಲ ಬುಕ್ ಮಾಡಿ ಖರೀದಿಸಬಹುದು ಎಂದರೆ ಬಿಡುವ ಮಾತೇ ಇಲ್ಲ. ಪ್ರತಿ ದಿನ ಆನ್ಲೈನ್ನಲ್ಲಿ ಏನಾದರೂ ಖರೀದಿಸದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಹೌದು, ಇದೇ ರೀತಿ ಯುವತಿಯೊಬ್ಬಳು ಆನ್ಲೈನ್ನಲ್ಲಿ ಕೇವಲ 299 ರೂ. ಬೆಲೆಯ ಚೂಡಿದಾರ್(Churidar) ಕೊಳ್ಳಲು ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅತ್ತ ಚೂಡಿದಾರ್ ಸಿಗದೇ, ಇತ್ತ ಒಂದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿದ್ದಾರೆ.
ಫೇಸ್ಬುಕ್ನಲ್ಲಿ ಚೂಡಿದಾರ್ ಜಾಹೀರಾತು ನೋಡಿದ ಯುವತಿ
ಫೇಸ್ಬುಕ್ ಆಪ್ನಲ್ಲೂ ನೀವು ವ್ಯವಹಾರ ನಡೆಸಬಹುದು. ನಿಮಿಗಿಷ್ಟವಾಗಿದ್ದನ್ನು ಆರ್ಡರ್ ಮಾಡಿ ಕೊಂಡುಕೊಳ್ಳಬಹುದು. ಕೇರಳದ ಮಹಿಳೆಯೊಬ್ಬಳು ಫೇಸ್ಬುಕ್ ನೋಡುವಾಗ ಚೂಡಿದಾರ್ ಬಗ್ಗೆ ಜಾಹೀರಾತು ನೋಡಿದ್ದಾಳೆ. ಇಷ್ಟವಾಗಿ ಆ ಲಿಂಕ್ ಓಪೆನ್ ಮಾಡಿದ್ದಾಳೆ. ಬೆಲೆ ಕೇವಲ299 ರೂ ಇದ್ದಿದ್ದರಿಂದ ಅದನ್ನು ಖರೀದಿ ಮಾಡಲು ಮುಂದಾಗಿದ್ದಳು. ಆರ್ಡರ್ ಮಾಡಿ ಗೂಗಲ್ ಪೇ ಮೂಲಕ ಪೇಮೆಂಟ್ ಕೂಡ ಮಾಡಿದ್ದಾರೆ. ತನಗಿಷ್ಟವಾದ ಬಣ್ಣದ ಚೂಡಿದಾರ್ ಬುಕ್ ಮಾಡಿ ಯಾವಾಗ ಆರ್ಡರ್ ಡೆಲಿವರಿ ಆಗುತ್ತೋ ಅಂತ ಕಾದು ಕೂತಿದ್ದಳು. ಎರಡು ದಿನ ಕಳೆದ ಬಳಿಕವೂ ಆ ಡೆಲಿವರಿ ಬಗ್ಗೆ ಯಾವುದೇ ಮಾಹಿತಿ ಬರದಿದ್ದಾಗ, ಅನುಮಾನ ಮೂಡಿದೆ.
ಇದನ್ನು ಓದಿ : ಮದುವೆ ಆಗಿದ್ರೇನಂತೆ, ಇಷ್ಟವಾದವನ ಜೊತೆ ಹೋಗೋ ಸ್ವಾತಂತ್ರ್ಯ ಇಲ್ಲಿನ ಮಹಿಳೆಯರಿಗೆ ಇದೆ!
ಮೆಸೇಜ್ ಚೆಕ್ ಮಾಡಿದಾಗ ಶಾಕ್!
ಬಟ್ಟೆ ಬುಕ್ ಮಾಡಿದ್ದ ಖುಷಿಯಲ್ಲಿ ಆ ಯುವತಿ ತನ್ನ ಮೊಬೈಲ್ಗೆ ಬಂದ ಸಂದೇಶವನ್ನು ನೋಡಲು ಮರೆತಿದ್ದಾಳೆ. ಮೂರು ದಿನದಲ್ಲಿ ಚೂಡಿದಾರ್ ಡೆಲಿವರಿ ಆಗುತ್ತೆ ಅಂತ ಅಲ್ಲಿ ತೋರಿಸಲಾಗಿತ್ತು. ಮೂರು ದಿನಗಳ ಬಳಿಕ ಜಾಹೀರಾತಿನಲ್ಲಿದ್ದ ನಂಬರ್ಗೆ ಯುವತಿ ಮೆಸೇಜ್ ಮಾಡಿದ್ದಾಳೆ. ಜಾಹೀರಾತಿನಲ್ಲಿದ್ದ ಈ ಸಂಖ್ಯೆಗೆ 7582825396 ಕರೆ ಮಾಡಿದ್ದಾರೆ. ಯಾರು ಫೋನ್ ತೆಗಯದ ಕಾರಣ ಸುಮ್ಮನಾಗಿದ್ದಾರೆ. ಬಳಿಕ ಈಕೆಯ ಫೋನ್ಗೆ 5 ಮೆಸೇಜ್ ಬಂದಿದೆ. ಅದನ್ನು ಓಪೆನ್ ಮಾಡಿ ನೋಡಿದಾಗ ಒಟ್ಟು ಒಂದು ಲಕ್ಷ ಹಣ ಬ್ಯಾಂಕ್ ಅಕೌಂಟ್ನಿಂದ ಕಾಣೆಯಾಗಿತ್ತು. ಕೂಡಲೇ ಮತ್ತೆ ಜಾಹೀರಾತಿನಲ್ಲಿದ್ದ ನಂಬರ್ಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಆಗಿತ್ತು.
ಇದನ್ನು ಓದಿ : ಕ್ರಿಕೆಟ್ ಅಭಿಮಾನಿಗಳ ಮನಸ್ಸು ಕದ್ದ ಮುದ್ದು ಮುಖದ ಚೆಲುವೆ!
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟ ಯುವತಿ
ಜಾಹೀರಾತಿನಲ್ಲಿದ್ದ ನಂಬರ್ಗೆ ಕರೆ ಮಾಡಿದ ಬಳಿಕ, ಅದೇ ನಂಬರ್ಗೆ ಈಕೆಯ ಬ್ಯಾಂಕ್ ಅಕೌಂಟ್ನಿಂದ ಒಂದು ಲಕ್ಷ ಹಣ ವರ್ಗಾವಣೆಯಾಗಿತ್ತು. ಆನ್ಲೈನ್ ವಂಚನೆಯಾಗಿದೆ. ಇದನ್ನು ಅರಿತ ಯುವತಿ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಇದೇ ರೀತಿ ಆನ್ಲೈನ್ನಲ್ಲಿ ಮೋಸ ಹೋದ ಹಣ ಇಂದಿಗೂ ವಾಪಸ್ ಬಂದಿಲ್ಲ. ಇಲ್ಲಿ ಹಣ ಕದ್ದಿದ್ದಾರೆ. ಆದರೆ ಕದ್ದವರ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲ. ಹೀಗಾಗಿ ಅವರನ್ನು ಕಂಡು ಹಿಡಿಯುವುದ ಕಷ್ಟದ ಕೆಲಸ. ಹೀಗಾಗಿ ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ